Sunday, October 13, 2013

ಅಕ್ವೆರಿಯಂ !!

ತುಂಬಾ ದಿನಗಳಿಂದ ಮನೆಯಲ್ಲೊಂದು ಅಕ್ವೆರಿಯಂ ಹಾಕಿಸಬೆಕು ಅಂತ ಇದ್ದೆ..ಮನೆಯಲ್ಲಿ ಅಕ್ವೆರಿಯಮ್ ಇದ್ರೆ ಒಳ್ಳೆಯದು ಅನ್ತಾರೆ.. ವಾಸ್ತು ಪ್ರಕಾರವು ಸಹ ಅಕ್ವೆರಿಯಂ ಇದ್ರೆ ವಾಸ್ತು ದೋಷಗಳಿಗೆ ಉತ್ತಮ ಅನ್ನುತ್ತಾರೆ ..

ಮೊನ್ನೆ ಹಾಗೆ ಒಂದು ಅಕ್ವೆರಿಯಂ ಹಾಕಿಸಿದೆ  ಮನೆಗೆ ಬಂದಿದ್ದ ನನ್ನ ಸ್ನೇಹಿತನ ಚಿಕ್ಕ ಮಗಳು ಅದನ್ನೇ ಅಚ್ಚರಿಯಿಂದ ನೊಡಿದಳು.. "ಅಂಕಲ್ ನೀವು ವೆಜಿತೆರಿಯನ್ ಅಲ್ವ? ಮತ್ತೆ ಯಾಕೆ ಮೀನು ಸಾಕಿದ್ದೀರಿ"? ಮುಂತಾದ ಪ್ರಶ್ನೆ ಕೆಳತೊದಗಿದಳು. ಇದು ತಿನ್ನಲಿಕ್ಕೆ ಅಲ್ಲ ಚಂದಕ್ಕೆ ಅಂತ ಅವಳಿಗೆ ಹೇಳುವಷ್ಟರಲ್ಲಿ ಸಾಕಾಗಿ ಹೊಗಿತ್ತು.


ವಿವಿಧ ಬಗೆಯ  ಅಕ್ವೆರಿಯಂ ಗಳು ಸಿಗುತ್ತವೆ.. ನಾನು ಹಾಕಿಸಿದ್ದು ೮ಮಿಲಿಮೀಟರು ದಪ್ಪದ ಗ್ಲಾಸಿನದ್ದು.. ಸುಮಾರು ೩ ಫೀಟು ಉದ್ದ, ೧.೫ ಫೀಟು ಎತ್ತರ ಹಾಗು ೧ ಫೀಟು ಅಗಲ ದ ಈ ಅಕ್ವೆರಿಯಂ ಸಾಮಾನ್ಯವಾಗಿ ಮನೆಗೆ ಹೇಳಿ ಮಾದಿಸಿದ್ದು.. ಅಕ್ವೆರಿಯಂ ಮನೆಯಲ್ಲಿ ಇಡುವುದರಿಂದ ಆಗುವ ಉಪಯೋಗಗಳು ಇಲ್ಲಿವೆ..

೧. ಇದು ಮನೆಯ ಅಂದವನ್ನು ಹೆಚ್ಚಿಸುತ್ತವೆ.
೨. ಇದನ್ನು ನೋಡುತ್ತಾ ಕೂರುವುದರಿಂದ ಮನಸ್ಸಿನ ಆಯಾಸ ಕಮ್ಮಿಯಾಗಿ ಆರಮವಾಗಿಸುತ್ತದೆ ಅಂತ ಮನ ಶಾತ್ರಜ್ಞರು ಹೇಳುತ್ತಾರೆ .

೩. ಹೃದಯ ಸಂಬಂಧಿತ ಹಾಗು ರಕ್ತದ ಒತ್ತಡ ಗಳಿಗೆ ಇದು ಉತ್ತಮ ಎಂದು ವಿಜ್ಞಾನಿಗಳ ಅಭಿಪ್ರಾಯ.
೪. ಅಕ್ವೆರಿಯಂ ಅನ್ನು ಮನೆಯ ದಕ್ಷಿಣ-ಪೂರ್ವ  ಅಥವಾ  ಉತ್ತರ - ಪೂರ್ವ ದಿಕ್ಕಿಗೆ ಇಡುವುದರಿಂದ ವಾಸ್ತು ದೋಷ ಪರಿಹಾರ ವಾಗುತ್ತದೆ ಅನ್ನುವ ನಂಬಿಕೆ ಇದೆ. ಆದರೆ ಇದನ್ನು ಅಡುಗೆ ಮನೆ ಅಥವಾ ಮಲಗುವ ಕೊಣೆಯಲ್ಲಿ ಇದಬಾರದು.

೫. ಮಕ್ಕಳು ಇರುವ ಮನೆಯಲ್ಲಿ ಅಕ್ವೆರಿಯಂ ಇದ್ದರೆ  ಒಳ್ಳೆಯದು . ಇದನ್ನು ನೋಡುತ್ತಾ ಮಕ್ಕಳು ಕೂಡ ಮೀನಿನಂತೆ ತುಂಬಾ ಚುರುಕಾಗುತ್ತಾರೆ
೬. ವಾಸ್ತು ಪ್ರಕಾರ ಅಕ್ವೆರಿಯಂ ನಲ್ಲಿ ೮ ಗೋಲ್ಡನ್ ಅಥವಾ ೮ ಡ್ರಾಗನ್ ಮೀನುಗಳು ಮತ್ತು ಒಂದು ಕಪ್ಪು ಮೀನು ಇರಬೆಕು. ಚಿತ್ರದಲ್ಲಿ ಇರುವುದು ಗೋಲ್ಡನ್ ಮೀನುಗಳು

೭. ವಾಸ್ತು ಶಾಸ್ತದ ಪ್ರಕಾರ ಮನೆಯಲ್ಲಿ  ಅಕ್ವೆರಿಯಂ  ಇಡುವುದರಿಂದ ಕೆಟ್ಟ ಶಕ್ತಿಗಳು ಮನೆಯಿಂದ ದೂರ ವಾಗುವವು.
೮. ಇದರಿಂದಾಗಿ ಸಂಪತ್ತು ವ್ರಿದ್ಧಿಸುವುದು. ಇದು ನಿಮ್ಮಲ್ಲಿ ದುಡ್ಡು ಹೆಚ್ಚಿಸಲಾರದು ಆದರೆ ಇದ್ದುದರಲ್ಲೇ ಸಂತೋಷ ವಾಗಿರುತ್ತೀರಿ ಅನ್ನುತ್ತದೆ ವಾಸ್ತು ಶಾಸ್ತ್ರ. ಅದು ಬೇಕು-ಇದು ಬೇಕು ಅನ್ನುವ ಆಲೋಚನೆಗಳು ದೂರ ವಾಗುತ್ತವೆ.



ಚಿತ್ರಗಳು : ನಾನೇ ತೆಗೆದಿದ್ದು..

ಗೋರೆ ಉವಾಚ :

ಊರಿಗೆ ಬೆಂಕಿ ಬಿದ್ದಾಗ ಮೊದಲು ಸಾಯುವುದು ಅಕ್ವೆರಿಯಂನಲ್ಲಿ ಇರುವ  ಮೀನುಗಳು!!!
 

Saturday, August 3, 2013

ನಿಧಾನವೇ ಪ್ರಧಾನ !!

ನಿಧಾನವೇ ಪ್ರಧಾನ !! ಆಂಗ್ಲ ಭಾಷೆಯಲ್ಲಿ  ಹೇಳುವುದಾದರೆ  slow and steady wins the race .. ಆದರೆ ಹೀಗೆ ಯಾಕೆ ಅಂತ ಕೇಳಿದ್ರೆ ಅದು ಯಾವುದೋ ಕಾಲದ ಆಮೆ ಮತ್ತು ಮೊಲದ ಕಥೆ ಹೇಳಿ , ಕಿವಿಗೊಂದು ಹೂ ಇಟ್ಟು ಕಳಿಸ್ತಾರೆ !! ಆದರೆ ನಿಜವಾಗಲೂ ಇದು ಯಾಕೆ ಅಂತ ನಾನು ಹೇಳುತ್ತೇನೆ !!

ಫಾಸ್ಟ್  (Fast ) ಅಂದರೆ ವೇಗ .. ಫಸ್ಟ್ (First ) ಅಂದರೆ ಮೊದಲಿಗ ..
slow and steady wins the race ಅಂತ ಗಾದೆ ಮಾತಿನಿಂದ ಒಂದು ಏನು ಅರ್ಥವಾಗುತ್ತೆ ಅಂದರೆ ಫಾಸ್ಟ್ (fast) ಹೋದರೆ ಫಸ್ಟ್(First ) ಬರಲು ಸಾಧ್ಯವಿಲ್ಲ  ! ಅಂದರೆ ಫಸ್ಟ್(First )  ಬರಲು ನಿಧಾನ ಹೋಗಬೇಕು  .. ಈಗ ಈ ಫಾಸ್ಟ್ ಅನ್ನು ನಿಧಾನ (ಸ್ಲೋ) ಮಾಡಬೇಕಾದರೆ ಅದಕ್ಕೆ ಬ್ರೇಕ್ (Break ) ಹಾಕಬೇಕು .. ಸರಿ ಈಗ ಫಾಸ್ಟ್ ಗೆ ಬ್ರೇಕ್ ಹಾಕೋಣ ..
ಬ್ರೇಕ್ - ಫಾಸ್ಟ್ (ಬ್ರೇಕ್-Fast ).. ಇದನ್ನು ಬ್ರೇಕ್ ಫಾಸ್ಟ್ ಅಂತ ಹೇಳಲ್ಲ .. ಬದಲಿಗೆ ಬ್ರೇಕ್-ಫಸ್ಟ್ (Break - ಫಸ್ಟ್ ) ಅಂತ ಹೇಳ್ತಾರೆ ..
ಆಯ್ತಲ್ಲ ಫಾಸ್ಟ್ ಗೆ ಬ್ರೇಕ್ ಹಾಕಿದಾಗ ಫಾಸ್ಟ್ (Fast ) ಫಸ್ಟ್ (First ) ಆಗಿ ಹೋಯಿತು .. ಈಗ್ಲಾದ್ರೂ ಗೊತ್ತಾಯಿತಾ ??

ನಿಧಾನವೇ ಪ್ರಧಾನ (slow and steady wins the race ) ಅಂತ !!!!


ಗೋರೆ ಉವಾಚ: 

ಜೀವನದಲ್ಲಿ ಎಲ್ಲವೂ ನಿಮ್ಮ ಹಿಡಿತದಲ್ಲಿದೆ ಅಂದರೆ , ನೀವು ಜೀವನದಲ್ಲಿ ವೇಗವಾಗಿ ಸಾಗುತ್ತಿಲ್ಲ ಎಂದರ್ಥ !!!

Wednesday, July 10, 2013

ಹಾರುವ ಸೈಕಲ್ !!

 ಹಾರುವ  ತಟ್ಟೆ , ವಿಮಾನ   ಅಷ್ಟೇ ಯಾಕೆ ? ಹಾರುವ ಕಾರಿನ ಬಗ್ಗೆಯೂ ಕೇಳಿದ್ದೇವೆ . ಇದೀಗ ಹಾರುವ ಸೈಕಲ್ ಸರದಿ !!
ಗಾಬರಿ ಆಗಿ ಬಿಟ್ಟಿರಾ ? ಇಲ್ಲಿದೆ ನೋಡಿ ಹಾರುವ ಸೈಕಲ್ .

ಚೆಕ್ ಗಣರಾಜ್ಜದ ಮೂರು ಕಂಪನಿ ಗಳು ಸೇರಿ ಇದನ್ನು ತಯಾರಿಸಿವೆ . ಇದು ಹೆಲಿ ಕಾಪ್ತೆರ್ ನಂತೆ ಕೆಲಸ ಮಾಡುತ್ತದೆ .  ಒಂದು ಲೀಟರ್ ಪೆಟ್ರೋಲ್  ಗೆ ಎಷ್ಟು ಮೈಲೇಜ್ ಅಂತ ತಲೆಬಿಸಿಯೂ ಇಲ್ಲ . ಯಾಕಂದ್ರೆ ಇದಕ್ಕೆ ಬೇಕಿರೋದು ಪೆಟ್ರೋಲ್ ಅಲ್ಲ .
ಇದರಲ್ಲಿ ಹಿಂದೆ ಎರಡು , ಮುಂದೆ  ಎರಡು ಹಾಗೂ ಬದಿಯಲ್ಲಿ ಒಂದೊಂದು ಬ್ಯಾಟರಿ ಗಳಿವೆ . ಇದರ ಒಟ್ಟು ತೂಕ ೯೫ ಕಿಲೋ ಗ್ರಾಮು ಸದ್ಯಕ್ಕೆ ಇದು ರಿಮೋಟ್ ಕಂಟ್ರೋಲ್ ಮುಖಾಂತರ ಚಲಿಸಬಹುದಾಗಿದೆ


ಮೇಲಿನ ಚಿತ್ರದಲ್ಲಿ ಇದನ್ನು ತಯಾರಿಸಿದ ಮುಖ್ಯಸ್ತ ಜೇನ್ ಸಿನೆರ್ತ್ ಮತ್ತು ಮುಖ್ಯಇಂಜಿನಿಯರ್ ಬೋರಿಸ್ ಅವರನ್ನು ಕಾಣಬಹುದು 
ಮನುಷ್ಯನ೦ತೆ ಇರುವ  ಗೊಂಬೆ ಜೊತೆಗೆ ಹಾರುತ್ತಿರುವ ಸೈಕಲ್ 

 ಇದು ಮಾರುಕಟ್ಟೆಗೆ ಬರಲು ದಶಕಗಳೇ ಬೇಕಾಗಬಹುದು . ಬೆಲೆ ಆಗಲೇ ಗೊತ್ತಾಗಬೇಕಷ್ಟೇ .

ಗೋರೆ ಉವಾಚ :-
ಜೀವನ ವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬಾರದು .. ಯಾಕೆಂದರೆ ಇದರಲ್ಲಿ ಯಾರೂ ಜೀವಂತವಾಗಿ ಹೊರಬಿದ್ದಿಲ್ಲ !!!

Saturday, March 16, 2013

Friday, February 1, 2013

ಮುಂದುವರಿದ ಒಂದು ರಾತ್ರಿ !!!

ಒಂದು ಕ್ಷಣ ಎಲ್ಲರೂ ಬೆಚ್ಚಿಬಿದ್ದರು !! ಖಾಲಿಯಾಗಿದ್ದ ಬಸ್ ಸ್ಟಾಂಡ್ ನಲ್ಲಿ ಹೆಣ !! ಯಾರಿಗೂ ನಂಬಲಾಗಲಿಲ್ಲ !!
ಹೆಣದ ಮುಖವನ್ನಾದರೂ ನೋಡೋಣ ಅಂದ್ರೆ ಚಿದಾನಂದ ಬಿಡಲಿಲ್ಲ.. ಅಲ್ಲಿಂದ ಪಲಾಯನ ಗಯ್ಯುವುದೇ ಸೂಕ್ತ ಎಂದು ಆತ ಅರಚುತ್ತಿದ್ದ.. ಕುಮಾರನನ್ನು ನಾವು ಹೋಗಿ ಕೈ ಹಿಡಿದು ಎಬ್ಬಿಸಬೇಕಾಯಿತು .. ಹಾಗೂ ಹೇಗೊ ಎಲ್ಲರೂ ಕಾರಿನಲ್ಲಿ ಕುಳಿತು ಅಲ್ಲಿಂದ ಓಡುವುದೇ ಉತ್ತಮ ಅನ್ನುವ ತೀರ್ಮಾನಕ್ಕೆ ಬಂದೆವು..
"ನಾವು ಸಿಕ್ಕಿಬೀಳುವುದು ಗ್ಯಾರೆಂಟಿ.. ಇಲ್ಲದ ತೊಂದರೆಗೆ ಸಿಕ್ಕಿ ಹಾಕಿಕೊಂಡೆವು.. ನಾವು ಸೇದಿದ ಸಿಗರೇಟು, ಬಿಸಾಕಿದ ನೀರಿನ ಬಾಟಲಿ , ನಾಳೆ ಪೋಲಿಸ್ ತನಿಖೆಯಾಗುವಾಗ ಸಿಕ್ಕಿಬಿದ್ದರೆ?" ಕೇಳಿದ ಸದಾನಂದನ ಕಣ್ಣಲ್ಲಿ ನೀರಿತ್ತು !! ಹೌದು !! ನಮ್ಮ ಮೇಲೆ ಅನುಮಾನ ಬರುವುದು ಖಂಡಿತ .. ಯಾರಾದರೂ ನಮ್ಮ ಕಾರು ಆಕಡೆ ಬರುವುದನ್ನು ನೋಡಿರುತ್ತಾರೆ.. ನಾವೇ ಕೊಂದು ಹೆಣ  ಅಲ್ಲಿ ಹಾಕಿದ್ದು ಅನ್ನುವ ಅನುಮಾನ ಬಂದರೆ? ತಪ್ಪಿಸಿಕೊಳ್ಳುವುದು ಹೇಗೆ? ಕಥೆ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ "ಪೋಲಿಸ್ ಗೆ ನಾವೇ ಫೋನ್ ಮಾಡಿ ಎಲ್ಲ ಹೇಳೋಣ" ಅಂದ  ಕುಮಾರ.. ಆತ  ಇನ್ನೂ ನಡುಗುತ್ತಲೇ ಇದ್ದ .. ಜೇಬಿನಿಂದ ಫೋನ್ ತೆಗೆದವನೇ ಪೋಲಿಸ್ ಗೆ ಫೋನ್ ಹಚ್ಚಿಬಿಟ್ಟ ಸದಾನಂದ !! ನನಗೋ ಏನು ಮಾಡುವುದು ತಿಳಿಯದೆ ನಿಂತು ಬಿಟ್ಟಿದ್ದೆ.. ಏನೂ ತಪ್ಪು ಮಾಡದೆ ಜೈಲಿಗೆ ಹೋಗುವ ಪ್ರಮೇಯ !! ಮಾನ ಮರ್ಯಾದೆ ಎಲ್ಲಾ ಹರಾಜು !! ಪೇಪರ್ ನಲ್ಲಿ ಸ್ಲೇಟು ಹಿಡಿದ ನನ್ನ ಫೋಟೋ ಕಣ್ಣ ಮುಂದೆ ಬರತೊಡಗಿತ್ತು !! ನಾವು ತಪ್ಪಿತಸ್ತರಲ್ಲ ಅಂತ ಗೊತ್ತಾದರೂ ಜನ ಸುಮ್ಮನೆ ಬಿಡುತ್ತಾರೆಯೇ? ಕೊಲೆಗಾರ ಅನ್ನುವ ಪಟ್ಟ ಅಂತೂ ಗ್ಯಾರೆಂಟಿ ..

ಒಂದೊಂದು ನಿಮಿಷವೂ ಒಂದೊ೦ದು  ವರ್ಷ ದಂತೆ ಭಾಸವಾಗತೊಡಗಿತು.. ಅರ್ಧ ಗಂಟೆಯ ನಂತರ ಪೋಲಿಸ್ ಸೈರನ್ ಕೇಳಿ ಹೆದರಿಕೆ ಇನ್ನೂ ಜಾಸ್ತಿಯಾಗತೊಡಗಿತು ..ಪೋಲಿಸ್ ಜೀಪ್ ನಮ್ಮ ಕಾರಿನ ಹಿಂದೆಯೇ ಬಂದು ನಿಂತಿತ್ತು !! ಅದರ ಹಿಂದೆ ಒಂದು ಆಂಬುಲೆನ್ಸ್ .. ಜೀಪಿನಿಂದ ಕೆಳಗಿಳಿದ ಪೋಲಿಸ್ ನನ್ನು ನೋಡಿ ಮೈಯ ಶಕ್ತಿಯೆಲ್ಲ ಉಡುಗಿ ಹೋಗಿತ್ತು !! "ಏನಾಯಿತು ? ಯಾರ್ ನೀವು " ಪೋಲಿಸ್ ನ ದಪ್ಪ ಸ್ವರ ಆ ಕತ್ತಲೆಯಲ್ಲಿ , ಕಾಡಿನ ಮಧ್ಯೆ ಹುಲಿಯ ಘರ್ಜನೆಯಂತೆ ಕೆಳಿಸತೊಡಗಿ  ಎಲ್ಲರೂ ಮೂಕರಾಗಿ ನಿಂತು ಬಿಟ್ಟೆವು .. "ಸದಾನಂದ ನೀವು ಇಲ್ಲಿ?" ಒಬ್ಬ ಪೋಲಿಸ್ ನವ ಸದಾನಂದ ಗುರುತು ಹಿಡಿದಿದ್ದ.. ಚಿಕ್ಕ ಊರಲ್ಲವೇ.. ಸದಾನಂದನೀಗೋ ಆತನ ಪರಿಚಯವಿತ್ತು..
"ಹೆಣ , ಬಸ್ ಸ್ಟಾಂಡ್ , ಹಗ್ಗ" ಸದಾನಂದ ತಡಬಡಿಸತೊದಗಿದ್ದ .. ಧೈರ್ಯ ಮಾಡಿ ನಾನೇ ಏನಾಯಿತು ಅಂತ ವಿವರಿಸಿದೆ .. ಬಸ್ ಸ್ಟಾಂಡ್ ಗೆ ಲೈಟು ಹಾಕಿದ ಪೋಲಿಸ್ ಇದೆಲ್ಲಾ ಮಾಮೂಲಿ ಎಂಬಂತೆ ನಮ್ಮ ಕಡೆ ದುರುಗುಟ್ಟಿ ನೋಡತೊಡಗಿದ್ದ .. ನಾವು ಎಲ್ಲವನ್ನೂ ವಿವರಿಸಿದೆವು ..

ಪೋಲಿಸ್ ಅಂದ ಮೇಲೆ ಕೇಳಬೇಕೆ .. ಒಬ್ಬ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದರೆ ಉಳಿದವರು ಹೆಣ  ತೆಗೆಯೋದರಲ್ಲಿ ಮಗ್ನರಾದರು.. ಒಬ್ಬ ಪೋಲಿಸ್ ನವ ಅಲ್ಲಿ ಬಿದ್ದಿದ್ದ ಸಿಗರೇಟು, ನೀರಿನ ಬಾಟಲಿ, ಚಪ್ಪಲಿ ಎಲ್ಲವನ್ನೂ ತುಂಬಿಸುತ್ತಿದ್ದ.. ಆಮೇಲೆ ಏನೇನು ಮಾಡಿದರೋ ನೆನಪಿಲ್ಲ.. ಅಂತೂ ಇಂತೂ ೨ ಗಂಟೆ ಸುಮಾರಿಗೆ ಹೆಣ  ಆಂಬುಲೆನ್ಸ್ ಗೆ ಹಾಕಿದವರೇ ನಮ್ಮೆಲ್ಲರ ಸಹಿ, ಹೆಬ್ಬೆಟ್ಟು ಪಡೆದು ಹೋಗುವಂತೆ ಸೂಚನೆ ನೀಡಿದರು .."ಸದಾನಂದ ,.. ನಾಳೆ ಫೋನ್ ಮಾಡ್ತೀನಿ , ಎಲ್ಲರೂ ಸ್ಟೇಷನ್ ಗೆ ಬರಬೇಕಾಗಬಹುದು .. ಎಷ್ಟೇ ಆದರೂ ನಾವು ನಮ್ಮ ಕರ್ತವ್ಯ ಮಾಡಲೇಬೇಕು .. ಇದು ಆತ್ಮ ಹೆತ್ಯೆಯೇ ಇರುವಂತೆ ಕಾಣುತ್ತೆ .. ವರ್ಷವೂ ಇಲ್ಲಿ ಇಂಥದ್ದು ನಡೆಯತ್ತೆ " ಪೋಲಿಸ್ ನವ ಏನೇನೊ ಬಡಬಡಿಸುತ್ತಲೇ ಇದ್ದ.. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರುವರ್ಷ ಆಯುಷ್ಯ ಅಂತ ಕಾರು ಹತ್ತಿದೆವು .. ಹೋಗುವಾಗ ಅರ್ಧ ಘ೦ಟೆ ತೆಗೆದು ಕೊಂಡಿದ್ದ ನಮಗೆ ವಾಪಸ್ ಬರಲು ಬೇಕಾಗಿದ್ದು ಕೇವಲ ೧೦ ನಿಮಿಷ.. ಮನೆಗೆ ಬಂದಾಗ ಬೆಳಗಿನ ಜಾವ ೨.೩೦ ಘಂಟೆ .. ಎಲ್ಲರೂ ಬೆವರಿನಲ್ಲಿ ಒದ್ದೆಯಾಗಿದ್ದೆವು!! ಚಿದಾನಂದ ನಂತೂ ಒಂದಕ್ಕೆ ಒಬ್ಬನೇ ಹೋಗಲೂ ಹೆದರಿ ಅದನ್ನೂ ಕಟ್ಟಿಕೊಂಡು ಕೂತ .. ಇನ್ನು ಸಾಧ್ಯವೇ ಇಲ್ಲ ಅಂದ ಸದಾನಂದ ಗಟಾರನೆ  ವಿಸ್ಕಿಯ ಬಾಟಲಿಗೆ ಬಾಯಿ ಹಾಕಿದ.. ಅಷ್ಟರ ತನಕ ಸುಮ್ಮನೆ ಕೂತಿದ್ದ ಕುಮಾರ ನಡುಗುವ ಕೈಯಿಂದಲೇ ಬಿಯರ್ ಬಾಟಲು ಎತ್ತಿಕೊಂಡ.. ಯಾರಲ್ಲೂ ಮಾತೆ ಇಲ್ಲ .. ಅಷ್ಟರಲ್ಲೇ ಪೋಲಿಸ್ ಜೀಪ್ ಬಂದು ಸದಾನ೦ದನ ಮನೆ ಮುಂದೆ ನಿಂತು ಬಿಟ್ಟಿತ್ತು!!!

"ಸಾರ್ ಸಾರ್" ಅನ್ನುತ್ತ ಒಬ್ಬ ಒಳಕ್ಕೊಡಿ ಬಂದ .. " ಆ ಹೆಣ , ನೀವು ನೋಡಿದ  ಹೆಣ, ನಾವೇ ನಮ್ಮ ಕೈಯಾರೆ ಎತ್ತಿ ಆಂಬುಲೆನ್ಸ್ ಗೆ ಹಾಕಿದ್ದು " ಪೋಲಿಸ್ ನವ ಏನೋ ಹೇಳತೊಡಗಿದ .. ಏನಾಯ್ತು ? ಅಂದೆ .. ಸಾರ್ ನೀವೇ ನೋಡಿದರಲ್ಲ ಹೆಣ  ಇದ್ದಿದ್ದು.. ನೀವೇ ತಾನೇ ಫೋನ್ ಮಾಡಿದ್ದು .. ನಾವ್ ಅದನ್ನ ಎತ್ತಿ ಆಂಬುಲೆನ್ಸ್ ಗೆ ಹಾಕಿದ್ದು .. ನೋಡಿ ನಿಮ್ಮೆಲ್ಲರ ಸಹಿ , ಹೆಬ್ಬೆಟ್ಟು.. ಬರೆದ ರಿಪೋರ್ಟ್ ಎಲ್ಲಾ "

"ಹೌದು ಸಾರ್ .. ಆದ್ರೆ ನಾವೇನೂ ತಪ್ಪು ಮಾಡಿಲ್ಲ .. ದೆವ್ವ ನೋಡ್ಬೇಕು ಅಂತ ಹುಚ್ಚು ಕಟ್ಟಿ ಆ ಕಡೆ ಹೋಗಿದ್ವಿ ಅಷ್ಟೇ ಸಾರ್ , ಕ್ಷಮಿಸಿಬಿಡಿ .. ನಾವೇನೂ ಮಾಡಿಲ್ಲ " ಸದ್ದಾನಂದ ಆತನಿಗೆ ಸಮಜಾಯಷಿ ನೀಡತೊಡಗಿದ್ದ

"ಹೌದು ಸದಾನಂದ , ನಾವೇ ಹೆಣ  ಕೊಂಡು  ಹೋದೆವು .. ಆಸ್ಪತ್ರೆ ಹತ್ತಿರ ಹೋಗಿ ಹೆಣ  ಇಳಿಸಬೇಕು ಅಂತ ಆಂಬುಲೆನ್ಸ್ ಬಾಗಿಲು  ತೆಗೆದರೆ ಹೆಣಾನೆ ಇರ್ಲಿಲ್ಲ " ಪೋಲಿಸ್ ನವನೂ ಬೆವರತೊಡಗಿದ್ದ!!

ಕುಮಾರನ ಕೈಯಲ್ಲಿದ್ದ ಬಿಯರ್ ಬಾಟಲಿ ಕೆಳಗೆ ಬಿದ್ದು "ಫಳ್  ಫಳ್ " ಅನ್ನುವ ಶಬ್ದದೊಂದಿಗೆ ಒಡೆದ ಸದ್ದು ಆ ನೀರವ ರಾತ್ರಿಯಲ್ಲಿ ಕಿವಿಗಪ್ಪಳಿಸಿತು !!!!
                                                                                                          --ಮುಗಿಯಿತು

ಗೋರೆ ಉವಾಚ :

ಕೆಲವರು ಎಲ್ಲಿಗೆ ಹೋದರೂ ಸಂತೋಷದ ವಾತಾವರಣ ನಿರ್ಮಿಸುತ್ತಾರೆ .. ಇನ್ನು ಕೆಲವರು, ಹೋದರೆ ಸಂತೋಷದ ವಾತಾವರಣ ನಿರ್ಮಿಸುತ್ತಾರೆ !!!



Wednesday, January 30, 2013

ಡೋಮಿನೋಸ್ ಪಿಜ್ಯಾ ತಿನ್ನೋಕೆ !!!

ತುತ್ತು ಅನ್ನ  ತಿನ್ನೋಕೆ , ಬೊಗಸೆ ನೀರು ಕುಡಿಯೋಕೆ .. ಈ ಹಾಡಿನ IT ರೂಪ ..

ವಿ.ಸೂ : ತುತ್ತು ಅನ್ನ ತಿನ್ನೋಕೆ ಹಾಡಿನ  ಸಂಬಂಧಪಟ್ಟ ತಂಡದವರಿಂದ ಕ್ಷಮೆ ಕೋರುತ್ತಾ ..



ಡೋಮಿನೋಸ್ ಪಿಜ್ಯಾ ತಿನ್ನೋಕೆ ಬಿಸ್ಲೇರಿ ನೀರು ಕುಡಿಯೋಕೆ
ರೇಮಂಡ್ ಸೂಟು  ಸಾಕು ನನ್ನ ಮಾನ ಮುಚ್ಚೋಕೆ
ಥರ್ಟಿ ಫೋರ್ಟಿ  ಸೈಟು ಸಾಕು ಹಾಯಾಗಿರೋಕೆ..!!  ।।೨ ಬಾರಿ ।।

ಸಿಟಿಯಾಗ್  ಒಬ್ನ ಕೆಲಸವೇ ಹೋಗಿ ಬಿಟ್ರೆ ಏನಾಯ್ತು ?
IT ಯಾಗ ಒಂದು ಕಂಪೆನಿ ಮುಚ್ಚಿ ಹೋs s ದ್ರೆ ಏನಾಯ್ತು ? 
ಒಂದು ಕಂಪನಿ ನನ್ನ
ಹೋಗು ಅಂದರೇನು
ಸ್ವರ್ಗ ದಂಥ ಇನ್ನೊಂದ್ ಆಫರ್ ಕೈಗೆ ಬಂದಾಯ್ತು  !!!



ಡೋಮಿನೋಸ್ ಪಿಜ್ಯಾ ತಿನ್ನೋಕೆ
ಬಿಸ್ಲೇರಿ ನೀರು ಕುಡಿಯೋಕೆ ........



ದುಡಿಯೋದಕ್ಕೆ ತಲೆಯ ತುಂಬಾ ಬುದ್ಧಿ  ತುಂಬೈತೆ
ಹ್ಯಾಕಿಂಗ್ ಮಾಡೋದು ತಪ್ಪು ಕೆಲಸ ಅಂತಾ ಗೊತ್ತಯ್ತೆ !!
ಮೈಕ್ರೊ ಸೋಫ್ತೆ   ನಂಗೆ, ಅಪ್ಪ ಅಮ್ಮ ಎಲ್ಲ
ನಾ ಬರೆದ ಕೊಡ್ನಾಗ ಎಂದೂ  ಬಗ್ ಬಿಡಾಕಿಲ್ಲ!!!

ಡೋಮಿನೋಸ್ ಪಿಜ್ಯಾ ತಿನ್ನೋಕೆ
ಬಿಸ್ಲೇರಿ ನೀರು ಕುಡಿಯೋಕೆ
ರೇಮಂಡ್ ಸೂಟು ಸಾಕು ನನ್ನ ಮಾನ ಮುಚ್ಚೋಕೆ
ಥರ್ಟಿ ಫೋರ್ಟಿ ಸೈಟು ಸಾಕು ಹಾಯಾಗಿರೋಕೆ..!!

 
ಗೋರೆ ಉವಾಚ :
ನಿಮ್ಮಲ್ಲಿರುವ ದುಡ್ಡನ್ನು ಬೇಗನೆ ದ್ವಿಗುಣಗೊಳಿಸಲು ಇರುವ ಒಂದೇ ಒಂದು ಸುಲಭ ಉಪಾಯವೆಂದರೆ , ನಿಮ್ಮಲ್ಲಿರುವ ನೋಟುಗಳನ್ನು ಅರ್ಧಕ್ಕೆ ಮಡಚುವುದು!!

ಒಂದು ರಾತ್ರಿ !

"ನಾನೊಮ್ಮೆ ಕಣ್ಣಾರೆ ಇದನ್ನ ನೋಡದೆ ನಂಬೋದಿಲ್ಲ.. ಇವೆಲ್ಲ ಸುಮ್ನೆ ಸುಳ್ಳು.. ೩೦ ವರ್ಷ ಆಯಿತು ಒಂದೇ ಒಂದು ದೆವ್ವ ನಾನು ನೋಡಿಲ್ಲ.." ಕುಮಾರ ಪಕಪಕನೆ ನಕ್ಕ..

"ನಿಂಗೆ ದೆವ್ವ ನೋಡೋ ಆಸೆ ಇದೆಯಾ?" ನಾನು ಕೇಳಿದ್ದಕ್ಕೆ ಮತ್ತೆ ಪಕಪಕನೆ ನಕ್ಕು ಬಿಯರ್ ಗ್ಲಾಸ್ ಕೆಳಗಿಟ್ಟ  ಕುಮಾರ..

"ಒಂದ್ಸಾರಿ ಇವನಿಗೆ ಯಾವದಾದ್ರೂ ರಾಜಕಾರಣಿ ಯನ್ನ ತೋರಿಸ್ರಪ್ಪ" ಸದಾನಂದ ಮೆಲ್ಲನೆ ಗೊಣಗಿದಾಗ ಕುಮಾರ್ ಪಕ್ಕನೆ ನಕ್ಕು ಬಾಯಿಯಿಂದ ಬಿಯರ್ ಹಾರಿಸಿದ್ದು ಮಾತ್ರ ಎಲ್ಲರಿಗೆ ಸಿಟ್ಟು ತರಿಸಿತು..

ಆವತ್ತು ನಾವೆಲ್ಲರೂ ಸದಾನಂದನ ಮನೆಯಲ್ಲಿ ಒಟ್ಟು ಸೇರಿದ್ದವು.. ತುಂಬಾ ದಿನಗಳ ನಂತರ ಗುಂಪು ಒಟ್ಟಾಗಿದ್ದರಿನ್ದ ಎಲ್ಲರೂ ಅದೇನೇನೋ ಮಾತನಾಡುತ್ತ ದೆವ್ವದ ವಿಷಯ ಮಧ್ಯೆ ಬಂದಿತ್ತು..

ಅಷ್ಟರಲ್ಲಾಗಲೇ ರಾತ್ರಿ ೧೧ ಘಂಟೆಯಾಗಿತ್ತು .. ಕುದಿಯಲು ಇಟ್ಟಿದ್ದ ಸಾರಿಗೆ ಒಗ್ಗರಣೆ ಹಾಕಿ ಬಂದ  ಸದಾನಂದ "ನಿಮಗೆ ನಿಜವಾಗಲು ದೆವ್ವ ನೋಡುವ ಆಸಕ್ತಿಯಿದ್ದರೆ ನಾನೊಂದು ಕಡೆ ಕರೆದುಕೊಂಡು ಹೋಗುವೆ..ದೆವ್ವ ಇದೆಯಾ  ಇಲ್ವಾ ಗೊತ್ತಿಲ್ಲ.. ಆದರೆ ಜನ ಮಾತ್ರ ಅದ್ರ ಬಗ್ಗೆ ಮಾತಾಡೋದನ್ನ ಕೇಳಿದ್ದೇನೆ" ಅಂದ ..ಆತ  ಸಾರಿಗೆ ಒಗ್ಗರಣೆ ಹಾಕಿದನೋ ಇಲ್ಲ ಬೇರೆಲ್ಲಾದರೂ ಹಾಕಿದನೋ ಅನ್ನೋ ಅನುಮಾನ ನನಗೆ ಬಂದಿದ್ದು ಆವಾಗ..!! ಕುಮಾರ ಮಾತ್ರ ತಟ್ಟನೆ ಎದ್ದು ನಿಂತ .. "ಇವತ್ತು ಅಲ್ಲಿಗೆ ಹೋಗಲೇ ಬೇಕು.. ನಡೀರಿ" ಕುಮಾರ ಎಲ್ಲರಿಗೆ ಆದೇಶ ನೀಡಿದ.. "ನಂಗೆ ನಿದ್ದೆ ಬರ್ತಿದೆ.. ಊಟ ಮಾಡಿ ಮಲಗ್ತೀನಿ" ಅಂದ ಚಿದಾನಂದ ಆವತ್ತು ಬದುಕಿದ್ದೆ ಹೆಚ್ಚು :)  ಹಾಗೂ ಹೀಗೂ ಮಾತಾಡಿ ಎಲ್ಲರೂ ದೆವ್ವದ ಬೆನ್ನು ಹತ್ತ್ತೋದೆ ಸರಿ ಅಂತ ಹೊರಟೆವು.. ಸದಾನಂದ ಸಫಾರಿ ಕಾರು ಸ್ಟಾರ್ಟ್ ಮಾಡಿದರೆ ಉಳಿದ ನಾವು ೫ ಮಂದಿ ತೆಪ್ಪಗೆ ಕೂತೆವು ..

ಅದು ಚಾರ್ಮಾಡಿ ಘಾಟಿ ಪಕ್ಕದ ಊರು.. ಅಲ್ಲಿಗೆ ಸೀಟು ಅಂತ ಕರೀತಾರ .. ಅಲ್ಲಿ ದೆವ್ವಗಳಿವೆ ಅಂತ ಜನರು ಮಾತಾಡೋದನ್ನ ನಾನೂ ಕೇಳಿದ್ದೆ.. ವರ್ಷಕ್ಕೆ ಒಂದಿಬ್ಬರಾದರೂ ಅಲ್ಲಿನ ಬಸ್ ಸ್ಟಾಂಡ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು.. ಆದರೆ ದೆವ್ವಗಳು ನನ್ನ ಅನುಭವಕ್ಕೆ ಯಾವತ್ತೂ ಬಂದಿರಲಿಲ್ಲ .. ನಾವು ಅಲ್ಲಿ ತಲುಪುವಾಗ ೧೧ ಘಂಟೆ ೫೦ ನಿಮಿಷ.. "ರಾತ್ರಿ ೧೨ ಘಂಟೆಗೆ  ಅಲ್ವ ದೆವ್ವಗಳು ಶಾಪಿಂಗ್ ಹೊರಡೋದು" ನಾನು ಕೇಳಿದ್ದಕ್ಕೆ ಕುಮಾರ ಮತ್ತೆ ನಕ್ಕು ಸಿಗರೇಟು ಹಚ್ಚಿದ..

ಸರಿಯಾಗಿ ರಾತ್ರಿ ೧೨ ಘಂಟೆ.. ದೆವ್ವ ಹೇಗಿರತ್ತೆ? ಇವತ್ತು ಕಾಣಲು ಸಿಗಬಹುದ.. ಬಂದ್ರೆ ನಮ್ಮನ್ನೆಲ್ಲ ಅದು ಜೀವಂತ ಬಿಡುತ್ತಾ ? ಚದಾನಂದ ಪ್ರಶ್ನೆ ಕೇಳುತ್ತಲೇ ಇದ್ದ.. ಸದಾನಂದ, ಕುಮಾರ, ಎಲ್ಲ ಅದೇ ಸೀಟಿನ ಬಸ್ ಸ್ಟಾಂಡ್ ನಲ್ಲಿ ಕೂತು ಸಿಗರೇಟು ಹೋಗೆ ಬಿಡುತ್ತಿದ್ದರು .. ಅಲ್ಲೇನೂ ಅಂತಹ ಘಟನೆ ನಡೆಯಲೇ ಇಲ್ಲ.."ನಾನ್ ಬಂದ್ರೆ ನೋಡು  ದೆವ್ವ ಕೂಡ ಹೊರಗ ಬರೋಕೆ ಹೆದ್ರತ್ತೆ" ಅಂತ ಕುಮಾರ ರೈಲು ಬಿಡುತ್ತಿದ್ದ..

ಸುಮಾರು ೧೨.೩೦ ವರೆಗೂ ಕಾದು ಇನ್ನು ಹೊರಡೋಣ ಅಂತ ತೀರ್ಮಾನಿಸಿದೆವು..ಎಲ್ಲರೂ ಕಾರಿನತ್ತ ಹೆಜ್ಜೆ ಹಾಕಿದರೆ, ಕುಮಾರ ಅಲ್ಲೇ ಬಸ್ ಸ್ಟಾಂಡ್ ನಲ್ಲಿ  ಕೂತು ಇನ್ನೊಂದು ಸಿಗರೇಟಿಗೆ ಬೆಂಕಿ ಹಚ್ಚಿದ .. ನಾವಿನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಕುಮಾರ ಕಿಟಾರನೆ ಕಿರುಚಿದ್ದ!! ಒಂದು ಕ್ಷಣ ನಾವು ಬೆಚ್ಚಿಬಿದ್ದೆವು!! ಮಧ್ಯರಾತ್ರಿ ೧೨.೩೦!! ಸುತ್ತಲೂ ಕತ್ತಲೆ.. ಕಾರಿನಿಂದ ಟಾರ್ಚ್ ತೆಗೆದವರೇ ನಾವು ಬಸ್ ಸ್ಟಾಂಡ್ ನತ್ತ  ಓಡಿದೆವು .. ಕುಮಾರ ಅಲ್ಲೇ ಒಂದು ಮೂಲೆಯಲ್ಲಿ ಕುಳಿತು ಗಡಗಡನೆ ನಡುಗುತ್ತಿದ್ದ !! ಅರ್ಧ ಸುಟ್ಟ  ಸಿಗರೇಟು ಅಲ್ಲೇ ಬಿದ್ದು ಹೋಗೆ ಕಾರುತ್ತಿತ್ತು ! ಏನಾಯಿತು ಅಂತ ಕೇಳಿದ್ದಕ್ಕೆ ಕುಮಾರ ಕೈ ತೋರಿಸಿದ ಕಡೆ ನೋಡಿದ ನಾವು ಬೆಚ್ಚಿ ಬಿದ್ದೆವು!!

ಅದೇ ಬಸ್ಸ್ಟ್ಯಾಂಡ್ ನಲ್ಲಿ ಒಂದು ಹೆಣ ಹಗ್ಗಕ್ಕೆ ನೇತಾಡುತ್ತಿತ್ತು !!!!

                                                                                        ....ಮುಂದುವರೆಯುವುದು ...


ಗೋರೆ ಉವಾಚ :

ಅದೃಷ್ಟದಲ್ಲಿ ನಂಬಿಕೆಯಿಡಿ .. ಇಲ್ಲದಿದ್ದರೆ ನಿಮ್ಮ ವೈರಿಗಳ ಗೆಲುವನ್ನ ನೀವು ವಿವರಿಸಲಾಗದು !!!