Tuesday, March 23, 2010

ಸುಮ್ನೆ ತಮಾಷೆಗೆ!!!

ನೀತಿ !!!
ಬಿರುಗಾಳಿಗೆ ಬೀಸಲು ಯಾರೂ ಕಲಿಸುವುದಿಲ್ಲ,
ಸುನಾಮಿಗೆ ಹೇಗೆ ಅಪ್ಪಳಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಭೂಮಿಗೆ ಹೇಗೆ ಕಂಪಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಹಾಗೆಯೇ ಹೆಂಡತಿಯನ್ನು ಹೇಗೆ ಆಯ್ಕೆ ಮಾಡಬೇಕೆಂದು ಯಾರೂ ಕಲಿಸುವುದಿಲ್ಲ...
ನೀತಿ: ಪ್ರಕೃತಿ ವಿಕೋಪಗಳು ಯಾರೂ ಕಲಿಸಿ ಬರುವಂಥದ್ದಲ್ಲ, ಅವು ತನ್ನಿಂತಾನೆ ನಡೆಯುತ್ತವೆ!!!
----------------------------------------------------------------------------------------------------------------------------
ವ್ಯತ್ಯಾಸ!!
ಸ್ನೇಹಿತನಿಗೆ ನೀನು ನನ್ನ ಉತ್ತಮ ಸ್ನೇಹಿತ ಅಂತ ಹೇಳಬಹುದು..
ಆದರೆ ಹೆಂಡತಿಗೆ, ನೀನು ನಾನ ಉತ್ತಮ ಹೆಂಡತಿ ಅಂತ ಹೇಳುವ ಧೈರ್ಯ ಯಾರಿಗಿದೆ??
-----------------------------------------------------------------------------------------------------------------------------
ಅತೀ ಚಿಕ್ಕ ಗಲೀಜು ಕಥೆ!
ಅಪ್ಪಟ ರೇಷ್ಮೆ ಬಿಳುಪಿನ ಸುಂದರ ಕುದುರೆಯೊಂದು ಕೆಸರಿನಲ್ಲಿ ಬಿದ್ದು ಹೋಯಿತು!!!

13 comments:

sunaath said...

ಹೆಂಡತಿಯ ಎದುರಿಗೆ ಬಾಯಿ ತೆಗೆಯುವ ಧೈರ್ಯವಾದರೂ ಯಾರಿಗಿದೆ?

shivu.k said...

ತಮಾಷೆಗೆ ಬರೆದರೂ ತುಂಬಾ ಚೆನ್ನಾಗಿವೆ.

PARAANJAPE K.N. said...

ಏನ್ ಗುರು? ಎಲ್ಲ ಬಿಟ್ಟು ನೀತಿ ಕಥೆ ಶುರು ಹಚ್ಕೊ೦ಡ್ರಿ ? ಚೆನ್ನಾಗಿದೆ.

Subrahmanya said...

ಸುಮ್ನೆ ತಮಾಷೆಗೆ ಹೇಳುದ್ರೂ ನಿಜಾನೆ ಹೇಳಿದೀರಿ ಬಿಡಿ ..!
ಚೆನ್ನಾಗಿದೆ.

ದಿನಕರ ಮೊಗೇರ said...

ರವಿಕಾಂತ್,
ಮದುವೆ ಆದ ಮೇಲೆ ಈ ನೀತಿ ಕಥೆಗಳನ್ನು ಬರೆಯೋ ಧೈರ್ಯ ಇರಲ್ಲ...... ಈಗಲೇ ಬರೆಯಿರಿ......... ಸಕತ್ತಾಗಿದೆ......

Manasaare said...

ನಿಮ್ಮ ನೀತಿ ಓದಿ ಕಾಮೆಂಟ್ ಹಾಕೋಣ ಅಂತ ಬಂದ್ರೆ ಇಲ್ಲಿ ಬರಿ ಗಂಡಸರೇ ಕಾಮೆಂಟ್ ಹಾಕಿದ್ದು ನೋಡಿ ನಗು ಬಂತು . ಹೆಂಡತಿಗೆ ಹೇಳೋ ದೈರ್ಯ ಅಂತು ಇಲ್ಲ ಆದ್ರೆ ನೀವು ಹೇಳಿದ್ದು ಸರಿ ಅಂತ ದೈರ್ಯವಾಗಿ ಕಾಮೆಂಟ್ ಹಾಕಿದ್ದಾರೆ ಹಹಹ್ಹ್ ... ದಿನಕರ್ ಸರ್ ಅಂತು ಮದುವೆ ಆದಮೇಲೆ ಬರಿಯೋದಕ್ಕೂ ದೈರ್ಯ ಸಾಲಲ್ಲ ಅಂತ ಹೇಳಿದ್ದು ನೋಡಿ ತುಂಬಾ ನಗು ಬಂತು...ಚೆನ್ನಾಗಿದೆ ..

ಮನಸಾರೆ

ಜಲನಯನ said...

ಹ್ಹೆಹ್ಹೆಹ್ಹೆ...ಬಹಳ ತಮಾಷೆಯಾಗಿವೆ ಹಾಗೆಯೇ...ವಾಸ್ತವಾಂಶ ..ರವಿಕಾಂತ್ ಸರ್.

ಸವಿಗನಸು said...

ರವಿ,
ಮನಸಾರೆ ಹೇಳ್ತಾ ಇದ್ದೀನಿ ಸಕತ್ತಾಗಿದೆ....
ದಿನಕರ್ ಎನೀದು ಮೇಡಮ್ ಹೀಗೆ ಹೇಳಿ ಬಿಟ್ಟರೂ....ಬೇಗ ಬರೆಯಿರಿ ಇದಕ್ಕೆ ನಿಮ್ಮ ಬ್ಲಾಗಲ್ಲಿ.....

Unknown said...

ಸುಮ್ನೆ ತಮಾಷೆಗೆ ಅಂದ್ರೂ ಸತ್ಯ ಹೇಳ್ತೀರಲ್ಲ ಮಾರಾಯ್ರೆ!

ದೀಪಸ್ಮಿತಾ said...

ನಿಜ, ನನಗೂ ಧೈರ್ಯ ಇಲ್ಲ ಮಾರಾಯಾ

Raghu said...

ನೀತಿ ಕಥೆ ತುಂಬಾ ಚೆನ್ನಾಗಿದೆ...ಸೂಪರ್.. ಹ್ಹ ಹ್ಹ ಹ್ಹ..
ನಿಮ್ಮವ,
ರಾಘು.

Nisha said...

ha ha super :-)

Unknown said...

ಎಲ್ಲರಿಗೂ ಧನ್ಯವಾದಗಳು...