Friday, January 22, 2010

ಶೇಕ್ ಅಬ್ದುಲ್ಲ ಮತ್ತು ಸದಾನಂದ!!!

ಆಗಷ್ಟೇ ನಾವು ಗೋವಾ ದಿಂದ ಹಿಂದುರಿಗಿದ್ದೆವು... ಮಧ್ಯಾನ್ನದ ಸುಮಾರು ೧ ಘಂಟೆ.. ಮನೆಗೆ ಬಂದವರೇ  ಸ್ನಾನ ಮಾಡಿ ಊಟಕ್ಕೆ ಅಡುಗೆ ರಾತ್ರಿ ಮಾಡೋಣ ಅಂತ ನಿರ್ಧರಿಸಿ ಗಂಜಿ ಬೇಯಿಸಿಕೊಂಡೆವು.. ಇದ್ದಿದ್ದು ನಾವಿಬ್ಬರೇ, ನಾನು ಮತ್ತು ಸದಾನಂದ... ಹಿಂದಿನ ದಿನ ರಾತ್ರಿ ತುಂಬಾ ತಡವಾಗಿ ಮಲಗಿದ್ದೆವು... ಗೋವಾ ದ ಬೀಚ್ ಅಂದ ಮೇಲೆ ಕೇಳಬೇಕೆ.. ಇಡೀ ರಾತ್ರಿ ಅದು ನಿದ್ರಿಸುವುದಿಲ್ಲ... ಅಲ್ಲಿ ೨೪ ಘಂಟೆಯೂ ಮದ್ಯದ ಆರಾಧನೆ ನಡೆಯುತ್ತಲೇ ಇರುತ್ತದೆ... ಆ ಬೀಚಿನ ಬದಿಯಲ್ಲಿ ಕಳೆಯುವ ಕಾಲವೇ ಒಂಥರಾ ಮಜಾ..ಎಲ್ಲಿ ನೋಡಿದರೂ ಕಾಣುವ ಸಮುದ್ರದ ನೀರು, ಪಕ್ಕದಲ್ಲೇ ಮಲ್ಯನ ಬೀರು...

ನಾನು ಸದಾನಂದನೂ  ೪ ದಿನದ ಗೋವಾ ಪ್ರವಾಸದಿಂದಾಗಿ ಸೋತು ಹೋಗಿದ್ದೆವು.. ಅದ್ಯಾವಾಗ ಹಾಸಿಗೆ ಕಾಣಲಿಲ್ಲವೋ ಅಂತ ನನಗೆ ಅನಿಸತೊಡಗಿತು... ಸ್ನಾನ ಮುಗಿಸಿ , ಗೋವಾ ದಿಂದ ತಂದಿದ್ದ ಅಪರೂಪದ ತೀರ್ಥದ ಜೊತೆ ಗಂಜಿ ಊಟ ಮಾಡಿ ಮುಗಿಸಿದೆವು... ನನಗೋ ಕಣ್ಣು ಎಳೆಯ ಹತ್ತಿತು.. ಸರಿ ಇನ್ನು ಸ್ವಲ್ಪ ಹೊತ್ತು ಮಲಗೋಣ ಅಂತ ನಿರ್ಧರಿಸಿ ಸುಮಾರು ೩ ಗಂಟೆಯ ಹೊತ್ತಿಗೆ ಮಲಗಿದೆವು...

ನಾವು ಗೋವಾ ದಲ್ಲಿ ಉಳಿದು ಕೊಂಡಿದ್ದ ರೆಸಾರ್ಟ್ ನ ಈಜುಕೊಳ
ಟಿನ್ ಟಿನ್.. ಕಾಲಿಂಗ್ ಬೆಲ್ಲು ಕರ್ಕಶ ಶಬ್ದ ಮಾಡುವಾಗಲೇ ಎಚ್ಚರವಾದದ್ದು... ಮಲಗಿದ್ದಲ್ಲಿಂದಲೇ ಮೆಲ್ಲನೆ ಕಣ್ಣು ಬಿಟ್ಟು ನೋಡಿದೆ , ಸುಮಾರು ೪.೧೫ ರ ವೇಳೆ.. ಅದ್ಯಾರೋ ಪುಣ್ಯಾತ್ಮ ಬಂದು ನಮ್ಮ ಒಳ್ಳೆಯ ನಿದ್ದೆ ಹಾಳು ಮಾಡಿದ್ದ.. ನನಗೋ ಪೂರ್ತಿ ಎಚ್ಚರವಾಗಿರಲಿಲ್ಲ...ಅದೇನೋ ಮಂಪರು.. ಸುಮಾರು ನಾಲ್ಕು ದಿನದಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲವಲ್ಲ.. ನನಗೆ ಏಳಲೇ ಆಗದಷ್ಟು ಮಂಪರು.. ಮತ್ತೆ ಹೊದಿಕೆ ಸರಿ ಮಾಡಿ ಗಟ್ಟಿಯಾಗಿ ಮಲಗಿಬಿಟ್ಟೆ... ಟಿನ್ ಟಿನ್.. ಮತ್ತೆ ಕಾಲಿಂಗ್ ಬೆಲ್ಲು ಕರ್ಕಶವಾಗಿ ಶಬ್ದ ಮಾಡಿತ್ತು ... "ಯಾವನೋ ಅವನು ಲೋ..ನಂ ಮಗ" ಅನ್ನುತ್ತಲೇ ನಿಧಾನವಾಗಿ ಎದ್ದು ಕೂತಿದ್ದು ಸದಾನಂದ.. ನನ್ನ ಕಡೆ ನೋಡಿದ .. ನಾನು ಮಂಪರು ಕಣ್ಣಲ್ಲೇ ಆತನನ್ನೊಮ್ಮೆ ನೋಡಿ ಮತ್ತೆ ಕಣ್ಣು ಮುಚ್ಚಿದೆ...ನಿಧಾನಕ್ಕೆ ಸದಾನಂದ ಎದ್ದು ನಿಲ್ಲುವುದಕ್ಕೂ ಟಿನ್ ಟಿನ್ ಅಂತ ಬೆಲ್ಲು ಮತ್ತೆ ಶಬ್ದಮಾಡುವುದಕ್ಕೂ ಸರಿ ಹೋಯಿತು... ಗೊಣಗುತ್ತಾ , ಕಣ್ಣುಜ್ಜಿಕೊಂಡು ಸದಾನಂದ ಬಾಗಿಲು ತೆಗೆದ...ಎದುರಿಗೆ ಅದ್ಯಾರೋ ನಿಂತಿದ್ದವನನ್ನು ದುರುಗುಟ್ಟಿ ನೋಡಿದ..." ಸಾರ್ ಶೇಕ್ ಅಬ್ದುಲ್ಲ ಇದ್ದಾರ??" ಬಂದ ವ್ಯಕ್ತಿ ಕೇಳಿದ್ದು ನಂಗೆ ಅಸ್ಪಷ್ಟವಾಗಿ ಕೇಳಿಸಿತ್ತು...ಅದೆಲ್ಲಿತ್ತೋ ಸಿಟ್ಟು ಸದಾನಂದ ಬಿರ್ರನೆ ಆತನತ್ತ ಗುರಾಯಿಸಿ , ತಾನು ಉಟ್ಟು ಕೊಂಡಿದ್ದ ಲುಂಗಿ ಬಿಚ್ಚಿಬಿಟ್ಟ..!! "ಅಬ್ದುಲ್ಲಾ ಇಲ್ಲಿದ್ದಾನೆ, ಬೇಕಾದ್ರೆ ಶೇಕ್ ಮಾಡಿಕೊ" .. ಸದಾನಂದ ಅಬ್ಬರಿಸಿದ್ದೂ , ಬಂದ ವ್ಯಕ್ತಿ ದಡ ದಡ ನೆ ಮೆಟ್ಟಿಲು ಇಳಿದು ಹೋಗಿದ್ದು ನನಗೆ ನಿದ್ದೆಯ ಮಂಪರಿನಲ್ಲೂ ಕೇಳಿಸುತ್ತಲೇ ಇತ್ತು...!!!!!

16 comments:

sunaath said...

ಶೇಕ್ ಅಬ್ದುಲ್ಲಾನನ್ನು ನೋಡಿದ ಫರೂಕ್ ಅಬ್ದುಲ್ಲಾ ಪರಾರಿಯಾದನೆ!

umesh desai said...

ಏನ್ರೀ ಗೋರೆ ಇದು ಮೋಟು ಗೋಡೆ ಬರಹ ನಿಮ್ಮ ಬ್ಲಾಗ್ ನಲ್ಲಿ....! ಸೂಪರ್ರು

ಬಾಲು said...
This comment has been removed by the author.
ಬಾಲು said...

ಶೇಕ್ ನ ನೋಡಿ, ಬಿನ್ ಲಾಡೆನ್ ಓಡಿ ಹೋದ :)

Anonymous said...

sakkat, nakku nakku sustaaytu!!

ಮನಸು said...
This comment has been removed by the author.
ಸುಧೇಶ್ ಶೆಟ್ಟಿ said...

ಅಬ್ಬಬ್ಬಾ!

Unknown said...

ಕಾಮೆಂಟ್ ಬರೆದವರಿಗೆ, ಬರೆದು ಅಳಿಸಿದವರಿಗೆ, ನಾಚಿಕೊಂಡವರಿಗೆ, ಚಿ ಥೂ ನಂ ಮಗ ಅದೇನೋ ಬರ್ದಿದ್ದಾನೆ ಅಂತ ಮನಸ್ಸಿನಲ್ಲೇ ಬೈದವರಿಗೆ ಮತ್ತು ಮನಸಿನಲ್ಲೇ ನಕ್ಕವರಿಗೆ ಎಲ್ಲರಿಗೂ ಧನ್ಯವಾದಗಳು...

ಶಿವಪ್ರಕಾಶ್ said...

ha ah aha...
enri idu NON-VEG joke haakidiraa..

ಶೆಟ್ಟರು (Shettaru) said...

ರವಿಕಾಂತ,

ನಾನಂತೂ ತುಂಬಾ ನಕ್ಕೆ, ಮಧ್ಯಾನದ ನಿದ್ದೆ ಹಾರಿಸಿಬಿಟ್ರಲ್ಲ ನೀವು, ಸುಮ್ನೆ ನೋಡಿ ಈಗ ಆಫೀಸಿನಲ್ಲಿ ಕೆಲಸ ಮಾಡಬೇಕು :(

-ಶೆಟ್ಟರು

ದಿನಕರ ಮೊಗೇರ said...

ರವಿಕಾಂತ್..
ನಕ್ಕು ನಕ್ಕು ಸುಸ್ತಾದೆ...... ಗೋವಾಕ್ಕೆ ಹೋದ ಸುದ್ದಿ ಸಿಕ್ಕಿತ್ತು...... ಬಂದ ನಂತರದ ಕಥೆ ಈಗ ಸಿಕ್ಕಿದೆ...... ಸದಾನಂದನ ಕಡೆ ನೀವೂ ನೋಡಿದ್ದರೆ ನಿಮ್ಮ ನಿದ್ದೆ ಹಾರಿಹೋಗುತ್ತಿತ್ತು ಆಲ್ವಾ....

ಜಲನಯನ said...

ರವಿಕಾಂತ್....ಒಳಗೆ ಬಂದವರನ್ನ ಓಡಿಸೋಕೆ..ಇಂಥ ಉಪಾಯ ಅಪಾಯಕಾರಿ ಅಲ್ಲವಾ? ನೀವ್ಯಾಕೆ ನಿಮ್ಮ ಸ್ನೇಹಿತನ್ನ ತಡೀಲಿಲ್ಲ...ನಿಮ್ಮ ನಿದ್ದೆ ಓಡಿಹೋಗುತ್ತೆ ಅಂತಲಾ? ಹಹಹ

Unknown said...

ಶೆಟ್ಟರೆ ನಿಮಗೆ ಬ್ಲಾಗ್ ಗೆ ಸ್ವಾಗತ.. ಹೀಗೆ ಬರುತ್ತಿರಿ..

Unknown said...

ಕಾಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು..

Unknown said...

ನೀಲಿಹೂವು ನಿಮಗೆ ಬ್ಲಾಗ್ ಗೆ ಸ್ವಾಗತ..

Udaya said...

bari lungi bichiddakke aitu... innu munduvaredidre heart attack aagibidtittu ansatte laden ge..... :)