Thursday, June 19, 2008

ಭೂತ!!

ಅಲ್ಲಿ ಭೂತ ಇದೆ ... ಹಾಗಂತ ಎಲ್ಲ ಹೇಳುತ್ತಿದ್ದರು... ಅವರ ಭೂತದ ಅನುಭವದ ಕಥೆ ಕೇಳುವಾಗ ನನಗೂ ಆಗ ಹೆದರಿಕೆ ಆಗುತ್ತಿತ್ತು.. ಚಿಕ್ಕವನಿದ್ದಾಗ ಭೂತ ಅಂದ್ರೆ ಏನೋ ಹೆದರಿಕೆ... ಕಥೆ ಕೇಳೋದಂದ್ರೆ ಏನೂ ಉತ್ಸಾಹ.. ಆದ್ರೆ ಬರ್ತಾ ಬರ್ತಾ ಭೂತ ಪ್ರೇತಗಳ ಬಗ್ಗೆ ನನಗೆ ಹೆದರಿಕೆ ಅನ್ನೋದು ಹೊರಟು ಹೋಗಿತ್ತು... ಆದರೂ ಆ ಭೂತ ಪ್ರೇತಗಳ ಕಥೆ ಇನ್ನೂ ಜ್ಞಾಪಕದಲ್ಲಿವೆ...
ಅದ್ಯಾವನೋ ಜೀಪಿನಲ್ಲಿ ೬೦ ಕಿಲೋಮೀಟರು ವೇಗದಲ್ಲಿ ಹೋಗ್ತಾ ಇರ್ಬೇಕಾದ್ರೆ ಅವನೊಟ್ಟಿಗೆ, ಅದೇ ವೇಗದಲ್ಲಿ ಯಾರೋ ಓಡ್ತಾ ಬಂದರಂತೆ, ಆದರೆ ಆ ಭೂತ ಪೀಡಿತ ಪ್ರದೇಶದಿಂದ ಮುಂದೆ ಸಾಗಿದಾಗ ಆ ಮನುಸ್ಶ ಕಾಣೆ ಆದ್ನಂತೆ ಅನ್ನೋದು ಒಂದು ಕಥೆಯಾದರೆ... ಇನ್ನೊಂದು ಕಥೆ ಹೀಗಿತ್ತು...
ಅದೊಂದು ಪ್ರದೇಶದಲ್ಲಿ ರಾತ್ರಿ ೧೦ ಗಂಟೆಯ ನಂತರ ಯಾವುದೇ ವಾಹನ ಬಂದರೂ ಅದು ನಿಂತು ಬಿಡುತ್ತದೆ.. ಹಾಗಂತ ನನ್ನ ಗೆಳೆಯ ಕೂಡ ತನ್ನ ಅನುಭವ ಹೇಳಿಕೊಂಡಿದ್ದ... ಆದರೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿದ ಕಥೆ ಮಾತ್ರ ಬೇರೆಯದೇ... ನನ್ನ ಮನೆಯ ಹತ್ತಿರ ಒಂದು ಪ್ರದೇಶವಿದೆ. ಅದರ ಹೆಸರು ಭಂಡಾರಿಕೊಲಿ.. ಅದು ಭೂತ ಗಳ ಪ್ರದೇಶ.. ಹತ್ತಾರು ಭೂತಸ್ತಾನಗಳೂ ಅಲ್ಲಿವೆ .. ಅಲ್ಲಿ ನಮ್ಮ ಸಂಬಂಧಿಕರೊಬ್ಬರು ರಾತ್ರಿ ೧೧.೩೦ ಸುಮಾರಿಗೆ ನಮ್ಮ ಮನೆಯಲ್ಲಿ ಯಾವುದೋ ಪೂಜೆ ಮುಗಿಸಿಕೊಂಡು ವಾಪಸು ಹೋಗುತ್ತಿದ್ದರು.. ಅವರ ಕಯ್ಯಲ್ಲಿ ಮನೆಯಿಂದ ಕೊಟ್ಟ ಕೆಲವು ಎಣ್ಣೆ ಪದಾರ್ಥದ ತಿನ್ದಿಗಳಿದ್ದವು.. ಆದರೆ ಆ ಭೂತದ ಪ್ರದೇಶ ತಲುಪುತ್ತಿನ್ದಂತೆ ಅದ್ಯಾರೋ ಆ ಪೊಟ್ಟಣಗಳನ್ನು ಕಸಿದುಕೊಂಡು ತಿಂದು ಮುಗಿಸಿ ಬಿಟ್ಟಿದ್ದರು.. ಮರುದಿನ ಆ ಕಥೆ ಕೇಳಿ ಭೂತ ಎಂದು ನಾನೂ ಹೆದರಿಬಿಟ್ಟಿದ್ದೆ.. ನಾನಾವ್ವಾಗ ೩ನೆ ಕ್ಲಾಸಲ್ಲಿ ಓದುವ ಪಡ್ಡೆ ಹೈಕ...
ಮೊನ್ನೆ ನಾನು ಮನೆಗೆ ಅಂತ ಹೋಗಿದ್ದೆ.. ರಾತ್ರಿ ೧೦ ಗಂಟೆ ಸುಮಾರಿಗೆ bassiLide.. ಬಸ್ಸಿಳಿದು ಯಾವುದೇ ವಾಹನ ಇಲ್ಲ ಎಂದು ಗೊತ್ತಾದಾಗ ಒಂದು ಆಟೋ ಹಿಡಿದು ಆ ಭೂತದ ಪ್ರದೇಶದ ತನಕ ತಲುಪಿದೆ.. ಅಷ್ಟರಲ್ಲಿ ೧೧.೩೦ ಗಂಟೆ ಆಗಿಬಿಟ್ಟಿತ್ತು ..!! ಅಲ್ಲಿಂದ ಮುಂದೆ ನನ್ನ ಮನೆಗೆ ಕಾಲುದಾರಿ.. ನಡೆದುಕೊಂಡು ಹೋಗುವಾಗ ಹಿಂದಿನ ನೆನಪುಗಳು ಕಾಡಿದವು.. ಆ ಭೂತ, ಅದರ ರೋಮಾಂಚಕ ಕಥೆ ನೆನಪಾಗಿ ಬೆಚ್ಚಿಬಿದ್ದೆ.. ಭೂತ ಪ್ರೇತ ಎಲ್ಲ ಸುಮ್ಮನೆ.. ಭೂತಸ್ತಾನ ಅನ್ನೋದು ಅವುಗಳ ಮನೆ.. ಮುಂದೆ ಸಾಗಿದರೆ ಬರುವುದೇ ನಮ್ಮನೆ.. ಇದೆಲ್ಲ ಸುಮ್ಮನೆ ಎಂದು ನಕ್ಕು ಮುಂದೆ ಹೆಜ್ಜೆ ಹಾಕಿದೆ.. ನನ್ನ ಕೈಯಲ್ಲಿ ಎಣ್ಣೆಯ ತಿನ್ದಿಗಳಿದ್ದವು .... ಆದರೆ ಅಷ್ಟರಲ್ಲಿ...!!!!!!
--ಮುಂದುವರೆಯುವುದು ........

Monday, June 9, 2008

ಪ್ರೀತ್ಸೋದು ತಪ್ಪಾ?

ಪ್ರೀತ್ಸೋದು ತಪ್ಪಾ? ಹಾಗಂತ ಕೇಳಿದ್ದ ಆತ..
ಏನು ಹೇಳೋದು ಅಂತ ಗೊತ್ತಾಗದೆ ಪೇಚಾಡಿದ್ದೆ... ನನ್ನ ಆಪ್ತ ಮಿತ್ರ ಬೇರೆ ... ಪ್ರೀತ್ಸೋದು ತಪ್ಪು ಅಂತ ಹೇಳಿದ್ರೆ ಆತನಿಗೆ ಬೇಜಾರು.. ತಪ್ಪಲ್ಲ ಅಂದ್ರೆ ನನ್ನ ಆತ್ಮ ಸಾಕ್ಷಿಗೆ ವಿರುದ್ಧ... ಏನು ಹೇಳೋದು ಅಂತ ಗೊತ್ತಾಗದೆ ತುಂಬ ಸಂಕಟಪಟ್ಟೆ.. ಅದೆಲ್ಲ ಈಗ ಯಾಕಯ್ಯ...? ಚುಮುಚುಮು ಚಳಿಗೆ ತಣ್ಣನೆಯ ಬಿಯರ್ ಕುಡಿದರೆ ಅದೇನು ಮಜಾ ಗೊತ್ತಾ ಎಂದು ಮಾತು ತಪ್ಪಿಸಿ ಇಬ್ಬರೂ ಬಿಯರ್ ಕುಡಿಯತೊದಗಿದ್ರೆ, ಮತ್ತೆ ಅ ಪರಮಾತ್ಮ ಪ್ರೀತಿಯ ವಿಷಯಕ್ಕೆ ಮಾತು ಹೊರಳಿಸಿದ್ದ !!! ... ಅಂತೂ ಇಂತೂ ಬಿಯರ್ ಖಾಲಿಯಾದದ್ದೇ ಬಂತು.. ಸ್ನೇಹಿತನ ಪ್ರೀತಿಯ ಕಥೆ ಕೇಳಿ ಅದ್ಯಾಕೋ ದುಕ್ಖದ ಬದಲು ನಗು ಒತ್ತರಿಸಿ ಬಂತು..ಪ್ರೀತ್ಸೋದು ತಪ್ಪಾ ಇಲ್ಲ ಸರೀನಾ ಅಂತ ಆವತ್ತು ನಮಗೆ ಗೊತ್ತಾಗಿಲಿಲ್ಲ...
ಮೊನ್ನೆ ಅದ್ಯಾಕೋ ಎಲ್ಲವನ್ನು ತೂಕಕ್ಕೆ ಹಾಕತೊಡಗಿದ್ದೆ.. ಜೀವನ ಅಂದ್ರೇನು? ಪ್ರೀತ್ಸೋದು ತಪ್ಪಾ? ಮಾಡುವೆ ಆಗಿ ಪ್ರೀತಿಸ್ಲ ಇಲ್ಲ ಪ್ರೀತಿಸಿ ಮದ್ವೆ ಆಗ್ಲ.... ಹೀಗೆ ನೂರೆಂಟು ಪ್ರಶ್ನೆಗಳು...ಕೊನೆಗೂ ಪ್ರೀತ್ಸೋದು ತಪ್ಪು ಅನ್ನೋ ನಿರ್ಧಾರಕ್ಕೆ ಬಂದು, ಅದನ್ನೇ ಸ್ನೇಹಿತನೀಗೂ ಹೇಳೋಣ ಅಂದುಕೊಳ್ಳುವಷ್ಟರಲ್ಲಿ ಆತನೇ ಕರೆ ಮಾಡಿದ್ದ... ಏನಯ್ಯಾ ಅಂದೆ.. ಪ್ರೀತ್ಸೋದು ತಪ್ಪಲ್ಲ ಅಂದ... ಯಾಕೆ ಅಂದೆ... ನಿನ್ನೆ ತನಕ ನಾನೂ ಹಾಗೆ ಅಂದುಕೊಂಡಿದ್ದೆ, ಆದ್ರೆ ಇವತ್ತು ನೋಡಿದ್ರೆ ಪ್ರೀತ್ಸೋದು ತಪ್ಪಲ್ಲ ಅನ್ನಿಸ್ತಾ ಇದೆ, ನನ್ನ ಮನೆಯಂಗಳದಲ್ಲಿ ಇಶ್ವರ್ಯ ರೈ ಬಂದು ನಿಂತುಕೊಂಡು ಬಿಟ್ಟಿದ್ದಾಳೆ ಅಂದ...!!!!! ನಗು ಬಂತು... ಮನೆಯಿಂದ ದೃಷ್ಟಿ ಹಾಯಿಸಿದವನಿಗೆ ದೂರದಲ್ಲಿ ಮೊನಾಲಿಸಾ ನಗು ಕಂಡಿತ್ತು.. ಅತ್ತ ಹೆಜ್ಜೆ ಹಾಕೋಣ ಅಂದುಕೊಂಡೆ!!!! .. ಮತ್ತದೇ ಪ್ರಶ್ನೆ ನನ್ನೆದುರಿಗೆ ಭೂತವಾಗಿ ನಿಂತುಬಿತ್ತಿತ್ತು... ಪ್ರೀತ್ಸೋದು ತಪ್ಪಾ? !!!.....

Wednesday, June 4, 2008

ಮಾತು ಮತ್ತು ಮೌನ

ಅತ್ಯಂತ ಕಡಿಮೆಯಾಗಿರಬೇಕು ಮಾತು , ಕಾಗದಕೆ ಬೀಳಬಾರದು ಯಾವ ತೂತು.. ಹೀಗಂತ ಎಲ್ಲೊ ಓದಿದ ನೆನಪು.
ನಿನ್ನೆಯ ತನಕ ನಾನೂ ಹಾಗೇ ಅಂದುಕೊಂಡಿದ್ದೆ .. ಚಿಕ್ಕಂದಿನಿಂದಲೇ ಮಾತಿಗಿಂತ ಹೆಚ್ಚಾಗಿ ಮೌನಕ್ಕೆ ಮೊರೆಹೋದವನು ನಾನು.. ಎರಡು ದಿವಿನಾದ ಕಣ್ಣು ಕೊಟ್ಟ ಭಗವಂತ ಅದರೊತ್ತಿಗೆ ಒಂದು ಬಾಯಿ ಕೊಟ್ಟು ಇಡೀ ಮೌನದ ಶೀಲ ಕೆಡಿಸಿಬಿಟ್ಟ ಅನ್ನಿಸ್ತಾ ಇತ್ತು. ಅತೀ ಖುಷಿಯಾದಾಗ ಇಲ್ಲ ದುಕ್ಖ ವಾದಾಗ ಮೌನವೆ ಹಿತ ಅನ್ನಿಸಿದ್ದು ಮಾತ್ರ ಸತ್ಯ.. ಹಾಡು, ಸಂಗೀತ ಕೇಳುತ್ತಾ ಸಮಯ ಕಳೆಯೋದು ರೂಢಿ ಯಾದವನಿಗೆ ಮಾತು ಬರೀ ಶಬ್ದ, ಮಾತು ಕರ್ಕಶ, ಮಾತು ವ್ಯಭಿಚಾರ, ಮಾತಿನಲ್ಲಿ ಬಣ್ಣವಿಲ್ಲ , ಮಾತು ವಕ್ರವೂ ಅಲ್ಲ ನೇರವೂ ಅಲ್ಲ.. ಹಾಗಂತ ಅಂದುಕೊಂಡಿದ್ದೆ ..
ಮಾತು ಬಲ್ಲವನಿಗೆ ಜಗಳವಿಲ್ಲ ಅಂತಾರೆ ... ಮಾತೇ ಆಡದೆ ಅದೆಷ್ಟೋ ಜನರೊಟ್ಟಿಗೆ ಜಗಳ ತಪಪಿಸಿಕೊನ್ದವನಿಗೆ ಇದೆಲ್ಲ ಬುರುಡೆ ಅನ್ನಿಸುತ್ತೆ ... ಹಾಗಂತ ಮಾತು ಆಡದೆ ಸಾಧಿಸಿದ್ದೇನು , ಮೌನದಿಂದಾಗಿ ಗಳಿಸಿದ್ದೇನು ಅಂತ ಒಂದು ಸಾರಿ ಆಲೋಚನೆ ಮಾಡಿದ್ರೆ ನನಗೆ ಸಿಕ್ಕಿದ ಉತ್ತರ ಮಾತ್ರ ಸೊನ್ನೆ.. ಆದರೂ ಜೀವನದ ಜೊತೆ ನನ್ನದೇನೂ ತಕರಾರಿಲ್ಲ ಅದು ನಡೆಸಿಕೊಂಡಂತೆ ನಡೆದುಕೊಂಡು ಬಂದಿದ್ದೇನೆ... ಜೀವನ ಅನ್ನೋದು ಪುಷ್ಪಕ ವಿಮಾನ ಆಗ್ಬೇಕು... ಮಾತು ಅನ್ನೋದು ಅದ್ರ ಪೈಲಟ್ ಆದ್ರೆ ಮೌನ ಅದ್ರ ಗಗನಸಖಿ ... ನಿನ್ನ ಪ್ರೀತಿಸ್ತೀನಿ ಕಣೇಅನ್ನೋಕು ದಿನಗಟ್ಟಲೆ ಕಾದು, ಮೌನದ ಪೊಟರೆ ಯೊಳಗೆ ಹಕ್ಕಿ ಮಾತಿನ ಮೊರೆ ಹೋದಾಗ ನಾನು ತುಂಬ ತಡ ಮಾಡಿದ್ದೆ ಅನ್ನಿಸುತ್ತೆ.. ಅರೆ ಮೌನವೇ ಇದಕ್ಕೆ ಕಾರಣವೇ? ವಟ ವಟ ಅಂತ ಮಾತಾಡೋರೆ ಬೆಟರ್ ಅಲ್ವೇನು? ಹಾಗಂತ ನನ್ನೇ ಕೇಳಿಕೊಂಡೆ ... ಉತ್ತರ ಸಿಗಲಿಲ್ಲ ... ಯಾರನ್ನಾದ್ರೂ ಕೇಳೋಣ ಅಂದ್ರೆ....
ಮಾತು ಬೆಳ್ಳಿ , ಮೌನ ಬಂಗಾರ ಅಂತ ಯಾರೋ ಮಹಾತ್ಮ ಹೇಳಿದ ಮಾತು ನೆನಪಾಯಿತು...