ಇ-ಸಿಗರೇಟು ಅಂದರೆ ಎಲೆಕ್ಟ್ರೋನಿಕ್ ಸಿಗರೇಟು.. ಅರೆ ಅಂದರೆ ಇದಕ್ಕೆ ಕರೆಂಟ್ ಬೇಕಾ? ಹೌದು .. ಬೆಚ್ಚಿ ಬೀಳಬೇಡಿ . ಇ-ಸಿಗರೇಟು ಉರಿಯೋದು ಒಂದು ಚಿಕ್ಕ ಬ್ಯಾಟರಿ ಇಂದಾಗಿ.. ಇದನ್ನು ತಯಾರಿಸುವವರು ಇದು ತಂಬಾಕು ಸಿಗರೆಟ್ ನಂತೆ ಹಾನಿಕಾರಿಯಲ್ಲ.. ಇದರಿಂದ ಬರುವ ಹೊಗೆ ಪರಿಸರಕ್ಕಾಗಲಿ, ಅಕ್ಕ ಪಕ್ಕಾ ದವರಿಗಾಗಲಿ ಯಾವುದೇ ಹಾನಿಯುಂಟು ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ.. ಇದರ ಬಗ್ಗೆ ಮುಂದೆ ನೋಡೋಣ .. ಈಗ ಇ-ಸಿಗರೇಟು ಅಂದರೆ ಹೇಗಿರುತ್ತೆ ಸ್ವಲ್ಪ ನೋಡೋಣ..
ಹಾಗಾದರೆ ಇದರಲ್ಲೇನಿದೆ?
ಮೇಲಿನ ಚಿತ್ರದಲ್ಲಿರೋದೆ ಇ-ಸಿಗರೇಟಿನ ಭಾಗಗಳು..
A . ಎಲ್ ಇ ಡಿ (ಇದು ಉರಿದಾಗ ಸಿಗರೇಟಿನ ತುದಿಯ ಕೆಂಡದಂತೆ ಕಾಣಿಸುತ್ತೆ)
B . ಬ್ಯಾಟರಿ (ಹಾಗು ಕೆಲವು circuit ಗಳು ಇದರೋಳಗಿವೆ)
C . ಬಿಸಿಯಾಗಿಸುವ ಭಾಗ
D . ಬಾಯಿಯೋಳಗಿಡುವ ಫಿಲ್ಟರ್ (Cratridge )
ಹೇಗೆ ಕೆಲಸ ಮಾಡುತ್ತದೆ?
ಈ ಇ-ಸಿಗರೇಟಿನ ಫಿಲ್ಟರ್ ಭಾಗವನ್ನು ಬಾಯಿಯಲ್ಲಿಟ್ಟು ಎಳೆದಾಗ ಇದರಲ್ಲಿರೋ ಸೇನ್ಸೆರ್ ಗಾಳಿಯ ಒತ್ತಡ ಅರಿತು ಬಿಸಿಯಾಗಿಸುವ ಭಾಗಕ್ಕೆ ಎಲೆಕ್ಟ್ರೋನಿಕ್ ಸಿಗ್ನಲ್ ಕಳಿಸುತ್ತೆ.. ಆಗ ಈ ಭಾಗ ಬಿಸಿಯಾಗಿ ಫಿಲ್ಟರ್ (Cratridge ) ಒಳಗಿರುವ ಅಲ್ಪ ನಿಕೋ ಟೀನ್ ನ (ಅಥವಾ ನಿಕೋಟಿನ್ ಇಲ್ಲದ) ದ್ರವ ಪದಾರ್ಥವನ್ನು ಆವಿಯನ್ನಾಗಿಸುತ್ತದೆ.. ಕೆಲವು ಇ-ಸಿಗರೆಟುಗಳಲ್ಲಿ ಒಂದು ಚಿಕ್ಕ ಬಟನ್ ಒತ್ತಿ ಬಿಸಿಯಾಗಿಸುವ ಭಾಗವನ್ನು ಶುರು ಮಾಡಬೇಕಾಗುತ್ತೆ... ಹಾಗೆ ಇದರ ತುದಿಯಲ್ಲಿ ಒಂದು ಎಲ್ ಇ ಡಿ ಲೈಟು ಉರಿದು , ಸಿಗರೇಟಿನ ಅನುಭವ ನೀಡುತ್ತೆ..
ಇದರ ಬಾಯಿಯೋಳಗಿಡುವ ಫಿಲ್ಟರ್ ಅನ್ನು ಪ್ಲಾಸ್ಟಿಕ್ ನಿಂದ ತಯಾರಿಸಿರುತ್ತಾರೆ.. ಇದರಲ್ಲಿ ಉಷ್ಣತೆಗೆ ಆವಿಯಾಗುವ ವಿವಿಧ ರುಚಿಯ ನಿಕೋಟಿನ್ ಯುಕ್ತ ದ್ರವವನ್ನು ತುಂಬಿಸಿರುತ್ತಾರೆ.. ಈ ದ್ರವವೇ ಉಷ್ತ್ನತೆಗೆ ಆವಿಯಾಗಿ ಹೊಗೆ ಬರುವಂತೆ ಮಾಡುವುದು.. ಇದು ಮುಗಿದಾಗ ಇದನ್ನು ಮತ್ತೆ ತುಂಬಿಸಬಹುದು ಅಥವಾ ಹೊಸ cratridge ಹಾಕಬಹುದು..
ಮತ್ತೆ ಇದರ ಬ್ಯಾಟರಿ ರೀ-ಚಾರ್ಜ್ ಮಾಡುವಂಥದ್ದು.. ಕೆಳಗೆ ನೋಡಿ ಇದನ್ನ ಹೇಗೆ ಚಾರ್ಜ್ ಮಾಡುತ್ತಾರೆ ಅಂತ.. (ಇನ್ನೊಂದು ತುದಿಯನ್ನು ಯು ಎಸ ಬಿ ಹೊಲ್ದೆರ್ ಗೆ ಹಾಕಬೇಕು :))..
ಗಮನಿಸಿ: ಇದರಲ್ಲಿ ಹಾಕುವ ದ್ರವ ಪದಾರ್ಥ ನಿಕೋಟಿನ್ ಯುಕ್ತ ಅಥವಾ ನಿಕೋಟಿನ್ ಇಲ್ಲದೆ ಕೂಡ ಸಿಗುತ್ತದೆ..
ಬೇರೆ ಬೇರೆ ಬಗೆಯ cratridge ಗಳು ಮತ್ತು ಅವುಗಳಲ್ಲಿರುವ ಪದಾರ್ಥಗಳು ಕೆಳಗಿನಂತಿವೆ..
ಇದರ ಒಂದು cratridge ೭೦-೮೦ ಬಾರಿ ಸೇದಲು ಸಾಕಾಗುತ್ತೆ.. ಹಾಗೆ ಬ್ಯಾಟರಿ ಮುಗಿದಿದೆ ಹಾಗೂ ಚಾರ್ಜ್ ಆಗಿದೆ ಅನ್ನೋ ಸೂಚನೆ ಕೊಡೊ ಲೈಟ್ ಬತೇರಿ ಮೇಲೆ ಇವೆ...
ಆರೋಗ್ಯದ ಮೇಲೆ ಇದರ ಪರಿಣಾಮ:
ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಅಂತ ಇದರ ತಯಾರಕರು ಹೇಳಿಕೊಂಡಿದ್ದರೂ ಅದು ಸಾಬೀತಾಗಿಲ್ಲ.. ಇದರ ಮೇಲೆ ಇನ್ನೂ ಅಧ್ಯನ ನಡೆಯುತ್ತಲೇ ಇದೆ.. ಈಗಾಗಲೇ ಇದರ ಮೇಲೆ ಕೆಲವು ದೇಶಗಳು ನಿರ್ಬಂಧ ಹೇರಿವೆ..
ಅಮೆರಿಕಾದ ಸಂಸ್ಥೆ ಯೊಂದು NJoy ಮತ್ತು Smoking Everywhere ಅನ್ನೋ ಕಂಪೆನಿಗಳ ಇ-ಸಿಗರೆಟ್ ಮೇಲೆ ಅಧ್ಯಯನ ಮಾಡಿ ಇದರಲ್ಲಿ ಮಾರಕ ರಾಸಾಯನಿಕಗಳು ಹಾಗು ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ನಿಕೋಟಿನ್ ಇದೆ ಎಂದು ಪತ್ತೆ ಹಚ್ಚಿದೆ..
ಆದರೆ ಇದನ್ನು ಕಂಪನಿ ಅಲ್ಲ ಗಳೆದಿದೆ.. ಕೆಲವೊಂದು ಸಂಸ್ಥೆ ಗಳು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಇನ್ನು ಕೆಲವು ಇದು ಕೂಡ ಹಾನಿಕಾರಕ ಹಾಗೂ ಬಿಡಿಸಲಾಗದ ವ್ಯಸನ ಎಂದು ದೂರಿವೆ..
ಕೆನಡ ಕೂಡ ಇ-ಸಿಗರೆಟ್ ಅಷ್ಟೊಂದು ಉತ್ತಮವಲ್ಲ ಅಂತ ಹೇಳಿದೆ..ಇದರಿಂದಾಗಿ ತಂಬಾಕಿನ ವಿಷ ದೇಹದ ಮೇಲೆ ಪರಿಣಾಮ ಬೀರಬಹುದು (ಫುಡ್ Poisoning ಥರ) ಹಾಗು ಇದನ್ನು ಉಪಯೋಗಿಸುವವರು ಇದಕ್ಕೆ ದಾಸರಾಗಬಹುದು ಅನ್ನೋ ಎಚ್ಚರಿಕೆ ಕೂಡ ನೀಡಿದೆ.. ಅದೇ ರೀತಿ ನ್ಯೂಜೀ ಲ್ಯಾಂಡ್ ನ ಕೆಲವು ವಿಜ್ಞಾನಿಗಳು ಇದರ ದುಷ್ಪರಿಣಾಮಗಳ ಬಗ್ಗೆ ಅಧ್ಯನ ನಡೆಸುತ್ತಲೇ ಇದ್ದಾರೆ..
ಭಾರತ ದಲ್ಲಿ ಕೂಡ ಇದು ಸಿಗುತ್ತೆ.. ಭಾರತದಲ್ಲಿ ಸಿಗದ್ದೇನು ಅಲ್ಲವೇ? ಅದು ಎಸ್ಟೆ ಕೆಟ್ಟದಾದರೂ, ಲಂಚ ಪಡೆದು ಮಾರುಕಟ್ಟೆಗೆ ಬಿಡಲು ಅನುಮತಿ ನೀಡುವ ಬ್ರ್ಹಷ್ಟರು ನಮ್ಮಲ್ಲಿ ಬೇಕಾದಷ್ಟಿದ್ದಾರೆ...ಅಂದ ಹಾಗೆ ಇದರ ಬೆಲೆ ಸುಮಾರು ೧೫೦೦ ರುಪಾಯಿಯಿಂದ ೪೦೦೦ ರುಪಾಯಿವರೆಗಿದೆ..

ಇದು ಕೂಡ ಒಂದು ಮಾದರಿಯ ಇ-ಸಿಗರೆಟ್
ಏನೇ ಇರಲಿ ಇದರ ತಯಾರಕರು ಮಾತ್ರ ಇದು ಸುರಕ್ಷಿತ, ಸಿಗರೇಟು ಸೇವನೆಯ ಅಭ್ಯಾಸ ಬಿಡಿಸಿ ನಿಮ್ಮ ಆರೋಗ್ಯ ಕಾಪಾಡುತ್ತದೆ ಹಾಗೂ ಹಣ ಉಳಿಸುತ್ತದೆ ಅಂತ ಪ್ರಚಾರ ಮಾಡಿಕೊಂಡಿವೆ..
ಸೂಚನೆ: ಈ ಲೇಖನ ನಮ್ಮೆಲ್ಲರ ಮಾಹಿತಿಗಾಗಿ ಅಷ್ಟೇ.. ಯಾರಾದರು ಇ-ಸಿಗರೆಟ್ ಸೇದಿ , ಆರೋಗ್ಯ ಅಥವಾ ಅವರ ಹವ್ಯಾಸ, ಜೀವನದ ಮೇಲೆ ದುಷ್ಪರಿಣಾಮಗಳಾದರೆ ಅದಕ್ಕೆ ನಾನು ಜವಾಬ್ದಾರನಲ್ಲ :D
ಗೋರೆ ಉವಾಚ :
ವಿದ್ಯುತ್ತೆ ಕಾಣದ ಆ ಹಳ್ಳಿಗೆ ವಿದ್ಯುತ್ ಬಂದಿತ್ತು.. ಜನ ಖುಷಿಯಿಂದ ಕುಣಿಯುತ್ತಿದ್ದರೆ ಪಕ್ಕದಲ್ಲಿ ಒಂದು ನಾಯಿ ಸಹ ಡಾನ್ಸ್ ಮಾಡತೊಡಗಿತು.. ಅದನ್ನು ನೋಡಿದ ಹಳ್ಳಿಯ ಮುಖಂಡ ಅಚ್ಚರಿಯಿಂದ ನಾಯಿಯ ಬಳಿ ಸಾಗಿ ಕೇಳಿದ " ನಾಯಿ, ನಮಗೆ ವಿದ್ಯುತ್ ಬಂತು ಅದಕ್ಕೆ ಸಂತೋಷ ದಿಂದ ಕುಣೀತಾ ಇದ್ದಿವಿ, ನೀನ್ಯಾಕೆ ಕುಣಿತಿದ್ದಿಯಾ?" .. ಆತನನ್ನೊಮ್ಮೆ ದುರುಗುಟ್ಟಿ ನೋಡಿದ ನಾಯಿ "ನಿಮ್ಮ ವಿದ್ಯುತ್ ಜೊತೆ ಕಂಬನೂ ಊರಿಗೆ ಬಂದಿದ್ಯಲ್ಲ" ಅಂತ ಹೇಳಿ ತನ್ನ ಡಾನ್ಸ್ ಮುಂದುವರೆಸಿತು!!