Thursday, January 28, 2010

ಗಡಂಗ್ ರದ್ದಾವಡ್ !!!!

ಅವಲಕ್ಕಿ ಬಾಬು... ಆತನ ನಿಜವಾದ ಹೆಸರು ಏನು ಅಂತ ಗೊತ್ತಿಲ್ಲ... ಆದರೆ ಎಲ್ಲರೂ ಆತನನ್ನು ಬಜಿಲ್ ಬಾಬು ಅಂತ ಕರೆಯುತ್ತಿದ್ದರು.. ಅಂದ ಹಾಗೆ ಬಜಿಲ್ ಅಂದ್ರೆ ತುಳು ಭಾಷೆಯಲ್ಲಿ ಅವಲಕ್ಕಿ ಅಂತ ಅರ್ಥ.. ಈತ ನಮ್ಮ ಊರಿನ ಒಬ್ಬ ವಿದೂಷಕ ಇದ್ದಂತೆ... ದಿನ ಕೂಲಿ ಮಾಡಿಕೊಂಡು, ದುಡಿದ ದುಡ್ಡನ್ನು ಅರ್ಧ ಮನೆಗೂ ಅರ್ಧ ಶರಾಬು ಅಂಗಡೀಗೂ  ಹಾಕುತ್ತಿದ್ದ... ಮಾತಿನಲ್ಲಿ ಭಾರಿ ಜಾಣ.. ಆತ ಸಂಜೆಯ ಹೊತ್ತಿಗೆ ಶರಾಬು ಕುಡಿದು ತೂರಾಡುತ್ತ ಅದೇನೇನೋ ಮಾತಾಡಿಕೊಂಡು ತಿರುಗುತ್ತಿದ್ದುದು ಸಾಮನ್ಯ.. ಆದರೆ ಮರುದಿನ ಆತನಿಗೆ ಕೇಳಿದರೆ ಆತ ಏನು ಮಾಡಿದ್ದೂ ನೆನಪಿರುತ್ತಿರಲಿಲ್ಲ..ಅಥವಾ ಹಾಗೆ ಮಾಡುತ್ತಿದ್ದನೋ ಗೊತ್ತಿಲ್ಲ...


ಹಾಗಿರಲೊಂದು ದಿನ ನಮ್ಮ ಊರಿಗೆ ಕಾಲಿಟ್ಟಿದ್ದೆ ಮದ್ಯಪಾನ ವಿರೋಧಿ ಚಳುವಳಿ...ತುಂಬಾ ಮಂದಿ ಅದರಲ್ಲಿ ಭಾಗವಹಿಸಿದ್ದು, ನಮ್ಮ ಅವಲಕ್ಕಿ ಬಾಬು ಕೂಡ ಸೇರಿ ಕೊಂಡಿದ್ದಾನೆ ಅನ್ನೋ ಸುದ್ದಿ ಬಂತು.. ಕೆಲವು ದಿನ ಕಳೆದವು.. ಆವತ್ತು ಈ ಮದ್ಯಪಾನ ವಿರೋಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ.. ಕಾರ್ಯಕ್ರಮ ಎಲ್ಲಾ ಮುಗಿದು ಎಲ್ಲರೂ ಘೋಷಣೆ ಕೂಗುತ್ತಿದ್ದರು... "ಗಡಂಗ್ ರದ್ದಾವಡ್, ಗಡಂಗ್ ರದ್ದಾವಡ್" (ಗಡಂಗ್ == ಶರಾಬು ಅಂಗಡಿ, ರದ್ದಾವಡ್==ರದ್ದಾಗಲಿ ಅಂತ ಅರ್ಥ) ಹಾಗಂತ ಎಲ್ಲರೂ ಅರಚಿದ್ದೆ ಅರಚಿದ್ದು..


ಕಾರ್ಯಕ್ರಮವೆಲ್ಲಾ ಮುಗಿದು ಸಂಜೆ ಆಯಿತು... ಸ್ವಲ್ಪ ಹೊತ್ತಿನಲ್ಲೇ ನಮ್ಮ ಬಜಿಲ್ ಬಾಬು ಶರಾಬು ಅಂಗಡಿಯಲ್ಲಿ ಪ್ರತ್ಯಕ್ಷ ನಾಗಿದ್ದ..."ಏನಯ್ಯ ಬಾಬು ಗಡಂಗ್ ರದ್ದಾವಡ್,ಗಡಂಗ್ ರದ್ದಾವಡ್ ಅಂತ ಭಾರಿ ಅರಚಿಕೊಳ್ತಿದ್ದೆ, ಈಗ್ಯಾಕೆ ಬಂದೆ ಇಲ್ಲಿಗೆ?" ಅದ್ಯಾರೋ ಕೇಳಿದ್ದಕ್ಕೆ ತಾನು ಹಾಗೆ ಹೇಳಲೇ ಇಲ್ಲ , ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಅಂತ ಬಜಿಲ್ ಬಾಬು ವಾದಿಸಿದ.. ನಾನು ಅರಚಿಕೊಂಡಿದ್ದು ಶರಾಬು ಅಂಗಡಿಗೆ ಬೆಂಬಲವಾಗಿ ಅಂತ ಆತನ ಅಳಲು .." ಅಲ್ಲ ಅದ್ಹೇಗೆ ಆಗ್ತದೆ? ನೀನೂ ಹೇಳಿದ್ದು ಗಡಂಗ್ ರದ್ದಾವಡ್ ಅಂತ ತಾನೇ ? ಅದು ನಮಗೆ ಹೇಗೆ ಬೆಂಬಲ ವಾಗ್ತದೆ" ಒಬ್ಬ ಕುಡುಕ ತರಾಟೆಗೆ ತೆಗೆದುಕೊಂಡ... "ಅಯ್ಯೋ ಸ್ವಾಮೀ, ನೀವೇನ್ ಅರಚಿಕೊಂಡ್ರೋ ನಂಗೊತ್ತಿಲ್ಲ .. ನಾನು ಮಾತ್ರ ಬೊಬ್ಬೆ ಹೊಡೆದದ್ದು ಗಡಂಗ್ ರಡ್ದಾವಾಡ್,   ಗಡಂಗ್ ರಡ್ದಾವಾಡ್ ಅಂತ" (ತುಳುವಿನಲ್ಲಿ ರಡ್ಡ್ ಅಂದ್ರೆ ಎರಡು. ಅಂದ್ರೆ ಆತ ಹೇಳಿದ್ದು ಗಡಂಗ್ ಯೆರಡಾಗ್ಲಿ !!)  ಆತನ ಮಾತಿಗೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದರೆ, ಶರಾಬು ಅಂಗಡಿಯಾತ ಆತನ ಬುದ್ಧಿಮತ್ತೆಗೆ ಬಹುಮಾನವಾಗಿ  ಆವತ್ತಿನ ಶರಾಬು ಉಚಿತವಾಗಿ ನೀಡಿದ್ದ!!!

ಚಿತ್ರಕೃಪೆ : ಅಂತರ್ಜಾಲ

25 comments:

PARAANJAPE K.N. said...

ಗಡ೦ಗಿನ ಕಥೆ ಚೆನ್ನಾಗಿದೆ. ನೀವು ಹೇಳಿದ ತರಹೆಯ ವ್ಯಕ್ತಿ ನಮ್ಮೂರಲ್ಲೂ ಒಬ್ಬನಿದ್ದ. ಕುಡುಕರು ಸುಳ್ಳು ಹೇಳುವುದಿನ್ನ ಅ೦ತ ಹೇಳುವುದಿಲ್ಲ ಅನ್ನುವುದಕ್ಕೆ ಇದು ಉದಾಹರಣೆಯೇ !!!

Subrahmanya Bhat said...

ನನ್ನ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಮುಗಿಸಿದ್ದು ’ಉಜಿರೆ’ ಯ SDM ಕಾಲೇಜಲ್ಲಿ....ಅಲ್ಲಿದ್ದಾಗಲೇ ಈ ’ಬಜಿಲ್’ ಮಹತ್ವ ಗೊತ್ತಾಗಿದ್ದು..ಹ್ಹ..ಹ್ಹಾ...:) ಇರಲಿ...ಅಂತೂ ಬಜಿಲ್ ಬಾಬು ಸತ್ಯವನ್ನೇ ಹೇಳಿ ಕುಡುಕರ ಮರ್ಯಾದೆ ಉಳಿಸಿದ ಬಿಡಿ...!

Anonymous said...

ಸಕ್ಕತ್ತಾಗಿದೆ....:) ಚೆನ್ನಾಗಿ ಬರೀತಿದ್ದೀರಿ... ಬಜಿಲ್ ಬಾಬು ಸಮಯಸ್ಪೂರ್ತಿ ಮೆಚ್ಚತಕ್ಕದ್ದು, ( ಅದಕ್ಕೆ ಪ್ರೇರಣೆ ಏನಂದ್ಕಂಡಿದೀರಿ ಮತ್ತೆ?!)

ದಿನಕರ ಮೊಗೇರ.. said...

hhaa hhaa.......... chennaagide kathe.....

sunaath said...

ಹಾಹಾ! ಬಜಿಲ್ ಬಾಬುಗೆ ಜೈ ಹೋ!!

ಆನಂದ said...

ನಿಷ್ಠೆ ಎಂದರೇನು ಅಂತ ಬಜಿಲ್ ಬಾಬು ಹತ್ತಿರ ಕಲಿಯಬೇಕು... :) ಜೈ ಹೋ!

Anonymous said...

ಒಂಜಿ ಗಡಂಗ್ ಉತ್ತುಂಡನೆ ಮಸ್ತ್ ಕಷ್ಟ..ನಣ ರಡ್ಡ್ ಆಂಡ ದೇವೆರೆ ಕಾಪೊಡು!!!

ಶಿವಪ್ರಕಾಶ್ said...

ha ha ha :D

umesh desai said...

ಗೋರೆಸರ್ ಚೆನ್ನಾಗಿದೆ ನೀವು ಮರಾಠಿ ಅಂದ್ಕೊಂಡಿದ್ದೆ ನಿಮಗೆ ತುಳು ಬರುತ್ತದೆ ಗಡಂಗಿನ ವಿಷ್ಯ ಗಮ್ಮತ್ತಾಗಿದೆ ಹಾಕಿದ ಚಿತ್ರ
ಎಲ್ಲೋ ಕರೆದುಕೊಂಡು ಹೋದ್ವು...

shashi Jois said...

ಅಡಿಯಿಲ್ಲ ಅವಲಕ್ಕಿ ಬಾಬು ಪರವಾಗಿಲ್ಲ ಬಲು ಕಿಲಾಡಿನೇ !!!

Nisha said...

:-D :-D photos chennagide

ರವಿಕಾಂತ ಗೋರೆ said...

ಪರಾಂಜಪೆ ಯವರೇ..

ಉದಾಹರಣೆ ಏನ್ ಬಂತು.. ಕುಡಿದಾಗ ಎಲ್ಲವೂ ಖುಲ್ಲಂ ಖುಲ್ಲ..!!! :-)

ರವಿಕಾಂತ ಗೋರೆ said...

ಸುಬ್ರಮಣ್ಯ ಸಾರ್,
ಹಿಹಿಹಿ.. ಹೌದು.. "ಬಜಿಲ್" ಮಹತ್ವ ನನಗೂ ಗೊತ್ತಾಗಿದ್ದು SDM ಉಜಿರೆಯಲ್ಲೇ...ಧನ್ಯವಾದಗಳು..

ರವಿಕಾಂತ ಗೋರೆ said...

ನೀಲಿಹೂವು..

ಹಾಹಾ.. ಹೌದು .. ಎಲ್ಲವೂ ಅದರ ಮಾಯೆ!! ಧನ್ಯವಾದಗಳು..

ರವಿಕಾಂತ ಗೋರೆ said...

ದಿನಕರ ಸಾರ್,

ನಿಮಗೆ ಧನ್ಯವಾದಗಳು... ಮಂಗಳೂರಿನಲ್ಲೂ ಇಂಥಾ ಕೂಗು ಒಮ್ಮೆಯಾದರೂ ನಿಮಗೆ ಕೇಳಿಸಿರಬೇಕಲ್ಲಾ?? :-)

ರವಿಕಾಂತ ಗೋರೆ said...

ಸುನಾಥ್ ಸಾರ್,

ಧನ್ಯವಾದಗಳು..

ರವಿಕಾಂತ ಗೋರೆ said...

ಆನಂದ ಸಾರ್,

ಧನ್ಯವಾದಗಳು.. ಜೈ ಹೋ

ರವಿಕಾಂತ ಗೋರೆ said...

ಅನಾಮಿಕರೆ,

ಹಾಹಾಹಾ.. ಈರ್ ಪನ್ಯ ಸರಿ.. ದೇವೆರ್ ಯೆರೆನ್ ಕಾಪೋಡು?? ಗಡಂಗ್ ನ? ಇಜ್ಜಿ ಜನಕ್ಲೆನ?:-)

ರವಿಕಾಂತ ಗೋರೆ said...

ಶಿವಪ್ರಕಾಶ್ ಸಾರ್,

ನಿಮಗೆ ಧನ್ಯವಾದಗಳು..

ರವಿಕಾಂತ ಗೋರೆ said...

ಉಮೇಶ್ ಸಾರ್,

ಮರಾಠಿನೂ ಬರುತ್ತೆ.. ಅದನ್ನ ನಾವು ಚಿತ್ಪಾವನಿ ಮರಾಠಿ ಅನ್ನುತ್ತೇವೆ.. ನಾನು , ನಮ್ಮಜ್ಜ, ಅವರ ಅಜ್ಜ ಎಲ್ಲಾ ಹುಟ್ಟಿ ಬೆಳೆದದ್ದು ದಕ್ಷಿಣ ಕನ್ನಡ ದಲ್ಲಿ..ಹಾಗಾಗಿ ತುಳು ಕೂಡ ಗೊತ್ತು..

ರವಿಕಾಂತ ಗೋರೆ said...

ಶಶಿ ಯವರೇ,

ಧನ್ಯವಾದ.. ಕೇವಲ ಕಿಲಾಡಿಯಲ್ಲ, ಮಹಾನ್ ಕಿಲಾಡಿ ..!! :-)

ರವಿಕಾಂತ ಗೋರೆ said...

ನಿಶಾ ಅವರೇ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..

Deepasmitha said...

ಒಳ್ಳೆಯ ಸಮಯಸ್ಫೂರ್ತಿ. ಗಡಂಗಿನ ಮಹಿಮೆ ಸೊಗಸಾಗಿದೆ

ರವಿಕಾಂತ ಗೋರೆ said...

Thank you Deepasmitha..

Narayan Bhat said...

ಕುಡಿಯೋದ್ ಕಲಿತರೆ, ಯಾವ ಪ್ರಮಾಣ ಬೇಕಾದರು ಮಾಡಿ ಸತ್ಯ(!) ಹೇಳೋ ಪ್ರಾಮಾಣಿಕತನ, ಧೈರ್ಯ ಸಲೀಸಾಗಿ ಬಂದು ಬಿಡುತ್ತದೆಯೇನೋ. ಯಾರಾದರೂ ಪ್ರಯತ್ನ ಮಾಡಿ ನೋಡಬಹುದು. ನೀತಿ ಕಥೆ(!) ಚೆನ್ನಾಗಿದೆ.