Monday, January 11, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!! (ಭಾಗ ೨)

ದಿನಗಳು ಕಳೆದದ್ದೇ ತಿಳಿಯಲಿಲ್ಲ... ಸುನೀತಾ ಹಾಗು ನಮ್ಮ ಮಧ್ಯೆ ಮಾತು ಕತೆ ನಿಂತೇ ಹೋಗಿತ್ತು... ನಾವೂ ಆಕೆಗೆ ತಮಾಷೆ ಮಾಡೋದನ್ನ ಬಿಟ್ಟಿದ್ದರೆ, 'ಗರಗಸ' ತನ್ನ ಅಟ್ಟಹಾಸವನ್ನೂ ನಿಲ್ಲಿಸಿದ್ದ... ನಿಲ್ಲಿಸಿದ್ದ ಅನ್ನುವುದಕ್ಕಿಂತ, ನಾವೇ ಅವನಿಗೆ ಬಯ್ದು ಇನ್ನು ಹಾಗೆ ನಗಬಾರದು , ನಾವು ಸೇಡುತೀರಿಸಿಕೊಳ್ಳಲಿದ್ದೇವೆ ಎಂದು ತಾಕೀತು ಮಾಡಿದ್ದೆವು... ನಮ್ಮಗಳ ಮಧ್ಯೆ ಅದೊಂದು ತರಹದ ಶೀತಲ ಸಮರ... ಆದರೆ ನಾವು ಸೇಡು ತೀರಿಸಿಕೊಳ್ಳುವ ಪರಿ ಗೊತ್ತಿಲ್ಲದ ಸುನೀತ ಮಾತ್ರ ಹಾಯಾಗಿದ್ದಳೆನೋ.. ೫ ತಿಂಗಳು ಕಳೆದವು... ಮಧ್ಯವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ನಾವೆಲ್ಲರೂ  ರಜಾದಿನಗಳಿಂದ  ವಾಪಸು ಕಾಲೇಜ್ ಕಡೆ ತಲೆ ಹಾಕಿದ್ದೆವು... ಹಾಗಿರಲೊಂದು ದಿನ ನಮ್ಮ ಸೇಡು ತೀರಿಸಿಕೊಳ್ಳುವ ಕಾಲ ಪಕ್ವವಾಗಿದೆ ಎಂದು ನಮಗನ್ನಿಸತೊಡಗಿತ್ತು.."ಇನ್ನು ತಡ ಮಾಡೋದು ಬೇಡ, ತುಂಬಾ ಕಷ್ಟವಾಗ್ತಿದೆ" ಸದಾನಂದ ಅದೊಂದು ದಿನ ನನ್ನಲ್ಲಿ ಹೇಳಿಕೊಂಡ.. ಸರಿ ಎಂದು ನಾವೂ ಒಂದು ಒಳ್ಳೆಯ ದಿನಕ್ಕಾಗಿ ಹುಡುಕಾಟ ನಡೆಸಿದೆವು.. ಆಗ ಬಂದಿದ್ದೆ ಕುಮಾರನ ಹುಟ್ಟುಹಬ್ಬ...!!!


ಈ ಕುಮಾರ ನಮ್ಮ ಗುಂಪಿನವನೊಬ್ಬ.. ಆತನದೂ ಕೆಲವು ಇಂಟರೆಸ್ಟಿಂಗ್ ಕಥೆಗಳಿವೆ ಅದನ್ನು ಮುಂದೆ ಹೇಳುವೆ...
ಅದ್ಹೇಗೋ ಆತನ ಮನ ವೊಪ್ಪಿಸಿ, ನಾವೇ ಸ್ವಲ್ಪ ಸ್ವಲ್ಪ ದುಡ್ಡು ಹಾಕಿ ಆತನ ಹುಟ್ಟುಹಬ್ಬಕ್ಕೆ, ಕ್ಲಾಸ್ ನವರಿಗೆಲ್ಲ ಪಾರ್ಟಿ ಕೊಡೋದು ಅಂತ ನಿರ್ಧರಿಸಿದೆವು...ಆತನ ಹುಟ್ಟುಹಬ್ಬ ಶುಕ್ರವಾರ ವಾಗಿತ್ತು.. ಅದನ್ನು ಶನಿವಾರಕ್ಕೆ ಮುಂದೆ ಹಾಕೋಣ ಎಂದು ಯೋಚಿಸಿದರೋ ಸಾಧ್ಯವಾಗಲಿಲ್ಲ... ಸರಿ ಶುಕ್ರವಾರವೇ ಪಾರ್ಟಿ... ಎಲ್ಲರೂ ಒಂದು ಕಡೆ ಸೇರುವುದು ಎಂದು ನಿರ್ಧಾರವಾಯಿತು... ಇದ್ದ ವೊಂದೇ ಅಡ್ಡ ಅಮೃತ್ ಕ್ರೀಂ ಪಾರ್ಲರ್ .. ಹಾಗಾಗಿ ಎಲ್ಲರನ್ನೂ ಕುಮಾರ ಶುಕ್ರವಾರ ಸಂಜೆ ಬರಬೇಕೆಂದು ಆಹ್ವಾನಿಸಿದ.. ಸುನೀತಾಳಿಗೂ ಕರೆ ಕೊಡಲಾಯಿತು... ಆ ಶುಕ್ರವಾರ ಬಂದೆ ಬಿಟ್ಟಿತು...
ಎಲ್ಲರೂ ಅಲ್ಲಿ ಸಂಜೆ ೫ ಗಂಟೆಗೆ ಹಾಜರು... ಗಡದ್ದು ಪಾರ್ಟಿ ಆರಂಭವಾಯಿತು.. ಆದರೆ ಸದಾನಂದ ಮಾತ್ರ ಕಾಣೆಯಾಗಿದ್ದ.. ಎಷ್ಟು ಹೊತ್ತಾದರೂ ಆತನ ಪತ್ತೆಯಿಲ್ಲ... "ಸೇಡು ತೀರಿಸಿಕೊಳ್ಳುತ್ತೇವೆ  ಅಂದ್ರಿ , ಆದ್ರೆ ಹೆದರಿ ಆತನೇ ಪರಾರಿನಾ? "  'ಗರಗಸ' ನನ್ನಲ್ಲಿ ಕೇಳಿದ್ದಕೆ ಆತನನ್ನು ಸುಮ್ಮನಾಗಿಸಿದೆ... ಇನ್ನೇನು ಪಾರ್ಟಿ ಮುಗಿಯುವ ಹೊತ್ತಾಯಿತು ಅನ್ನುವಷ್ಟರಲ್ಲಿ ಸದಾನಂದ ಪ್ರತ್ಯಕ್ಷನಾಗೆಬಿಟ್ಟಿದ್ದ  .. ಆತನ ಕೈಯಲ್ಲಿ ದೊಡ್ಡ ಸರಪಳಿ.. ಅದಕ್ಕೆ ಕಟ್ಟಿದ್ದಿದ್ದು ಒಂದು ಸುಂದರ ಮಜಬೂತಾದ ನಾಯಿ!!!!!


 ಎಲ್ಲರೂ ಆತನನ್ನೇ ನೋಡುತ್ತಿದ್ದರೆ, ಆ ನಾಯಿ ಹೆದರಿಕೆಯಿಂದ ಎಲ್ಲಾರನ್ನೂ ದುರುಗುಟ್ಟಿ ನೋಡುತ್ತಿತ್ತು...
" ನಾನು ಬರೋದು ಸ್ವಲ್ಪ ತಡವಾಯಿತು... ಇದು ನನ್ನ ನಾಯಿ, ತುಂಬಾ ಕಷ್ಟ ಪಟ್ಟು ಸಾಕಿ ಬೆಳೆಸಿದ್ದೇನೆ.. ಭಾರಿ ಬುದ್ಧೀನೂ ಇದೆ ಇದಕ್ಕೆ... ಯಾರು ಏನೆ ಹೇಳಿದ್ರೂ ಅದನ್ನ ಮಾಡುತ್ತೆ ಈ ನಾಯಿ" ಸದಾನಂದ ಪೀಠಿಕೆ ಹಾಕಿದ..."ಹೌದಾ!!" ಎಂದು ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರೆ "ಬೊಗಳೋ" ಅಂತ ನಾಯಿಗೆ ಆಜ್ನಾಪಿಸಿದ್ದು ಟೀನಾ.. ನಾಯಿ ಆಕೆಯನ್ನೊಮ್ಮೆ ದುರುಗುಟ್ಟಿ ಸುಮ್ಮನಾಯಿತು...
"ಕೈ ಕೊಡು" ಗರಗಸ ಆಜ್ಞಾಪಿಸಿದ... ಉಹುಂ ನಾಯಿ  ಏನೂ ಗೊತ್ತಿಲ್ಲದಂತೆ ಕುಳಿತಿತ್ತು..."ಏನೋ ಇದು ಏನ್ ಬೇಕಾದರೂ ಮಾಡುತ್ತೆ ಅಂದಿ, ಇದು ಸುಮ್ನೆ ಕುಳಿತುಬಿಟ್ಟಿದೆ" ಯಾರೋ ಮಧ್ಯದಲ್ಲಿ ಬಾಯಿಹಾಕಿದ್ದರು..."ಅದು ಹಾಗೆಲ್ಲ್ಲ ಆಗಲ್ಲ, ಅದರ ಹೆಸರು ಹೇಳಿ ಅದಕ್ಕೆ ಏನು ಮಾಡಬೇಕು ಅಂತ ಹೇಳಬೇಕು.. ಆಗ ಮಾತ್ರ ಅದು ಹೇಳಿದ್ದು ಮಾಡುತ್ತೆ" ಸದಾನಂದ ರಹಸ್ಯ ಬಿಟ್ಟುಕೊಟ್ಟ..."ಹೌದಾ, ಏನು ಇದರ ಹೆಸರೇನು" ಎಲ್ಲರೂ ತುಂಬಾ ಉತ್ಸಾಹದಿಂದ ಕೇಳಿದರು..."ಸುನೀತಾ ಅಂತ!!!" ಸದಾನಂದ ಹಾಗೆ ಹೇಳುತ್ತಿದ್ದಂತೆ ಎಲ್ಲಾರೂ ಅವಕ್ಕಾದರು...!!!
"ಸುನೀತಾ ಕೈ ಎತ್ತು" ಸದಾನಂದ ಹೇಳುತ್ತಿದ್ದಂತೆ ನಾಯಿ ತನ್ನ ಮುಂದಿನ ಕಾಲೆತ್ತಿ ಬಾಲ ಅಲ್ಲಾಡಿಸತೊಡಗಿತು!!! "ಸುನೀತಾ ಎರಡೂ ಕೈಯೆತ್ತು" ಈಗ ಅದು ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತು ಬಿಟ್ಟಿತ್ತು..."ಸುನೀತಾ ಮಲ್ಕೋ" ನಾಯಿ ಸಟ್ಟನೆ ಮಲಗಿಕೊಂಡಿತು...!!!! "ಸುನೀತಾ ಕೂತ್ಕೋ" ನಾಯಿ ಕುಳಿತು ಎಲ್ಲರನ್ನೂ ದಿಟ್ಟಿಸಿ ನೋಡತೊಡಗಿತು...!! ಎಲ್ಲರೂ ಅದನ್ನೇ ಗಮನಿಸುತ್ತಿದ್ದರೆ , ಸುನೀತಾಳ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿತ್ತು...!! "ಹೇ ಇದು ಗಂಡು ನಾಯಿ ಅಲ್ವೇನೋ? ಇದಕ್ಕೆ ಸುನೀತಾ ಅಂತ ಹೆಣ್ಣಿನ ಹೆಸರ್ಯಾಕೆ ಇಟ್ಟೆ" ನಾನು ಒಂದು ಗೋಲಿ ಬಿಟ್ಟೆ..." ನಾಯಿ ಗಂಡಾಗಿರಲಿ ಹೆಣ್ಣಾಗಿರಲಿ , ಅದಕ್ಕೆ ಸುನೀತಾ ಅನ್ನೋ ಹೆಸರು ತುಂಬಾ ಚೆನ್ನಾಗಿ ಒಪ್ಪುತ್ತೆ" ಸದಾನಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದ್ದ... ಅಷ್ಟರಲ್ಲಾಗಲೇ ಅವಮಾನಕ್ಕೊಳಗಾದ ಸುನೀತಾ ಅಲ್ಲಿಂದ ಎದ್ದು ಹೊರಟೆ ಬಿಟ್ಟಳು...


"ಸುನೀತಾ ನಿಂತ್ಕೋ " ಸದಾನಂದ ಆಕೆಯ ಕಡೆ ಧಾವಿಸಿದ... ಆ ಮಾತಿಗೆ ನಾಯಿ ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತಿದ್ದನ್ನು ಮಾತ್ರ ಯಾರೂ ಗಮನಿಸಲೇ ಇಲ್ಲ!!!.. ಎಲ್ಲರೂ ಸದಾನಂದ ಮತ್ತು ಸುನೀತಾಳನ್ನೇ ನೋಡುತ್ತಿದ್ದರು.. ಮುಂದೇನಾಗುತ್ತೋ ಅನ್ನೋ ಭಯ ಎಲ್ಲರಿಗೆ.."ಸುನೀತಾ ನೋಡು, ೫ ತಿಂಗಳ ಹಿಂದೆ ನಿನ್ನ ಮನೆಯಿಂದ ಒಂದು ನಾಯಿಮರಿ ಕಳುವಾಗಿತ್ತಲ್ಲ, ಅದೇ ಈ ನಾಯಿ.. ತಗೋ ನಿಂಗೆ ಇರ್ಲಿ.. ಚೆನ್ನಾಗಿ ಸಾಕಿದ್ದಿನಿ.. ಬುದ್ಧೀನೂ ಕಲಿಸಿದ್ದೀನಿ.. ಇನ್ನು ನೀನೆ ಸಂಭಾಳಿಸು.. ಆದ್ರೆ ನೆನಪಿಡು , ಅದ್ರ ಹೆಸರು ಕರೆದು ಹೇಳಿದ್ರೆನೆ ಅದು ಕೇಳೋದು . ಇಲ್ಲಾಂದ್ರೆ ಅದೂ ಏನೂ ಕೇಳಲ್ಲ..." ಸದಾನಂದ ತನ್ನ ಮಾತು ಮುಗಿಸಿ ನಾಯಿಯ ಸರಪಳಿಯನ್ನು ಆಕೆಯ ಕೈಗಿತ್ತ... ಸುನೀತಾ ಬಾ, ಸುನೀತಾ ಕೂತ್ಕೋ, ಸುನೀತಾ ಬೊಗಳು ಹೀಗೆಲ್ಲ ಸ್ವತಹ ಸುನೀತಾಳೆ ಹೇಳೋದನ್ನು ಕಲ್ಪಿಸಿಕೊಂಡು ನಾನು ಬಿದ್ದು ಬಿದ್ದು ನಗತೊಡಗಿದ್ದೆ... ಎಲ್ಲರಿಗೂ ಇದರ ಕಾರಣ ಅರ್ಥವಾಗಿ , ನಾವು ಸೇಡು ತೀರಿಸಿಕೊಂಡ ಪರಿ ನೋಡಿ ಒಳಗೊಳಗೇ ನಗತೊಡಗಿದರು..
ನಾಯಿಯನ್ನು ಸುನೀತಾಳ ಕೈಗೊಪ್ಪಿಸಿ, ಅದನ್ನು ಕದ್ದಿದ್ದಕ್ಕೆ ಆಕೆಯ ಕ್ಷಮೆ ಕೇಳಿ ನಾವು ಅಲ್ಲಿಂದ  ಮುಂದೆ ಹೆಜ್ಜೆ ಹಾಕಿದೆವು...!!!!

26 comments:

ಗೌತಮ್ ಹೆಗಡೆ said...

hahaha olle reetili sedu teerisikondri:)olle maja kodtu e prasanga:)

Unknown said...

ಗೌತಮ್,

ಧನ್ಯವಾದಗಳು...

ಬಾಲು said...

ವಾರೆವ್ವಾ ....
ನಂಗೆ ಗಣೇಶನ ಮದುವೆಯ "ರಮಣ ಮೂರ್ತಿ ಅನ್ನೋ ನಾಯಿ ನೆನಪು ಬಂತು"

ಅ ನಾಯಿಗೆ ಟ್ರೇನಿಂಗ ಕೊಟ್ಟವರಿಗೆ ನಿಜಕ್ಕೂ ಭಾರಿ ಬಹುಮಾನ ಕೊಡಬೇಕಿದೆ.

ಮನಸು said...

oLLe kate maadibittri papa sunita haha.

chennagitu sedu teerisikoLLuva pari.

Vijay said...

super sedu !!

Shashi jois said...

ಬಲು ಕಿಲಾಡಿನೇ ರೀ ನಿಮ್ಮ ಸ್ನೇಹಿತ!!!!. ಪರವಾಗಿಲ್ಲ ಸೇಡು ತೀರಿಸಿಕೊಂಡ ರೀತಿ ಓದಿ ಜೋರು ನಗು ಬಂತು.

Unknown said...

ಬಾಲು ಸಾರ್,

ಧನ್ಯವಾದಗಳು..

ಶಿವಪ್ರಕಾಶ್ said...

ಹ್ಹ ಹ್ಹ ಹ್ಹ... ನಿಮ್ಮ ಸೇಡಿನ ಕಥೆಗಳು ತುಂಬಾ ಚನ್ನಾಗಿದವೇ ರೀ.

Unknown said...

ಮನಸು ಮೇಡಂ, / ವಿಜಯ್,

ಧನ್ಯವಾದಗಳು..

Unknown said...

ಶಶಿಯವರೇ,

ಕಥೆ ನಿಮಗೆ ಮೆಚ್ಚುಗೆಯಾಗಿದ್ದು ಸಂತಸ ತಂದಿತು... ಹೀಗೆ ಬರುತ್ತಿರಿ...

Unknown said...

ಶಿವಪ್ರಕಾಶ್,

ನಿಮ್ಮ ಮೆಚ್ಚುಗೆಗೆ ವಂದನೆಗಳು...

shivu.k said...

ಆಹಾ!

ಸೇಡು ತೀರಿಸಿಕೊಳ್ಳೋದು ಅಂದ್ರೆ ಈ ಮಟ್ಟಿಗೆ ಅಂತ ಗೊತ್ತಿರಲಿಲ್ಲ. ಅದಕ್ಕಾಗಿ ಐದು ತಿಂಗಳು ನಾಯಿಗೆ ಟ್ರೈಯಿನಿಂಗ ತಾಳ್ಮೆಯಿಂದ ಕೊಟ್ಟಿದ್ದಾರಲ್ಲ...ಅದಕ್ಕೆ ಅಭಿನಂದನೆಗಳು.

Unknown said...

ಶಿವೂ ಸಾರ್,

ಕಬ್ಬಿಣ ಕಾದಾಗ್ಲೆ ಬದಿಬೇಕು ಸಾರ್... ಅದಕ್ಕಾಗಿ ಕಾಯದೆ ವಿಧಿಯಿಲ್ಲ...ಹೀಗೆ ಬರುತ್ತಿರಿ..

ದಿನಕರ ಮೊಗೇರ said...

ರವಿಕಾಂತ್,
ತುಂಬಾ ಖಾರ ಖಾರ ಸೇಡ್ರಿ ನಿಮ್ಮದು..... ಅದರ ನಂತರವಾದ್ರು ಸುನೀತ ಸರಿ ಆದ್ಲಾ...... ನಿರೂಪಣೆ ಕೊನೆಯಲ್ಲಿ...... ಸ್ವಲ್ಪ ಗಡಿಬಿಡಿ ಮಾಡಿದ್ರಿ, ಅನ್ನಿಸಿತು......

umesh desai said...

ಮೊದಲಭಾಗ ಓದಿದ್ದೆ ಎರಡನೇದ್ದಕ್ಕೆ ಕಾದಿದ್ದೆ ತುಂಬಾ ಸೊಗಸಾಗಿ ಎಂಡ್ ಮಾಡಿರಿ ಹಂಗ ನೋಡಿದ್ರ ಮೊದಲನೇ ಭಾಗಓದ್ದಾಗ ಸೇಡು ತೀರಿಸಿಕೊಳ್ಳೊ ರೀತಿ ಬಗ್ಗೆ ಊಹಿಸಿ ಭಯಗೊಂಡಿದ್ದೆ ಆದ್ರ ಹಿಂಗೂ ಸೇಡು ತೀರಿಸ್ಕೊಬಹುದು..ಗೊತ್ತಾತು...

ಚುಕ್ಕಿಚಿತ್ತಾರ said...

ಭಯ೦ಕರವಾಗಿ ಸೇಡು ತೀರಿಸಿ ಕೊ೦ಡ್ರಲ್ಲಾ ....
ಪಾಪ ಸುನೀತ....

sunaath said...

ಅಯ್ಯೊ, ಪಾಪ ಸುನೀತಾ!

ಜಲನಯನ said...

ರವಿಕಾಂತ...ನಿಮ್ಮ ಮೊದಲ ಕಂತು ನೋಡಿರ್ಲಿಲ್ಲ ಈ ಗನೋಡಿದೆ...ಆದ್ರೆ ಈಗ ಅನ್ನಿಸ್ತಾ ಇದೆ...ಅದನ್ನು ಓದಿದ್ದ್ರೆ ..ಏನೇನೋ ಊಹೆ ಎಲ್ರತರಹ ನನಗೂ ಬರ್ತಿತ್ತಾ ಅಂತ...ಅದು ಒಮ್ದು ಥ್ರಿಲ್ಲೇ ಅಲ್ವಾ? ಅಂತೂ ಒಳ್ಳೆ ನವೀನಸೇಡು.....ಹಹಹ

Anonymous said...

kathe chennagide.

Unknown said...

ದಿನಕರ್ ಸಾರ್,

ಧನ್ಯವಾದಗಳು... ೨ ಭಾಗದಲ್ಲೇ ಕಥೆ ಮುಗಿಸಬೇಕು ಅಂದುಕೊಂಡಿದ್ದೆ... ಅದಕ್ಕೆ ಶಾರ್ಟ್ ಆಗಿ ಮುಗಿಸಿಬಿಟ್ಟೆ...

Unknown said...

ದೇಸಾಯಿ ಸಾರ್,

ಹೌದು.. ಅದೊಂದು ಥರಾ ವಿಭಿನ್ನವಾಗಿ ಸೇಡುತೀರಿಸಿಕೊಂಡ ಪರಿ... ಹೀಗೆ ಬರುತ್ತಿರಿ..

Unknown said...

ಚುಕ್ಕಿಚಿತ್ತಾರ ಅವರೇ,
ಧನ್ಯವಾದಗಳು..

Unknown said...

ಸುನಾಥ್ ಸಾರ್,

ನಿಮಗೆ ಪಾಪ ಅನ್ನಿಸ್ತ??? ಛೆ.. :-)

ಹೀಗೆ ಬಂದು ಪ್ರೋತ್ಸಾಹಿಸುತ್ತಿರಿ...

Unknown said...

ಅಜ್ಹಾದ್ ಸಾರ್,

ಧನ್ಯವಾದಗಳು...

Unknown said...

ಅನಾಮಿಕರೆ,

ನಿಮಗೂ ಧನ್ಯವಾದಗಳು... ಹೀಗೆ ಬರುತ್ತಿರಿ...

ಸುಧೇಶ್ ಶೆಟ್ಟಿ said...

ಎರಡು ಭಾಗಗಳನ್ನು ಒಟ್ಟಿಗೆ ಓದಿದೆ... ಚೆನ್ನಾಗಿತ್ತು ಇವರೇ :)