Friday, October 29, 2010

ಸುಮ್ನೆ ತಮಾಷೆಗೆ - ೪ (ದೀಪಾವಳಿ ವಿಶೇಷ!)

ಪಟಾಕಿ

ದಿನವೂ ಪ್ರೀತಿಸುವ ನನಗೆ
ಪ್ರೇಮಿಗಳ ದಿನ ಬೇಕಾಗಿಲ್ಲ!
ಬಾಯಿ ಬಿಟ್ಟರೆ ಪಟಾಕಿ ಬಿಡುವ ನನಗೆ
ದೀಪಾವಳಿಯೂ ಬೇಕಾಗಿಲ್ಲಾ!!!

-----------------------------------------------------------------------------------------------------------------------------------
ದೀಪಾ-ವಳಿ
ನಮ್ಮ ಓಣಿಗೆ ಹೊಸದಾಗಿ ಬಂದಿದ್ದ
ದೀಪಾಳ ಹಿಂದೆ ಓಣಿ ಹುಡುಗರ ಹಾವಳಿ..
ಅದಕ್ಕೆ ನಮ್ಮ ಕೇರಿಯಲ್ಲಿ ದಿನವೂ
ದೀಪಾ-(ಹಾ)-ವಳಿ!!!

---------------------------------------------------------------------------------------------------------------------------------
ಯಮ ದೀಪ !
ದೀಪಾವಳಿಯ ಮುನ್ನಾ ದಿನ
ಯಮ ಧರ್ಮರಾಯನಿಗೆ
ಯಮದೀಪವಿಟ್ಟೆ!
ಎಣ್ಣೆ ಮುಗಿದು ಯಮನಿಗೆ ದಾರಿ
ಕಾಣದಾದಾಗ, ಮುಂದೆ ಹೋಗು ಅಂತ
ಮೊಂಬತ್ತಿ ಕೊಟ್ಟೆ!!!!
--------------------------------------------------------------------------------------------------------------------------------
(ದುರಾ)ದೃಷ್ಟ!!

ಜಿಪುಣಾಗ್ರೆಸರ ಆತ
ದೀಪಾವಳಿಗೂ  ಪಟಾಕಿ ತರಲಿಲ್ಲ !
ಇದನ್ನು ಕಂಡ ಆತನ ಪ್ರೇಯಸಿ
ತೆಗೋ ಎಂದು ಆತನತ್ತ ಪಟಾಕಿ ಎಸೆದಳು..!!
ಆತನ ದುರಾದೃಷ್ಟಕ್ಕೆ
ಅದಕ್ಕೆ ಬೆಂಕಿಯೂ ಹಚ್ಚಿದ್ದಳು!!!
--------------------------------------------------------------------------------------------------------------------------------
ಗೋರೆ ಉವಾಚ:
ಗಂಡ ಹೆಂಡಿರ ಜಗಳದ ಕೊನೆಗೆ ಬರುವ ನಿರ್ಧಾರಗಳಲ್ಲಿ  ಮೂರು ವಿಧಗಳಿರುತ್ತವೆ.. ಒಂದು ಗಂಡನ ನಿರ್ಧಾರ, ಎರಡನೆದ್ದು ಹೆಂಡತಿಯ ನಿರ್ಧಾರ, ಮತ್ತು ಮೂರನೆಯದು ಸರಿಯಾದ ನಿರ್ಧಾರ..!!!

13 comments:

ಮನದಾಳದಿಂದ............ said...

ಗೋರೆ ಸರ್,
ಚುಟುಕುಗಳು ದೀಪಾವಳಿಯ ಪಟಾಕಿಯಂತೆ ಸದ್ದು ಮಾಡುತ್ತಿವೆ.....
ಸೂಪರ್

balasubramanya said...

ದೀಪಾವಳಿಯ ಚುಟುಕಗಳು ಜೋರಾಗೆ ಸಿಡಿದಿವೆ !!! ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಅನಂತ್ ರಾಜ್ said...

ಚಳಿಗಾಲದ ದಿನಗಳಲ್ಲೂ ಪಟಾಕಿಗಳು ಸಿಡಿಯುತ್ತಿವೆ.
ಧನ್ಯವಾದಗಳು

ಅನ೦ತ್

ಭಾವನಾ ಲಹರಿ said...

ಸಖತ್ತಾಗಿವೆ..........!
ನಿಮಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....

sunaath said...

ಗೋರೆಯವರೆ,
ದೀಪಾವಳಿಗೆ ವಿಶೇಷವಾದ ಪಟಾಕಿಯನ್ನೇ ಸಿಡಿಸಿರುವಿರಿ.
ದೀಪಾವಳಿಯ ಶುಭಾಶಯಗಳು.

Dr.D.T.Krishna Murthy. said...

ಗೋರೆ ಸರ್;ನಿಮ್ಮ ದೀಪಾವಳಿಯ ವಿಶೇಷ ಪಟಾಕಿಗಳು ಸಂತಸ ತಂದಿವೆ.ನನ್ನ ಬ್ಲಾಗು ಶತಕ ಪೂರೈಸಿದೆ.ಶತಕದ ಸಂಭ್ರಮದಲ್ಲಿ ಪಾಲ್ಗೊಳ್ಳಲು ನನ್ನ ಬ್ಲಾಗಿಗೆ ಸ್ವಾಗತ.ನಮಸ್ಕಾರ.

umesh desai said...

ಗೋರೆಸಾಬ್ ದೀಪಾವಳಿಯ ಮೊದಲೇ ನಿಮ್ಮ ಚುಟುಕು ಸಪ್ಪಳ ಮಾಡಿವೆಯಲ್ಲ.
ಅಭಿನಂದನೆಗಳು

PARAANJAPE K.N. said...

ನಿಮ್ಮ ಬ್ಲಾಗ್ ಪಟಾಕಿ ಬಹಳ ದಿನಗಳ ನ೦ತರ ಸಿಡಿಯುತ್ತಿದೆ, ಚೆನ್ನಾಗಿದೆ. ಇನ್ನು ನಿರ೦ತರ ಸಿಡಿಯುತ್ತಿರಲಿ ಎ೦ದು ಬಯಸುವೆ.

Shashi jois said...

ನಿಮಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಗೋರೆ ಸರ್ ದೀಪಾವಳಿಯ ಪಟಾಕಿ ಜೋರಾಗಿ ಸಿಡಿಸಿದಿರಿ..ಚೆನ್ನಾಗಿದೆ.

shivu.k said...

ರವಿಕಾಂತ್ ಸರ್,

ನಿಮ್ಮ ತಮಾಷೆಯ ದೀಪಾವಳಿ ತುಂಬಾ ಚೆನ್ನಾಗಿದೆ..
ಇದು ನಿಜಕ್ಕೂ ದೀಪಾ-(ಹಾ)-ವಳಿ!!!

Nisha said...

ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Unknown said...

ಎಲ್ಲರಿಗೂ ಧನ್ಯವಾದಗಳು... ತಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

Greeshma said...

ಎರಡನೇ ಚುಟುಕು ಚೆನಾಗಿದೆ :)
ದೀಪಾವಳಿ ಮತ್ತು ರಾಜ್ಯೋತ್ಸವದ ಶುಭಾಶಯಗಳು