Monday, June 14, 2010

ವಿಚಿತ್ರ ಪ್ರಾಣಿ!!!

ದಿಸ್ಕಾವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ geography  ಇಂತಹ ಚಾನೆಲ್ ನೋಡೋದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಇದರಲ್ಲಿ ತೋರಿಸೋ ಚಿತ್ರ ವಿಚಿತ್ರ ಪ್ರಾಣಿಗಳನ್ನ ನೋಡೋದು ಅಂದ್ರೆ ತುಂಬಾ ಇಷ್ಟ.. ಅವುಗಳ ಜೀವನ ಶೈಲಿ, ಬದುಕೋ ರೀತಿ, ವಿಚಿತ್ರ ಎನ್ನಿಸುವ ರೂಪ, ಪ್ರಕೃತಿಗೆ ಅವು ಹೊಂದುಕೊಳ್ಳುವ ಬಗೆಗಳು... ಇವನ್ನೆಲ್ಲಾ ಮೊನ್ನೆ ನೋಡುತ್ತಾ ಕೂತಿದ್ದೆ... ಅದ್ಯಾವುದೋ ಪ್ರಾಣಿಯೊಂದನ್ನು ನೋಡುತ್ತಿದ್ದ ನಾನು "ಒಹ್, ಈ ಪ್ರಾಣಿ ವಿಚಿತ್ರವಾಗಿದೆ " ಅಂತ ಉದ್ಗರಿಸಿದೆ...
"ಏನು?? ವಿಚಿತ್ರನಾ?? ಏನ್ ವಿಚಿತ್ರ? ಬಹುಶ ಭೂಮಿಯ ಮೇಲೆ ಅದರಲ್ಲೂ ಈ ಭಾರತ ದೇಶದಲ್ಲಿರೋ  ಮನುಷ್ಯ ನಷ್ಟು ವಿಚಿತ್ರ ಪ್ರಾಣಿ ಇನ್ನೊಂದಿಲ್ಲ" ಹಾಗಂತ ಸದಾನಂದ ಮೆಲ್ಲನೆ ಗೊಣಗಿದ್ದು ಕೇಳಿಸಿತು..
"ಯಾಕೆ ಏನಾಯಿತು? ಮನುಷ್ಯ  ಅದರಲ್ಲೋ ಭಾರತೀಯ ವಿಚಿತ್ರ ಅಂತ ಯಾಕೆ ಅನ್ನಿಸುತ್ತೆ ನಿಂಗೆ?" ಆತನಿಗೆ ಕೇಳಿದ್ದೆ ತಡ ಆತ ದೊಡ್ಡ ಭಾಷಣವೇ ಶುರು ಮಾಡಿದ್ದ...
"ಮತ್ತಿನ್ನೇನು.. ಇಲ್ಲಿ ಎಲ್ಲವೂ ಹುಚ್ಚು..
ಮನುಷ್ಯನಿಗೆ ಅತೀ ಅಗತ್ಯವಾದ ಪೋಲೀಸು , ಅಂಬು ಲೆನ್ಸ್  ಬರೋಕೆ ಗಂಟೆಗಟ್ಟಲೆ ಕಾಯಬೇಕು.. ಅದೇ ಪಿಜ್ಜಾ ಅನ್ನೋ ದರಿದ್ರ ೩೦ ನಿಮಿಷಗಳಲ್ಲಿ ಮನೆಗೆ ಬರುತ್ತೆ..
ಇಲ್ಲಿ  ಕಾರ್ ಸಾಲಕ್ಕೆ ಬಡ್ಡಿ ಕೇವಲ ೮%, ಅದೇ ಶಿಕ್ಷಣ ಸಾಲಕ್ಕೆ ೧೨%..
ಅಕ್ಕಿಗೆ ೪೦ ರುಪಾಯಿ, ಸಿಮ್ ಕಾರ್ಡು ಉಚಿತ...
ಕಾಲಿಗೆ ಹಾಕೋ ಚಪ್ಲಿನ ಹವಾನಿಯಂತ್ರಿತ ಶೋ ರೂಂ ಗಳಲ್ಲಿ ಮಾರ್ತಾರೆ, ಅದೇ ನಾವು ತಿನ್ನೋ ತರಕಾರಿ ಫೂಟ್ಪಾತಿನಲ್ಲಿ...
ಕುಡಿಯೋ ನಿಂಬೆ ಶರಬತ್ತಿಗೆ ರಾಸಾಯನಿಕ ಪದಾರ್ಥ, ಅದೇ ಬಟ್ಟೆ ಒಗೆಯೋ ಪೌಡರ್ ಶುದ್ಧ ನಿಂಬೆಯದ್ದು....
ನಿಂಗೆ ಇದೆಲ್ಲ ವಿಚಿತ್ರ ಮನುಷ್ಯರ ಥರಾ ಅನ್ಸಲ್ವಾ? ಮನುಷ್ಯ ಒಂದು ಪ್ರಾಣಿ ಅಂತ ಹೇಳೋದಾದ್ರೆ, ನಾವೇ ಎಲ್ಲಕ್ಕಿಂತ ವಿಚಿತ್ರ ಅಲ್ವಾ??"
 ಹಾಗಂತ ಆತ ಕೇಳಿದ್ದಕ್ಕೆ "ಆಲೋಚಿಸಬೇಕಾದ ವಿಚಾರ" ಅಂದಷ್ಟೇ ಹೇಳಿ ಸುಮ್ಮನಾದೆ..!!

(ಕೆಳಗಿನ ಕಾಲೋಮ್ "ಶಂಭುಲಿಂಗ" ಅವರ  ಕೊನೆಖಿಡಿ  ಕಾಲಂ ನೋಡಿದ ಮೇಲೆ , ನಾನೂ ಇಂಥದ್ದೇ ಒಂದು ಕಾಲಂ ಪ್ರತಿ ಬರಹದ ಕೆಳಗೆ  ಮಾಡಬೇಕು ಅಂತ ತೀರ್ಮಾನಿಸಿದ್ದು)

ಗೋರೆ ಉವಾಚ (ಕದ್ದಿದ್ದು)
ಮಲ್ಲಿಕಾ ಶೆರಾವತ್ ಮಿಕ್ಸಿಯಲ್ಲಿ  ಅದೇನೋ ಮಾಡುತ್ತಿರೋದು ನೋಡಿ ಮನೆ ಕೆಲಸದವ ಕೇಳಿದ " ಮೇಡಂ , ಜೂಸ್ ಮಾಡ್ತಾ ಇದ್ದೀರಾ??"
ಅದಕ್ಕೆ ಮಲ್ಲಿಕಾ ಶೆರಾವತ್ ಹೇಳಿದಳು " ಇಲ್ಲ ಮಾರಾಯಾ.. ನನ್ನ ಬಟ್ಟೆ ಒಗಿತಾ ಇದ್ದೇನೆ!!"

22 comments:

PARAANJAPE K.N. said...

ಗೋರೆ, ವಿಚಾರ ಮಾಡಬೇಕಾದ ವಿಷ್ಯ ನಿಮ್ಮ ಬರಹದಲ್ಲಿದೆ. ನಿಜ ಮನುಷ್ಯನ೦ತಹ ವಿಚಿತ್ರ ಪ್ರಾಣಿ ಇನ್ನೊ೦ದಿಲ್ಲ. ಕೊನೆ ಕಿಡಿ ಕದ್ದಿದ್ದಾದ್ರೂ ಸೂಪರ್ ಆಗಿದೆ.

ಮನಸು said...

ನಿಜ ಆಲೋಚಿಸಬೇಕಾದ್ದೇ... ಈ ವಿಷಯ... ಇದಕ್ಕೆ ಪರಿಹಾರವಂತು ಇಲ್ಲ..... ಅನುಸರಿಸಿಕೊಂಡು ಜೀವನ ಸಾಗಿಸೋದಾಗಿದೆ ಈಗ.........

ಕದ್ದ ವಿಷಯದಲ್ಲೂ ಅರ್ಥವಿದೆ ಬಿಡಿ......ಅಷ್ಟು ದೂಡ್ಡ ವಾಷಿಂಗ್ ಮಿಷಿನ್ ಕೆಲಸನ ಮಿಕ್ಸಿಮಾಡ್ತಾ ಇದೆ ಅಂದರೆ ಜನ ಗೇಣುದ್ದ ಬಟ್ಟೆಗೆ ಮಾರುಹೋಗಿದ್ದಾರೆ ಎಂದರ್ಥ....

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಮನುಷ್ಯನ ವಿಚಿತ್ರತೆ ಬಗ್ಗೆ ಬರೆದಷ್ಟೂ ಇನ್ನೂ ಇದೆ.
ನಿಮ್ಮ ಕೊನೆಯ ಕಿಡಿಯಲ್ಲೇ ಇದೆಯಲ್ಲಾ ಸೂಪರ್ ಉದಾಹರಣೆ!

Deepasmitha said...

ಖಂಡಿತ ಸತ್ಯ ನಿಮ್ಮ ಮಾತುಗಳು. ಇದನ್ನೆ ವಿಪರ್ಯಾಸ (irony) ಎನ್ನುವುದು. ಕೊನೆಯಲ್ಲಿ ಮಲ್ಲಿಕಾ ಶೆರಾವತ್ ಕತೆ ಸಕತ್ತಾಗಿತ್ತು

ಶಿವಪ್ರಕಾಶ್ said...

houdu ri.. its sad..but true.. :)

Subrahmanya said...

ರವಿಕಾಂತರೆ,

"ಮನುಷ್ಯನಿಗೆ ಅತೀ ಅಗತ್ಯವಾದ ಪೋಲೀಸು , ಅಂಬು ಲೆನ್ಸ್ ಬರೋಕೆ ಗಂಟೆಗಟ್ಟಲೆ ಕಾಯಬೇಕು.. ಅದೇ ಪಿಜ್ಜಾ ಅನ್ನೋ ದರಿದ್ರ ೩೦ ನಿಮಿಷಗಳಲ್ಲಿ ಮನೆಗೆ ಬರುತ್ತೆ.."

ಸತ್ಯವಾದ ಮಾತು. ಇದು ’ಗುಲಾಮಗಿರಿ’ಯ ಗುರುತು.

ಗೋರೆ ಉವಾಚಿಸುತ್ತಿರುವುದು ಸೂಪರ್ ಆಯ್ತು. ಕದಿಯೊದು ಏನು ಬಿಡಿ, ಹಂಚಿಕೊಳ್ಳೋದು ಮುಖ್ಯ !.

sunaath said...

ಈ ಎಲ್ಲ ಘಟನೆಗಳಿಂದ (ಕೊನೆಯ ಕಿಡಿಯನ್ನೂ ಹಿಡಿದು) ತಿಳಿದು ಬರುವದೇನೆಂದರೆ : ಮೇರಾ ಭಾರತ ಮಹಾನ್!

ಸವಿಗನಸು said...

ಎಂತಾ ಕಾಲ ಬಂತಯ್ಯಾ......
ನಿಮ್ಮ ಕೊನೆ ಖಿಡಿ ಸಹ ಸೂಪರ್....
ಎಲ್ಲಾ ನಟಿಯರು ಇನ್ನು ಮೇಲೆ ಮಿಕ್ಸಿನಲ್ಲೆ ಬಟ್ಟೆ ವಾಷ್ ಮಾಡ್ತಾರೆ....

ವಿ.ರಾ.ಹೆ. said...

ಗೋರೆ ಉವಾಚ ಸಖತ್! :)

ಮನದಾಳದಿಂದ............ said...

ಗೋರೆ ಸರ್,
ನಿಮ್ಮ ಸ್ನೇಹಿತ ಸದಾನಂದರ ಮಾತಿಗೆ ನನ್ನ ಅನುಮೋದನೆ ಇದೆ!.
ಆದರೆ ಜೀವನ ಅದೆ ಅಲ್ಲವೇ, ಹೊಂದಾನಿಕೆಯಷ್ಟೇ ಮುಖ್ಯ!
ಯೋಚಿಸಬೇಕಾದ್ದೆ......!
ಉವಾಚ ಕದ್ದಿದ್ದಾದರೂ ಸತ್ವವಿದೆ ಬಿಡಿ!

Snow White said...

lekhana chennagide sir..nijakku vichitra alwa.. ? :)kone kidi tumba chennagide :)

ಜಲನಯನ said...

ರವಿಕಾಂತ್, ನಿಮ್ಮ ಮಾತು ಬಹಳ ವೈಚಾರಿಕವಾಗಿದೆ..ತಮಾಶೆ ಎನಿಸಿದರೂ ಯೋಚಿಸಬೇಕಾದ್ದೇ...ಇನ್ನೊಂದು ಯಾವ್ಯಾವುದೋ ನೆವ ಮಾಡಿ ನಮ್ಮ ಸ್ಲಮ್, ಬಡವರ ಮನೆಗಳು, ಕೊಳ್ಚೆ ಎಲ್ಲವನ್ನೂ ವಿವರವಾಗಿ ತೋರಿಸೋ ನ್ಯಾಷನಲ್ ಜಿಯೋಗ್ರಾಫಿಕ್ ಬಗ್ಗೆ ನನಗೆ ಅನುಮಾನ...ಏನಂತೀರಿ..?

Narayan Bhat said...

ನಿಮ್ಮ ಲೇಖನ ಓದಿದ ಮೇಲೆ, ಹೌದಲ್ಲ - ಇಲ್ಲಿ ಎಲ್ಲವೂ ವಿಚಿತ್ರವಾಗಿದೆ ಅಂತ ಅನ್ನಿಸ್ತಾ ಇದೆ.

ಸುಧೇಶ್ ಶೆಟ್ಟಿ said...

appaTa sathya...!

"NRK" said...

True True. . . and "Uvaacha Sper"

ದಿನಕರ ಮೊಗೇರ.. said...

satya satya..... goreyavara satyada maatugaLu...... koneya hani soooopar......

Raghu said...

ಗೋರೆ ಉವಾಚ ಮಸ್ತ್..ನನಗಂತು ಫುಲ್ ನಗು..!
ನಿಮ್ಮವ,
ರಾಘು.

shivu.k said...

ಸರ್,

ನಮ್ಮ ಬದುಕಿನ ನಿತ್ಯ ಸತ್ಯಗಳ ಬಗ್ಗೆ ಕ್ಷ ಕಿರಣವನ್ನು ಬೀರಿದ್ದೀರಿ...ಇದೆಲ್ಲ ನೋಡಿದಾಗ ಮನುಷ್ಯ ನಿಜಕ್ಕೂ ವಿಚಿತ್ರ ಪ್ರಾಣಿಯೇ ಸರಿ..

ಬಾಲು said...

vichitravaadru satyavaagide. kone uvaacha seri. :)

ವಸಂತ್ said...

ಮನುಷ್ಯನ ವಿಚಿತ್ರ ವರ್ತನೆಯ ಬಗ್ಗೆ ಸರಾಗವಾಗಿ ವಿವರಿಸಿದ್ದೀರಾ ಧನ್ಯವಾದಗಳು.

ವಸಂತ್

ಜಲನಯನ said...

ರವಿಕಾಂತ್...ಕೊನೆಕಿಡಿಯಲ್ಲಿ ಸುಮ್ಮನೇ ಬೆಚ್ಚಗೆ ಮಾಡೋದು ಓಕೆ ಆದ್ರೆ ನೀವು ಹತ್ಸೇ ಬಿಟ್ರಲ್ಲಾ ಲಂಕೆಗೆ ಬೆಂಕಿ....ಹಹಹ...ಚನ್ನಾಗಿದೆ...ಕದಿಯೋದು ಅಂತ ಕೊನೆಕಿಡಿಗೆ ಅವಮಾನ ಮಾಡೋದು ಬೇಡ ಎರವಲು ಎನ್ನೋಣವೇ ಅಥವಾ ಅಡಾಪ್ಶನ್ ಎನ್ನೋಣವೇ..?? ಚನ್ನಾಗಿದೆ....

ವಿ.ಆರ್.ಭಟ್ said...

Gore uvaacha chennaagide