Saturday, March 3, 2012

ಬದಲಾದ ಟೂತ್ ಬೃಶ್ !

ಈಗ ಎಲ್ಲವೂ ವಿದ್ಯುತ್ ಮಯ. ವಿದ್ಯುತ್ ಚಾಲಿತ ಶೇವರ್ , ಬಾಚಣಿಗೆ , ಮುಂತಾದ ಅದೆಷ್ಟೋ ಉಪಕರಣಗಳು ಎಲ್ಲರಿಗೂ ಗೊತ್ತು.. ಇದೀಗ ವಿದ್ಯುತ್ ಚಾಲಿತ ಹಲ್ಲುಜ್ಜುವ ಬೃಶ್ ಗಳ ಸರದಿ.

ಇದು ಕೂಡ ರೀ ಚಾರ್ಜ್ ಮಾಡಬಹುದಾದ ಬ್ಯಾಟರಿ ಹೊಂದಿದೆ. ಕಂಪನ ತಂತ್ರಜ್ಞಾನವನ್ನು (vibration ) ಬಳಸಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಒಂದು ಬದಿಯಿಂದ ಇನ್ನೊಂದು ಬದಿಗೆ ಗಡಿಯಾರದ ಪೆನ್ದುಲಂ ನಂತೆ ಅಥವಾ ವೃತ್ತಾಕ್ರಿತಿಯಲ್ಲಿ ತಿರುಗಿ ನಿಮ್ಮ ಹಲ್ಲನ್ನು ಶುಚಿಗೊಳಿಸುತ್ತದೆ.




ಮೊತ್ತ ಮೊದಲ ವಿದ್ಯುತ್ ಚಾಲಿತ ಹಲ್ಲುಜ್ಜುವ ಬೃಶ್ ಕಂಡುಹಿಡಿದದ್ದು ೧೯೫೪ ರಲ್ಲಿ . ಸ್ವಿಜೆರ್ ಲ್ಯಾಂಡ್ ನ ಡಾಕ್ಟರ ಫಿಲಿಪ್ಪೆ ಗಿ ವೂಗ್ ಅನ್ನುವವ  broxodent ಅನ್ನುವ ಇಂತಹ ಬೃಶ್ ಕಂಡುಹಿಡಿದಿದ್ದ. ಅಮೆರಿಕಾದಲ್ಲಿ ಮೊದಲಿಗೆ ೧೯೫೯ ರಲ್ಲಿ ಇಂತಹ ಬೃಶ್ ಮಾರಾಟಕ್ಕೆ ಬಂದಿದ್ದು. ೧೯೬೦ ರಲ್ಲಿ GE  ಕಂಪನಿ ಕೂಡ ಇಂತಹ ವಿದ್ಯುತ್ ಚಾಲಿತ ಟೂತ್ ಬೃಶ್ ಹೊರ ತರಲು ಪ್ರಾರಂಭಿಸಿತು.
ಈ ಟೂತ್ ಬೃಶ್ ನಲ್ಲಿ ಎರಡು ವಿಧ. ಒಂದು ಕಂಪನ ತಂತ್ರಜ್ನಾನದ್ದು ಇನ್ನೊಂದು ತಿರುಗು ತಂತ್ರಜ್ನಾನದ್ದು (vibration and rotation ).

                                                ವಿದ್ಯುತ್ ಚಾಲಿತ ಬೃಶ್ ನ ಭಾಗಗಳು


ಇದು ನಮ್ಮ ಮೊಬೈಲ್ ಚಾರ್ಜ್ ಮಾಡಿದಂತೆ ಚಾರ್ಜ್ ಮಾಡಬಹುದು. ಅನೇಕ ವಿಜ್ಞಾನಿಗಳು ಇದರ ಬಗ್ಗೆ ಅಧ್ಯನ ನಡೆಸಿ ಇವೇನೂ ನಾವು ನಿತ್ಯ ಉಪಯೋಗಿಸುವ ಸಂಮಾನ್ಯ ಬ್ರುಶ್ಗಿಂತ ಉತ್ತಮವೇನೂ ಅಲ್ಲ ಅನ್ನುವ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ತಿರುಗು ತಂತ್ರಜ್ಞಾನ ದ ಬ್ರುಶ್ಗಳು ಕಂಪನ ತಂತ್ರಜ್ಞಾನಕ್ಕಿಂತ ಉತ್ತಮ ಅನ್ನುವ ಮಾತು ಕೇಳಿಬಂದಿದೆ. ಕೆಲವು ಇಂತಹ ಬೃಶ್ ಗಳು timer ಮತ್ತು ಚಿಕ್ಕ LCD ಪರದೆ ಕೂಡ ಹೊಂದಿರುತ್ತವೆ.


ನಮ್ಮ ಭಾರತದಲ್ಲೂ ಇಂತಹ ಬ್ರುಶ್ಗಳು ಸಿಗುತ್ತವೆ. ಬೆಲೆ ಸುಮಾರು ರೂಪಾಯಿ ೧೦೦೦ ದಿಂದ ಪ್ರಾರಂಭ. ಬೇಕಾದರೆ ಒಮ್ಮೆ ಟ್ರೈ ಮಾಡಬಹುದು.!!
 ವಿದ್ಯುತ್ ಚಾಲಿತ ಕೆಲವು ಟೂತ್ ಬೃಶ್ ಗಳು.






ಚಿತ್ರಗಳು: ಅಂತರ್ಜಾಲ


ಗೋರೆ ಉವಾಚ: ನಿಮ್ಮ ಏಟಿಎಂ ಕಾರ್ಡಿನ ಗುಪ್ತ ಸಂಖೆಯನ್ನು (ಪಿನ್ ನಂಬರ್) ಟೂತ್ ಬೃಶ್ ನಂತೆ ನೋಡಿಕೊಳ್ಳಿ . ಬೇರೆ ಯಾರಿಗೂ ಉಪಯೋಗಿಸಲು ಕೊಡಬೇಡಿ, ಮತ್ತೆ ಕಮ್ಮಿಯೆಂದರೂ ೩-೪ ತಿಂಗಳಿಗೊಮ್ಮೆ ಬದಲಾಯಿಸಿ!!

ದೊಡ್ಡ ಭೂತದ ಚಿಕ್ಕ ಕಥೆ!!

ರಾತ್ರಿ ೧೧ ಘಂಟೆ..

"ಅಪ್ಪಾ , ಈ ಭೂತ ಪ್ರೇತ ಎಲ್ಲ ಸುಳ್ಳಂತೆ ಅಲ್ವ..?"  ೬ ವರ್ಷದ ಮಗ ಆಗಷ್ಟೇ ಮಲಗುತಿದ್ದ ಅಪ್ಪನನ್ನು ಕೇಳಿದ..
"ನಿನಗೆ ಯಾರು ಹೇಳಿದ್ದು"?

"ಈಗಷ್ಟೇ  ನಮ್ಮ ಮನೆ ಅಡುಗೆಯವನು ಹೇಳಿದ  ಅಪ್ಪಾ"
ಮಗನ ಮಾತು ಕೇಳಿ ಅಪ್ಪ ಬೆವರತೊಡಗಿದ್ದ   ..
ಏನಾಯಿತು ಎಂದು ಗಾಬರಿಯಿಂದ ಕೇಳುತ್ತಿದ್ದ ಮಗನಿಗೆ , ನಮ್ಮ ಮನೆಯಲ್ಲಿ ಅಡುಗೆಯವನೆ ಇಲ್ವಲ್ಲೋ ಅಂತ ಹೇಳುವಷ್ಟು ತಾಕತ್ತೂ ಅಪ್ಪನಿಗೆ ಇರಲಿಲ್ಲ..!!!