Wednesday, June 4, 2008

ಮಾತು ಮತ್ತು ಮೌನ

ಅತ್ಯಂತ ಕಡಿಮೆಯಾಗಿರಬೇಕು ಮಾತು , ಕಾಗದಕೆ ಬೀಳಬಾರದು ಯಾವ ತೂತು.. ಹೀಗಂತ ಎಲ್ಲೊ ಓದಿದ ನೆನಪು.
ನಿನ್ನೆಯ ತನಕ ನಾನೂ ಹಾಗೇ ಅಂದುಕೊಂಡಿದ್ದೆ .. ಚಿಕ್ಕಂದಿನಿಂದಲೇ ಮಾತಿಗಿಂತ ಹೆಚ್ಚಾಗಿ ಮೌನಕ್ಕೆ ಮೊರೆಹೋದವನು ನಾನು.. ಎರಡು ದಿವಿನಾದ ಕಣ್ಣು ಕೊಟ್ಟ ಭಗವಂತ ಅದರೊತ್ತಿಗೆ ಒಂದು ಬಾಯಿ ಕೊಟ್ಟು ಇಡೀ ಮೌನದ ಶೀಲ ಕೆಡಿಸಿಬಿಟ್ಟ ಅನ್ನಿಸ್ತಾ ಇತ್ತು. ಅತೀ ಖುಷಿಯಾದಾಗ ಇಲ್ಲ ದುಕ್ಖ ವಾದಾಗ ಮೌನವೆ ಹಿತ ಅನ್ನಿಸಿದ್ದು ಮಾತ್ರ ಸತ್ಯ.. ಹಾಡು, ಸಂಗೀತ ಕೇಳುತ್ತಾ ಸಮಯ ಕಳೆಯೋದು ರೂಢಿ ಯಾದವನಿಗೆ ಮಾತು ಬರೀ ಶಬ್ದ, ಮಾತು ಕರ್ಕಶ, ಮಾತು ವ್ಯಭಿಚಾರ, ಮಾತಿನಲ್ಲಿ ಬಣ್ಣವಿಲ್ಲ , ಮಾತು ವಕ್ರವೂ ಅಲ್ಲ ನೇರವೂ ಅಲ್ಲ.. ಹಾಗಂತ ಅಂದುಕೊಂಡಿದ್ದೆ ..
ಮಾತು ಬಲ್ಲವನಿಗೆ ಜಗಳವಿಲ್ಲ ಅಂತಾರೆ ... ಮಾತೇ ಆಡದೆ ಅದೆಷ್ಟೋ ಜನರೊಟ್ಟಿಗೆ ಜಗಳ ತಪಪಿಸಿಕೊನ್ದವನಿಗೆ ಇದೆಲ್ಲ ಬುರುಡೆ ಅನ್ನಿಸುತ್ತೆ ... ಹಾಗಂತ ಮಾತು ಆಡದೆ ಸಾಧಿಸಿದ್ದೇನು , ಮೌನದಿಂದಾಗಿ ಗಳಿಸಿದ್ದೇನು ಅಂತ ಒಂದು ಸಾರಿ ಆಲೋಚನೆ ಮಾಡಿದ್ರೆ ನನಗೆ ಸಿಕ್ಕಿದ ಉತ್ತರ ಮಾತ್ರ ಸೊನ್ನೆ.. ಆದರೂ ಜೀವನದ ಜೊತೆ ನನ್ನದೇನೂ ತಕರಾರಿಲ್ಲ ಅದು ನಡೆಸಿಕೊಂಡಂತೆ ನಡೆದುಕೊಂಡು ಬಂದಿದ್ದೇನೆ... ಜೀವನ ಅನ್ನೋದು ಪುಷ್ಪಕ ವಿಮಾನ ಆಗ್ಬೇಕು... ಮಾತು ಅನ್ನೋದು ಅದ್ರ ಪೈಲಟ್ ಆದ್ರೆ ಮೌನ ಅದ್ರ ಗಗನಸಖಿ ... ನಿನ್ನ ಪ್ರೀತಿಸ್ತೀನಿ ಕಣೇಅನ್ನೋಕು ದಿನಗಟ್ಟಲೆ ಕಾದು, ಮೌನದ ಪೊಟರೆ ಯೊಳಗೆ ಹಕ್ಕಿ ಮಾತಿನ ಮೊರೆ ಹೋದಾಗ ನಾನು ತುಂಬ ತಡ ಮಾಡಿದ್ದೆ ಅನ್ನಿಸುತ್ತೆ.. ಅರೆ ಮೌನವೇ ಇದಕ್ಕೆ ಕಾರಣವೇ? ವಟ ವಟ ಅಂತ ಮಾತಾಡೋರೆ ಬೆಟರ್ ಅಲ್ವೇನು? ಹಾಗಂತ ನನ್ನೇ ಕೇಳಿಕೊಂಡೆ ... ಉತ್ತರ ಸಿಗಲಿಲ್ಲ ... ಯಾರನ್ನಾದ್ರೂ ಕೇಳೋಣ ಅಂದ್ರೆ....
ಮಾತು ಬೆಳ್ಳಿ , ಮೌನ ಬಂಗಾರ ಅಂತ ಯಾರೋ ಮಹಾತ್ಮ ಹೇಳಿದ ಮಾತು ನೆನಪಾಯಿತು...

4 comments:

ಅರ್ಚನಾ said...
This comment has been removed by the author.
ಅರ್ಚನಾ said...

http://archana-hebbar.blogspot.com/2007/03/blog-post_7460.html

gore said...

Hi archana,
That was a gud one... Just read it..
Whats that deleted comment?? :-)

Rekha said...

hi....it was nice......

As people say "MAATE MUTTU,MAATE MRUTYU" We should speak how much is required.Wherever necessary we should speak,we should tell our opinion. :-)