Monday, April 5, 2010

ಬ್ಲಾಗ್ ಕಳ್ಳರು!!!

ಇದು ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿತ್ತು... http ://ravikanth -gore .blogspot .com ಅಂತ ಟೈಪಿಸಿದ ಕೂಡಲೇ ನನ್ನ ಬ್ಲಾಗ್ ಗೆ ಹೋಗೋದು ಬಿಟ್ಟು ಅದು ಇನ್ನೊಂದು ತಾಣ http ://freegadget2015 .blogspot .com ಅನ್ನೋ ತಾಣಕ್ಕೆ ಲಗ್ಗೆ ಇಡುತ್ತಿತ್ತು... ಇದ್ದ್ಯಾಕೆ ಹೀಗೆ ಅಂತ ಕಾರಣ ಹುಡುಕುತ್ತಲೇ ಇದ್ದೆ... ಕೊನೆಗೂ ತಿಳಿಯಿತು, ಇಲ್ಲಿ ಬ್ಲಾಗ್ ಕಳ್ಳರೂ ಇದ್ದಾರೆ..
ಬ್ಲಾಗಿಗೆ ಕೆಲವಾರು ತಿಂಗಳ ಹಿಂದೆ ಚೆಸ್ ಆಟದ gadget  ಒಂದನ್ನ ಸೇರಿಸಿದ್ದೆ ಇದಕ್ಕೆ ಕಾರಣ.. ಈ gadget ನಲ್ಲಿ ನಮ್ಮ ಬ್ಲಾಗ್ ಅನ್ನು hijack  ಮಾಡೋ ಕೋಡ್ ಬರೆದಿರುತ್ತಾರೆ.. ಅದು ನಮಗೆ ಬೇಕಾದ ತಾಣ ಬಿಟ್ಟು ಬೇರೆಯದೇ ತಾಣಗಳಿಗೆ ಲಗ್ಗೆಯಿಡುತ್ತದೆ... ಆ ಮೂಲಕ ಬ್ಲಾಗ್ ಕಳ್ಳರು ತಮ್ಮ ತಾಣಗಳ ಭೇಟಿಗಳ ಸಂಖ್ಯೆ ಹೆಚ್ಚಿಸಿಕೊಂಡು, ಗೂಗಲ್ ad ಮೂಲಕ ದುಡ್ಡು ಮಾಡುತ್ತಾರೆ.. ನಾನು ಆ ಚೆಸ್ ಆಟದ gadget ತೆಗೆದಿದ್ದೆ ಎಲ್ಲವೂ ಸರಿಹೋಯಿತು..
ಇದಿಷ್ಟೂ ನಿಮಗೂ ತಿಳಿದಿರಲಿ ಎಂದು ಇಲ್ಲಿ ಹಾಕಿದೆ.. ನೀವೂ ಇಂತಹ ತೊಂದರೆಗೆ ಸಿಳುಕಿಕೊಂಡಿದ್ದಲ್ಲಿ ಒಮ್ಮೆ ಇಂತಹ ಬೇಡದ gadget  ತೆಗೆದು ಹಾಕಿ ನೋಡಿ... ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ..

6 comments:

ಮನಸು said...

oh oLLe info kottiri thaq

PARAANJAPE K.N. said...

ಹೌದು, ಇದು ನನ್ನ ಅನುಭವಕ್ಕೂ ಬ೦ದಿತ್ತು. ಯಾಕೆ೦ದರೆ ಹಿ೦ದೆ ನಾನು ಗೂಗಲ್ ಆಡ್ಸೆನ್ಸ್ ಗೆ ನನ್ನ ಬೇರೊ೦ದು ಇ೦ಗ್ಲಿಷ್ ಬ್ಲಾಗನ್ನು ನೊ೦ದಾಯಿಸಿದ್ದೆ. ಆವಾಗ ನನ್ನ ಬ್ಲಾಗಿನ ವಿಳಾಸ ಹಾಕಿದರೆ ಅದು ಬೇರಾವುದೋ ನನಗರಿವಿಲ್ಲದ ತಾಣಕ್ಕೆ ಹೋಗುತ್ತಿತ್ತು. ಮಾಹಿತಿ ಚೆನ್ನಾಗಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ.

PARAANJAPE K.N. said...

ಹೌದು, ಇದು ನನ್ನ ಅನುಭವಕ್ಕೂ ಬ೦ದಿತ್ತು. ಯಾಕೆ೦ದರೆ ಹಿ೦ದೆ ನಾನು ಗೂಗಲ್ ಆಡ್ಸೆನ್ಸ್ ಗೆ ನನ್ನ ಬೇರೊ೦ದು ಇ೦ಗ್ಲಿಷ್ ಬ್ಲಾಗನ್ನು ನೊ೦ದಾಯಿಸಿದ್ದೆ. ಆವಾಗ ನನ್ನ ಬ್ಲಾಗಿನ ವಿಳಾಸ ಹಾಕಿದರೆ ಅದು ಬೇರಾವುದೋ ನನಗರಿವಿಲ್ಲದ ತಾಣಕ್ಕೆ ಹೋಗುತ್ತಿತ್ತು. ಮಾಹಿತಿ ಚೆನ್ನಾಗಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ.

Shashi jois said...

ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ್..

sunaath said...

ಓಹೋ, ‘ದೊಂಗಲುನ್ನಾರು ಜಾಗೃತ!’
ಈ ಮೀಡಿಯಾದಲ್ಲಿ ಇಷ್ಟೆಲ್ಲ ತರಲೆ ಇರಬಹುದೆಂದು ತಿಳಿದಿರಲಿಲ್ಲ.

ಸವಿಗನಸು said...

ಒಳ್ಳೆ ಮಾಹಿತಿ....
ಥ್ಯಾಂಕ್ಸ್....