Tuesday, January 19, 2010

ಗಡಿಯಾರ!!

ಅದೊಂದು ಹುಚ್ಚು ಹಿಡಿದುಬಿಟ್ಟಿತ್ತು .. ಇದೇನೂ ಹಳೆಯ ಹುಚ್ಚಲ್ಲ.. ಇತ್ತೀಚಿಗೆ ಹುಟ್ಟಿಕೊಂಡಿದ್ದು..ಚಿಕ್ಕವನಿರುವಾಗ ಹಾರ್ಮೋನಿಯಂ ಕಲಿಯಬೇಕು ಅನ್ನುವ ಹುಚ್ಚು ಒಂದು ಬಿಟ್ಟರೆ ಬೇರೆ ಏನೂ ಅಷ್ಟೊಂದು ತಿಳಿದಿರಲಿಲ್ಲ... ಆದರೆ ಹಳ್ಳಿಯಲ್ಲಿ ಇದಕ್ಕೆಲ್ಲ ಪರಿಸ್ತಿತಿ ಒಗ್ಗಿ ಬರದ ಕಾರಣ ಹಾರ್ಮೋನಿಯಂ ಕನಸಾಗಿಯೇ ಉಳಿದಿದೆ... ಆದರೆ ಅದ್ಯಾಕೋ ಕೆಲವು ದಿನಗಳಿಂದ ನನಗೆ ಹಳೆಯ ಮರಳಿನ ಗಡಿಯಾರ ಬೇಕು ಅನ್ನಿಸಿಬಿಟ್ಟಿತ್ತು... ಇದಕ್ಕಾಗಿ ತುಂಬಾ ಹುಡುಕಿದ್ದೂ ಆಯಿತು.. ಕೊನೆಗೊಂದು ಸಿಕ್ಕಿಯೇ ಬಿಟ್ಟಿತಲ್ಲ.. ಹೌದು ಸಾರ್ ನನ್ನತ್ರ ಒಂದು ಹಳೆಯ ಮರಳಿನ ಗಡಿಯಾರ ಇದೆ ಬೇಕಾದ್ರೆ ಕೊಡ್ತೀನಿ ಹಾಗಂತ ಬನ್ನೇರುಘಟ್ಟ ರೋಡ್ನಲ್ಲಿ ಸಿಕ್ಕಿದ ದಿವಾಕರ ಅನ್ನೋ ಪುಣ್ಯಾತ್ಮ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.. ಆ ಗಡಿಯಾರಕ್ಕೆ ಆತ ಕೇಳಿದ್ದು ಬರೋಬ್ಬರಿ ೮ ಸಾವಿರ ರುಪಾಯಿ.. ಛೆ.. ಏನ್ಮಾಡೋದು... ಸರಿ , ಏನೆ ಇರಲಿ ಒಮ್ಮೆ ನೋಡೋಣ ಅಂತ ಹೇಳಿ ಆತನ ಮನೆಗೆ ಹೋದೆ... ವೌ.. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ...

ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪  ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ  ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...

ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು



ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..

ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
  ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...

                                      
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ  ಒಂದಕ್ಕೆ ೪೫೦೦೦ ಕ್ಕೆ  ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!

26 comments:

PARAANJAPE K.N. said...

ನಿಮ್ಮ ಅಭಿರುಚಿ ಮೆಚ್ಚತಕ್ಕದ್ದು, ಮರಳಿ ಯತ್ನವ ಮಾಡಿ, ಬೇರೆಲ್ಲಾದರೂ ಸಿಗಬಹುದು. ಮರಳು ಗಡಿಯಾರದ ನೆಪದಲ್ಲಿ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ.

ಗೌತಮ್ ಹೆಗಡೆ said...

nimma abhiruchi ge ondu dhanyavada.adara deseyindale e lekhana huttiddakke:)

sunaath said...

ಗಡಿಯಾರದ ಮೂಲವನ್ನು ಬಗೆದು ತೋರಿಸಿದ್ದೀರಿ. ಉತ್ತಮ ಲೇಖನ.

ಮನಸು said...

uttama lekhana...chennagi baredideeri. olleya abhiruchi nimmadu

ದಿನಕರ ಮೊಗೇರ said...

ರವಿಕಾಂತ್,
ನಿಮ್ಮ ಕನಸಿನ ಗಡಿಯಾರದ ಬಗ್ಗೆ ವಿವರಣೆ ಚೆನ್ನಾಗಿದೆ.... ಅದರ ಬಗ್ಗೆ ಮಾಹಿತಿಯನ್ನೂ ಕೊಟ್ಟಿದ್ದೀರಿ..... ಅಂತ್ಯ ಓದಿ ನಗು ಬಂತು..... ಅಜಂತಾ ಗಡಿಯಾರದಿಂದ ಒಳ್ಳೆ ಮ್ಯೂಸಿಕ್ ಬರ್ತಾ ಇರಬೇಕಲ್ಲಾ..... ಹ್ಹಾ ಹ್ಹಾ ಹ್ಹಾ....

ಶಿವಪ್ರಕಾಶ್ said...

Che... paapa ri...heegagabaradittu... :(

Unknown said...

ಪರಾಂಜಪೆ ಯವರೇ,

ಹೌದು.. ಪ್ರಯತ್ನ ಜಾರಿಯಲ್ಲಿದೆ :-)

Unknown said...

ಗೌತಮ್,

ಧನ್ಯವಾದಗಳು...

Unknown said...

ಸುನಾಥ್ ಸಾರ್ ,
ಧನ್ಯವಾದಗಳು...

Unknown said...

ಮನಸು ಮೇಡಂ ,
ಧನ್ಯವಾದಗಳು...

Unknown said...

ದಿನಕರ್ ಅವರೇ,

ಹಹಹ ... ಹೌದು .. ಭಯಂಕರ ಮ್ಯೂಸಿಕ್ ಬರ್ತಾ ಇತ್ತು ಅದಿಕ್ಕೆ ಆಫ್ ಮಾಡಿ ಇಟ್ಟೆ!! :-) ಧನ್ಯವಾದಗಳು..

Unknown said...

ಶಿವಪ್ರಕಾಶ್ ಸಾರ್,
ಏನು ಮಾಡೋದು ಹೇಳಿ... ಹಣೆಬರದಲ್ಲಿ ಇದ್ದಿದ್ದೆ ಅಷ್ಟು...

umesh desai said...

ನಿಮ್ಮ ಪ್ರಯತ್ನ ಹಿಂಗ ಸಾಗಲಿ ನಿಮ್ಮ ಟೈಮು ಲಗೂ ಕೂಡಿ ಬರಲಿ...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗಡಿಯಾರದಬಗ್ಗೆ ತಾವು ಕಥೆಯ ನಡುವೆ ಕೊಟ್ಟ ವಿವರಣೆ-
ಈ ತಂತ್ರ ಚೆನ್ನಾಗಿದೆ.
ಕಥೆಯನ್ನು ವಾಸ್ತವಿಕ ಘಟನೆಯನ್ನಾಗಿಸಿದ
ಚಾಕಚಕ್ಯತೆನೂ ಚೆನ್ನಾಗಿದೆ.
ಒಳ್ಳೆಯ ಪುಟ್ಟ ಕಥೆ,ಸುಂದರವಾಗಿದೆ.

Unknown said...

ಉಮೇಶ್ ಸಾರ್,

ಹೌದು.. ಪ್ರಯತ್ನ ಜಾರಿಯಲ್ಲಿದೆ..

Unknown said...

ವೆಂಕಟಕೃಷ್ಣ ಅವರೇ,

ನಿಮಗೆ ಧನ್ಯವಾದ.. ಇದು ಕಾಲ್ಪನಿಕ ಕಥೆಯಲ್ಲ..ನಿಜವಾಗಿ ನಡೆದದ್ದು...

shivu.k said...

ಸರ್,

ಗಡಿಯಾರದ ಬಗ್ಗೆ ನಿಮ್ಮ ಹವ್ಯಾಸ ತುಂಬಾ ಚೆನ್ನಾಗಿದೆ. ನೀವು ಕೊಟ್ಟಿರುವ ವಿವರದಿಂದಾಗಿ ನಾನು ಈರೀತಿಯ ಗಡಿಯಾರಗಳನ್ನು ನಾನು ನೋಡಬೇಕೆನ್ನುವ ಆಸೆಯಾಗುತ್ತಿದೆ. ಅಂಥ ಗಡಿಯಾರ ಮತ್ತೊಮ್ಮೆ ನಿಮಗೆ ಸಿಗಲಿ ಅಂಥ ಆಶಿಸುತ್ತೇನೆ...

Unknown said...

ಶಿವೂ ಸಾರ್,

ತಮಗೆ ಧನ್ಯವಾದಗಳು...

Raghu said...

nice photos...!! olleya maahiti...
Raaghu.

ಚುಕ್ಕಿಚಿತ್ತಾರ said...

ಮರಳಿನ ಗಡಿಯಾರಗಳನ್ನು ನೋಡಿ ಖುಶಿಯಾಯಿತು.
ಫೋಟೋಸ್ ಎಲ್ಲಿ ತೆಗೆದಿರಿ..?
ಚೆನ್ನಾಗಿವೆ.. ಮಾಹಿತಿ ಕೂಡಾ.

ಮನಮುಕ್ತಾ said...

ಒಳ್ಳೆಯ ಅಭಿರುಚಿ. ನಿರೂಪಣೆ ಹಿಡಿಸಿತು.

ಚಿತ್ರಗಳೂ ಚೆನ್ನಾಗಿ ಬ೦ದಿವೆ .

ಮಾಹಿತಿಗಾಗಿ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ನಾನು ತು೦ಬಾ ಹಿ೦ದೆ ನಮ್ಮ ನೆ೦ಟರ ಮನೆಯಲ್ಲಿ ಮರಳಿನ ಗಡಿಯಾರ ನೋಡಿದ್ದೆ.... ನ೦ಗೆ ಆಗ ಅದು ವಿಶೇಷ ಅ೦ತ ಅನ್ನಿಸಿರಲಿಲ್ಲ... ಈಗ ವಿಶೇಷ ಅ೦ತ ಅನ್ನಿಸುತ್ತಿದೆ :)

Unknown said...

ರಾಘು ,

ಧನ್ಯವಾದಗಳು..

Unknown said...

ಚುಕ್ಕಿ ಚಿತ್ತಾರ ಅವರೇ,

ನಿಮಗೆ ಧನ್ಯವಾದಗಳು... ಫೋಟೋ ಅಂತರಜಾಲದಿಂದ ಕದ್ದಿದ್ದು...

Unknown said...

ಮನಮುಕ್ತಾ ಅವರೇ,
ನಿಮಗೆ ಧನ್ಯವಾದಗಳು..ಹೀಗೆ ಬರುತ್ತಿರಿ..

Unknown said...

ಸುಧೇಶ್,

ಹಾಹಾ... ಇವು ನೋಡಲು ನಿಜಕ್ಕೂ ಚೆನ್ನಾಗಿರುತ್ತವೆ...