Tuesday, May 5, 2009

ಇನ್ನು ನಮಗೆ ಕೆಲಸ ಇಲ್ಲಾ!!!!

"Say no to Bangalore, Yes to Buffalo"..
ಹಾಗಂತ ಅಮೇರಿಕಾದ ಅಧ್ಯಕ್ಷ ಒಬಾಮ ಹೇಳಿಬಿಟ್ಟಿದ್ದಾನೆ...!!! ಅಮೇರಿಕಾ ದಂಥಾ ಅಮೇರಿಕಾ ದುಡ್ಡಿಗಾಗಿ ಪರದಾಡುತ್ತಿದ್ದರೆ ಆತನಿಂದ ಈ ಹೇಳಿಕೆ ಬಂದುಬಿಟ್ಟಿದೆ...ಅಲ್ಲಾ, ಈ ಒಬಾಮ ಅಧ್ಯಕ್ಷನಾಗಿ ಎಷ್ಟು ದಿನಗಳಾದವು?? ೧೦೦?? ೧೧೦? ೧೨೫??? ಕೇವಲ ೧೦೦ ದಿನದಲ್ಲಿ ಅಮೇರಿಕಾದ ಪರಿಸ್ತಿತಿ ಸುಧಾರಿಸಬೇಕಿದ್ದರೆ ಏನು ಮಾಡಬೇಕು ಅದನ್ನ ಮಾಡಿದ್ದಾನೆ... ಈ ಸಾಫ್ಟ್ವೇರ್, ಬಿ ಪಿ ಓ ಅನ್ನೋ ಕೆಲಸ ನಾವಿಲ್ಲಿ ಮಾಡ್ತಿವಲ್ಲ??? ಅಲ್ಲ, ನಾವ್ಯಾವತ್ತಾದ್ರೂ ಯೋಚಿಸಿದ್ದೀವ ಅಮೇರಿಕಾದವರು ನಮಗೆ ಯಾಕೆ ಕೆಲಸ ಕೊಡ್ತಿದ್ದಾರೆ ಅಂತ?? ಅವ್ರ ಲಾಭಕ್ಕಾಗಿ ತಾನೆ? ಅಲ್ಲ ಆನೋಕ್ಕಾಗಲ್ಲ.. ಹಾಗಂತ ನಮಗೇನೂ ಇದ್ರಿಂದ ಉಪಯೋಗ ಆಗ್ಲಿಲ್ವಾ?? ಖಂಡಿತ ಆಗಿದೆ...ಬಹುಶ ಭಾರತದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಸಿದ್ದು , ದುಡ್ಡು ಹರಿದಾಡಿದ್ದು ಇವುಗಳಿ೦ದಾನೆ.. ಇಲ್ಲಾಂದ್ರೆ ಈ ಹಡಬೆ ಸರಕಾರಗಳು ನಮಗೆಲ್ಲಿ ಕೆಲಸ ಕೊಡ್ತಾ ಇದ್ವು?? ಎಲ್ಲಾ ಓಕೆ.. ಆದ್ರೆ ಈ ಅಮೇರಿಕಾ ಹೇಳಿದ್ದೆ ಯಾಕೆ??
ನಮ್ಮಲ್ಲಿ ದುಡ್ಡಿಲ್ಲ, ನಮ್ಮಲ್ಲಿ ಕೆಲಸ ಇಲ್ಲ ಅನ್ನೋ ಈ ಅಮೇರಿಕಾ ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ದುಡ್ಡು ಎಲ್ಲಿಂದ ಕೊಡುತ್ತೆ?? ಇರಾಕ್ ಮೇಲೆ ದಾಳಿ ಮಾಡಿ ಇಡೀ ವಿಶ್ವದ ಪೆಟ್ರೋಲಿಯಂ ಮೇಲೆ ಹೇಗೆ ಹಿಡಿತ ಸಾಧಿಸುತ್ತೆ?? ಬಹುಶ ಈ ಪ್ರಶ್ನೆಗಳಿಗೆ ಉತ್ತರ ಜೋರ್ಜ್ ಬುಷ್ ಅಥವಾ ಒಬಾಮ ಕೊಡಬಲ್ಲರೆನೋ... ನನ್ನದೊಂದು ಪ್ರಶ್ನೆ ಇಲ್ಲಿದೆ... ನಾವು ಭಾರತಕ್ಕೆ ಉದ್ಯೋಗ ಕೊಡೋದಿಲ್ಲ, ೧ ಡಾಲರ್ ಬೇಕಿದ್ರೆ ೫೦ ರುಪಾಯಿ ಕೊಡಿ ಅಂತ ಅವ್ರು ಕೇಳಬೇಕಾದರೆ ನಾವೇನ್ ಮಾಡಬಹುದು???
ಈ ಬಗ್ಗೆ ನಾನು ತುಂಬಾ ಆಲೋಚಿಸಿದೆ... ಉತ್ತರ ಹುಡುಕಿದೆ... ಉಹುಂ ಯಾಕೋ ಸಮಾಧಾನವಾಗಲಿಲ್ಲ...
"ಇವತ್ತಿಂದ ನಾಳೆಗೆ ಫಲಿತಾಂಶ ಬೇಕೆಂದರೆ ಹೇಗೆ ಸ್ವಾಮೀ.. ರಷ್ಯಾ ದಂಥ ದೇಶವನ್ನ ಹುಡಿ ಮಾಡಲು ಈ ಅಮೇರಿಕಾ ಬರೋಬ್ಬರಿ ೬೦ ವರ್ಷ ಕಾಯಲಿಲ್ಲವೇ?? ಬ್ರಿಟೀಷರು ಭಾರತದ ಮೇಲೆ ಹಿಡಿತ ಸಾಧಿಸಲು ಅದೆಷ್ಟು ವರ್ಷ ಕಾಯಲಿಲ್ಲ? ಅದೇ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಬೇಕು ಅಂತ ಅದೆಷ್ಟೋ ಮಂದಿ ಊಟ ,ನಿದ್ದೆ ಎಲ್ಲ ಬಿಟ್ಟು ಅದೆಷ್ಟು ದಿನ ಹೊರಾಡಲಿಲ್ಲ?? ಹಾಗೆ..ಉತ್ತಮ ಫಲಿತಾಂಶಕ್ಕಾಗಿ ಹೋರಾಡಬೇಕು, ಕಾಯಬೇಕು, ಪ್ಲಾನ್ ಮಾಡ್ಬೇಕು" ಹಾಗಂತ ಮನಸ್ಸು ಎಚ್ಚರಿಸುತ್ತಲೇ ಇತ್ತು...
ಅಲ್ಲಯ್ಯ ಈ ಅಮೇರಿಕಾ ದವರು ನಮಗೆ ಕೆಲಸ ಕೊಡಲ್ಲ , ಸರಿ ,ನಂ ಕೆಲಸ , ನನ್ನ ದೇಶದ ಕೆಲಸ ನಾನ್ ಮಾಡ್ತೀನಿ...
ಅಮೇರಿಕಾ ಕ್ಕೆ ೧೦೦೦ ಕೋಟಿ ರುಪಾಯಿಯ ಸಾಫ್ಟ್ವೇರ್ ಬೇಕಂತೆ... ಸರಿ , ಜಗತ್ತಿನ ೭ನೆ ದೊಡ್ಡ ದೇಶ, ೧೦೦ ಕೋಟಿಗಿಂತಲೂ ಹೆಚ್ಚು ಜನರಿರುವ ನಮ್ಮ ದೇಶಕ್ಕೆ ಅದೆಷ್ಟು ಸಾವಿರ ಕೋಟಿ ಗಳ ಸಾಫ್ಟ್ವೇರ್ ಬೇಡ???
naಮ್ಮ ಜನಕ್ಕೆ ನಿಮ್ಮಲ್ಲಿಂದ ಕೆಲಸ ಸಿಗಲ್ಲ... ಹೋಗ್ರಯ್ಯ ನಿಮ್ ಪೆಪ್ಸಿ ಕೋಕ್ ನಂಗೂ ಬೇಡ...
ನೀವು ಕೊಡೊ ಕುರ್ಕುರೆ ಗಿಂತ ನಮ್ಮಜ್ಜಿ ಮಾಡೋ ಚಿಪ್ಸ್ ಅದೆಷ್ಟೋ ಚೆನ್ನಾಗಿರ್ತವೆ..
ನಿಮ್ಮ ಕೋಲ್ ಗೇಟ್ ಗೆ ಬೆಂಕಿ ಹಾಕಿ, ನಮ್ಮಲ್ಲಿರೋ ಇದ್ದಿಲ ಹುಡಿ ಸಾಕು... ಪಿಜ್ಜಾ ಹಟ್, ಪೀಚೆ ಹಟ್....
ಹಾಗಂತ ನಾವೂ ಹೇಳಿದ್ರೆ ಹೆಂಗೆ??? ಬಹುಶ ಇವತ್ತಿಂದ ನಾಳೆ ಫಲಿತಾಂಶ ಸಿಗೋದಿಲ್ಲ ... ಆದ್ರೆ ಆ ಮೂಲಕ ನಾವೂ ನಮ್ಮ ದೇಶಕ್ಕೆ ಅಲ್ಪ ಸಹಾಯ ಮಾಡಬಹುದು... ಮುಂದೊಂದು ದಿನ ಒಬ್ಬ ರೂಢಿಸಿದ ಈ ಅಬ್ಭ್ಯಾಸ ೧೦೦ ಜನ ರೂಢಿಸಿಕೊಂಡಾರು ...
ಹನಿ ಹನಿ ಕೂಡಿದರೆ ಹಳ್ಳ ತಾನೆ... ಯಾಕೋ ಆಜಾದಿ ಬಚಾವ್ ಆಂದೋಲನದ ರಾಜೀವ್ ದೀಕ್ಷಿತ್ ತುಂಬಾ ನೆನಪಾಗುತ್ತಿದ್ದಾನೆ ...

15 comments:

Unknown said...

ಗೋರೆ
ಉತ್ತಮ ಲೇಖನ, "ಪಿಜ್ಜಾ ಹಟ್, ಪೀಚೆ ಹಟ್...." ಇಷ್ಟವಾಯಿತು. ನಿಮ್ಮ೦ತಹ ಯುವಕರು ಮನಸ್ಸು ಮಾಡಿದರೆ ಇದನ್ನು ಸಾಧಿಸಿ ತೋರಿಸಬಹುದು. Keep it up !!

PARAANJAPE K.N. said...

ಗೋರೆ
ನಿಮ್ಮ ಬರಹದೊಳಗಿನ ಆಶಯ ಇಷ್ಟವಾಯಿತು. ಆಜಾದಿ ಬಚಾವೋ ಆ೦ದೋಲನದ ರಾಜೀವ ದೀಕ್ಷಿತರ ಆಶಯ ನಿಮ್ಮ ಲೇಖನದೊಳಗಿದೆ. ಗುಡ್

ಶಿವಪ್ರಕಾಶ್ said...

nanna support ide.. :)

Unknown said...

ಗುರುರಾಜರವರೆ,
ಸಾಧಿಸಿದರೆ ಸಬಲ ನುಂಗಬಹುದು... ಎಷ್ಟೋ ವರ್ಷದಿಂದ ನಾನು ಸ್ವದೇಶಿ ವಸ್ತುಗಳನ್ನು ಆದಷ್ಟು ಉಪಯೋಗಿಸುತ್ತಿದ್ದೀನಿ... ಎಲ್ಲೆಲ್ಲ ಸಾಧ್ಯವಾಗುತ್ತೋ ಅಲ್ಲೆಲ್ಲಾ ವಿದೇಶಿ ವಸ್ತುಗಳಿಗೆ ಗುಡ್ ಬೈಹೇಳಿದ್ದೀನಿ... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ... ಪ್ರೋತ್ಸಾಹಿಸುತ್ತಿರಿ..

Unknown said...

ಪರಾಂಜಪೆ ಯವರೇ ,
ಹೌದು.... ಬೆಳಿಗ್ಗೆ ಒಬಾಮ ಹೇಳಿದ ಮಾತು ನ್ಯೂಸ್ ನಲ್ಲಿ ಕೇಳಿ , ನಮ್ಮಿಂದ ಏನೂ ಮಾಡೋಕೆ ಸಾಧ್ಯವಿಲ್ಲವೇ ಅಂತ ನನ್ನಲ್ಲಿ ನಾನು ಕೇಳಿಕೊಂಡೆ... ಆಗ ನೆನಪಾದದ್ದೇ ರಾಜೀವ್ ದೀಕ್ಷಿತ್ ... ಅದರಿಂದ ಪ್ರೇರೇಪಿತ ನಾದ ನಾನು ಈ ಲೇಖನ ಬರೆದೆ.. ರಾಜೀವ್ ದೀಕ್ಷಿತ್ ರ ಲೇಖನಗಳನ್ನು ಸುಮಾರು ವರ್ಷಗಳ ಹಿಂದೆ ಓದಿ ಆದಷ್ಟು ಸ್ವದೇಶಿ ನೀತಿ ಅನುಸರಿಸುತ್ತಿದ್ದೇನೆ.. ಮೆಚ್ಚಿದ್ದಕ್ಕೆ ಧನ್ಯವಾದಗಳು ...

Unknown said...

ಶಿವಪ್ರಕಾಶ್ ಸಾರ್,
ನಿಮ್ಮ ಬೆಂಬಲಕ್ಕೆ ಅಭಾರಿಯಾಗಿದ್ದೇನೆ... ಎಲ್ಲರೂ ಜೊತೆಗೂಡಿ ನಡೆಯೋಣ... ಮುಂದೆ ಒಂದು ದಿನ ನಮ್ಮ ದೇಶ ಸ್ವತಂತ್ರ ವಾದೀತು... :-)... ಧನ್ಯವಾದಗಳು

ಬಿಸಿಲ ಹನಿ said...

ರವಿಕಾಂತವರೆ,
ಸ್ವದೇಶಿ Vs ವಿದೇಶಿ ಲೇಖನ ತುಂಬಾ ಚನ್ನಾಗಿದೆ. ಆದರೆ ನಾನು ವಿದೇಶದಲ್ಲಿದ್ದುಕೊಂಡು ನಿಮ್ಮ ಈ ಲೇಖನದ ಬಗ್ಗೆ ಕಾಮೆಂಟು ಮಾಡುವ ನೈತಿಕ ಹಕ್ಕು ನನಗಿಲ್ಲವಾದ್ದರಿಂದ ನಾನು ಇದರ ಬಗ್ಗೆ ಏನನ್ನೂ ಹೇಳಲಾರೆ.

shivu.k said...

ರವಿಕಾಂತ್ ಗೋರೆ ಸರ್,

ನಿಮ್ಮ ಮುಂದಾಲೋಚನೆ ನನಗೆ ಇಷ್ಟವಾಯಿತು...ನನಗೆ ರಾಜೀವ್ ದೀಕ್ಷಿತ್ ಇಷ್ಟ....ಅವರ ಅನೇಕ ನಿಯಮಗಳನ್ನು ನಾನು ಪಾಲಿಸುತ್ತೇನೆ...ಈಗಲು ನಮ್ಮನೆಯಲ್ಲಿ ಸೋಪು ಫೇಸ್ಟು ಇತ್ಯಾದಿಗಳೆಲ್ಲಾ ಪಕ್ಕಾ ಇಂಡಿಯನ್...

ಫಿಜಾ..ಕೋಲ್ಗೇಟ್..ಪೆಪ್ಸಿ..ಕೋಕ್ ಇತ್ಯಾದಿಗಳೆಲ್ಲಾ ನಮ್ಮೆನೆಯ ಹತ್ತಿರ ಸುಳಿಯಲ್ಲ....

ಧನ್ಯವಾದಗಳು...

ಮನಸು said...

ರವಿ ಸರ್ ನೀವು ಹೇಳಿರೋದು ನೂರಕ್ಕೆ ನೂರು ಸತ್ಯ.......ನಮ್ಮ ವಸ್ತುಗಳಿಗೆ ಬೇಡಿಕೆ ಹುಟ್ಟಿಸಬೇಕು......ನಾವುಗಳೆಲ್ಲರೊ ಕೈಜೋಡಿಸಬೇಕು ಬರಿ ಬ್ಲಾಗ್ ನಲ್ಲಿ ಬರಹವಾಗದೇ ರೊಢಿಗತವಾದರೆ ನೀವು ಬರೆದಿದ್ದಕ್ಕೊ ಸಾರ್ಥಕ ಅಲ್ಲವೇ..? ಎಲ್ಲರೊ ಭಾರತೀಯರೆಲ್ಲರೊ...ಫಿಜಾ,ಕೊಕ್, ಹಾಳುಮೊಳುಗಳೆಲ್ಲವಕ್ಕೊ ಧಿಕ್ಕಾರವನ್ನು ಮಾಡಬೇಕು......
ನಾವಂತು ದೂರ ದೇಶದಲ್ಲಿದ್ದರು ಭಾರತದ ವಸ್ತುಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ......ಇದುವರೆಗು ನಾವು ಒಂದು ದಿನವೊ ಪಿಜ್ಜಾ ಹಟ್ ಗೆ ಹೋಗೆ ಇಲ್ಲಾ......ನನ್ನ ಮಗ ಕೂಡ ಬಯಸಿಲ್ಲ ನನಗೆ ಇದರ ಬಗ್ಗೆ ಹೆಮ್ಮೆ ಕೂಡ ....
ಬ್ಲಾಗ್ ಪ್ರೇಮಿಗಳೆಲ್ಲರಿಗೆ ಮತ್ತೊಮ್ಮೆ ಕೊಗಿ ಹೇಳಿ.....ಎಲ್ಲರೊ ತಮ್ಮ ತಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಿ..
ವಂದನೆಗಳು ಹೆಚ್ಚು ಹೇಳಿದೆನೆಂದೆನಿಸಿದರೆ ಕ್ಷಮೆಯಿರಲಿ.....

Unknown said...

ಉದಯ ಸಾರ್,
ನಾವು ಜೀವನಕ್ಕಾಗಿ ಎಲ್ಲಿದ್ದರೇನು? ದೇಶದ ಬಗ್ಗೆ ಒಂದು ಸ್ವಲ್ಪ ಕಾಳಜಿ ಇದ್ದರೆ ಅಷ್ಟೆ ಸಾಕು ಅಲ್ಲವೇ? ವಂದನೆಗಳು...

Unknown said...

shivu ಸಾರ್,
ನಿಜ , ವಿದೇಶಿ ವಸ್ತುಗಳಿಗೆ ನಾವು ಧಿಕ್ಕಾರ ಹಾಕಿದರೆ ಅಷ್ಟೆ ಸಾಕು... ಸತ್ಯಾಗ್ರಹ, ಬಂದ್, ಇದೆಲ್ಲ ಬೇಕಾಗಿಲ್ಲ... ಕೊನೆಗೊಂದು ದಿನ ಅವರೇ ಇಲ್ಲಿಂದ ಕಾಲು ಕೀಳುತ್ತಾರೆ... ವಂದನೆಗಳು..

Unknown said...

ಮನಸು ಮೇಡಂ,
ವಿದೆಶದಲ್ಲಿದ್ದೂ ಭಾರತೀಯ ವಸ್ತುಗಳನ್ನೇ ಆದಷ್ಟು ಖರೀದಿಸುತ್ತೀರಾ, ಪಿಜ್ಜಾ ತಿನ್ನೋದೇ ಇಲ್ಲ ಅಂದ್ರೆ ನಿಮ್ಮನ್ನು ಮೆಚ್ಚಬೇಕಾದ್ದೆ... ನೀವು ಹೇಳಿದ್ದು ನಿಜ... ಇದು ಕೇವಲ ಬ್ಲಾಗ್ ಗೆ ಸೀಮಿತ ವಾಗದೆ ಜೀವನದಲ್ಲೂ ರೂಢಿಸಿಕೊಳ್ಳಬೇಕು.. ನಾನು ಪ್ರಯತ್ನಿಸುತ್ತಿದ್ದೇನೆ... ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಗೋರೆಯವರೇ....

ಬರಹದ ಆಶಯ ತು೦ಬಾ ಇಷ್ಟವಾಯಿತು... ವಿದೇಶಿ ವಸ್ತುಗಳ ಬಗ್ಗೆ ಜಾಗೃತಿ ಮೂಡಬೇಕು....

ಪೆಪ್ಸೊಡೆ೦ಟ್ ಕೊಳ್ಳುತ್ತಿದ್ದ ನಾನು ಈಗ "ವೀಕೋ..." ಕೊಳ್ಳಲು ಪ್ರಾರ೦ಭಿಸಿದ್ದೇನೆ...

Ittigecement said...

ರವಿಕಾಂತ್....

ನಮ್ಮ ಸರಕಾರಕ್ಕೆ ಅಭಿಮಾನ ಇದ್ದರೆ
ಅವರ ವಸ್ತುಗಳನ್ನೂ ನಿಷೇಧಿಸಬೇಕು.
ವಾಜಪೇಯಿ ಇದ್ದಾಗ ಅಮೇರಿಕಾದವರು ನಮ್ಮ ದೇಶಕ್ಕೆ ದಿಗ್ಭಂದನ ಹಾಕಿರಲಿಲ್ಲವೇ...?
ಪರಿಣ್ಣಾಮ ಏನಾಯಿತು...?

ಮೊದಮೊದಲು ಸ್ವಲ್ಪ ಕಷ್ಟವಾಗ ಬಹುದು...
ಅನುಭವಿಸೋಣ...
ಈಗೇನು ಸುಖ ಇದೆಯಾ...?

ನಿಮ್ಮ ಲೇಖನ ಇಷ್ಟವಾಯಿತು.

Unknown said...

ಸುಧೇಶ್ / ಪ್ರಕಾಶ್ ಸಾರ್,
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..