Tuesday, April 28, 2009

ಇದು ಉದಯ ಟಿವಿ ಯಾ??

ಹಳ್ಳಿಯ ಜನರ ಮುಗ್ದ ಮಾತು ಕೇಳೋದು ಅಂದ್ರೆ ಏನೋ ಖುಷಿ.... ಎಷ್ಟೋ ಬಾರಿ ಇಂಥ ಘಟನೆಗಳು ನನ್ನೂರಿನಲ್ಲೂ ನಡೆಯುತ್ತಿದ್ದವು... ಅದರಲ್ಲಿ ಒಂದು ಘಟನೆ ಹೇಳುತ್ತೇನೆ... ಇದು ನಡೆದದ್ದು ಸುಮಾರು ೧೦ - ೧೨ ವರ್ಷಗಳ ಹಿಂದೆ... ಆಗ ನಮ್ಮ ಹಳ್ಳಿಗೆ ಕರೆಂಟ್ , ಫೋನ್ ಯಾವುದೂ ಬಂದಿರಲಿಲ್ಲ... ಕಾಡಿನ ಮಧ್ಯದಲ್ಲಿ ಸೀಮೆಯೆಣ್ಣೆದೀಪದ್ದೆ ಬೆಳಕು... ೫-೧೦ ಪೈಸೆ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾಂಡ್ ಲೆಟರ್ ಗಳು ಬಳಕೆಯಲ್ಲಿದ್ದವು... ನಮ್ಮೂರಿನಲ್ಲಿ ಮೊದಲು ಕರೆಂಟ್ ಲೈಟ್ ಉರಿದದ್ದು ಬಹುಶ ನಮ್ಮನೆಯಲ್ಲೇ... ೧೯೯೬-೧೯೯೭ ಈ ಕಾಲದಲ್ಲಿ ನಮ್ಮನೆಗೆ ಸೋಲಾರ್ ಬಂತು... ಆಗ ನಾವು ಖುಷಿ ಪಟ್ಟದ್ದು ಸೋಲ್ಪವಲ್ಲ... ಇರಲಿ, ಈಗ ವಿಷಯಕ್ಕೆ ಬರುತ್ತೇನೆ...
ಅದೊಂದು ದಿನ ನಮ್ಮ ಮನೆಗೂ ಟಿವಿ ಹಾಕ್ಬೇಕು ಅಂತ ನಿರ್ಧಾರಕ್ಕೆ ಬಂದೆವು... ಒಂದು ಚಿಕ್ಕ ಕಪ್ಪು-ಬಿಳಿ ಒನಿಡಟಿವಿ ತಗೊಂಡಿದ್ದು ಆಯಿತು...(ಅದು ಬಹುಶ ೧೯೯೮ ಅಥವಾ 1೯೯೯ ನೆ ಇಸವಿ ಇರ್ಬೇಕು ಸರಿಯಾಗಿ ನೆನಪಿಲ್ಲ) ... ನಾನು ನಮ್ಮಣ್ಣ ಆ ಚಿಕ್ಕ ಟಿವಿ ಯನ್ನು ಹೊತ್ತುಕೊಂಡು ನಮ್ಮ ಮನೆಯ ೩ ಕಿಲೋಮೀಟರು ಹಾದಿಯನ್ನು ನಡೆಯುತ್ತಾ ಸಾಗಿದ್ದೆವು... ಅಷ್ಟರಲ್ಲೇ ಆ ಹೆಂಗಸು ನಮ್ಮನ್ನು ನೋಡಿಬಿಟ್ಟಿದ್ದಳು... ಅವಳ ಮನೆಯಿಂದ ಹೊರಗೆ ಬಂದವಳೇ ನಮ್ಮನ್ನ ಕೇಳಿದ್ಲು " ಬಟ್ರೆ ಟಿವಿ ಯಾ " ಅದಕ್ಕೆ ನಾನು ಹೌದು ಅಂತ ಹೇಳ್ದೆ... ಮತ್ತೆ ಅವಳಿಂದ ಇನ್ನೊಂದು ಪ್ರಶ್ನೆ ತೂರಿ ಬಂತು.. "ವೋವು ಟಿವಿ ಬಟ್ರೆ? ಉದಯ ಟಿವಿ ನಾ?" (ಯಾವ ಟಿವಿ ಬಟ್ರೆ? ಉದಯ ಟಿವಿ ನಾ) ... ಬಹುಶ ಆಕೆ ಎಲ್ಲೊ ಉದಯ ಚಾನೆಲ್ ಬಗ್ಗೆಕೆಳಿರ್ಬೇಕು ಅದಿಕ್ಕೆ ಇಂಥ ಪ್ರಶ್ನೆ ಕೇಳಿದ್ದಾಳೆ ... ನನಗೆ ಒಂದು ಕ್ಷಣ ಏನೆಂದೇ ಅರ್ಥ ವಾಗಲಿಲ್ಲ ...ಅಷ್ಟರಲ್ಲಿ ಅಣ್ಣ " ಅಂದ್ ಉಂದು ಉದಯ ಟಿವಿ " (ಹೌದು ಇದು ಉದಯ ಟಿವಿ) ಅಂತ ಹೇಳಿ ಮುಂದೆ ಸಾಗಿದ್ದ... ನಾನೂ ನಗುತ್ತಾ ಅಲ್ಲಿಂದ ಹೆಜ್ಜೆ ಹಾಕಿದೆ...

9 comments:

PARAANJAPE K.N. said...

ಗೋರೆ,
ಲೇಖನ ಚೆನ್ನಾಗಿದೆ. ಹಳ್ಳಿಗರ ಮುಗ್ಧತೆ ಇಲ್ಲಿ ಬಿ೦ಬಿತವಾಗಿದೆ. ನನಗಿನ್ನೂ ನೆನಪಿದೆ. "ತರ೦ಗ" ವಾರಪತ್ರಿಕೆ ತರಲು ನಮ್ಮ ಕೆಲಸದವಳನ್ನು ಅ೦ಗಡಿಗೆ ಕಳಿಸಿದರೆ ಅವಳು ಅಲ್ಲಿ ಹೋಗಿ "ಒ೦ದು ಸುರ೦ಗ ಕೊಡಿ" ಅ೦ತ ಕೇಳ್ತಿದ್ಲು. ಎಷ್ಟು ಬಾರಿ ಹೇಳಿಕೊಟ್ಟರು ಅದೇ ರಿಪೀಟ್ ಆಗುತ್ತಿತ್ತು. ಆದರೆ ಇವತ್ತಿನ ದಿನಮಾನದಲ್ಲಿ ಹಳ್ಳಿಯಲ್ಲೂ ಇ೦ತಹ ವಾತಾವರಣ ಇಲ್ಲ. ಎಲ್ಲರೂ ಭಾರೀ ಮು೦ದುವರಿದಿದ್ದಾರೆ. ಅಲ್ವೇ ??
ಕಾಲಾಯತಸ್ಮೈ ನಮಃ

ಶಿವಪ್ರಕಾಶ್ said...

ha ha ha....

ಬಾಲು said...

hahaha chennagide.

shivu said...

ಗೋರೆ ಸರ್,

ನಿಮ್ಮ ಟಿ.ವಿ. ಉದಯ ಟಿ.ವಿ.ಆದ ಕತೆ ಚೆನ್ನಾಗಿದೆ...

ಆಗಿನ ಕಾತುರ, ಮುಗ್ಧತೆಯೆಂದರೇ ಇದೇ ಅಲ್ಲವೇ....

ರವಿಕಾಂತ ಗೋರೆ said...

ಪರಾಂಜಪೆ ಯವರೇ...
ಅಭಿಪ್ರಾಯಕ್ಕೆ ಧನ್ಯವಾದ... ಹಳ್ಳಿಯವರು ಮುಂದುವರಿಯೋದಾ? ಸ್ವಾಮೀ ಅವ್ರು ಈ ಪೇಟೆ ಹೈಕಳನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಿಬಿಟ್ಟಿದ್ದಾರೆ ... ಈಗೀಗ ಹಳ್ಳಿ ಜನ ತುಂಬಾ ತುಂಬಾ ಮುಂದುವರಿದಿದ್ದಾರೆ ಕಣ್ರೀ...

ರವಿಕಾಂತ ಗೋರೆ said...

ಶಿವಪ್ರಕಾಶ್/ ಬಾಲು
ಮೆಚ್ಚಿದ್ದಕ್ಕೆ ಧನ್ಯ ... ಹೀಗೆ ಬರುತ್ತಿರಿ...

ರವಿಕಾಂತ ಗೋರೆ said...

ಶಿವೂ,
ಧನ್ಯವಾದಗಳು.....

ಸುಧೇಶ್ ಶೆಟ್ಟಿ said...

ಹ ಹ... ಹಾಸ್ಯಮಯವಾಗಿದೆ.... ಇ೦ತಹ ಮುಗ್ಧತೆಗಳು ಮನಸಿಗೆ ತು೦ಬಾ ಖುಷಿ ಕೊಡುತ್ತೆ ಅಲ್ವಾ?

- ಸುಧೇಶ್

ರವಿಕಾಂತ ಗೋರೆ said...

ಸುಧೇಶ್,
ನಿಜ... ಇಂತಹ ಘಟನೆಗಳನ್ನು ನೆನೆಸಿಕೊಂಡಾಗ ಈಗ್ಲೂ ನಗು ಬರುತ್ತೆ... ಲೇಖನ ಮೆಚ್ಚಿದ್ದಕೆ ಧನ್ಯ...