Wednesday, March 18, 2009

ಆ ಹಾಡು ಕೇಳಿದ ನಂತರ....

ಅದೇನೋ ಆಸ್ಕರ್ ಬಂತು ಅಂತ "ಸ್ಲಮ್ ಡಾಗ್ ಮಿಲಿಯನರ್" ಚಲನ ಚಿತ್ರದ "ಜಯ ಹೋ" ಹಾಡು ಮೊನ್ನೆ ಕೇಳಿಸಿಕೊಳ್ಳುತ್ತಿದ್ದೆ... ಆ ಹಾಡು ಕೇಳಿದ ನಂತರ ಕೆಲವಾರು ಪ್ರಶ್ನೆ ಗಳು ನನ್ನನ್ನು ಕಾಡತೊಡಗಿದವು... ಯಾರನ್ನೂ ಕೇಳೋದು ಬೇಡ, ಆಸ್ಕರ್ ಪ್ರಶಸ್ತಿ ಬಂದ ಹಾಡು ಅಂತ ಸುಮ್ಮನಿದ್ದೆ... ಆದರೆ ಅದ್ಯಾಕೋ ಇವತ್ತು ಸುಮ್ಮನಿರಲಾಗುತ್ತಿಲ್ಲ...
ಅಲ್ಲ, ಆ ಹಾಡು ಆಸ್ಕರ್ ಪ್ರಶಸ್ತಿ ಬರೋವಷ್ಟು ಚೆನ್ನಾಗಿದೆಯೇ? ಬೇರೆ ಯಾರೂ ಅಥವಾ ಖುದ್ದು ಏ.ಆರ್.ರೆಹಮಾನರು ಇದಕ್ಕಿಂತ ಉತ್ತಮ ಹಾಡು ಕೊಟ್ಟಿಲ್ಲವೆ? ಅದ್ಯಾಕೋ ಇಂಥ ತಲೆಬುಡ ಇಲ್ಲದ ಪ್ರಶ್ನೆಗಳು ನನ್ನನ್ನು ಕಾಡತೊದಗಿವೆ...
ಅಳಿದೂರಿಗೆ ಉಳಿದವನೆ ಅರಸ ಅನ್ನೋ ಹಾಗೆ ಬೇರೆ ಯಾವ್ದೇ ಹಾಡು ಈ ವರ್ಷ ಸ್ಪರ್ಧೆಯಲ್ಲಿ ಇಲ್ಲದ್ದಕ್ಕೆ ಬಹುಮಾನ ಕೊಟ್ರೋ? ಅಥವ ಬೇರೆ ಏನಾದ್ರು ಕಾರಣ ವಿದ್ದಿರಬಹುದೇ?
ನಿಮಗೆ ಗೊತ್ತಿದ್ರೆ ಸ್ವಲ್ಪ ಹೇಳ್ತೀರಾ???

9 comments:

ಅಂತರ್ವಾಣಿ said...

ರವಿಕಾಂತ್ ಅವರೆ,
ನಾನು ಆ ಹಾಡನ್ನು ಕೇಳೇ ಇಲ್ಲ. ಅದೇಕೋ ನನ್ನ ಮನಸ್ಸು ಕೇಳೋದು ಬೇಡ ಅನ್ನುತ್ತಿತ್ತು. ಹಾಗಾಗಿ ಆ ಹಾಡಿನ ಬಗ್ಗೆ ನಾನು ಏನೂ ಹೇಳಲಾರೆ. ಆದರೂ ನಿಮಗೆ ಅನಿಸಿದ ಎಲ್ಲಾ ವಿಷಯಗಳು ನನಗೂ ಅನಿಸಿತು. ಇಡೀ ಪ್ರಪಂಚನೇ ಒಪ್ಪಿಕೊಂಡಿದೆ "ಅದಕ್ಕಿಂತ ಉತ್ತಮವಾದ ಹಾಡು ಈ ವರ್ಷದಲ್ಲಿ ಬಂದಿಲ್ಲ" ಅಂತ. ನಾವಿಬ್ಬರೂ ಏನು ಮಾಡೋಕೆ ಆಗುತ್ತೆ?

Archu said...

nandoo ade abhipraaya..

Unknown said...

ಅಂತರ್ವಾಣಿ ಯವರೇ ,
ಏನೇ ಆಗ್ಲಿ , ನಮ್ಮ ದೇಶಕ್ಕೂ ಆಸ್ಕರ್ ಬಂತು ಅಂತ ಮಾತ್ರ ಖುಶಿಪಡಬಹುದು... ಆ ಹಾಡು ಯಾಕೋ ಮತ್ತೆ ಕೇಳಬೇಕು ಅಂತ ನನ್ಗನ್ನಿಸ್ಥಿಲ್ಲ... ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು...

Unknown said...

ಅರ್ಚನಾ,
ಹುಹ್... ಬಹುಶ ಇದಕ್ಕಿಂತ ಉತ್ತಮ ಏ.ಆರ್.ರೆಹಮಾನರ ಹಾಡು ಕೇಳಿದ್ದಕ್ಕೆ ನಮಗೆ ಹೀಗನ್ನಿಸ್ತ ಇರಬಹುದೇನೋ... ಆಸ್ಕರ್ ಕೊಡೋರು ಮೊದಲ್ನೇ ಬಾರಿ ಕೇಳಿರಬೇಕು...:-)

shivu.k said...

ರವಿಕಾಂತ್ ಸರ್,

ನಾನು ಸಿನಿಮಾವನ್ನೂ ನೋಡಿದೆ. ಮತ್ತು ಹಾಡನ್ನು ನೋಡಿದೆ.ಕೇಳಿದೆ...ಖಂಡಿತ ಅದು ಆಸ್ಕರ್‌ಗೆ ಯೋಗ್ಯತೆ ಇರುವಂತಹದಲ್ಲ...

Ittigecement said...

ಗೋರೆಯವರೆ...

ಸಿನೇಮಾನೂ ನೋಡಿದೀನಿ..
ಹಾಡೂ ಕೇಳಿದೀನಿ...


"ಜಯ್ ಹೋ" ಹಾಡು ಮತ್ತೆ ಮತ್ತೆ ಗುನಗುವಂಥಹ ಹಾಡಲ್ಲಾ..

Unknown said...

ಶಿವೂ/ಸಿಮೆಂಟು ಮರಳಿನ ಮಧ್ಯೆ,

ನಾನೊಬ್ಬನೇ ಇಂಥ ಯೋಚನೆಗಳಿಗೆ ಬಿದ್ದಿದ್ದೇನೆ ಅಂದುಕೊಂಡಿದ್ದೆ... ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು...

Ramesh MLR said...

RAVIKANTH ITS NOT ONLY THE SONG, IF SEE THE VEDIO OF 'SLUM DOG' FOR THAT PERTICULAR SONG YOU WILL FEEL THAT 'JAI HO' HAVING SOME 'DAMM'

Unknown said...

Ramesh,
Is the award given for Song or for video??? I am thinking just about the song... Any way thanks for your comment.. Keep coming.. :-)