Monday, December 14, 2009

ಮರೆಯದ ಹಾಡು- ೧

   ಆಗ ನಾನು ತುಂಬಾ ಚಿಕ್ಕವನು.. ಬಹುಶ ೨-೩ ನೆ ಕ್ಲಾಸ್ ನಲ್ಲಿದ್ದಿರಬೇಕು... ಮನೆಯಲ್ಲಿ ಅಮ್ಮ ಕೆಲಸ ಮಾಡುತ್ತಾ ಹೇಳುತ್ತಿದ್ದ ಹಾಡುಗಳು ನನ್ನನ್ನು ಆಕರ್ಷಿಸಿದ್ದವು... ಇವತ್ತು ಏನೂ ಕೆಲಸ ಇಲ್ಲದೆ ಕುಳಿತಿದ್ದಾಗ ಹಿಂದಿನದೆಲ್ಲವೂ ನೆನಪಾಯಿತು... ಆ ಹಾಡುಗಳು ಎಲ್ಲವೂ ಮರೆತೆ ಹೋಗಿವೆ.. ಆದರೂ ನನ್ನ ನೆನಪಿನ ಬುತ್ತಿಯನ್ನು ಕದಡಿ , ಜಾಲಾಡಿ ಈ ಒಂದು ಹಾಡು ನಿಮ್ಮ ಮುಂದಿಡುತ್ತಿದ್ದೇನೆ... ಇದರ ಮೂಲ ಲೇಖಕ/ಲೇಖಕಿ ಯಾರೆಂದು ಗೊತ್ತಿಲ್ಲ... ಬಹುಶ ಜಾನಪದವಿರಬೇಕು... ಇದನ್ನು ರಾಗವಾಗಿ ಹಾಡುತ್ತಿದ್ದ  ಅಮ್ಮನ ಧ್ವನಿ ಈಗಲೂ ಕಿವಿಯಲ್ಲಿ ಗುಯಿಗುಡುತ್ತಿದೆ...

 ಅತ್ತೆ ಮನೆಯ ಸಮ್ಮಾನ
ವ್ಹಾರೆ ಪರಮಾನ್ನ..
ಪರಮಾನ್ನ ತಿನಲಿಕೆಂದೇ ನಾನು ಮದುವೆಯಾದೆನು..
ಸಂಜೆ ಹೊತ್ತಿನಲ್ಲಿ ಅತ್ತೆ ಮನೆಗೆ ನಡೆದೆನು...

ಮಾಡಿದಾರೆ ಪಾಯಸ
ತಿಂದು ನನಗೆ ಉಬ್ಬಸ
ರಾತ್ರಿಯಿಡೀ ನಿದ್ದೆ ಇಲ್ಲ
ಎಣಿಸಿ ಎಣಿಸಿ ಪಾಯಸ ..

ಮೆಲ್ಲನೆದ್ದೆನು
ಅಡುಗೆ ಕೋಣೆಗೆ ನಡೆದೆನು
ಮೂಲೆಯಲ್ಲಿದ್ದ ಪಾಯಸದ ಮಡಕೆಗೆ ಮಂಡೆ ಹಾಕ್ದೆನು..

ಸಿಗಲಿಲ್ಲ ಪಾಯಸ
ಸಿಗದೇ ನಾನು ಬಿಡಲಿಲ್ಲ
ಸಿಗುವ ಗೌಜಿ ಮಂಡೆ ಒಡೆದು
ಓಡು ಕುತ್ತಿಗೆಗಾಯ್ತಲ್ಲ..

ಅತ್ತೆ ಎದ್ದರು
ಹಿಡಿವ ಸೂಡಿ ಹಿಡಿದರು
ಸೊಕಿದ ಬೆಕ್ಕು ಬರುವುದೆಂದು ಕಾದು ಕುಳಿತರು
ಕಾದು ಕುಳಿತ ನನ್ನ ಅತ್ತೆ ಎರಡು ಬಿಟ್ಟರು..

ಸಮ್ಮಾನ ಬರೋಬ್ಬರಿ
ಪೆಟ್ಟಿನ ಲೆಕ್ಕ ಕೆಳ್ವಿರಾ?
ಏಕ್, ದೋ ತೀನ್ ಚಾರ್ ಪಾಂಚ್ ತಿಂದಿರಾ..

ಅತ್ತೆ ಮನೆಗೆ ಹೋಗಲು
ಈಗ ಬಹಳ ನಾಚಿಕೆ
ಅಲ್ಲಿ
 ನಾದಿನಿಯರ ಮೊಗವ ಕಂಡರೆ ನಗುವು ಬರುವುದು..

ಯಾರಿಗಾದರೂ ಈ ಹಾಡು ಗೊತ್ತಿದ್ದರೆ ಮತ್ತು ಇದರಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಸರಿಪಡಿಸಿ ಮತ್ತು ನನಗೆ ತಿಳಿಸಿ.. ಹಾಗೆಯೇ ಎಲ್ಲಿಯಾದರೂ ಅರ್ಥವಾಗದೇ  ಇದ್ದರೆ ತಿಳಿಸಿ :-)

ಇಂತಹ ಅದೆಷ್ಟೋ ಹಾಡುಗಳಿವೆ... ನಿಮಗಿಷ್ಟವಾದರೆ, ನೆನಪಾದಾಗಲೆಲ್ಲ ಹಾಕುವೆ..

20 comments:

sunaath said...

ರವಿಕಾಂತ,
ಅತ್ತೆ ಮನೆ ಸಮ್ಮಾನ ತುಂಬಾ ಮಜಾ ಇದೇರಿ. ನಕ್ಕು ನಕ್ಕು ಸುಸ್ತಾಯ್ತು.

shivu.k said...

ರವಿಕಾಂತ್,

ಅತ್ತೆ ಮನೆಗೆ ಹೋದಾಗ ನಾಚಿಕೆಯಾ? ಈ ಜನಪದ ಹಾಡು ತುಂಬಾ ಚೆನ್ನಾಗಿದೆ...ಖಂಡಿತ ಇನ್ನಷ್ಟು ಹಾಕಿ..

PARAANJAPE K.N. said...

ತು೦ಬಾ ಚೆನ್ನಾಗಿದೆ ಮಾರಾಯರೇ

Shashi jois said...

ನಾನು ಕೇಳಿಲ್ಲ ಈ ಹಾಡನ್ನು. ಹಾಡು ಚೆನ್ನಾಗಿತ್ತು.ಹಿಡಿ ಸುಡಿ ಯಲ್ಲಿ ಬೆಕ್ಕಿಗೆ ೨ ಏಟು ಸರಿ ಬಿತ್ತೇನೋ ಆಲ್ವಾ?(ತಮಾಷೆ) .ಮುಂದೆ ಕೂಡ ಈ ತರದ ಹಾಡನ್ನು ಕೆಳುವವರಾಗುತ್ತೇವೆ ಹಾಕಿ ಅಡ್ಡಿಯಿಲ್ಲ

ಸುಧೇಶ್ ಶೆಟ್ಟಿ said...

ತು೦ಬಾ ಮಜವಾಗಿದೆ ಹಾಡು... ಹಾಸ್ಯ ಭರಿತ ಆಗಿದೆ...

ತುಳು ಹಾಡನ್ನು ಕನ್ನಡಕ್ಕೆ ಅನುವಾದಿಸಿ ಬರೆದಿದ್ದೀರಾ ರವಿ?

Unknown said...

ಸುನಾಥ್ ಸಾರ್,

ಹಾಡು ಇಷ್ಟಪಟ್ಟಿದ್ದೀರ ... ಧನ್ಯವಾದಗಳು..

Unknown said...

ಶಿವೂ ಸಾರ್,

ಅಷ್ಟೆಲ್ಲಾ ಆದ್ಮೇಲೆ ನಾಚಿಕೆ ಆಗದೆ ಇರುತ್ತಾ?? :-)

Unknown said...

ಪರಾಂಜಪೆಯವರೇ ,

ಧನ್ಯವಾದ...

Unknown said...

ಶಶಿ ಯವರೇ,

ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು... ಹೀಗೆ ಬರುತ್ತಿರಿ..

Unknown said...

ಸುಧೇಶ್,

ಹಾಡು ಮೆಚ್ಚಿದ್ದಕ್ಕೆ ಧನ್ಯವಾದಗಳು... ಇದು ಕನ್ನಡದ್ದೇ ಹಾಡು.. ತುಳು ಅಲ್ಲ.. :-)

ದಿನಕರ ಮೊಗೇರ said...

ರವಿಕಾಂತ್ ಸರ್,
ನಾನಂತೂ ಮೊದಲ ಸಾರಿ ಕೇಳಿದೆ ಈ ಹಾಡನ್ನ.... ತುಂಬಾ ಚೆನ್ನಾಗಿದೆ.....

Nisha said...

Chennagide

ಬಿಸಿಲ ಹನಿ said...

ಹೌದು ಇಂಥ ಜನಪದ ಹಾಡುಗಳು ತುಂಬಾ ಇವೆ. ಅವನ್ನು ಹುಡುಕಿ ತೆಗೆಯಬೇಕಷ್ಟೆ. ಇದು ಒಂದು ಸಾಧಾರಣ ಹಾಡು ಎನಿಸಿತು.

ಮನಸು said...

ಅಮ್ಮಂದಿರು ಹೇಳೋ ಎಷ್ಟೋ ಹಾಡುಗಳು ಯಾರಿಗು ತಿಳಿದೆ ಇರೋಲ್ಲ ಚೆನ್ನಾಗಿದೆ ಈ ಹಾಡು ನಗು ತರಿಸಿತು ಹಹಹ ಇನ್ನು ನಿಮಗೆ ಗೊತ್ತಿದ್ದರೆ ಬ್ಲಾಗಿಗೆ ಹಾಕಿ ನಾವುಗಳು ಓದುತ್ತೇವೆ.

ಅಮ್ಮನಿಗೆ ಧನ್ಯವಾದಗಳು ಅವರು ಅಂದು ಹೇಳಿದ್ದಕ್ಕೆ ಇಂದು ನಮ್ಮೆಲ್ಲರ ಕಣ್ಣಿಗೆ ಬೀಳುವಂತೆ ಮಾಡಿದಿರಿ.

ಜಲನಯನ said...

ರವಿಕಾಂತ್...ಅತ್ತೆಮನೆಗೆ ಹೋಗಿ ಪಾಯಸ ಬೇಕಂತ ಹೇಳಿ ಹಾಕಿಸಿಕೊಂಡು ತಿನ್ನದೇ ಇದ್ದದ್ದು ದೊಡ್ಡ ತಪ್ಪು, ಹೋಗ್ಲಿ ಅಂದ್ರೆ ಕಳ್ಳನಂತೆ ಹೋಗಿ ಮಡಕೆಗೆ ಬಾಯಿಹಾಕಿತ್ತು ಎರಡನೇ ತಪ್ಪು...ಹಹಹ ಚನ್ನಾಗಿದೆ..ಕಥೆ-ಕವನ...ಇದು ಹಾಡಾಗಿದೆಯಾ??

Unknown said...

ದಿನಕರ್ ಸಾರ್,

ಧನ್ಯವಾದಗಳು...

Unknown said...

ನಿಶಾ ಅವರೇ,

ಧನ್ಯವಾದಗಳು..

Unknown said...

ಉದಯ್ ಸಾರ್,



ಧನ್ಯವಾದಗಳು... ಇದನ್ನು ರಾಗವಾಗಿ ಹಾಡುವಾಗ ಕೇಳೋಕೆ ಚೆನ್ನಾಗಿರುತ್ತೆ...

Unknown said...

ಮನಸು ಅವರೇ,



ಧನ್ಯವಾದಗಳು..

Unknown said...

ಆಜಾದ್ ಸಾರ್,

ಹೌದು ಇದೊಂದು ಹಾಡು... ಇದನ್ನು ರಾಗವಾಗಿ ಹಾಡೋವಾಗ ಕೇಳಲು ತುಂಬಾ ಮಜಾ ಇರ್ತಿತ್ತು.. ಧನ್ಯವಾದ..