
ಚದುರಂಗ ಜನ್ಮತಾಳಿದ್ದು ಭಾರತದಲ್ಲಿ ಅಂತಾರೆ...ಕೆಲವರ ಅನಿಸಿಕೆ ಪ್ರಕಾರ ಇದು ಆರಂಭವಾದದ್ದು ೬ನೆ ಶತಮಾನದಲ್ಲಿ ... ಆ ನಂತರ ಬೇರೆ ಬೇರೆ ಮೂಲಗಳ ಮುಖಾಂತರ ಇಡೀ ವಿಶ್ವಕ್ಕೆ ಪಸರಿಸಿದ ಈ ಆಟ ಈಗಿನ ಕ್ರೀಡಾ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ... ಇರಲಿ ಅದರ ಇತಿಹಾಸ ಬಹು ದೊಡ್ಡದು ಅದರ ಬಗ್ಗೆ ಇನ್ನೊಮ್ಮೆ ನೋಡೋಣ...
ಮೊನ್ನೆ ತಾನೆ ಊರಿಗೆ ಹೋದಾಗ ನನ್ನ ತಂಗಿಯ ಮಗಳು "ಮಾಮ ಚೆಸ್ ಆಡೋ ಣವ " ಅಂತ ಕೇಳಿದಾಗ ಒಂದ್ಸಾರಿ ದಿಗಿಲು ಬಿದ್ದೆ.... ಹೌದಲ್ಲ...ಅದೆಷ್ಟು ದಿನವಾಯಿತು ಚದುರಂಗ ಆಡಿ... ಬಹುಶ ನಾನು ಕೊನೆಯದಾಗಿ ಚೆಸ್ ಆಡಿದ್ದು ೨೦೦೦ನೆ ಇಸವಿಯಲ್ಲಿ... ಆಗ ನಾನು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದೆ... ಮಂಗಳೂರು ಯುನಿವೆರ್ಸಿಟಿಯ ಚೆಸ್ ಟಿಮ್ ಗೆ ನನ್ನ ಕಾಲೇಜ್ ನಿಂದ ನಾನೂ ಹೋಗಿ ಸೋತು ಬಂದಿದ್ದೆ... :-) .. ಸರಿ ಈಗ ಇನ್ನೊಮ್ಮೆ ಅವಕಾಶ ಸಿಗ್ತಲ್ಲ ಅನ್ನೋ ಖುಷಿಲಿ ಆಟಕ್ಕೆ ಕೂತೆ... ನನಗೆ ಗೊತ್ತಿರೋವಷ್ಟು ಆಟ ನನ್ನ ತಂಗಿಯ ಮಗಳಿಗೂ ಕಳಿಸಿದೆ... (ಚದುರಂಗ ಇನ್ನೊ ಮರೆತಿಲ್ಲ ಅನ್ನೋ ಖುಶಿನೂ ಆಯಿತು) ಆಟ ಮುಗಿಸಿದವನೇ ಆಲೋಚನೆಗೆ ಬಿದ್ದೆ... ಅರೆ.. ಇದ್ಯಾವ ಲೋಕದತ್ತ ನಾವು ಸಾಗುತ್ತಿದ್ದೇವೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮ ನಮ್ಮನ್ನು ಕೂರಿಸಿ ಚದುರಂಗ ಕಲಿಸುತ್ತಿದ್ದರು.... ಅದರಿಂದಾಗಿಯೇ ನಾವು ಇಷ್ಟಾದರೂ ಬುದ್ಧಿವಂತ ರಾದೆವೋ ಏನೋ ಗೊತ್ತಿಲ್ಲ...
ಆದರೆ ಇಗೀಗ ಚೆಸ್ ಆಡುವ ಮಕ್ಕಳನ್ನು ನಾನು ಕಂಡಿದ್ದು ತುಂಬ ಕಮ್ಮಿ... ಅದೇನೇನೋ ಆಟಗಳು... ಒಂದೇ ಒಂದು ಆಟದಲ್ಲೂ ಬುದ್ಧಿಮತ್ತೆಗೆ ಅಥವಾ ದೇಹಕ್ಕೆ ವ್ಯಾಯಾಮ ಸಿಗದು... ಬುದ್ಧಿಗೆ ಕಸರತ್ತು ಕೊಡುವ ಇಂಥ ಆಟವನ್ನು ಕೇರಂ, ಹಾವೇಣಿ, ಲೂಡೋದಂಥ ಆಟಗಳು ನುಂಗಿ ಬಿಟ್ಟಿವೆ ... ಸಚಿನ್ ತೆಂಡೂಲ್ಕರ್ ಹೆಸರು ಗೊತ್ತಿರುವಷ್ಟು ಮಂದಿಗೆ ವಿಶ್ವನಾಥನ್ ಆನಂದ್ ಬಗ್ಗೆ ಗೊತ್ತಿಲ್ಲ...
ಇಂಥ ಒಂದು ಅದ್ಭುತ ಆಟ ತನ್ನ ನೆಲೆಯನ್ನೇ ಕಳೆದು ಕೊಳ್ಳುತ್ತಿದೆಯೇ ??? ಹಾಗಂತ ಯೋಚನೆಗೆ ಬಿದ್ದಿದ್ದೇನೆ ... ಬಹುಶ ಹಾಗಾಗಲಾರದು ಅಲ್ಲವೇ ??
8 comments:
ರವಿ....
ಚದುರಂಗ ಖಂಡಿತ ನೆಲೆ ಕಳೆದು ಕೊಳ್ಳುತ್ತಿಲ್ಲ...
ಇಂದಿನ ಮಕ್ಕಳಿಗೆ ಖಂಡಿತ ಆಸಕ್ತಿ ಇದೆ...
ನನ್ನ ಮಗನ ಸ್ಕೂಲಿನಲ್ಲಿ ಸ್ಪರ್ಧೆ ಇಟ್ಟಿದ್ದರು..
ತುಂಬಾ ಮಕ್ಕಳು ಭಾಗವಹಿಸಿದ್ದರು..
ಅವರ ಸಂಖ್ಯೇ ನೋಡಿ ನನಗೆ ಆಶ್ಚರ್ಯವಾಗಿತ್ತು...
ಚದುರಂಗದ ಬಗೆಗೆ..
ನಿಮ್ಮ ಕಳಕಳಿಯ ಲೇಖನ ಇಷ್ಟವಾಯಿತು....
ಇದೇ ರೀತಿ ನಮ್ಮ ಹಳ್ಳಿಯ ಪಗಡೆ ಆಟ...
ಆದರೆ ಅದು ನಶಿಸುತ್ತಿದೆ ಅಲ್ಲವೇ...?
ಧನ್ಯವಾದಗಳು
ಗೋರೆಯವರೇ,
ಚೆನ್ನಾಗಿದೆ. "ಸಚಿನ್ ತೆಂಡೂಲ್ಕರ್ ಹೆಸರು ಗೊತ್ತಿರುವಷ್ಟು ಮಂದಿಗೆ ವಿಶ್ವನಾಥನ್ ಆನಂದ್ ಬಗ್ಗೆ ಗೊತ್ತಿಲ್ಲ..." ಎ೦ಬುದು ನಿಜವಿರಬಹುದು. ಆದರೆ ಚದುರ೦ಗ ಒ೦ದು indoor ಗೇಮ್ ಆಗಿ ಜನಪ್ರಿಯವಾಗಿದೆ. ಅದರ ಜನಪ್ರಿಯತೆ ಕ್ಷೀಣಿಸದು. ಬುದ್ಧಿಮತ್ತೆಯನ್ನು ಸಾಣೆಹಿಡಿಯುವ ಗೇಮ್ ಇದಾದ್ದರಿ೦ದ ಇದನ್ನು ಉಳಿಸಿ ಇನ್ನಷ್ಟು ಜನಪ್ರಿಯ ಗೊಳಿಸಬೇಕಾದು ಎಲ್ಲರ ಕರ್ತವ್ಯ.
ರವಿ ಸರ್,
ನಿಜಕ್ಕೂ ಸಚಿನ್ ರನ್ನು ಇಷ್ಟಪಟ್ಟಷ್ಟೇ ವಿಶ್ವನಾಥನ್ ಆನಂದರನ್ನು ಇಷ್ಟಪಡುತ್ತೇನೆ....ಕಾರಣ ಎರಡು ಆಟಗಳು ಆಡಲು ನೋಡಲು ಅದರ ತಾಂತ್ರಿಕ ವಿಚಾರಗಳು ನನಗೆ ಗೊತ್ತು...
ನಾನು ಕ್ರಿಕೆಟ್ ಮತ್ತು ಚದುರಂಗವನ್ನು ಆಡಲು ನಿಲ್ಲಿಸಿದ್ದು ಇತ್ತೀಚೆಗೆ ಮದುವೆಯ ನಂತರ....
ತುಂಬಾ ಉಪಯುಕ್ತವಾದ ಸೊಗಸಾದ ಲೇಖನವನ್ನು ಬರೆದು ಚದುರಂಗವನ್ನು ನೆನಪಿಸಿದ್ದೀರಿ..
ಧನ್ಯವಾದಗಳು...
ಹೋ ಚದುರ೦ಗ.... ನನ್ನ ಅಚ್ಚುಮೆಚ್ಚಿನ ಆಟ.... ಆದರೆ ಆಡದೇ ತು೦ಬಾ ದಿನಗಳಾಯಿತು... ಫ್ರೆ೦ಡ್ಸ್ ಜೊತೆ ಆಡೋಣ ಅ೦ದರೆ ಅದು ತು೦ಬಾ ಸಮಯ ತೆಗೆದುಕೊಳ್ಳುತ್ತದೆ, ಬೋರಿ೦ಗ್ ಅನ್ನುತ್ತಾರೆ...
ಅ೦ದ ಹಾಗೆ ನಾನು ಕಲಿತಿದ್ದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ. ಮ೦ಗಳೂರು ಯುನಿವರ್ಸಿಟಿಯಲ್ಲಿ ಚೆಸ್ ಟೂರ್ನಿಯಲ್ಲಿ ನನ್ನ ಕಾಲೇಜು ಹೆಚ್ಚಿನ ಸಲ ಪ್ರಶಸ್ತಿ ಗಳಿಸಿದೆ....
ಪ್ರಕಾಶ್ ಸರ್,
ಪಗಡೆ ಆತ ಅಂತ ಕೇಳಿದ್ದೇನೆ.. ಇದುವರೆಗೆ ಆಡಿಲ್ಲ... ನಮ್ಮಲ್ಲಿ ಹುಲಿ-ದನ ಅಂತ ಇನ್ನೊಂದು ಆತ ಆಡ್ತಾರೆ ಅದೂ ಸ್ವಲ್ಪ ಚೆಸ್ ಥರಾನೇ.... ಅದರ ಬಗ್ಗೆ ಮುಂದೆ ಬರೆಯುವೆ..
ಧನ್ಯವಾದಗಳು...
ಪರಾಂಜಪೆ ಸರ್,
ಧನ್ಯವಾದಗಳು...
ಶಿವೂ ಸರ್,
ಚದುರಂಗದ ಮೇಲೆ nimagiruva ಆಸಕ್ತಿ ಕೇಳಿ ಸಂತೋಷವಾಯಿತು ... ಮದುವೆ ಆದ ಮೇಲೆ ಯಾಕೆ ಚೆಸ್ ನಿಲ್ಲಿಸಿದ್ರಿ... ಮನೆಯಾಕೆ ಜೊತೇನೆ ಚೆಸ್ ಆಡಬಹುದಲ್ಲ...
ಧನ್ಯವಾದಗಳು...
ಸುಧೇಶ್,
ಧನ್ಯವಾದಗಳು..
Post a Comment