Wednesday, February 3, 2010

ಸುಮ್ನೆ ತಮಾಷೆಗೆ..!!

ಮುತ್ತು..
ಮಾತು ಬೆಳ್ಳಿ
ಮೌನ ಬಂಗಾರವೆಂದರು.
ಬಂಗಾರದ ಆಸೆಗೆ ಮೌನವಾಗಿದ್ದೆ
ಅಮೂಲ್ಯ ಮುತ್ತೊಂದನ್ನ ಕಳೆದುಕೊಂಡಿದ್ದೆ !!

------------------------------------------------------------------------------------------------------------------------
ಅವಸ್ಥೆ
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ ಅಂದರು
ನಿಜವೋ ಸುಳ್ಳೋ ನೋಡಲು ಮುಂದಾದೆ..!
ಕುಂಬಾರನ  ತಲೆಗೆ
ದೊಣ್ಣೆಯಿಂದ ಹೊಡೆದು
ಮರುದಿನ ಜೈಲುವಾಸಿಯಾದೆ!!!!

--------------------------------------------------------------------------------------------------------------------
ಮಾಯ
ಬೆಂಗಳೂರನ್ನು
ಮಾಯಾನಗರಿ ಅಂದರು.
'ಮಾಯಾ'ಳನ್ನು ಹುಡುಕುತ್ತ
ನಗರಿಗೆ ಕಾಲಿಟ್ಟೆ..
ಇಂದು ನಾನೇ ಮಾಯವಾದೆ!!

43 comments:

Subrahmanya said...

ಮಸ್ತ್ ಅದಾವ್ರೀ ಸರಾ...ಹೇಳ್ರೀ ಮುಂದ..

ಮನಸು said...

hahaha super!!

ತೇಜಸ್ವಿನಿ ಹೆಗಡೆ said...

:D ತುಂಬಾ ಚೆನ್ನಾಗಿದೆ. ಕುಂಬಾರನ ಕಥೆ, ಮಾಯಾನಗರಿಯ ಕಲ್ಪನೆ ತುಂಬಾ ನಗು ತರಿಸಿತು.

PARAANJAPE K.N. said...

ಸುಮ್ನೆ ತಮಾಷೆಗೆ ಅ೦ತ ಹೇಳ್ತಾ ಹೇಳ್ತಾ ಸಖತ್ ಪ೦ಚ್ ಕೊಟ್ಟಿದ್ದೀರಿ. ಚೆನ್ನಾಗಿವೆ.

Shashi jois said...

ಮುತ್ತಿನ ಮತ್ತಿನಲ್ಲಿ ಮಾಯಾಳ ಅವಸ್ಥೆ ಓದಿ ನಗು ಬಂತು.ಚೆನ್ನಾಗಿದೆ ರೀ.

Narayan Bhat said...

ಸುಮ್ನೆ ತಮಾಷೆಗೆ ನಿಜವಾಗಲೂ ಚೆನ್ನಾಗಿದೆ...ಇದನ್ನ ಹೀಗೇ ಮುಂದುವರೆಸಿ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಮ್ನೇ ತಮಾಷೆಗೆ ಅಂತ ನೀವು ಹೇಳಿದ್ರೂ..
ಚೆನ್ನಾಗಿದೆ.
ತಮಾಷೆಗಾದ್ರೂ ನಿಲ್ಲಿಸ್ಬೇಡಿ..ಮುಂದುವರೆಸಿ.

sunaath said...

ಇದು ನಿಜವಾಗಲೂ ತಮಾಶೆ ಕಣ್ರೀ!

ಸುಧೇಶ್ ಶೆಟ್ಟಿ said...

ಹ ಹ ಹ... ಸುಮ್ನೆ ತಮಾಷೆಗೆ ಬರೆದರೂ ತಮಾಷೆಯಾಗಿದೆ ಕವನಗಳು :)

ಆನಂದ said...

:)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗೋರೆಯವರೇ,
ನಿಜಕ್ಕೂ ಕವನ ಚೆನ್ನಾಗಿದೆ.
ತಮಾಷೆ ಇರುವುದು ಕೆಲವು ಕಮೆಂಟ್ ಗಳಲ್ಲಿ!
ಕಮೆಂಟಲ್ಲಿಯೇ ತಮಾಷೆ ಸೃಸ್ಟಿಸಿದ ಸ್ನೇಹಿತರಿಗೆ ವಂದನೆಗಳು.

umesh desai said...

ಗೋರೆ ಸರ್ ನಿಜಕ್ಕೂ ಚೆನ್ನಾಗಿವೆ ಅಭಿನಂದನೆಗಳು..

Manasaare said...

Ravi avare ,

Mast anthen ilri , adru sumaragi adavri..bejaru madkobyadri , naa swalpa iddang helovaru

Nimm hale post bhari adavari adakka Bahutek naa tumba expect madta iddineno...

http//sksulkeri.blogspot.com said...

ಬಹಳ ಚೆನ್ನಾಗಿ ಬರೀತೀರಿ!ಹೀಗೇ ಬರೀತಾ ಇರಿ!

ದಿನಕರ ಮೊಗೇರ said...

ರವಿಕಾಂತ್,
ತಮಾಷೆ ಚೆನ್ನಾಗಿದೆ...... ಇಷ್ಟು ಚೆನ್ನಾಗಿ ಬರೆದರೂ 'ತಮಾಷೆಗೆ' ಅನ್ನುತ್ತೀರಲ್ಲಾ.....

ಬಿಸಿಲ ಹನಿ said...

ನಿಮ್ಮ ಹನಿಗಳ ಮೂಲಕ ಒಳ್ಳೆ ಪಂಚ್ ಕೊಟ್ಟಿರುವಿರಿ.

Unknown said...

ಸುಬ್ರಮಣ್ಯ ಸಾರ್,

ತುಂಬಾ ಥ್ಯಾಂಕ್ಯು ರೀ...

Unknown said...

ಮನಸು ಮೇಡಂ,
ಧನ್ಯವಾದ ನಿಮಗೆ..

Unknown said...

ತೇಜಸ್ವಿನಿ ಮೇಡಂ,

ಬ್ಲಾಗ್ ಗೆ ನಿಮಗೆ ಸ್ವಾಗತ.. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.. ಹೀಗೆ ಬರುತ್ತಿರಿ..

Unknown said...

ಪರಾಂಜಪೆಯವರೇ,

ಧನ್ಯವಾದ ಸಾರ್..

Unknown said...

ಶಶಿಯವರೇ,
ಧನ್ಯವಾದ ಸಾರ್..

Unknown said...

ನಾರಾಯಣ ಸಾರ್,

ಧನ್ಯವಾದ ಸಾರ್..

Unknown said...

ವೆಂಕಟಕೃಷ್ಣ ಅವರೇ,

ಹೀಗೆ ಬರುತ್ತಿರಿ..

ಧನ್ಯವಾದ...

Unknown said...

ಸುನಾಥ್ ಸಾರ್,

ಹಾಹಾ ಹೌಸು ಸುಮ್ನೆ ತಮಾಷೆಗೆ ಅಷ್ಟೇ...

Unknown said...

ಸುಧೇಶ್,

ಹೌದು.. ತಮಾಷೆಗಾಗಿ ಬರ್ದಿದ್ದು, ತಮಾಷೆಯಾಗಿ ಇರಬೇಕಷ್ಟೇ...:-)

Unknown said...

ಆನಂದ ಸಾರ್,
ಯಿಪ್ಪಿ ಅಷ್ಟೇನಾ?? :-)

Unknown said...

ಉಮೇಶ್ ಸಾರ್,

ಧನ್ಯವಾದ ನಿಮಗೆ...

Unknown said...

ಮನಸಾರೆ ಮಾದಂ,

ಮನಸಾರೀ ಅಂತ ಹೆಸರಿತ್ತುಕೊಂಡ ಮೇಲೆ ಮನಸ್ಸಿಗೆ ಬಂದದ್ದು ಹೇಳ್ಬೇಕ್ರಿ... ಬೇಜಾರ್ ಖಂಡಿತಾ ಇಲ್ಲ.. ಹೀಗೆ ಬಂದು ಕಿವಿ ಹಿಂಡುತ್ತಿರಿ.. ಒಂದಲ್ಲ ಒಂದು ದಿನ ಸುಧಾರಿಸುತ್ತೀನಿ.. :-)

Unknown said...

ನಮಸ್ತೆ ಸತೀಶ್,

ತುಂಬಾ ದಿನ ಆಯಿತು ಕಾಣಿಸಲೇ ಇಲ್ಲಾ? ಬ್ಯುಸಿ ನಾ? ಧನ್ಯವಾದ..

Unknown said...

ದಿನಕರ್,

ಧನ್ಯವಾದ ರೀ..

Unknown said...

ಉದಯ್ ಸಾರ್,

ನನ್ನ ಹಂಗೆ ನಿಮಗೂ ಬ್ಲಾಗ್ ಓಪನ್ ಆಗ್ತಾ ಇರ್ಲಿಲ್ವಾ?? ಪತ್ತೇನೆ ಇರ್ಲಿಲ್ಲಾ?? ಅಂತೂ ಇಂತೂ ಬಂದ್ರಲ್ಲ.. ಧನ್ಯವಾದ ಸಾರ್..

shivu.k said...

ರವಿಸರ್,

ಚುಟುಕುಗಳು ಸೂಪರ್...

Shashi jois said...

ಶಶಿಯವರೇ ಧನ್ಯವಾದ ಸರ್ ಅಂತ ಬರೆದಿದ್ದೀರಿ .
ನಾನು ಸರ್ ಅಲ್ಲ ಮೇಡಂ ಸರ್ .

ಶಿವಪ್ರಕಾಶ್ said...

ha ha ha... good ri...

ಸವಿಗನಸು said...

ಸುಮ್ನೆ ತಮಾಷೆಗೆ ಬರೆದರೂ ಮಸ್ತ್ ಆಗಿವೆ....
ಹೀಗೇ ಮುಂದುವರೆಸಿ....
ಮಹೇಶ್!

ಜಲನಯನ said...

ರವಿಕಾಂತ್, ಮಾತು ಬೆಳ್ಳಿ ಮೌನ ಬಂಗಾರ....ಹಹಹ...ಮಾತನಾಡಿದ್ದರೆ ಮುತ್ತು ಸಿಗ್ತಿತ್ತೇನೋ...ಅಲ್ಲ ಕುಂಬಾರನ ಮಡಕೆಯಮೇಲೆ ತೋರಬೇಕಾದ್ದನ್ನು....ಹಹಹ...ಚೆನ್ನಾಗಿವೆ ಚುಟುಕಿನ ಕುಟುಕು..

Unknown said...

ಶಿವೂ,

ಧನ್ಯವಾದಗಳು..

Unknown said...

ಶಶಿ ಮೇಡಂ,

ಹೌದು, ಅಲ್ಲಿ ತಪ್ಪಾಗಿ ಬರೆದಿದ್ದೆ.. ಕ್ಷಮಿಸಿ :-) ಧನ್ಯವಾದ ಮೇಡಂ..!!

Unknown said...

ಶಿವಪ್ರಕಾಶ್,

ಹೀಗೆ ನಗುತ್ತಿರಿ.. ಹೀಗೆ ಬರುತ್ತಿರಿ..

Unknown said...

ಸವಿಗನಸು ಅವರೇ,

ನಿಮಗೆ ಧನ್ಯವಾದಗಳು..

Unknown said...

ಆಜಾದ್ ಸಾರ್,

ಹಾಹಾಹಾ.. ಹೌದು.. ಸುಮ್ನೆ ಕೂತಿದ್ದಾಗ ಇಂಥವೆಲ್ಲ ಹೊಳೆಯುತ್ತೆ...!! :-)

Nisha said...

:-) muttu, kuttu, maya, chennagide.

Unknown said...

Thank you nisha..