Monday, February 16, 2009

ತಲೆಹರಟೆ

ತಲೆಹರಟೆ ಜೋಕ್ ಗಳನ್ನ ಕೇಳಿದ್ದೀರಾ? ಇಲ್ಲೊಂದಿದೆ ಓದಿ..
ನನ್ನ ತಂಗಿ ಮಗಳು , ಇನ್ನೂ ೭ ವರ್ಷ ದವಳು... ತುಂಬಾ ತಲೆ ಹರಟೆ ... ಒಂದಿನ ನನ್ನ ಕೇಳಿದ್ಲು...
"ಒಬ್ಬ ನಡ್ಕೊಂಡು ಹೋಗ್ತಾ ಇರ್ಬೇಕಾದ್ರೆ , ಅವ್ನ ತಲೆ ನೇರಕ್ಕೆ ಬಂದ ಹಕ್ಕಿ ಹಿಕ್ಕೆ ಹಾಕ್ತು.. ಆದ್ರೆ ಅದು ಹಾಕಿದ ಹಿಕ್ಕೆ ಕೆಳಕ್ಕೆ ಬೀಳಲೇ ಇಲ್ಲ ಯಾಕೆ?"...
ಉತ್ತರಕ್ಕಾಗಿ ಯೋಚಿಸದೆ... ತಡಕಾಡಿದೆ ... ಕೊನೆಗೂ ಸೋತು ನೀನೆ ಹೇಳು ಅಂದೇ..
"ಉತ್ತರ ತುಂಬಾ ಸುಲಭ... ಯಾಕಂದ್ರೆ ಹಕ್ಕಿ ಚಡ್ಡಿ ಹಾಕ್ಕೊಂದ್ದಿತ್ತು.. " ಅನ್ನೋದೇ...
ನನಗಂತೂ ನಕ್ಕು ಸಾಕಾಗಿತ್ತು...
ಆವತ್ತು ಸಂಜೆ ನಾವೆಲ್ರು ವಾಕಿಂಗ್ ಹೋಗ್ತಾ ಇದ್ವಿ... ನನ್ನ ತಲೆನೆರಕ್ಕೆ ಬಂದ ಹಕ್ಕಿ ಹಿಕೆ ಹಾಕೇ ಬಿಡ್ತು... ನನ್ನ ತಲೆಮೇಲೆ ಎಲ್ಲ ಹಕ್ಕಿ ಹಿಕ್ಕೆ... ತಂಗಿಯ ಮಗಳು ಮೆಲ್ಲನೆ ನಗೋಕೆ ಶುರು... ತಕ್ಷಣ ನಂಗೆ ಅವಳೇ ಬೆಳಿಗ್ಗೆ ಹೇಳಿದ್ದ ಜೋಕ್ ನೆನಪಾಗಿ ಜೋರಾಗಿ "ಈ ಹಕ್ಕಿಗೆನು ಚಡ್ಡಿ ಹಾಕೋಕೆ ಆಗಲ್ವೇ" ಎಂದೆ... ಎಲ್ರೂ ನಗ್ತಾ ಇದ್ರೆ, ದೊಡ್ಡ ಜೋಕ್ ಹೇಳಿದೆ ಅಂತ ನಾನೂ ಬೀಗ್ತಾ ಇದ್ರೆ.. ಅಷ್ಟರಲ್ಲೇ ನನ್ನ ತಂಗಿ ಮಗಳು ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲದೆ ಎಲ್ರೂ ಮೂಕರಾಗಿ ನಿಂತು ಬಿಟ್ಟೆವು... ಮುಂದಿನ ಅರ್ಧ ಗಂಟೆಗೂ ಮಿಕ್ಕಿ ನಾವೆಲ್ಲ ನಕ್ಕಿದ್ದೋ ನಕ್ಕಿದ್ದು... ಅವ್ಳು ಕೇಳಿದ ಪ್ರಶ್ನೆ ಏನು ಗೊತ್ತಾ..?
"ಮಾಮ, ನೀನು ಹಿಕ್ಕೆ ಹಾಕುವಾಗ ಚಡ್ಡಿ ಹಾಕ್ತಿಯೇನು?" !!!!!!!!!

3 comments:

shivu.k said...

ಗೋರೆ ಸರ್,

ಮೊದಲ್ ಮತ್ತು ಎರಡನೆ ಜೋಕ್ ಕೇಳಿ ಸಿಕ್ಕಾಪಟ್ಟೇ ನಗು ಬಂತು.....ಇನ್ನಷ್ಟು ಬರೆಯಿರಿ....

ಆಹಾಂ! ನನ್ನ ಬ್ಲಾಗಿನಲ್ಲಿ ಹಳೆ ಮನೆ ನೆನಪುಗಳು...ಹೊಸ ಮನೆಯ ಕನಸುಗಳು...ಹೊಸ ಲೇಖನವಿದೆ....ನೋಡಲು ಬನ್ನಿ ಸರ್.

ಸುಧೇಶ್ ಶೆಟ್ಟಿ said...

ha ha ha....
nimma thangiya magala mughdha maathugalannu keli nagu ukki banthu.... sakaththaagide:):):)

Unknown said...

ಶಿವು ಮತ್ತು ಸುಧೇಶ್,
Laughter is best medicine ಅಂತಾರೆ... ಹೀಗೆ ನಗುತ್ತಿರಿ...:-) ... ಧನ್ಯವಾದಗಳು..