Tuesday, September 22, 2009

ನನ್ನ ಕಥೆ..

ಆಗ ನನಗೆ ೫೬ ವರ್ಷ.. ಇನ್ಯಾಕೆ ಬೇಕು ಈ ಸರ್ಕಾರಿ ಕೆಲಸ... ಹಾಗಂತ ಒಂದು ದಿನ ನಿರ್ಧಾರ ಮಾಡಿದವನೇ, ಮಾಡುತ್ತಿದ್ದ ಸರ್ಕಾರಿ ಕೆಲಸದ ಮುಖಕ್ಕೊಂದು ರಾಜೀನಾಮೆ ಬಿಸಾಕಿ ಮನೆಗೆ ಬಂದು ಆರಾಮಾಗಿ ಕೂತುಬಿಟ್ಟೆ... ಮೊನ್ನೆಯಷ್ಟೇ ಮದುವೆಯಾಗಿ ಅಮೆರಿಕಾದಲ್ಲಿ ಕೈತುಂಬಾ ಸಂಬಳ ಪಡೆಯುವ ಮಗ-ಸೊಸೆ.. ಈಗಾಗಲೇ ಜರ್ಮನಿ ಯಲ್ಲಿ ಠಿಕಾಣಿ ಹೂಡಿರೋ ಮಗಳು ಮತ್ತು ಅಳಿಯ.. ಒಬ್ಬ ಅಪ್ಪ ತನ್ನ ಮಕ್ಕಳಿಗೆ ಒದಿಸಿ, ಕಲಿಸಿ, ಪ್ರೀತಿಸಿ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾದ್ಧ್ಯ... ಹಾಗಂತ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ...
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...

ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...

-- ಮುಂದುವರೆಯುವುದು..

17 comments:

sunaath said...

ಸ್ವಾರಸ್ಯಕರವಾಗಿದೆ. ಮುಂದುವರೆಸಿ.

ಬಾಲು said...

ಚೆನ್ನಾಗಿ ಅರ೦ಭವಾಗಿದೆ. ಕಾಯಿಸದೆ ಮು೦ದುವರಿಸಿ.

Unknown said...

ಸುನಾಥ್ / ಬಾಲು ಸಾರ್,
ನಾನು ಯಾವತ್ತೂ ಕಥೆ ಬರೆದವನೇ ಅಲ್ಲ.. ಕಥೆ ಬರೆಯುವ ಮನಸ್ಸೂ ಇಲ್ಲ... ಮನಸ್ಸಿಗೆ ಬಂದಿದ್ದನ್ನು ಗೀಚುವವನು ನಾನು.. ಅದ್ಯಾರು ಓದುತ್ತಾರೋ ಅನ್ನೋ ಭಯ ಇತ್ತು.. ಆದರೆ ನಿಮ್ಮ ಮೆಚ್ಚುಗೆಯ ಮಾತು ಓದಿ ಖುಷಿಯಾಯಿತು... ಧನ್ಯವಾದಗಳು...

Unknown said...

ಆಗ ನನಗೆ ೫೬ ವರ್ಷ.. .. ಕಥೆಯ ಮೊದಲ ಸಾಲು ಓದುತ್ತಲೇ ಗಾಬರಿಯಾಯಿತು. ಜೊತೆಗೆ 'ನನ್ನ ಕಥೆ..' ಎಂಬ ಶಿರ್ಷಿಕೆ ಬೇರೆ! ನಿಮ್ಮ ಪ್ರೊಫೈಲಿನಲ್ಲಿ ನಿಮ್ಮ ೇಜ್ ಖಚಿತಪಡಿಸಿಕೊಂಡು ನಂತರ ಕಥೆ ಓದಿದೆ. ಅತ್ಯಂತ ಸರಲವಾಗಿ, ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ. ಧಾರಾವಾಹಿಗಳ ತರ ಒಳ್ಳೆಯ ಸಸ್ಪೆನ್ಸಿನಲ್ಲಿ ಎಂಡ್ ಮಾಡಿ ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದ್ದೀರ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ

ಬಿಸಿಲ ಹನಿ said...

ತುಂಬಾ ಕುತೂಹಲಕರವಾಗಿದೆ. ಇದು ನಿಮ್ಮದೇ ಕತೆಯೆಂದು ಓದಿದೆ. ಆದರೆ ಕತೆಯ ಆರಂಭದಲ್ಲಿ ೫೯ ವರ್ಷ ಎಂದು ಇದೆ. ಹಾಗಿದ್ದರೆ ಇದು ಯಾರ ಕತೆಯಿರಬಹುದು?ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ

shivu.k said...

ರವಿಕಾಂತ್ ಸರ್,

ಕತೆಯು ಕುತೂಹಲಕರವಾಗಿದೆ...ಖಂಡಿತ ಮುಂದುವರಿಸಿ...ಓದಲು ಕಾಯುತ್ತೇನೆ...

PARAANJAPE K.N. said...

ಕಥೆ ಉತ್ತಮ ಆರ೦ಭ ಕ೦ಡಿದೆ. ಮುಂದುವರಿದ ಭಾಗ ಬೇಗ ಬರಲಿ ಗೋರೆ.

ದಿನಕರ ಮೊಗೇರ said...

ಆರಂಭ ತುಂಬಾ ಚೆನ್ನಾಗಿದೆ.... ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.... ಬೇಗ ಮುಂದುವರೆಸಿ......

ಶಿವಪ್ರಕಾಶ್ said...

ಒಳ್ಳೆಯ ಆರಂಭ ಕೊಟ್ಟಿದ್ದಿರಿ...
ಅದು ಯಾವ ವಿದ್ಯೆ ಗುರು... ?
ನಾವು ಈಗಲೇ ಕಲಿತುಬಿಡ್ತಿವಿ...
ಮುಂದುವರಿಸಿ....

ಮನಸು said...

ravi kanth,
nija kathege oLLe aarambha kottideeri.. nimma katheya hero yava kelasa maaduttaare endu yochisutta iddeve..

kathe odalu naavella ideevi bareyuttale iri..

mundina bhaagakke kaayutaliddeve aadare hechu dina kaayuva haage maadabedi

Unknown said...

ಸತ್ಯನಾರಾಯಣ ಸಾರ್,
ನಿಮ್ಮ ಮೆಚ್ಚುಗೆಯ ಮಾತು ಕೇಳಿ ನೂರಾನೆ ಬಲ ಬಂದಂತಾಗಿದೆ... ನಿಮ್ಮ ಪ್ರೋತ್ಸಾಹದಿಂದ ನಾನೂ ಇನ್ನೂ ಚೆನ್ನಾಗಿ ಬರೆಯಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದೇನೆ.. ಧನ್ಯವಾದ..

Unknown said...

ಉದಯ ಸಾರ್,
ಮುಂದಿನ ಭಾಗ ಹಾಕಲು ತಯಾರಾಗುತ್ತಿದೆ.. ನಿಮ್ಮ ಪ್ರೋತ್ಸಾಹವೇ ನನಗೆ ಬರೆಯುವಂತೆ ಪ್ರೇರೇಪಿಸುತ್ತಿದೆ... ಧನ್ಯವಾದ.

Unknown said...

ಶಿವೂ ಸಾರ್,
ನೀವು ಈ ಹಿಂದೆ ಹೇಳಿದ ಮಾತು ನಾನೂ ಹೇಳಬೇಕೆಂದಿದ್ದೇನೆ.." ನಾನು ಕಥೆಗಾರನಲ್ಲ..".. ಆದರೂ ನಾನು ಗೀಚಿದ್ದನ್ನು ಪ್ರೀತಿಯಿಂದ ಒಪ್ಪಿಸಿಕೊಂಡಿದ್ದೀರ.. ಧನ್ಯವಾದ.. ಮುಂದಿನ ಭಾಗ ಆದಷ್ಟು ಬೇಗ ಹಾಕುವೆ...

Unknown said...

ಪರಾಂಜಪೆಯವರೇ,
ನಾನು ಗೀಚಿದ್ದನ್ನು ಪ್ರೀತಿಯಿಂದ ಒಪ್ಪಿಸಿಕೊಂಡಿದ್ದೀರ..ನೀವು ಹಿರಿಯರು ಬರಿ ಅಂದ ಮೇಲೆ ಮುಗೀತು... ಮುಂದಿನ ಭಾಗ ಆದಷ್ಟು ಬೇಗ ಹಾಕುವೆ...ಧನ್ಯವಾದ..

Unknown said...

ದಿನಕರ್ ಸಾರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

Unknown said...

ಶಿವಪ್ರಕಾಶ್ ಸಾರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು... ವಿದ್ಯೆ ಏನೆಂದು ಮುಂದಿನ ಕಂತಿನಲ್ಲಿ ತಿಳಿಯುತ್ತೆ.. ಆದರೆ ಈಗಲೇ ಕಲಿತುಬಿದುವಷ್ಟು ಸುಲಭದ್ದಲ್ಲ!! :-).. ಧನ್ಯವಾದ..

Unknown said...

ಮನಸು ಮೇಡಂ,
ಖಂಡಿತಾ ಹೆಚ್ಚು ದಿನ ಕಾಯಿಸಲಾರೆ.. ಇವತ್ತು ನಾಳಿನದ್ದರಲ್ಲಿ ಮುಂದಿನ ಭಾಗ ಹಾಕುವವನಿದ್ದೇನೆ... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..