Friday, September 3, 2010

ಸುಮ್ನೆ ತಮಾಷೆಗೆ-೩ !!!

ನ್ಯಾಯ

ನ್ಯಾಯಕ್ಕೆ ಕಣ್ಣಿಲ್ಲ
ಅಂತ ಗೊತ್ತಿದ್ದ  ನಮ್ಮ ಮಂತ್ರಿವರ್ಯರು ,
ಮೀಸಲಾತಿಯಲ್ಲಿ
ಕುರುಡನನ್ನು
ಲೋಕಾಯುಕ್ತರನ್ನಾಗಿಸಿದರು !!!

ಕವಿ

ರವಿ ಕಾಣದ್ದನ್ನು ಕವಿ ಕಂಡ
ಅನ್ನೋ ಮಾತು ಕೇಳಿ
ರವಿ ಅನ್ನೋ ನಾನು ಕವಿಯಾಗ ಹೊರಟೆ..
ಮುಂದೆಲ್ಲಾ ಕತ್ತಲು
ಏನೂ ಕಾಣಿಸಲೇ ಇಲ್ಲ..!!

ಬೇವು - ಬೆಲ್ಲ
ನಾನ್ಯಾವತ್ತು ಸಿಹಿಯಾಗಿರಬೇಕು ಅಂತ
ಸಿಕ್ಕಾಪಟ್ಟೆ ಸಿಹಿ ತಿಂದೆ..
ದೇಹ ಸಿಹಿಯಾಯಿತು
ಮನಸು ಕಹಿಯಾಯಿತು!!!

ಗೋರೆ ಉವಾಚ :
ಜೀವನ ಅಂದ್ರೆ ಇಷ್ಟೇ.. ಮಕ್ಕಳಿಗೆ ಮೊದಲ ೨-೩ ವರ್ಷ ಹೇಗೆ ನಡೆಯೋದು, ಹೇಗೆ ಮಾತಾಡೋದು ಅಂತ ಕಲಿಸುತ್ತಾ  ಕಳೆಯುತ್ತೇವೆ... ಮುಂದಿನ ೧೬ ವರ್ಷ "ಸುಮ್ನೆ ಕೂತ್ಕೋ", "ಮಾತಾಡಬೇಡ" ಅನ್ನುತ್ತಾ ಕಳೆಯುತ್ತೇವೆ!!!

16 comments:

PARAANJAPE K.N. said...

ನಿಮ್ಮ ಬ್ಲಾಗಿನ ಹೊಸ ಸ್ವರೂಪ, ಹೊಸ ನಾಮಧೇಯ (ಬ್ಲಾ-ಗೋರೆ) ಚೆನ್ನಾಗಿದೆ. "ಗೋರೆ ಉವಾಚ" ಕೂಡ ತಾಜಾ ತಾಜಾ

Dr.D.T.Krishna Murthy. said...

ರವಿಕಾಂತ್ ಗೋರೆ;ನಿಮ್ಮ ಸುಮ್ನೆ ತಮಾಷೆಗೆ ಮತ್ತು ಗೋರೆ ಉವಾಚ ಎರಡೂ ತುಂಬಾ ಚೆನ್ನಾಗಿವೆ.ಧನ್ಯವಾದಗಳು.

ದಿನಕರ ಮೊಗೇರ said...

ಗೋರೆ ಸಾಹೇಬರೆ..
ಅಪರೂಪಕ್ಕೆ ಬಂದು ಚುಟುಕುಗಳನ್ನು ಹೋಗುತ್ತಾ ಇದೀರಿ...... ತುಂಬಾ ಚೆನ್ನಾಗಿದೆ..... "ನ್ಯಾಯ"....." ಕವಿ "... ಚೆನ್ನಾಗಿದೆ...... ಎಂದಿನಂತೆ ನಿಮ್ಮ ಉವಾಚ ಸುಪ್ಪರ್...

Narayan Bhat said...

ಚುಟುಕ ಮತ್ತೆ ಗೋರೆ ಉವಾಚ ಎಲ್ಲವೂ ಚೆನ್ನಾಗಿದೆ.

balasubramanya said...

ರವಿಕಾಂತ್ ಗೋರೆ ಸರ್ ನ್ಯಾಯ,ಕವಿ, ನನಗೆ ಹಿಡಿಸಿತು , ನಿಮ್ಮ ಉವಾಚ ಚೆನ್ನಾಗಿದೆ.ಥ್ಯಾಂಕ್ಸ್.

sunaath said...

ನಿಮ್ಮ ಕವನಗಳ ಹಾಗು ಉವಾಚದ ಪ್ರತಿಯೊಂದು ಸಾಲನ್ನು ತುಂಬ
enjoy ಮಾಡಿದೆ. Thanks.

shivu.k said...

ಸರ್,

ಸುಮ್ನೆ ತಮಾಷೆಗೆ ಅಂದರೂ ಎಷ್ಟು ಅರ್ಥಪೂರ್ಣವಾಗಿವೆ ಅಲ್ವಾ..ಥ್ಯಾಂಕ್ಸ್. ಸರ್..

umesh desai said...

ಗೋರೆ ಬಾಸ್ ಸಿಕ್ಸರ್ ಹೊಡದೀರಿ...

ಆನಂದ said...

ಚೆನ್ನಾಗಿವೆ ಸರ್ :)

ಸುಧೇಶ್ ಶೆಟ್ಟಿ said...

experiment maadtha ideera bloginalli :) chennaagide ;)

Snow White said...

tumba chennagide sir :) gore uwacha ista aitu :)

V.R.BHAT said...

ಭಟ್ ಉವಾಚ : ಬ್ಲಾ-ಗೋರೆ ಚೆನ್ನಾಗಿದೆಮ್
ಸುಮ್ನೇ ತಮಾಷೆಗೆ ಕೂಡಂ
ಗೋರೆ ಉವಾಚ ಸಹಿತಂ
ಹೋಲ್ ಬ್ಲಾಗಿಗೊಂದ್ ನಮಸ್ಕಾರಂ ||

Ittigecement said...

ಗೋರೆಯವರೆ..

ಚುಟುಕುಗಳು ಹೊಸ ಥರ ಇದೆ...
ನಿಮ್ಮ ಬ್ಲಾಗಿನ ಥರಹ...

ಗೋರೆ ಉವಾಚ ಮಸ್ತ್ ಇದೆ...

Subrahmanya said...

ಬ್ಲಾಗೊರೆ..ಬ್ಲಾಗೋರೆ...ಹೀಗೆ ಬ್ಲಾಗುತ್ತಾ ಇರಿ. ಉವಾಚವೂ ಸೇರಿದಂತೆ ..ಸುಮ್ಮನೆ ತಮಾಷೆಗೆ ಹೇಳಿದ್ದು ಚೆನ್ನಾಗಿತ್ತು.

ಜಲನಯನ said...

ಭಲಾ ಭಲಾ ಗೋರೆ ಅನ್ನದೇ ವಿಧಿಯಿಲ್ಲ...ಮುಂದುವರೆಯಲಿ...

ಜಲನಯನ said...

ಭಲಾ ಭಲಾ ಗೋರೆ ಅನ್ನದೇ ವಿಧಿಯಿಲ್ಲ...ಮುಂದುವರೆಯಲಿ...