Monday, February 16, 2009

ಪ್ರೇಮಿಗಳ ದಿನ ಮತ್ತು ಶಿವರಾತ್ರಿ...

ಫೆಬ್ರವರಿ ೧೪... ಪ್ರೇಮಿಗಳ ದಿನ...
ಫೆಬ್ರವರಿ ೨೪... ಶಿವರಾತ್ರಿ...
ಅದ್ಯಾಕೋ ಈ ಎರಡೂ ದಿನಗಳು ನಂಗೆ ತುಂಬಾ ಕನ್ಫ್ಯೂಸ್.. ಅದ್ಯಾಕೋ ಗೊತ್ತಿಲ್ಲ ಈ ಎರಡೂ ದಿನಗಳು ಬಂತು ಅಂದ್ರೆ ನಂಗೆ ಕಳ್ಳರ ನೆನಪಾಗುತ್ತೆ...
ಫೆಬ್ರವರಿ ೨೪ ಶಿವರಾತ್ರಿ ಸೋಗಿನಲ್ಲಿ ಕದಿಯುವವರು..ಫೆಬ್ರವರಿ ೧೪ ಹೃದಯ ಕದಿಯುವವರು.. ಸಾಮ್ಯತೆಯನ್ತು ಇದೆ...
ಅದ್ಯಾಕೆ ಪ್ರೇಮಿಗಳ ದಿನ ಅಂತ ಆಚರಿಸ್ಥಾರೋ ನನಗಂತೂ ಗೊತ್ತಿಲ್ಲ್ಲ... ನಾನು ಹೃದಯ ಕಡಿಯೋಕೆ ಪ್ರಯತ್ನ ಪಟ್ಟದ್ದಂತೂ ಫೆಬ್ರವರಿ ೧೪ ಅಲ್ಲ... ಬಹುಶ ಜೂನ್ ೬ , ಮತ್ತೆ ಜುಲೈ ೨೫ ಮತ್ತೆ ಜನವರಿ೨೮.. ಹೀಗೆ ಶತ ಪ್ರಯತ್ನಗಳ ಭಗೀರಥ...:-)
ಮೊನ್ನೆಯ ಪ್ರೇಮಿಗಳ ದಿನವಂತೂ ಇಡೀ ದೇಶದಲ್ಲೇ ದಾಂಧಲೆ ಯೇಬ್ಬಿಸಿದ್ದಂತೂ ಸುಳ್ಳಲ್ಲ..
ಪ್ರೇಮಿಗಳ ದಿನ ಆಚರಿಸೋಕೆ ತುದಿಗಾಲಲ್ಲಿ ನಿಂತ ಯುವಕ ಯುವತಿಯರು... ಪ್ರೇಮಿಗಳ ದಿನ ಆಚರಿಸುವವರ ಕಾಲು ಮುರಿಯಲು ಸಜ್ಜಾಗಿ ನಿಂತ ಆಂಜನೆಯರು... ಹೀಗೆ ಪ್ರೇಮಿಗಳ ದಿನಕ್ಕಂತೂ ಪುಕ್ಕಟೆ ಜಾಹಿರಾತು...
ವರ್ಷಕ್ಕೆ ಒಂದು ಸಾರಿ ಸತ್ತವರಿಗೂ ತಿಥಿ ಅಂತ ಆಚರಿಸೋ ನಮ್ಮ ಸಂಸ್ಕ್ರಿತಿಲಿ vaರ್ಶಕ್ಕೊಮ್ಮೆ ಪ್ರೇಮಿಗಳ ದಿನ ಅಂತ ಆಚರಿಸೋದ್ರಲ್ಲಿ ತಪ್ಪೇನಿದೆ? ಹಾಗಂತ ಕೇಳಿದ್ದ ನನ್ನ ಸ್ನೇಹಿತ.. ಹೌದು... ವರ್ಷಕ್ಕೊಂದ್ಸಾರಿ ಪ್ರೇಮಿಗಳ ದಿನ ಆಚರಿಸೋದು ಸರೀನೆ.. ಈ ಕೆಲಸದ ಒತ್ತಡದಲ್ಲಿ ನಮ್ಮನು ಪ್ರೀತಿಸುವವರನ್ನು, ನಾವು ಪ್ರೀತಿಸುವವರನ್ನು ನೆನಪಿಸಿ ಕೊಳ್ಳೋದು ಒಂಥರಾ ಸರಿ ಅನ್ಸುತ್ತೆ... ಹೊಸ ಪ್ರೀತಿ ಹುಡುಕೋಕೆ, ಕಳೆದು ಹೋದ ಪ್ರೀತಿಗೆ ಪಿಂಡ ಇಟ್ಟು, ತರ್ಪಣ ಕೊಟ್ಟು ಹೊಸ ಪ್ರೀತಿನ ಹುಡುಕೋಕೆ ಅದೊಂದು ದಿನ ಇರ್ಲಿ... ಏನಂತಿರ?
ಆದ್ರೆ ನಮ್ಮ ಸಂಸ್ಕ್ರಿತಿಲಿ ಇದೆಲ್ಲ ಇಲ್ಲ ಅಂತ ಬೊಬ್ಬೆ ಹೊಡೆಯೋರು ಒಂದು ಕಡೆ... ನಮಗೆ ದಿನಾಲೂ ಪ್ರೇಮಿಗಳ ದಿನಾನೇ .... ನಮ್ಮ ಭಾರತೀಯ ಸಂಸ್ಕ್ರುತಿಲಿ ೩೬೫ ದಿನಾನೂ ಪ್ರೇಮಿಗಳ ದಿನ... ಹೀಗಂತ ವಾದಿಸೋರನ್ನ ಕಂಡಿದ್ದೆ... ಅವ್ರನ್ನ ನಾನೂ ಕೆಲವು ಪ್ರಶ್ನೆ ಕೇಳ್ಬೇಕು...
ಮಕ್ಕಳ ದಿನ ಅಂತ ಆಚರಿಸ್ತೇವೆ ಯಾಕೆ? ಆ ಒಂದು ದಿನ ಮಾತ್ರ ನಮ್ಮ ಮಕ್ಕಳ ಬಗ್ಗೆ ಯೋಚಿಸಿದರೆ ಸಾಕೆ? ಗಾಂಧೀ ಜಯಂತಿ ಯಾಕೆ...? ಅಂಥ ಮಹಾನ್ ರಾಷ್ಟ್ರ ಪಿತನನ್ನು ಒಂದು ದಿನ ನೆನಪಿಸ್ಕೊಂದ್ರೆ ಸಾಕೆ? ಸ್ವಾತಂತ್ರ ದಿನ... ಆ ಒಂದು ದಿನ ಮಾತ್ರ ನಾವು ಸ್ವಾತಂತ್ರರೆ? ಬಹುಶ ಉತ್ತರ ಸಿಗಲಿಕ್ಕಿಲ್ಲ... ನಾನು ಒಂದು ವೇಳೆ ಇಂಥ ಪ್ರಶ್ನೆ ಪಬ್ಲಿಕ್ ನಲ್ಲಿ ಕೇಳಿದ್ರೆ ನಂಗೂ ೧೦ ವರ್ಷ ಹಾಕ್ಕೋಳು
ವಷ್ಟು ಚಡ್ಡಿ ಬನಿಯನ್ಗಳು ಸಿಕ್ಕಿಯಾವು ...
ಪ್ರೇಮಿಗಳ ದಿನ ಅಂತ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಲ್ಲೋರಿಗೆನೂ ಕಮ್ಮಿಯಿಲ್ಲ... ಅದಕ್ಕೆ ಈ ದಿನ ಆಚರಿಸೋದಕ್ಕೆ ವಿರೋಧ ವ್ಯಕ್ತ ವಾಗಿರಬೇಕು... ಅದಕ್ಕೆ ಈ ಚಡ್ಡಿ ಪುರಾಣ ಮಾಡೋದಕ್ಕಿಂತ ಅದೊಂದು ದಿನ ಬಾರ್ ಗಳಿಗೆ, ಪಬ್ ಗಳಿಗೆ, ಡಿಸ್ಕೋ ಥೆಕ್ ಗಳಿಗೆ ಬೀಗ ಜಡಿದದ್ದೇ ಆದ್ರೆ ಅಂಥವರೆಲ್ಲರನ್ನೂ ಮೆಚ್ಚಬಹುದಿತ್ತು.. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಕುತಂತ್ರಿ ರಾಜಕಾರಣಿ ಗಳ ಆಟಕ್ಕೆ ಬಲಿಪಶು ವಾದದ್ದಂತೂ ಅಬ್ಬ ಸಾಮಾನ್ಯ ಪ್ರೇಮಿ... ಪಾಪ , ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತ ಪಡಿಸಿದವನ ಮನೆಯಂತೂ ಚಡ್ಡಿಗಲಿಂದಲೇ ತುಂಬಿ ಹೋದ ಬಗ್ಗೆ ಓದಿ ಖೆದವೆನ್ನಿಸಿತು...(ಚಡ್ಡಿ ಕಳಸಿದೋರು ಅದನ್ನ ವಾಪಾಸ್ ಪಡಿಯೋಕೆ ಶಿವರಾತ್ರಿ ಯನ್ನ ಆರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅಂತ ದೇವರಾಣೆಗೂ ನಂಗೊತ್ತಿಲ್ಲ!!!)
ನಾನಂತೂ ಇನ್ನು ಮುಂದೆ ಅಕ್ಟೋಬರ್ ೨೩ ಪ್ರೇಮಿಗಳ ದಿನ , ಫೆಬ್ರವರಿ ೧೪ ಚಡ್ಡಿ ದಿನ ಅಂತ ಆಚರಿಸೋಕೆ ನಿರ್ಧಾರ ಮಾಡಿದ್ದೇನೆ..
ಇಬ್ಬರ ಚಡ್ಡಿ ಜಗಳ , ಬಟ್ಟೆ ಅಂಗಡಿಯವನಿಗೆ ಲಾಭ, ಪ್ರೇಮಿಗೆ ಪ್ರಾಣ ಸಂಕಟ....
ಫೆಬ್ರವರಿ ೧೪ಕ್ಕೆ ಆರಂಭ ಗೊಂಡ ಪ್ರೀತಿ ,ಫೆಬ್ರವರಿ ೨೪ ಕ್ಕೆ ಯಾರೂ ಕದ್ದುಕೊಂಡು ಹೋಗದಿರಲಿ ...
ಪ್ರೀತಿ ಅಮರವಾಗಿರಲಿ...

5 comments:

shivu said...

ಸರ್,

ನೀವು ನನ್ನ ಬ್ಲಾಗಿಗೆ ಬೇಟಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.....

ಶಿವರಾತ್ರಿ,ಪ್ರೇಮಿಗಳದಿನದ ಲೇಖನ ಚೆನ್ನಾಗಿದೆ....ನನ್ನ ಮತ್ತೊಂದು ಬ್ಲಾಗಿಗೆ ಬೇಟಿಕೊಡಿ....ಅದು ನನ್ನ ಮುಖ್ಯ ಬ್ಲಾಗ್. ಅದರಲ್ಲಿ ಫೋಟೊಗ್ರಫಿಗೆ ಸಂಭಂದಿಸಿದ್ದು, ಇತರೆ ಲೇಖನಗಳಿವೆ ಒಮ್ಮೆ ಬೇಟಿಕೊಡಿ..ನಿಮಗಿಷ್ಟವಾಗಬಹುದು..

Archu said...

too good ravi..
nice to see u blogging again :)

Greeshma said...

ಮಜ್ವಾಗಿ ಬರ್ದಿದೀರ!:)

ಶಂಕರ ಪ್ರಸಾದ said...

ಚೆನ್ನಾಗಿದೆ...
ಶಿವರಾತ್ರಿ ಹಾಗು ಪ್ರೇಮಿಗಳ ದಿನಾಂಕವನ್ನು ತಾಳೆ ಹಾಕಿ ಬರೆದಿದ್ದೀರಲ್ಲಾ,
ಅದೇ ಪ್ರೇಮಿಗಳ ದಿನ (Feb 14) ಹಾಗು ಮಕ್ಕಳ ದಿನಾಚರಣೆ (Nov 14) ಇದಕ್ಕೆ ತಾಳೆ ಹಾಕಿ ಬರೆಯಿರಿ.
ಇನ್ನೂ ಒಳ್ಳೆ ಹಿಡಿತ ಸಿಗುತ್ತೆ, ಯಾಕೆಂದ್ರೆ, ಪ್ರೇಮಿಗಳ ದಿನವಾಗಿ ಸರ್ಯಾಗಿ ಒಂಭತ್ತು ತಿಂಗಳ ನಂತರ ಮಕ್ಕಳ ದಿನಾಚರಣೆ ಇರೋದು !!!

ಕಟ್ಟೆ ಶಂಕ್ರ

gore said...

ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು