Friday, July 24, 2009

ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ

ಎರಡು ವರ್ಷಕ್ಕೆ ಹಿಂದೆ ಶುಕ್ರವಾರ ಬಂತೆಂದರೆ ಮತ್ತೆ ಕೇಳಬೇಕೆ... ನಾವೊಂದು ಎಂಟುಜನರ ಗುಂಪು ಗುರು ಗಾರ್ಡನ್ ಅನ್ನೋ ಅಡ್ಡದಲ್ಲಿ ೭-೭.೩೦ ಯಹಾಗೆ ಪ್ರತ್ಯಕ್ಷ ರಾಗಿ ಬಿಡುತ್ತಿದ್ದೆವು... ನಾವು ಬರುತ್ತೇವೆ ಎಂದು ತಿಳಿದಿದ್ದ ಗಾರ್ಡೆನ್ ಮಂದಿಯೂ ನಮಗೆ ಟೇಬಲ್ ಕಾಯ್ದಿರಿಸುತ್ತಿದ್ದರು... ತಂಪಾದ ಬಿಯರು...... ಹುಹ್ ಆ ದಿನಗಳು !!!!!!!
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...

15 comments:

ಸುಧೇಶ್ ಶೆಟ್ಟಿ said...

ravi avare...

idu nijavaagi nadeda katheyo alla kaalpanikavo?

nijavaagi nadeda kathe aagadirali endu aashisuththene...

smitha said...

Kathe Super duper aagide aadre odi bejar Aaytu.
Adikke Helodu Sull Helbardu Anta.
Idu nijvagi nadiddo atva kalpaneyo????. Uttarakkagi Kaittiruttene.

ಸಿಮೆಂಟು ಮರಳಿನ ಮಧ್ಯೆ said...

ರವಿ....

ಎಷ್ಟು ಸೊಗಸಾದ ಬರವಣಿಗೆ...!!
ವಾಹ್....

ಇದು ನಡೆದ ಘಟನೆಯಾ...?
ನನ್ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಾರ್ಪೆಂಟರ್ ...
ಆಗಾಗ ರಜೆ ಹಾಕಿ ಯಾರನ್ನಾದರೂ..
"ಸಾಯಿಸಿ ಬಿಡುತ್ತಿದ್ದ,,,!
"ಸರ್... ನನ್ನಜ್ಜಿ ತೀರಿಹೋದ್ರೊ ಅಂತಲೋ
ಕೊನೆಗೆ ಯಾರೂ ಸಿಗದೆ ಇದ್ರೆ "ಸಾರ್ ನನ್ನ ಗೆಳೆಯ ಸತ್ತೊದ" ಅಂತ...

ನಿಮ್ಮ ಲೇಖನ ಹ್ರದಸ್ಪರ್ಷಿಯಾಗಿದೆ...

ಅಭಿನಂದನೆಗಳು....

shivu said...

ರವಿಕಾಂತ್ ಸರ್,

ಓದಿ ಬೇಸರವಾಯಿತು. ಇದು ಬರೀ ಲೇಖನವಾಗಿದ್ದರೇ ಓಕೆ ನಿಜ ಕತೆಯಾದರಂತೂ ಏನು ಹೇಳಲು ಬರುವುದಿಲ್ಲ.

ನಾವು ತಪ್ಪಿಸಿಕೊಳ್ಳಲು ಹೇಳುವ ಸುಳ್ಳುಗಳು ಕೆಲವೊಮ್ಮೆ ಯಾವ ಮಟ್ಟಕ್ಕೆ ತಂದುನಿಲ್ಲಿಸುತ್ತವೆ ಅನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ....

Dr. B.R. Satynarayana said...

ರವಿಕಾಂತ್
ಒಳ್ಳೆಯ ಸ್ಕೂಪ್. ಏಕೋ ಗೊತ್ತಿಲ್ಲ, ಈ ಲೇಖನದ ಕೆಲವು ಅಕ್ಷರಗಳು ಜಂಕಾಗಿವೆ. ನನ್ನ ಕಂಪ್ಯೂಟರಿನಲ್ಲಿ ಮಾತ್ರ ಹೀಗಾ?

ಬಾಲು said...

ಹೃದಯ ಸ್ಪರ್ಶಿ ಬರವಣಿಗೆ.
ಇದು ನಿಜಕ್ಕೂ ನಡೆದ ಘಟನೆ ನ?

ನಾವು ಬಿಡೋ ರೈಲುಗಳು ಕೆಲವೊಮ್ಮೆ ನಮ್ಮ ಮೇಲೆ ನೆ ಹರಿಯುತ್ತವೆ ಅಲ್ಲವಾ...

Umesh Balikai said...
This comment has been removed by the author.
Umesh Balikai said...

ರವಿ,

ಇದು ನಿಜವಾಗಿಯೂ ನಡೆದದ್ದಾ? ಇದು ನಿಜವಾಗಿದ್ದಾದರೆ ಇದೊಳ್ಳೇ 'ತೋಳ ಬಂತು ತೋಳ' ಕಥೆಯಂತಾಯ್ತು. ಚಿಕ್ಕ ಪುಟ್ಟ ಸುಳ್ಳುಗಳೂ ಸಹ ಕೆಲವು ಸಲ ಎಷ್ಟೊಂದು ತಾಪತ್ರಯ ತಂದು ಒಡ್ಡುತ್ತವೆ, ನೋಡಿ. ಶೀರ್ಷಿಕೆ ಸಂದರ್ಭಕ್ಕೆ ತಕ್ಕಂತೆ ತುಂಬಾ ಅರ್ಥಗರ್ಭಿತವಾಗಿದೆ. ಅಭಿನಂದನೆಗಳು.

ರವಿಕಾಂತ ಗೋರೆ said...

ಸುದೇಶ್/ಸ್ಮಿತಾ/ಪ್ರಕಾಶ್ ಸಾರ್/ಶಿವೂ ಸಾರ್/baalu ಸಾರ್/ ಉಮೇಶ್ ಸಾರ್ ,
ಇದು ಪೂರ್ತಿಯಾಗಿ ನಿಜವಲ್ಲ... ನಡೆದ ಘಟನೆಯೇ ಆದರೆ ಸ್ವಲ್ಪ ಹುಲಿ,ಖಾರ, ಉಪ್ಪು ಎಲ್ಲ ಸೇರಿಸಿದ್ದೇನೆ... ಧನ್ನ್ಯವಾದಗಳು...

ರವಿಕಾಂತ ಗೋರೆ said...

ಸತ್ಯನಾರಾಯಣ ಸಾರ್,
ಕೆಲವೊಮ್ಮೆ ನನಗೂ ಕೆಲವು ಅಕ್ಷರಗಳು ಹೀಗೆ ಕಾಣಿಸುತ್ತಿದ್ದವು... ಆದರೆ ಇವತ್ತು ಸರಿಯಾಗಿ ಕಾಣಿಸುತ್ತಿವೆ.. ಬಹಿಷ ಬ್ರೌಸರ್ ತೊಂದರೆ ಇದ್ದಿರಬೇಕು... ಧನ್ಯವಾದಗಳು

Ram said...

Get Add-Hindi button widget, It will increase your blog visitors and traffic with top Hindi Social Bookmarking sites. Install button from www.findindia.net

Archu said...

ravi,
chanda bardiddi..hrudayasparshi kathe..

ondu doubtu maharaya..
"ತಂಪಾದ ಬಿಯರು" idu kalapanikava nijava? :D

ಧರಿತ್ರಿ said...

ಗೋರೆ ಸರ್..ಓದಿ ಬೇಜಾರಾಯ್ತು. ನಿರೂಪಣೆ ಚೆನ್ನಾಗಿದೆ.
-ಧರಿತ್ರಿ

Dinakar Moger said...

ತುಂಬಾ ಚೆನ್ನಾಗಿದೆ, ಅವತ್ತು ಮಳೆ ಬಂದಿದ್ದರೆ ನೀವು ಇಷ್ಟು ಚೆನ್ನಾಗಿ ಬರಿತಿದ್ದರೋ ಇಲ್ಲವೊ.

ರವಿಕಾಂತ ಗೋರೆ said...

dharitri/Dinakar,

Thank you for your comments