Thursday, June 19, 2008

ಭೂತ!!

ಅಲ್ಲಿ ಭೂತ ಇದೆ ... ಹಾಗಂತ ಎಲ್ಲ ಹೇಳುತ್ತಿದ್ದರು... ಅವರ ಭೂತದ ಅನುಭವದ ಕಥೆ ಕೇಳುವಾಗ ನನಗೂ ಆಗ ಹೆದರಿಕೆ ಆಗುತ್ತಿತ್ತು.. ಚಿಕ್ಕವನಿದ್ದಾಗ ಭೂತ ಅಂದ್ರೆ ಏನೋ ಹೆದರಿಕೆ... ಕಥೆ ಕೇಳೋದಂದ್ರೆ ಏನೂ ಉತ್ಸಾಹ.. ಆದ್ರೆ ಬರ್ತಾ ಬರ್ತಾ ಭೂತ ಪ್ರೇತಗಳ ಬಗ್ಗೆ ನನಗೆ ಹೆದರಿಕೆ ಅನ್ನೋದು ಹೊರಟು ಹೋಗಿತ್ತು... ಆದರೂ ಆ ಭೂತ ಪ್ರೇತಗಳ ಕಥೆ ಇನ್ನೂ ಜ್ಞಾಪಕದಲ್ಲಿವೆ...
ಅದ್ಯಾವನೋ ಜೀಪಿನಲ್ಲಿ ೬೦ ಕಿಲೋಮೀಟರು ವೇಗದಲ್ಲಿ ಹೋಗ್ತಾ ಇರ್ಬೇಕಾದ್ರೆ ಅವನೊಟ್ಟಿಗೆ, ಅದೇ ವೇಗದಲ್ಲಿ ಯಾರೋ ಓಡ್ತಾ ಬಂದರಂತೆ, ಆದರೆ ಆ ಭೂತ ಪೀಡಿತ ಪ್ರದೇಶದಿಂದ ಮುಂದೆ ಸಾಗಿದಾಗ ಆ ಮನುಸ್ಶ ಕಾಣೆ ಆದ್ನಂತೆ ಅನ್ನೋದು ಒಂದು ಕಥೆಯಾದರೆ... ಇನ್ನೊಂದು ಕಥೆ ಹೀಗಿತ್ತು...
ಅದೊಂದು ಪ್ರದೇಶದಲ್ಲಿ ರಾತ್ರಿ ೧೦ ಗಂಟೆಯ ನಂತರ ಯಾವುದೇ ವಾಹನ ಬಂದರೂ ಅದು ನಿಂತು ಬಿಡುತ್ತದೆ.. ಹಾಗಂತ ನನ್ನ ಗೆಳೆಯ ಕೂಡ ತನ್ನ ಅನುಭವ ಹೇಳಿಕೊಂಡಿದ್ದ... ಆದರೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿದ ಕಥೆ ಮಾತ್ರ ಬೇರೆಯದೇ... ನನ್ನ ಮನೆಯ ಹತ್ತಿರ ಒಂದು ಪ್ರದೇಶವಿದೆ. ಅದರ ಹೆಸರು ಭಂಡಾರಿಕೊಲಿ.. ಅದು ಭೂತ ಗಳ ಪ್ರದೇಶ.. ಹತ್ತಾರು ಭೂತಸ್ತಾನಗಳೂ ಅಲ್ಲಿವೆ .. ಅಲ್ಲಿ ನಮ್ಮ ಸಂಬಂಧಿಕರೊಬ್ಬರು ರಾತ್ರಿ ೧೧.೩೦ ಸುಮಾರಿಗೆ ನಮ್ಮ ಮನೆಯಲ್ಲಿ ಯಾವುದೋ ಪೂಜೆ ಮುಗಿಸಿಕೊಂಡು ವಾಪಸು ಹೋಗುತ್ತಿದ್ದರು.. ಅವರ ಕಯ್ಯಲ್ಲಿ ಮನೆಯಿಂದ ಕೊಟ್ಟ ಕೆಲವು ಎಣ್ಣೆ ಪದಾರ್ಥದ ತಿನ್ದಿಗಳಿದ್ದವು.. ಆದರೆ ಆ ಭೂತದ ಪ್ರದೇಶ ತಲುಪುತ್ತಿನ್ದಂತೆ ಅದ್ಯಾರೋ ಆ ಪೊಟ್ಟಣಗಳನ್ನು ಕಸಿದುಕೊಂಡು ತಿಂದು ಮುಗಿಸಿ ಬಿಟ್ಟಿದ್ದರು.. ಮರುದಿನ ಆ ಕಥೆ ಕೇಳಿ ಭೂತ ಎಂದು ನಾನೂ ಹೆದರಿಬಿಟ್ಟಿದ್ದೆ.. ನಾನಾವ್ವಾಗ ೩ನೆ ಕ್ಲಾಸಲ್ಲಿ ಓದುವ ಪಡ್ಡೆ ಹೈಕ...
ಮೊನ್ನೆ ನಾನು ಮನೆಗೆ ಅಂತ ಹೋಗಿದ್ದೆ.. ರಾತ್ರಿ ೧೦ ಗಂಟೆ ಸುಮಾರಿಗೆ bassiLide.. ಬಸ್ಸಿಳಿದು ಯಾವುದೇ ವಾಹನ ಇಲ್ಲ ಎಂದು ಗೊತ್ತಾದಾಗ ಒಂದು ಆಟೋ ಹಿಡಿದು ಆ ಭೂತದ ಪ್ರದೇಶದ ತನಕ ತಲುಪಿದೆ.. ಅಷ್ಟರಲ್ಲಿ ೧೧.೩೦ ಗಂಟೆ ಆಗಿಬಿಟ್ಟಿತ್ತು ..!! ಅಲ್ಲಿಂದ ಮುಂದೆ ನನ್ನ ಮನೆಗೆ ಕಾಲುದಾರಿ.. ನಡೆದುಕೊಂಡು ಹೋಗುವಾಗ ಹಿಂದಿನ ನೆನಪುಗಳು ಕಾಡಿದವು.. ಆ ಭೂತ, ಅದರ ರೋಮಾಂಚಕ ಕಥೆ ನೆನಪಾಗಿ ಬೆಚ್ಚಿಬಿದ್ದೆ.. ಭೂತ ಪ್ರೇತ ಎಲ್ಲ ಸುಮ್ಮನೆ.. ಭೂತಸ್ತಾನ ಅನ್ನೋದು ಅವುಗಳ ಮನೆ.. ಮುಂದೆ ಸಾಗಿದರೆ ಬರುವುದೇ ನಮ್ಮನೆ.. ಇದೆಲ್ಲ ಸುಮ್ಮನೆ ಎಂದು ನಕ್ಕು ಮುಂದೆ ಹೆಜ್ಜೆ ಹಾಕಿದೆ.. ನನ್ನ ಕೈಯಲ್ಲಿ ಎಣ್ಣೆಯ ತಿನ್ದಿಗಳಿದ್ದವು .... ಆದರೆ ಅಷ್ಟರಲ್ಲಿ...!!!!!!
--ಮುಂದುವರೆಯುವುದು ........

2 comments:

Alien said...

Nimma boothada kathe Part-2 yavaga?

Unknown said...

Bhootad Khatena Matte Yestne Isvig Mundvaristira?