Friday, January 6, 2017

ಗಂಜಿ ಗಿರಾಕಿಗಳು !!

ಮೊನ್ನೆ ಕೆಲಸವಿಲ್ಲದೇ ಇದ್ದಾಗ ಸುಮ್ಮನೆ ಗೀಚಿದ್ದು ...



ಅತ್ಲಾಗೆ ಒಬ್ಬ ಕವಿ, ಇತ್ಲಾಗೆ ಒಬ್ಬ ಸಾಹಿತಿ
ಕುಳಿತು ಹರಟೆಯ ಹೊಡೆಯುತಿರಲು
ಬುದ್ಧಿಜೀವಿಗಳ ಜೀವನವೇ ಪಾವನವು
ಬದುಕಲು ದಾರಿ ನೂರೊಂದು !!


ಬರೆದದ್ದು ಬರೆದಾಯ್ತು , ಒದರಿದ್ದು ಮುಗಿದೋಯ್ತು
ಕೇಳಲು ಜನ ಮಾತ್ರ ಒಂದೊಂದು
ಜೀವನದಿ ಸಾಧಿಸಲು , ಕಷ್ಟಗಳ ಮರಸಾಲು
ಬಿಟ್ಟು ಬೇರೆಯದೇ ದಾರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ದಾರಿಯಲಿ ಸಿಕ್ಕವರ ತಲೆಯನಿಷ್ಠು ಕೊರೆದು
ಅವರೆಲ್ಲ ಉಗಿಯಲು , ಬಾಯಿಯಲ್ಲಿ ತಾಂಬೂಲವನು ತಿಂದು
ಬರೆಯಲು ಏನಿಲ್ಲ , ಹೇಳಲೂ ಮತಿಯಿಲ್ಲ
ಬಿಟ್ಟು ಎಲ್ಲವನು ಅದೇ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಸಾಧಿಸಿದರೆ  ಸಬಲ ನುಂಗಬಹುದು ಅನ್ನುವುದನು ನೆನೆಸಿ
ಅರ್ಥ ತಿಳಿಯದೆ ಚಾಚಿದರು ಹಸ್ತವನು ಪುಡಿಗಾಸಿಗಾಗಿ
ಬಿರುದು ಬಾವಲಿಗಳು ದಾರಿಯಲಿ ಸಿಗುತಿರಲು
ಮತ್ತಿಬ್ಬರು ಸೇರಿದರು ಇದೆ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಇತಿಹಾಸವನು ತಿರುಚಿ , ಮೈಯನ್ನೆಲ್ಲವ ಪರಚಿ
ಅರುಹಿದರು ನಮ್ಮ ಮಾತು ಸ್ವಲ್ಪ ಕೇಳಿರೆಂದು
ಬರುವಾಗ ಬೆತ್ತಲೆ , ಹೋಗುವಾಗ ಬೆತ್ತಲೆ , ನಡುವೆ ಎಲ್ಲವೂ ಕತ್ತಲೆ
ಹುಡುಕಬಹುದಿತ್ತು ಬೆಳಕು ಅಲ್ಲೊಂದು , ಆದರೂ ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!



1 comment:

sunaath said...

ಅಹಾ! ಎಷ್ಟು ಚೆನ್ನಾಗಿ ಬುದ್ಧಿಜೀವಿಗಳನ್ನು ವಿಡಂಬಿಸಿದ್ದೀರಿ! ಸರಕಾರವೇ ಇವರಿಗಾಗಿ ಗಂಜಿಕೇಂದ್ರವನ್ನು ತೆರೆುಕೊಂಡು ನಿಂತಿದೆಯಲ್ಲವೆ?