Sunday, January 8, 2012

ಬಜಾಜ್ ಕಾರು!!

ಬಹುಶ ಇದನ್ನು ಭಾರತೀಯರಷ್ಟೇ ಮಾಡಬಲ್ಲರು.. ಟಾಟ ಒಂದೆರಡು ವರ್ಷ ಹಿಂದೆ ಮಾಡಿದ್ದನ್ನು ಈಗ ಬಜಾಜ್ ಮಾಡುತ್ತಿದೆ..

ಬಜಾಜ್ ಅಂದರೆ ಸಾಕು ಹಳಬರಿಗೆ ಚೇತಕ್ ಸ್ಕೂಟರು, ಹೊಸಬರಿಗೆ ಪಲ್ಸರ್ ಬೈಕು ನೆನಪಾಗುತ್ತದೆ.. ವರ್ಷಗಳಿಂದ ತ್ರಿ ಚಕ್ರ ವಾಹನಗಳಿಗೆ ಹೆಸರಾದ ಕಂಪನಿಯದು.. ಆದರೆ ಅವರ ಬತ್ತಳಿಕೆಯಲ್ಲಿ ಒಂದೇ ಒಂದು ಆಸ್ತ್ರ ಕಮ್ಮಿಯಿತ್ತು, ಅದೇ ನಾಲ್ಕು ಚಕ್ರದ ವಾಹನ. ಈಗ ಅದಕ್ಕೂ ಕಾಲ ಕೂಡಿ ಬಂದಿರೋ ಥರ ಕಾಣಿಸುತ್ತಿದೆ. ಅತೀ ದೊಡ್ಡದು ಅಲ್ಲದಿದ್ದರೂ ಅತೀ ಚಿಕ್ಕದಾದ ಕಾರು ಬಿಡುಗಡೆ ಮಾಡುವುದರಲ್ಲಿ ಬಜಾಜ್ ಕಂಪನಿ ಕೊನೆಗೂ  ಯಶಸ್ವೀ  ಯಾಗಿದೆ . ಇದು  ಕಾರು ಅನ್ನೋದಕ್ಕಿಂತ  ಹೆಚ್ಚ್ಹಾಗಿ  ಆಟೋ  ರಿಕ್ಷಾಗೆ  ಪರ್ಯಾಯ , ಟಾಟಾ  ನ್ಯಾನೋ  ಕಾರಿಗೆ  ಪ್ರತಿಸ್ಪರ್ಧಿ  ಮುಂತಾಗಿ  ಹೇಳಬಹುದು .

ಇದು ಶುರುವಾಗಿದ್ದು   2008 ರಲ್ಲಿ  .. ಆಗ ಬಜಾಜ್ ಇಂಥ ಒಂದು ಚಿಕ್ಕ  ಕಾರಿನ  ಕನಸು  ಕಂಡು  ಆಗ  ನಿಸ್ಸಾನ್  ಮತ್ತು  ರೆನಾಲ್ಟ್  ಅನ್ನೋ  ಕಂಪನಿ ಗಳ  ಜೊತೆ  ಒಡಂಬಡಿಕೆ  ಮಾಡಿಕೊಂಡಿತ್ತು .. ಆದರೆ ಆ ಕಂಪನಿ ಗಳಿಂದ ವೈಜ್ಞಾನಿಕವಾಗಿ   ಯಾವುದೇ  ಬೆಂಬಲ  ಸಿಗದಿದ್ದರೂ  ಬಜಾಜ್ ತನ್ನದೇ ಆದ ಕಾರು ಅಭಿವೃದ್ಧಿ ಪಡಿಸಿತು.. ಕಾರು ತಯಾರಾಗಲು ಬರೋಬ್ಬರಿ ನಾಲ್ಕು ವರ್ಷ ತೆಗೆದು ಕೊಂದಿತು.. ಇಂಥ ಕಾರು ಅಭಿವೃದ್ಧಿ ಪಡಿಸಲು ಬಜಾಜ್ ಖರ್ಚು ಮಾಡಿದ್ದು ಬರೋಬ್ಬರಿ ೮೦೦ ಕೋಟಿ ರೂಪಾಯಿ!! ಕೊನೆಗೂ ತಯಾರಾದ ಕಾರೆ ಬಜಾಜ್ RE ೬೦.


ಈ ಕಾರು ಸುಮಾರು ೨೦೦ ಚಕ್ ಎಂಜಿನ್ ಹೊಂದಿದ್ದು ಪೆಟ್ರೋಲ್ ಇಂಧನ ಬಳಸುತ್ತದೆ.. ಸುಮಾರು ೬೦೦ ಕಿಲೋ ಭಾರವಿರುವ ಇದರಲ್ಲಿ ೪ ಗೆಯರ್ ಗಳಿದ್ದು ಹೆಚ್ಚು ಅಂದರೆ ೭೦ ಕಿಲೋಮೀಟರು ವೇಗದಲ್ಲಿ ಓದಬಲ್ಲದು. ಪ್ರತಿ ಲೀಟರ್ ಇಂದನಕ್ಕೆ ಬರೋಬ್ಬರಿ ೩೫ ರಿಂದ ೪೦ ಕಿಲೋಮೀಟರು ಒಡಬಹುದಾದ ಇದರಲ್ಲಿ ೪ ಜನ ಕೂರಬಹುದಾಗಿದೆ. ಬೆಲೆ ಸುಮಾರು ೧.೨೫ ಲಕ್ಷಗಳಿಂದ ಪ್ರಾರಂಭವಾಗುತ್ತದೆ..
ಬಹುಶ  ಇದನ್ನು ನಗರ ಪ್ರದೇಶದ  ಜನ ನ್ಯಾನೋ ಬಳಸಿದಂತೆ  ಬಳಸಬಹುದೇನೋ .. ಆಟೋ ರಿಕ್ಷಾದ ಬದಲಿಗೂ ನಗರ ಪ್ರದೇಶದಲ್ಲಿ ಓದಬಹುದಷ್ಟೇ.. ಹಳ್ಳಿಗಳಲ್ಲಿ ೬-೭ ಜನರನ್ನು ತುಂಬಿಸಿ ದುಡ್ಡು ಮಾಡುವ ಬಡ ಆಟೋ ಡ್ರೈವರ್ ಇದನ್ನು ಇಷ್ಟಪದಲಾರ!! ಅಷ್ಟೇ ಅಲ್ಲದೆ ೨೦೦ ಚಕ್ ಎಂಜಿನ್ ಒಂದು ಪಲ್ಸರ್ ಬೈಕಿಗೆ ಸಮ.. ಇನ್ನು ಅದರಲ್ಲಿ ೪ ಜನ ತುಂಬಿಸಿ ದೇವರೇ ಗತಿ.. ನನ್ನ0ಥವರು ಓಕೆ , ಆದರೆ ಅದ್ನಾನ್ ಸಾಮಿ ಯಂಥವರು ಕೂತರೆ???




ಈ ಕಾರು ಮಾರುವ ಹಕ್ಕು ನಿಸ್ಸಾನ್ ಮತ್ತು ರೆನಾಲ್ಟ್ ಕಂಪೆನಿಯದ್ದು.. ಮೂರು ಕಂಪನಿಗಳ ಹೆಸರು ಈ ಕಾರಿನ ಮೇಲಿರುತ್ತದೆ.. ಆದರೆ ಒಂದು ವೇಳೆ ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿ ಗಳು ಇದರಲ್ಲಿ ಭಾಗಿಯಾಗಲು ಬಯಸದಿದ್ದರೆ ತಾನೇ ಇದನ್ನು ಮಾರಾಟ ಮಾಡುವುದಾಗಿ ಬಜಾಜ್ ಹೇಳಿಕೊಂಡಿದೆ.. ಮೊದಲು ಈ ಕಾರು ಶ್ರೀಲಂಕಾದಲ್ಲಿ ಮಾರುಕಟ್ಟೆಗೆ ಬರಲಿದೆ.. ಬಹುಶ ಈ ವರ್ಷ ಕೊನೆ ಅಥವಾ ಮುಂದಿನ ವರ್ಷದ ಮೊದಲಲ್ಲಿ ಇದು ಭಾರತದಲ್ಲೂ ದೊರಕಬಹುದು..




ಗೋರೆ ಉವಾಚ : ಬಜಾಜ್ RE ೬೦ ಕಾರು ಚಾಲೂ ಆಗದಿದ್ದರೆ ಏನು ಮಾಡೋದು? ಬಹಳ ಸುಲಭ. ಒಮ್ಮೆ   ಹಳೆ   ಬಜಾಜ್  ಚೇತಕ್ ಸ್ಕೂಟರನ್ನು  ನೆನಪಿಸಿಕೊಳ್ಳಿ .. RE ೬೦ ಕಾರನ್ನು  ಅಡ್ಡಕ್ಕೆ  ಬಾಗಿಸಿ  ಚೆನ್ನಾಗಿ  ನಾಲ್ಕು ಒದೆಯಿರಿ   .. ಕಾರು ಸ್ಟಾರ್ಟ್  ಆಗದಿದ್ದರೆ ಆಮೇಲೆ  ಕೇಳಿ !!!!