Thursday, January 7, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!!

"ನೀವು ನಿಮ್ಮ ಶಿಕ್ಷಣ ಮುಗಿದ ಮೇಲೆ ಏನಾಗಬೇಕು ಅಂತ ಇದ್ದೀರಾ?" ನಮ್ಮ ಲೆಕ್ಚರೆರ್ ಈ ಪ್ರಶ್ನೆ ಕೆಳುತ್ತಿದಂತೆ ಒಬ್ಬೊಬ್ಬರಾಗಿ ಎದ್ದು ನಿಂತು  ಉತ್ತರಿಸುತ್ತಿದ್ದರು..."ನಾನು ಎಂ ಬಿ ಏ ಮಾಡಿ ಒಳ್ಳೆ ಕಂಪನಿಲಿ ಕೆಲ್ಸಕ್ಕೆ ಸೇರಬೇಕು, ಆಮೇಲೆ ಎರಡು ಉತ್ತಮ ಮಕ್ಕಳಿಗೆ ತಾಯಿಯಾಗಬೇಕು" ಹಾಗಂತ ಸುನಿತಾ ಹೇಳಿದಾಗ ಇಡೀ ಕ್ಲಾಸು ಆಕೆಯ ಕಡೆ ಬೆರಗಿನಿಂದ ನೋಡಿತ್ತು..."ನೀವೇನ್ ಆಗ್ಬೇಕೂ ಅಂತ ಇದ್ದೀರಾ ಬುದ್ಧಿವಂತರೇ" ಹಾಗಂತ ಲೆಕ್ಚರೆರ್ ಕೇಳಿದ್ದು ತರಲೆ ಟೀಂ ಎಂದೇ ಖ್ಯಾತವಾಗಿದ್ದ ನಮ್ಮನ್ನ... ಮೊದಲಿಗೆ ನಿಧಾನವಾಗಿ ಎದ್ದು ನಿಂತ ಸದಾನಂದ, "ಯೆನಾಗ್ಬೇಕೂ ಅಂತ ಗೊತ್ತಿಲ್ಲ ಸಾರ್ , ಆದ್ರೆ ಆ ಎರಡು ಮಕ್ಕಳ ಅಪ್ಪ ಆಗ್ಬೇಕೂ ಅಂತ ತುಂಬಾ ಆಸೆ ಆಗ್ತಿದೆ " ಅಂತ ಸುನೀತಾ ಕಡೆ ವಾರೆ ದೃಷ್ಟಿ ಬೀರಿದ್ದ.. ಇಡೀ ಕ್ಲಾಸಿಗೆ ಕ್ಲಾಸ್ ಗೊಳ್ಳನೆ ನಕ್ಕರೆ ಸುನಿತಾ ಬಗ್ಗಿ ಅಳತೊಡಗಿದ್ದಳು.. ಸದಾನಂದ ತಮಾಷೆಗೆ ಅಂತ ಹೇಳಿದ್ದು ಗಂಭೀರ ರೂಪ ಪಡೆದಿತ್ತು... " ಕ್ಲಾಸ್ ನಿಂದ ಹೊರಗೆ ಹೋಗಿ" ಲೆಕ್ಚರೆರ್ ನಮ್ಮಕಡೆ ನೋಡಿ ಬೊಬ್ಬಿಟ್ಟರು... ನಮಗೆ ಅದೇನೂ ಹೊಸತಲ್ಲ... ಯಾರೇ ಆಗಲಿ "ಗೆಟ್" ಅನ್ನೋವಷ್ಟರಲ್ಲಿ  ಬಾಗಿಲಿನ ಹತ್ರ "ಔಟ್" ಅನ್ನೋವಷ್ಟರಲ್ಲಿ  ಚಿತ್ರಮಂದಿರದಲ್ಲಿರುತ್ತಿದ್ದ ನಾವು ಅಂದೂ ಹಾಗೆಯೇ ಮಾಡಿದ್ದೆವು...

ಆದರೆ ಮರುದಿವಸದಿಂದ ನನ್ನ ಮತ್ತು ಸದಾನಂದನ ಕೆಟ್ಟ ದಿನಗಳು ಪ್ರಾರಂಭವಾಗಿದ್ದವು...ಸದಾನಂದನಿಗೆ ನಾನೇ ಹಾಗೆ ಹೇಳಲು ಕಲಿಸಿ ಕೊಟ್ಟಿದ್ದು ಅನ್ನೋದು ಅದಕ್ಕೆ ಕಾರಣ.. ಸುನೀತಾ ಹಿಂದಿನ ದಿನದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಳು... ನನ್ನ ಮತ್ತು ಸದಾನಂದನ ಮೇಲೆ ಇಲ್ಲ ಸಲ್ಲದ ದೂರು ಕೊಟ್ಟು ಪ್ರತಿ ದಿನ ನಮ್ಮನ್ನು  ಕ್ಲಾಸ್ ನಿಂದ ಹೊರ ಕಳಿಸುತ್ತಿದ್ದಳು... ಸದಾನಂದ , ತಾನು ಹೇಳಿದ್ದು ತಮಾಷೆಗೆಂದೂ ಆಕೆಯಲ್ಲಿ ಕ್ಷಮೆ ಕೇಳಿದರೂ ಆಕೆ ಕೇಳಲಿಲ್ಲ... ಇದರಿಂದಾಗಿ ಒಂದೇ ಚಿತ್ರಮಂದಿರವಿದ್ದ ಆ ಊರಿನಲ್ಲಿ , ನಾನು ಮತ್ತು ಸದಾನಂದ ದಿನವೂ ಒಂದೇ ಚಲನಚಿತ್ರ ನೋಡುವ ಶಿಕ್ಷೆ ಅನುಭವಿಸಬೇಕಾಯಿತು...

ಕೆಲವು ದಿನ ಹೀಗೆ ಕಳೆಯಿತು .. ಆಮೇಲೆ ಎಲ್ಲವೂ ಹತೋಟಿಗೆ ಬಂತು ಅಂತ ಅಂದುಕೊಂಡಿದ್ದೆವು... ಆದರೆ ಸುನೀತಾಳನ್ನು ನೋಡುತ್ತಿದ್ದಂತೆ ನನಗೆ ನಗು ಉಕ್ಕಿ ಬರುತ್ತಿತ್ತು...ಕಷ್ಟ ಪಟ್ಟು ಅದೆಲ್ಲವನ್ನೂ ತಡೆಹಿಡಿಯುತ್ತಿದ್ದೆ... ಉಬ್ಬುಹಲ್ಲಿನ ಗರಗಸ ಮಾತ್ರ  ಆಕೆ ಎದುರು ಬರುತ್ತಿದ್ದಂತೆ ಗಹಗಹಿಸಿ ನಗುತ್ತಿದ್ದುದು ಮಾತ್ರ ಅಸಹ್ಯವಾಗಿರುತ್ತಿತ್ತು... "ನಗಬೇಡವೋ   ಇಡಿಯಟ್" ಆವತ್ತೊಂದಿನ ಸಹನೆ ಕಳೆದುಕೊಂಡಿದ್ದ ಸದಾನಂದ  ಜೋರಾಗಿ ಕಿರುಚಿಬಿಟ್ಟ.. ಗರಗಸವೂ ಕಮ್ಮಿ ಇಲ್ಲ.." ಮತ್ತೆನ್ರೋ , ನೀವೆಲ್ಲ ವೇಸ್ಟ್.. ಒಂದು ಚಿಕ್ಕ ಪಿ ಜೆ  ಹೇಳಿದ್ದಕ್ಕೆ ಆಕೆ ನಿಮ್ಮನ್ನು ಅದೆಷ್ಟು ದಿನ ಕ್ಲಾಸ್ನಿಂದ ಹೊರಗೆ ಕಳಿಸಲಿಲ್ಲ.. ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದ್ಯಾ? ಒಂದು ಹೆಣ್ಣಿನ ಮುಂದೆ ತಲೆ ಬಾಗಿಸಿ ಬಿಟ್ರಲ್ಲೋ.. ಗಂಡಸ್ರಾಗಿದ್ರೆ ಆಕೆ ಮೇಲೆ ಸೇಡು ತೀರಿಸಿಕೊಳ್ಳಿ".. ಆತ ನಮಗೆ  ಸವಾಲು ಎಸೆದಿದ್ದ...ನಾನು ಒಂದು ಕ್ಷಣ ಬೆಚ್ಚಿಬಿದ್ದೆ... ತಮಾಷೆ ಮಾಡೋದು , ಆಮೇಲೆ ಅದನ್ನು ಮರ್ತು ಬಿಡೋದು ಅದಷ್ಟೇ ನಮಗೆ ಗೊತ್ತು.. ದ್ವೇಷ ವನ್ನು ವರ್ಷಾನುಗಟ್ಟಲೆ ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳೋದು ಚಿತ್ರಗಳಲ್ಲಿ ನೋಡಿದ್ದೆವು ಅಷ್ಟೇ... ಆದರೆ ಅದ್ಯಾಕೋ ಸುನೀತ ಮೇಲೆ ಸೇಡು ತೀರಿಸಿಕೊಳ್ಳಲೇ  ಬೇಕು ಅಂತ ನನಗನ್ನಿಸಿತ್ತು...  "ಹೌದು ಸದಾನಂದ.. ಈಗೇನಾದರೂ ಮಾಡಲೇ ಬೇಕು" ನಾನು ಸದಾನಂದನತ್ತ ನೋಡಿದೆ... "ಗೋರೆ , ನೀನೆ ಪರ್ಮಿಶನ್  ಕೊಟ್ಟ ಮೇಲೆ ಮುಗೀತು... ಉಳಿದದ್ದು ನನಗೆ ಬಿಡು" ಸದಾನಂದ ಪಕ್ಕನೆ ನಕ್ಕು ಹೇಳಿದ... "ಏನು ಮಾಡ್ತಿಯಾ" ಅಂತ ನಾವೆಲ್ಲರೂ  ಕೇಳಿದ್ದಕ್ಕೆ ಸದಾನಂದ ಏನೂ ಮಾತಾಡದೆ ನನ್ನನ್ನು ಎಳೆದುಕೊಂಡು ರೂಮಿನತ್ತ ಸಾಗಿದ್ದ...
ಅದಾಗಿ ೪ ದಿನಗಳಲ್ಲಿ ಸುನೀತಾ ಮನೆಯಿಂದ ಆಕೆಯ ಪ್ರೀತಿಯ ಚಿಕ್ಕ ನಾಯಿಮರಿ ಕಳುವಾಗಿ ಹೋಗಿತ್ತು...!!!!!!!!

ಮುಂದುವರೆಯುವುದು...

16 comments:

shivu.k said...

ಆಗಿರುವ ಅವಮಾನಕ್ಕೆ ಹೀಗೆ ಸೇಡುತೀರಿಸಿಕೊಂಡಿರಾ...ನೋಡೋಣ..ಮುಂದೇನಾಗುತ್ತೆ ಅಂತ.

Unknown said...

ಶಿವೂ ಸಾರ್,

ಲೇಖನ ಪ್ರಕಟಿಸಿ ೧೦ ನಿಮಿಷದಲ್ಲಿ ಕಾಮೆಂಟ್ ಹಾಕಿ ಬಿಟ್ರಿ... :-)

ಸೇಡು ತೀರಿಸಿಕೊಂಡಿದ್ದು ಮಾತ್ರ ಭರ್ಜರಿಯಾಗಿತ್ತು...
ಹೀಗೆ ಬರುತ್ತಿರಿ...

PARAANJAPE K.N. said...

ಚೆನ್ನಾಗಿದೆ ಮಾರಾಯ,!! ಮು೦ದೇನಾಯಿತು, ಹೇಳುವಂಥವರಾಗಿ !

sunaath said...

ಅಹಾ, ಭಾರಿ ಸಸ್ಪೆನ್ಸ್ ಆಗಿದೆ. ಬೇಗನೇ ಮುಂದಿನ ಭಾಗ ಬರೆಯಿರಿ.

ಮನಸು said...

ಚೆನ್ನಾಗಿದೆ ನಿಮ್ಮ ಕಥೆ... ಮುಂದೇನಾಯಿತು ಬೇಗ ತಿಳಿಸಿ

Unknown said...

ಪರಾಂಜಪೆ ಸಾರ್ /ಸುನಾಥ್ ಸಾರ್/ಮನಸು ಮೇಡಂ ,

ಮುಂದಿನ ಭಾಗ ತಯಾರಿದೆ... ಇನ್ನೆರಡು ದಿನಗಳಲ್ಲಿ ಹಾಕುವೆ.. ಧನ್ಯವಾದ..

Shashi jois said...

ನಿಮ್ಮ ಕಥೆಯ ಮೊದಲರ್ಧ ಭಾಗ ಕುತೂಹಲಕಾರಿಯಾಗಿತ್ತು.ನೀವು 'ಧಾರಾವಾಹಿ' ಶುರುಮಾಡಿಲ್ಲ ತಾನೇ???ಉಳಿದರ್ಧ ಭಾಗ ಯಾವಾಗ ಓದುವುದು ಅಂತ ಕುತೂಹಲಭರಿತಳಾಗಿದ್ದೇನೆ...

Unknown said...

ಶಶಿಯವರೇ ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು... ಧಾರಾವಾಹಿ ಬರೆಯುವ ಮನಸ್ಸಿಲ್ಲ ಬಿಡಿ :-) ... ಮುಂದಿನ ಭಾಗ ತಯಾರಿದೆ.. ಇಷ್ಟರಲ್ಲೇ ಹಾಕುವವನಿದ್ದೇನೆ...

Vijay said...

olle suspense...munthe yen aithu

ದಿನಕರ ಮೊಗೇರ said...

ಗೋರೆ ಸರ್,
ಅಲ್ಲಾರಿ, ಅವಳು ಎರಡು ಮಕ್ಕಳ ತಾಯಿ ಆಗೋ ಮನಸ್ಸಿದೆ ಅಂದ್ರೆ ನಿಮ್ಮ ಫ್ರೆಂಡ್ ಸಹ ಎರಡು ಮಕ್ಕಳ ತಂದೆ ಆಗೋ ಆಶೆ ಎನ್ನಬೇಕಾ...... ಮೂರಾದರೂ ಅನ್ನಬೇಕಿತ್ತಪ್ಪಾ..... ಹೆಚ್ಚಿಗೆ ಹೇಳಲಿಲ್ಲ ಅಂತ ಸುನೀತಾಗೆ ಸಿಟ್ಟು ಬಂದಿರಬೇಕು , ....... ಹಾ ಹಾ ಹಾ...... ನಿಮ್ಮ ಸೇಡಿನ ಕಥೆ ಕುತೂಹಲ ಮೂಡಿಸಿದೆ..... ನಿರೂಪಣೆ ಚೆನ್ನಾಗಿದೆ..... ಬೇಗ ಹಾಕಿಮುಂದಿನ ಭಾಗ....

ಚುಕ್ಕಿಚಿತ್ತಾರ said...

ಚೆ೦ದದ ಬರಹ...
ಒ೦ದೇ ಸಿನಿಮಾ ನೋಡುವ೦ತಾಗಿದ್ದು ಕೇಳಿ ಪಾಪ ಅನ್ನಿಸಿತು.

ಗೌತಮ್ ಹೆಗಡೆ said...

mundenagutto nodona..

Unknown said...

ವಿಜಯ್ ,

ಮುಂದಿನದನ್ನು ನೀವೇ ಓದಿ, ಅಭಿಪ್ರಾಯ ತಿಳಿಸಿ... ಧನ್ಯವಾದ..

Unknown said...

ದಿನಕರ್ ಸಾರ್,



ಮೂರು ಮಕ್ಕಳ... ಹಿಹಿ... ಆದರೆ ಸುನೀತಾಗೆ ಬೇಕಿದ್ದಿದ್ದು ಎರಡೇ ತಾನೇ?... ಧನ್ಯವಾದ..

Unknown said...

ಚುಕ್ಕಿಚಿತ್ತಾರ ,

ಧನ್ಯವಾದ... ಏನ್ ಮಾಡೋದು ಹೇಳಿ.. ಅಲ್ಲಿ ಇದ್ದಿದ್ದೆ ಒಂದು ಚಿತ್ರಮಂದಿರ... ಚಿತ್ರ ಪ್ರತಿ ಶುಕ್ರವಾರವಷ್ಟೇ ಬದಲಾಗುತ್ತಿತ್ತು..

Unknown said...

ಗೌತಮ್,

ಬ್ಲಾಗ್ ಗೆ ನಿಮಗೆ ಸ್ವಾಗತ.. ಹೀಗೆ ಬರುತ್ತಿರಿ ...