Friday, May 22, 2009

ಆತ ಯಾರೆಂದು ಕೊನೆಗೂ ತಿಳಿಯಲೇ ಇಲ್ಲ..!!!!

IPL ಗಿಂತ... ಆತನ ಬ್ಲಾಗ್ ಹೆಚ್ಚು ಜನಪ್ರಿಯವಾಯಿತು... IPL ನ ವೆಬ್ ಸೈಟ್ ಗೆ ಭೇಟಿ ನೀಡಿದವರಿಗಿಂತ ಆತನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆಯೇ ಹೆಚ್ಚು... ಕೊಲ್ಕತ್ತಾ ನೈಟ್ riders, ಅದರ ಬಾಸ್ ಶಾರುಖ್, ಅಧಿಕಪ್ರಸಂಗಿ ಶ್ರೀಸಾಂತ್ ಎಲ್ಲರ ಜನ್ಮ ಜಾಲಾಡಿಸಿಬಿಟ್ಟ.. ೨೫ ದಿನಗಳಲ್ಲಿ ಆತನ ಬ್ಲಾಗ್ ಗೆ ಕಡಿಮೆಯೆಂದರೂ ೧.೫೦ ಲಕ್ಷ ಜನರು ಭೇಟಿ ನೀಡಿದರು... ಆತ ಯಾರು ಅನ್ನೋದು ಮೊನ್ನೆ ೧೮ ಕ್ಕೆ ಗೊತ್ತಾಗಬೇಕಿತ್ತು ಆದರೆ Fakeiplplayer ಎಂದು ತನ್ನನ್ನು ತಾನು ಕರೆಸಿಕೊಂಡ ಆತ ಕೊನೆಗೂ ಯಾರೆಂದು ತಿಳಿಯಲೇ ಇಲ್ಲ...
ಹೌದು... ನೀವು ಭೇಟಿ ಕೊಟ್ತಿದ್ದೀರೋ ಇಲ್ಲವೊ ಗೊತ್ತಿಲ್ಲ... ಆತನ ಬ್ಲಾಗ್ ಎಲ್ಲವನ್ನೂ ಹೇಳುತ್ತದೆ... ಟೀಂ ಮೀಟಿಂಗ್ ನಲ್ಲಿ ಏನಾಯಿತು, ಶಾಪಿಂಗ್ ಗೆ ಹೋದಾಗ, ಆಟ ಆಡೋವಾಗ, ಕಾಮೆಂಟರಿ ಮಾಡೋವಾಗ... ಎಲ್ಲೆಲ್ಲ ಏನೇನ್ ನಡಿಯತ್ತೆ, ಕೊಲ್ಕತ್ತಾ ಯಾಕೆ ಸೋತಿತು... ಹುಹ್... ಅದೆಷ್ಟು ನಿಜ , ಅದೆಷ್ಟು ಸುಳ್ಳು ಗೊತ್ತಿಲ್ಲ...ಆದರೆ ಎಲ್ಲವನ್ನು ಆತ ಹೇಳುತ್ತಾನೆ.. ತನ್ನನ್ನು ತಾನು FakeIPLPlayer ಎಂದು ಕರೆಸಿಕೊಳ್ಳುವ ಆತ ಹೇಳಿಕೊಳ್ಳುವಂತೆ ಆತ ಕೋಲ್ಕತ್ತಾ ಟೀಂ ನ ಆಟಗಾರ... ರಣಜಿ ಆಡಿದ್ದಾನೆ, ಭಾಷೆ ನೋಡಿದರೆ ಬೆಂಗಾಲಿ ಥರ ಅನ್ನಿಸುತ್ತೆ... ಸ್ವಚ್ಛ ಇಂಗ್ಲಿಷು... ಕಲಿತಿದ್ದು ಡೆಲ್ಲಿಯಲ್ಲಿ, ಭಾರತೀಯ ಟೀಂ ನಲ್ಲಿ ಆಡುವ ಅರ್ಹತೆ ಇದ್ದೂ ಆಡಲಾಗದವನು... ಕಳೆದ ವರ್ಷದ IPL ನಲ್ಲಿ ಚಾನ್ಸ್ ಸಿಗಲಿಲ್ಲ... ಈ ವರ್ಷ ಟೀಂ ನಲ್ಲಿ ಇದ್ದೂ ಆತನನ್ನು ಯಾರೂ ಆಡಿಸಲಿಲ್ಲ...
ಕೆಲವರು ಆತ ಆಕಾಶ್ ಚೋಪ್ರಾ ಅಂದರು, ಇನ್ನು ಕೆಲವರು ಸಂಜಯ್ ಬಂಗಾರ್ ಕಡೆ ಬೊಟ್ಟು ಮಾಡಿದರು... ಉಹುಂ... ಅವರಾರೂ ಅಲ್ಲ... ಆತ ಟೀಂ ನ ಮ್ಯಾಚ್ ಮುಗಿದ ಕೂಡಲೇ ಬ್ಲಾಗ್ ಬರೆಯುತ್ತಾನೆ, ಹೋಟೆಲ್ ರೂಮಲ್ಲಿ ಎಲ್ರೂ ಮಲಗಿದರೆ ಬ್ಲಾಗ್ ಗೀಚ್ತಾನೇ, ಹೊಸ ಲ್ಯಾಪ್ಟಾಪ್ ಖರೀದಿಸಿದ್ದೀನಿ ಅಂತಾನೆ, ಕೋಚ್ ನ ಲ್ಯಾಪ್ಟಾಪ್ ನಿಂದ ಅಂತ ಒಂದೆರಡು ವಾಕ್ಯ ಗೀಚುತ್ತಾನೆ.... ಆದರೆ ಇದುವರೆಗೂ ಆತ ಯಾರೆಂದು ತಿಳಿದಿಲ್ಲ...
ಆತನ ಬರಹದಲ್ಲಿ ಎಲ್ಲರಿಗೂ ಒಂದೊಂದು ಅಡ್ಡ ಹೆಸರಿದೆ... ಫಾರೆನ್ ಬಬುಸ್, ಪ್ರಿನ್ಸ್ ಆಫ್ ಪಟಿಯಾಲ, ಅಪ್ಪಂ , ದೀವಾರ್, ಬೆವದಾ , ಬಾಟ್ಲಿ ವಾಲಾ...ಹೀಗೆ... ಕ್ರಿಕೆಟ್, ಅದರೊಳಗಿನ ಡಂಭಾಚಾರ, ಮಂದಿರಾ ಬೇಡಿ, ಅಲ್ಲಿನ ರಾಜಕೀಯ, ಸೆಕ್ಸ್, ಪಾರ್ಟಿಗಳು... ಹುಹ್ ಏನೇನಿಲ್ಲ... ನಾನು ಜಾಸ್ತಿ ಹೇಳುವುದು ಒಳ್ಳೆಯದಲ್ಲ... ನೀವೇ ಸ್ವತಹ ಒಮ್ಮೆ ಓದಿ... ಆತ ಅದೆಷ್ಟು ನಿಜ, ಅದೆಷ್ಟು ಸುಳ್ಳು ಯಾರಿಗೂ ಗೊತ್ತಿಲ್ಲ... ಆತ ನಿಜವಾಗಿ ಕೊಲಕತ್ತಾ ಆಟಗಾರನೇ ಅಥವ ನಮ್ಮ ನಿಮ್ಮಂಥ ಸಾಮನ್ಯ ನೆ ತಿಳಿದಿಲ್ಲ... ಯಾರೇ ಇರಲಿ ತುಂಬ ಬುದ್ಧಿವಂತ... ಕೆಲವೊಂದು ಬಾರಿ ನನಗೆ IPL ಮ್ಯಾಚ್ ಬೋರ್ ಆದಾಗ ಟೈಮ್ ಪಾಸು ಮಾಡಿಸಿದ್ದಾನೆ... ಆತನ ಬ್ಲಾಗ್ ಓದಿ ಕೆಟ್ಟ ಮ್ಯಾಚ್ ಮರೆತು ಮತ್ತೆ ನಕ್ಕಿದ್ದೇನೆ...
ನನ್ನ ಪ್ರಕಾರ ಆತ ಯಾರೋ ಮೂರನೇ ವ್ಯಕ್ತಿ... ಕೋಲ್ಕತ್ತಾ ಟೀಂ ನ ಒಳಗಿನಿಂದ ಆತ ಯಾರ ಜೊತೆಗೋ ಸಂಪರ್ಕ ಇಟ್ಟುಕೊಂಡಿದ್ದಾನೆ... ಎಲ್ಲ ಮಾಹಿತಿ ಪಡೆದು ಬ್ಲಾಗ್ ಗೀಚುತ್ತಾನೆ... ಯಾಕಂದ್ರೆ ಅಲ್ಲಿರುವ ಇಂಟರ್ನೆಟ್, wi-fi ಎಲ್ಲದಕ್ಕೂ ಮೋಸ ಮಾಡುವ ಹಾಗಿಲ್ಲ... ಆದ್ದರಿಂದ ಅಲ್ಲಿಂದಲೇ ಬರೆಯುವ ಪ್ರಮೇಯ ತುಂಬಾ ಕಮ್ಮಿ... ಇನ್ನು ಒಂದು ತಿಂಗಳ ಕಾಲ ಎಲ್ಲರ ಕಣ್ಣು ತಪ್ಪಿಸಿ ಅಲ್ಲಿಂದ ಬರೆಯುವ ಸಾಧ್ಯತೆ ಕೂಡ ತುಂಬಾ ಕಮ್ಮಿ... ಆತನ ಬ್ಲಾಗ್ ಓದಲು ಇಲ್ಲಿ ಭೇಟಿ ಕೊಡಿ... http://fakeiplplayer.blogspot.com/

13 comments:

Unknown said...

ವಿಚಿತ್ರವಾದ ಸತ್ಯವೊಂದನ್ನು ತೋರಿಸಿದ್ದೀರ! ನಾನೀಗ http://fakeiplplayer.blogspot.com/ ಗೆ ಹೋಗುತ್ತಿದ್ದೇನೆ. ಆದರೆ ನನಗೆ ಇಂಗ್ಲಿಷಿನಲ್ಲಿ ಓದುವುದು ಮನಸ್ಸಿಗೆ ಅಷ್ಟೊಂದು ಇಳಿಯುವುದೇ ಇಲ್ಲ. ಆದರೂ ಬೇಟಿಕೊಡುತ್ತೇನೆ. ನಿಮ್ಮ ಲೇಖನ ಪುಟ್ಟದಾಗಿದೆ. ಒಂದೆರಡು ನಿರ್ದಿಷ್ಟ ಘಟನೆಗಳನ್ನು ಸೇರಿಸಬಹುದಿತ್ತೇನೋ ಅನ್ನಿಸುತ್ತಿದೆ.

Unknown said...

ಸತ್ಯನಾರಾಯಣ ಸಾರ್,
ನೀವು ಹೇಳಿದ್ದು ನಿಜ.. ನಾನು ಕೆಲವೊಂದು ಆತನ ಬ್ಲಾಗ್ ಗಳನ್ನ ಇಲ್ಲಿ ಸೇರಿಸೋಣ ಅಂದುಕೊಂಡೆ.. ಆದರೆ ಓದುಗರಿಗೆ ಬರಹ ಉದ್ದವಾದಂತೆ ಅನ್ನಿಸಬಾರದು ಅಂತ ಆತನ ಬ್ಲಾಗ್ ನ ಲಿಂಕ್ ಸೇರಿಸಿದೆ... ಅಭಿಪ್ರಾಯಕ್ಕೆ ಧನ್ಯವಾದಗಳು...

ಬಿಸಿಲ ಹನಿ said...

ತುಂಬಾ ಆಶ್ಚರ್ಯಕರ ಮಾಹಿತಿ. ನಾನೀಗ ಆ ಬ್ಲಾಗಿಗೆ ಭೇಟಿ ಕೊಡುತ್ತೇನೆ.

ಬಾಲು said...

thx gore avare.... nanu ega allige nuggutta iddene!!!

PARAANJAPE K.N. said...

ಗೋರೆ
ಮಾಹಿತಿ ಎಲ್ಲಿ ಸಿಗ್ತು ನಿಮಗೆ ? ಚೆನ್ನಾಗಿದೆ, ನಾನು ಆ ಬ್ಲಾಗಿಗೆ ಈಗ ಹೋಗಿ ನೋಡಿ ಬ೦ದೆ. ಇ೦ತಹ ಇನ್ನಷ್ಟು ವಿಚಾರಗಳನ್ನು ನಮ್ಮ೦ತಹವರ ಗಮನಕ್ಕೆ ತನ್ನಿ. Thanks.

shivu.k said...

ರವಿಕಾಂತ್ ಸರ್,

ತುಂಬಾ ಆಸಕ್ತಿಕರವಾಗಿದೆ...ನಾನು ಅವನ ಬ್ಲಾಗಿಗೆ ಹೋಗುತ್ತೇನೆ...ನೋಡೋಣ ಅದೇನೇನು ಇದೆ ಅಂತ...

Unknown said...

ಉದಯ್ ಸಾರ್,
ಹೌದು.. ನಾನೂ ಒಂದು ತಿಂಗಳಿಂದ ಅಚ್ಚರಿಯಿಂದ ಈ ಬ್ಲಾಗ್ ಓದುತ್ತಿದ್ದೆ... ಕೊನೆಗೂ ಆತ ಯಾರೆಂದು ಗೊತ್ತಾಗದೆ ಆತನ ನೆರಳು ನೋಡಿ ನಿಟ್ಟುಸಿರು ಬಿಡಬೇಕಾಯಿತು.... ಹೀಗೆ ಭೇಟಿ ಕೊಡುತ್ತಿರಿ... ಧನ್ಯವಾದ...

Unknown said...

ಬಾಲುಅವರೆ,
ಹೀಗೆ ಭೇಟಿ ಕೊಡುತ್ತಿರಿ... ಧನ್ಯವಾದ...

Unknown said...

ಪರಾಂಜಪೆಯವರೇ
ಈ ಬಗ್ಗೆ ಮೀಡಿಯ ಭಾರಿ ಗುಲ್ಲೆಬ್ಬಿಸಿತ್ತು... ಆತ ಯಾರು ಎಂದು ಹುಡುಕಲು ಕೊಲ್ಕತ್ತಾ ತಂಡದ ಅಧಿಕಾರಿಗಳು ಸೇರಿದಂತೆ ಎಲ್ಲರೂ ವ್ಯರ್ಥ ಪ್ರಯತ್ನ ಮಾಡಿದ್ದುಂಟು... ಕೊನೆಗೂ ಆತನ ನೆರಳು ಮಾತ್ರ ಕಂಡಿದ್ದು ಮಾತ್ರ ಆತ ನಿಜವಾಗಿಯೂ ಒಬ್ಬ ಆಟಗಾರನೇ ಅಥವಾ ಶಾರುಖ್ ಖಾನ್ ನ pablicity mantrave ಅಥವಾ ಯಾರೋ ಸಾಮಾನ್ಯನೆ ಅನ್ನೋ ಕುತೂಹಲ moodisitu . ಧನ್ಯವಾದ...

Unknown said...

ಶಿವೂ ಸಾರ್,
ಒಮ್ಮೆ ಓದಿ ನೋಡಿ... ಅದೆಷ್ಟೋ ಹೆಸರುಗಳು ತುಂಬಾ ತಮಾಷೆ ಯಾಗಿವೆ...
ಅಪ್ಪಂ- ಶ್ರೀಸಾಂತ್..
ಬಾಟ್ಲಿವಾಲ - ವಿಜಯ್ ಮಲ್ಯ
ಹೀಗೆ... ಈ ಬ್ಲಾಗ್ ಓದಿದ ಕ್ರಿಕೆಟಿಗರು ಸಹ ಈಗ ಶ್ರೀಸಾಂತ್ ಗೆ ಅಪ್ಪಂ ಅಂತ ಕರೀತಾರಂತೆ :-)...

ಶಿವಪ್ರಕಾಶ್ said...

ಹೌದು ರೀ, ನಾನು ಕೂಡ ಓದಿದ್ದೇನೆ..

Ittigecement said...

ರವಿಕಾಂತ್...

ಮಾಧ್ಯಮದಲ್ಲಿ ಬಹಳ ಪ್ರಚಾರ ಸಿಕ್ಕಿದೆ..
ಆತ ಯಾರಿರ ಬಹುದು...?

ಟೈಮ್ ಪಾಸ್ ಆದದ್ದಂತೂ ನಿಜ...

ಧನ್ಯವಾದಗಳು...

ಮನಸು said...

ಜನ ಮರುಳೊ ಜಾತ್ರೆ ಮರುಳೊ ಅಂತಾರಲ್ಲ ಹಾಗೆ, ಈ ನಟ ನಟಿಯರು, ಆಟಗಾರರು ಇವರುಗಳ ಬಗ್ಗೆ ಏನಾದರು ತಿಳಿದುಕೊಳ್ಳೂ ಕುತುಹಲ ಜಾಸ್ತಿ ಅದಕ್ಕೆ ಹೆಚ್ಚು ಜನ ಭೇಟಿ ನೇಡೆಯುತ್ತೆ....
ಕ್ರಿಕೆಟ್ ಬಂದು ನಮ್ಮ ದೇಶದ ಆಟಗಳೆಲ್ಲ ನಶಿಸಿಹೋಗಿದೆ!!!!!!!!!
ನೀವು ಕೊಟ್ಟ ಲಿಂಕ್ ನೋಡಿದೆ ಬಹಳಷ್ಟು ಮಾಹಿತಿಗಳು ಶೇಕರಣೆಯಾಗಿವೆ... ಜನಸ್ತೋಮವೇ ಹರಿದುಬಂದಿದೆ ಹ ಹಹಹ......