೧ .
ಭೀಕರ ಸುನಾಮಿಯ ನಂತರ ಶಾಂತವಾಗಿದ್ದ ಸಮುದ್ರ ತೀರ ದಲ್ಲಿ ನಿಂತಿದ್ದ ಆಕೆಯ ಕಾಲುಗಳಿಗೆ ಬಿದ್ದು ಬಿದ್ದು ಸಮುದ್ರ ಕ್ಷಮೆ ಕೇಳುತ್ತಲೇ ಇತ್ತು !!
----------------------------------------------------------------------------------------------------------------------
೨..
ಸುಮಾರು ೧೦ ವರ್ಷಗಳ ನಂತರ ಅವರ ಭೇಟಿಯಾಗಿತ್ತು !! ಆತನಿಗೆ ನಿಶ್ಚಿತಾರ್ಥ ವಾಗಿತ್ತು , ಆಕೆಗೆ ಮದುವೆಯಾಗಿತ್ತು !!!
----------------------------------------------------------------------------------------------------------------------
೩
ಆತ : "ನಿನ್ನನ್ನು ನಾನು ಪ್ರೀತಿಸುತ್ತೇನೆ ಯಾಕೆಂದರೆ ನೀನು ನನಗೆ ಬೇಕು " ಆಕೆ ಒಲ್ಲೆ ಎಂದಳು ..
ಆತ : "ನೀನು ನನಗೆ ಬೇಕು ಯಾಕೆಂದರೆ ನಿನ್ನನ್ನು ನಾನು ಪ್ರೀತಿಸುತ್ತೇನೆ " ಆಕೆ ಮದುವೆ ಆದಳು !!
-----------------------------------------------------------------------------------------------------------------------
೪..
ಜೇಬಿನಲ್ಲಿ ನಾಣ್ಯಗಳಿದ್ದವರು ಮಳೆಯಲ್ಲಿ ನೆನೆದು , ಆಟವಾಡಿ ಖುಷಿಪಟ್ಟರು ..
ಜೇಬಿನಲ್ಲಿ ನೋಟುಗಳಿದ್ದವರು ಸೂರಿಗಾಗಿ ಹುಡುಕಾಡಿದರು !!
------------------------------------------------------------------------------------------------------------------------
೫..
ಮನುಷ್ಯ ಮತ್ತು ದೇವರು ಒಂದು ಬಾರಿ ಭೇಟಿಯಾದರು .. ಇಬ್ಬರೂ ಒಬ್ಬರನ್ನೊಬ್ಬರು ತೋರಿಸಿ ಹೇಳಿದರು "ನನ್ನ ಸೃಷ್ಟಿಕರ್ತ "!!!!
-----------------------------------------------------------------------------------------------------------------------
ಗೋರೆ ಉವಾಚ :
ಮನುಷ್ಯ ಸತ್ತ ಮೇಲೆ ದೇವರು ಕೇಳುವ ಮೊದಲ ಪ್ರಶ್ನೆ "ಸ್ವರ್ಗ ಹೇಗಿತ್ತು ?" !!
2 comments:
Sooper.....! keep writing....
ಬ್ಲಾ-ಗೋರೆ ಓದಲು ದೊರೆತರೆ ಯಾವ ಸ್ಥಳವೂ ಸ್ವರ್ಗಸಮಾನವೇ!
Post a Comment