ಭಾಗ ಒಂದು ಇಲ್ಲಿ ಓದಿ..
"ಆವತ್ತೇ ನನಗೆ ಗೊತ್ತಾಗಿ ಹೋಗಿತ್ತು ಇದು ನನ್ನ ಬೆನ್ನು ಬಿಡೋದಿಲ್ಲ ಅಂತ" ಕುಮಾರ ತನ್ನ ಮಾತು ಮುಂದುವರಿಸಿದ..
"ಜ್ಯೋತಿಷಿ ಪಕ್ಕಾ ಹೇಳಿದ್ದ.. ನಿನ್ನ ಮನೆಯಲ್ಲಾಗಲೀ ಆಜು ಬಾಜಿನಲ್ಲಾಗಲಿ ಮಾಟ ಮಾಡಿ, ಭೂತವನ್ನು ಬಂಧಿಸಿ ಇಡಲಾಗಿದೆ ಅಂತ.. ತುಂಬಾ ಹುಡುಕಿದೆ ಆದ್ರೆ ಏನೂ ಸಿಗಲಿಲ್ಲ..ಸಾಮಾನ್ಯವಾಗಿ ಇಂಥದ್ದೆಲ್ಲಾ ತಾಮ್ರದ ತಗಡಿನಲ್ಲಿ ಮಂತ್ರಿಸಿ, ಅಥವಾ ತೆಂಗಿನಕಾಯಿ, ನಿಂಬೆ ಹಣ್ಣು ಮಂತ್ರಿಸಿ ಮಾಡುತ್ತಾರಂತೆ, ಮಾಟದ ಪ್ರಭಾವ ದಿಂದ ಹೊರ ಬರಬೇಕಾದರೆ ಅದನ್ನು ನಮ್ಮ ಜಾಗದಿಂದ ದೂರ ಎಸೆಯಬೇಕು.. ಆವತ್ತಿಂದ ಹುಡುಕಿ ಹುಡುಕಿ ಸಾಕಾಯಿತು..ನನಗೇನೂ ಸಿಗಲಿಲ್ಲ... ಪೂಜೆ ಹವನ ಎಲ್ಲಾ ಮಾಡಿಸ್ದೆ.. ಇಗೀಗ ನನ್ನ ಮಗಳು ಸಹ ಮಂಕಾಗಿರುತ್ತಾಳೆ.. ಮಾತೆ ಆಡೋದಿಲ್ಲ .. ಅವಳಿಗೆ ಏನಾದ್ರು ಆದ್ರೆ ಅಂತ ಹೆದರಿಕೆ." ಒಂದು ಕ್ಷಣ ಕುಮಾರ ಮಾತು ನಿಲ್ಲಿಸಿದ..
"ಇದು ೨೧ನೆ ಶತಮಾನ.. ಮಾಟ ಮಂತ್ರ ಇದ್ಯೋ ಇಲ್ವೋ ನಂಗೊತ್ತಿಲ್ಲ.. ದರಬೆಸಿ ಜನಗಳಿಗಿಂತ ದೊಡ್ಡ ಭೂತಾನೂ ಇರಲಿಕ್ಕಿಲ್ಲ,,, ಆದರೆ ನೀನೇನೂ ಹೆದರಬೇಡ... ಇದಕ್ಕೊಂದು ಪರಿಹಾರ ಇದೆ.." ನನ್ನ ಮಾತು ಕೇಳುತ್ತಿದ್ದ ಕುಮಾರ ನೆಟ್ಟಗಾದ... ಆತನಲ್ಲಿ ಕುತೂಹಲ ಮೂಡಿತು.. ಏನಾದರೂ ಮಾಡಿ ಈ ಮಾಟ-ಭೂತದಿಂದ ಹೊರ ಬಂದರೆ ಸಾಕು ಅನ್ನುವಂತಿತ್ತು ಆತನ ನೋಟ.. ಏನೆ ಹೇಳಿದರೂ ಮಾಡಲು ತಯಾರಾದಂತೆ ಅನ್ನಿಸಿತು...
"ನನಗೆ ಗೊತ್ತಿರೋ ಒಬ್ರು ಇದ್ದಾರೆ.. ಅವರಲ್ಲಿ ಇದಕ್ಕೆ ಖಂಡಿತಾ ಪರಿಹಾರ ಸಿಗಬಹುದು.. ಯಾವುದಕ್ಕೂ ನಾನು ಅವರನ್ನು ಭೇಟಿಯಾಗಿ ೨ ದಿನದಲ್ಲಿ ಇಲ್ಲಿಗೆ ಬರುತ್ತೇನೆ.. ಯಾವುದೇ ಭೂತವೇ ಇರಲಿ ಅದ್ರ ಬೆನ್ನು ಹತ್ತೋದು ಅಂದ್ರೆ ನಂಗೆ ತುಂಬಾ ಇಷ್ಟ" ಹಾಗಂತ ಹೇಳಿ ಹೊರಡಲನುವಾದೆ..
ತಾನೂ ಬರುತ್ತೇನೆ ಅಂದ ಕುಮಾರನಿಗೆ ಬೇಡ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ..
ಛೆ.. ಹೇಗಿದ್ದ ಕುಮಾರ ಹೇಗಾದ? ಆ ಪೋಲಿ ಕುಮಾರ ಇವತ್ತು ಪೋಲಿಯೋ ಬಡಿದಂತೆ ಮಂಕಾಗಿದ್ದಾನೆ.. ಮಾಟ ಮಂತ್ರ, ಭೂತ ಎಲ್ಲಾ ಇದೆಯೋ ಇಲ್ಲವೋ, ಆದರೆ ಅದು ಇದೆ ಮತ್ತು ಅದು ನನ್ನ ಮೇಲೆ ದಾಳಿ ಮಾಡುವಂತೆ ಯಾರೋ ಮಾಡಿದ್ದಾರೆ ಅನ್ನೋ ಹೆದರಿಕೆಯೇ ಆತನನ್ನು ಅರ್ಧ ಕೊಂದು ಹಾಕಿತ್ತು.. ಆಮೇಲೆ ನಡೆದ ಕೆಲವೊಂದು ಘಟನೆಗಳು , ಬೆಂಕಿಗೆ ತುಪ್ಪ ಸುರಿದಂತೆ ಆತನ ಹೆದರಿಕೆಯನ್ನು ಇಮ್ಮಡಿಗೊಳಿಸಿದ್ದವು.. ಆತ ಇದೆ ಗುಂಗಿನಲ್ಲಿ ತನ್ನ ಕೆಲಸ ಎಲ್ಲಾ ಬಿಟ್ಟು ಜ್ಯೋತಿಷಿ ಗಳ ಹಿಂದೆ ಬಿದ್ದಿದ್ದ.. ಬಿ ಪಿ ಹೆಚ್ಚಿತ್ತು.. ಆಡಲು ಬರುತ್ತಿದ್ದ ಮಗುವಿಗೆ ಬಯ್ಯುವುದು ಸಾಮಾನ್ಯವಾಗಿತ್ತು... ಮಗು ಮಂಕಾಗದೆ ಇನ್ನೇನಾಗುತ್ತೆ.?.. ಭೂತದ ಬೆನ್ನು ಹತ್ತಲು ನಾನು ತಯಾರಾದೆ!!
ಆತನ ಮನೆಗೆ ಮಾಡಿದ್ದ ಮಾಟ ತೆಗೆಸಲು ನಾನು ತಯಾರಾದೆ.. ಭೂತ ಓಡಿಸುವ ಬಗ್ಗೆ ಕೆಲವು ಬೇಕಾದ ಮಾಹಿತಿ ಕಲೆ ಹಾಕಿದೆ.. ಬೇಕಾದ ಸಿದ್ಧತೆ ಎಲ್ಲಾ ಮಾಡಿಕೊಂಡು ೨ ದಿನಗಳ ನಂತರ ನಾನು ಆತನ ಮನೆಯತ್ತ ಹೆಜ್ಜೆ ಹಾಕಿದೆ.. ಕೆಲವೊಂದು ಮಾತುಗಳ ನಂತರ ನಾನು ಆತನ ಮನೆಯೆಲ್ಲ ಒಮ್ಮೆ ಸುತ್ತು ಹಾಕಿದೆ.. ಮಲಗುವ ಕೋಣೆಯಲ್ಲಿ ಮಂಚವನ್ನು ಉತ್ತರ ದಿಕ್ಕಿನ ಕಡೆ ಹಾಕಲಾಗಿತ್ತು.. ಉತ್ತರ ದಿಕ್ಕಿಗೆ ಯಾಕೆ ತಲೆಹಾಕಿ ಮಲಗಬಾರದು ಅನ್ನೋ ಕಥೆ ನಮ್ಮ ಪುರಾಣಗಳಲ್ಲಿದೆ.. ಆದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ ಶಕ್ತಿ ಹೆಚ್ಚು ಇದ್ದು ಅದು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲೊ ವಿಜ್ಞಾನ ಓದಿದ್ದು ನೆನಪಾಯಿತು.. ಕುಮಾರನಿಗೆ ಹೇಳಿ ಮಂಚವನ್ನು ಪೂರ್ವ ದಿಕ್ಕಿನ ಕಡೆ ತಿರುಗಿಸಿದೆ..ತೆಗೆದು ಕೊಂಡು ಹೋಗಿದ್ದ ಫೆಂಗ್ ಶುಇ ಅಂತ ಕರೆಯೋ ಕರ್ಕಶ ಶಬ್ದ ಮಾಡೋ ಸಾಮಾನೊಂದನ್ನು ಚಾವಡಿಯಲ್ಲಿ ನೇತು ಹಾಕಿದೆ..
"ಮೊದಲಿಗೆ ಮಾಟ ಮಾಡಿದ ಅನುಭವ ನಿಮಗೆ ಹೇಗಾಯಿತು?" ಕುಮಾರನಿಗೆ ಪ್ರಶ್ನೆ ಹಾಕುತ್ತಿದ್ದಂತೆ, ಕುಮಾರ ಮತ್ತು ಆತನ ಹೆಂಡತಿ ನನ್ನನ್ನು ಒಬ್ಬ ಮಾಂತ್ರಿಕನನ್ನು ನೋಡುವಂತೆ ಬೆರಗು ಕಣ್ಣುಗಳಿಂದ ನೋಡತೊಡಗಿದರು.."ದನ ಒಂದು ಸತ್ತು ಹೋಯಿತು.. ಏನು ಅಂತ ಬಲಿಮೆ (ಭವಿಷ್ಯ) ಕೇಳಿದೆವು.. ಆಗ ತಿಳಿಯಿತು" ಕುಮಾರನ ಹೆಂಡತಿ ಹೇಳುತ್ತಿದ್ದಂತೆ, ಅವರಿಬ್ಬರನ್ನೂ ದನಗಳನ್ನು ಕಟ್ಟುತ್ತಿದ್ದ ಹಟ್ಟಿಯ ಬಳಿ ಹೋಗುವಂತೆ ಹೇಳಿದೆ..
"ಅಂದರೆ ಮಾಟ ಮಾಡಿದ್ದು ಇಲ್ಲೇ ಎಲ್ಲೊ ಇರಬೇಕು.. ಇಲ್ಲಿಂದ ಪ್ರಾರಂಭವಾಗಿದೆ.. ಈಗ ಹುಡುಕಿ.. ಹಟ್ಟಿಯ ಸಂದಿ ಸಂದಿಗಳನ್ನು ಹುಡುಕಿ.." ಹಾಗಂತ ಹೇಳಿ ನಾನು ಹೊರಬಂದೆ.. ಕುಮಾರ ಮತ್ತು ಆತನ ಹೆಂಡತಿ ಹುಡುಕಿದ್ದೇ ಹುಡುಕಿದ್ದು.. ಅಲ್ಲೇನಿದೆ ಮಣ್ಣಾಂಗಟ್ಟಿ ಸಿಗೋಕೆ.. ಬರುತ್ತಿದ್ದ ನಗು ತಡೆದುಕೊಂಡು ಕುಮಾರನ ಪುಟಾಣಿ ಮಗಳ ಜೊತೆ ಆಟವಾಡತೊಡಗಿದೆ... ಸುಮಾರು ಅರ್ಧ ಘಂಟೆ ಕಳೆಯಿತು..
"ಇಲ್ಲಿ , ಇಲ್ಲಿ ಏನೋ ಇದೆ!!!" ಕುಮಾರ ಕಿಟಾರನೆ ಕಿರುಚಿಕೊಂಡಿದ್ದು ನೋಡಿ ಥಟ್ಟನೆ ಅತ್ತ ಓಡಿದೆ..
ಹೌದು ಅಲ್ಲೇನೋ ವಸ್ತುವೊಂದು ಹಟ್ಟಿಯ ಸಂದಿಯಲ್ಲಿತ್ತು.. ಕುಮಾರ ಅದನ್ನು ಹೊರ ತೆಗೆದಿದ್ದ.. ಪ್ಲಾಸ್ಟಿಕ್ ನಲ್ಲಿ ಕಟ್ಟಲಾಗಿದೆ.. ಆತನ ಕೈಯಿಂದ ಅದನ್ನು ತೆಗೆದುಕೊಂಡು ಮೆಲ್ಲನೆ ಬಿಚ್ಚಿದೆ.. ಪ್ಲಾಸ್ಟಿಕ್ ಗೆ ಮಣ್ಣೆಲ್ಲ ಅಂಟಿಕೊಂಡಿತ್ತು.. ಒಳಗಡೆ ನೋಡಿದವನೇ ಬೆಚ್ಚಿಬಿದ್ದೆ!!! ಅದರಲ್ಲಿತ್ತು ಒಂದು ತಾಮ್ರದ ತಗಡು, ಅದರ ತುಂಬಾ ಕುಂಕುಮ..!!!
ಪೂರ್ತಿ ಬಿಚ್ಚಲು ಧೈರ್ಯ ಸಾಲದೇ ಹಾಗೆ ಮತ್ತೆ ಕಟ್ಟಿದೆ.. "ದೂರ ದೂರಕ್ಕೆ ಎಸೆದು ಬಾ.. ಪೀಡೆ ತೊಲಗಲಿ.. ಹೋಗು.. ಬೇಗ ಹೋಗು.. ಯಾರಿಗೂ ತಿಳಿಯದಂತೆ ,ಯಾರ ಕೈಗೂ ಸಿಗದಂತಹ ಜಾಗಕ್ಕೆ ಎಸೆದು ಬಾ.." ಬೆವರಿನಿಂದ ಒದ್ದೆಯಾಗಿದ್ದ ನಾನು ನಡುಗುವ ಧ್ವನಿಯಲ್ಲಿ ಕುಮಾರನಿಗೆ ಆಜ್ಞಾಪಿಸಿದೆ.. ಹಿಂದೂ ಮುಂದು ನೋಡದೆ, ನನ್ನ ಕೈಯಿಂದ ಪೊಟ್ಟಣ ತೆಗೆದುಕೊಂದವನೇ ತೋಟದತ್ತ ಓಡಿದ ಕುಮಾರ.. ಆತನ ತೋಟ ದಾಟಿದರೆ ಇರುವುದೇ ಕಪಿಲಾ ನದಿ.. ಅಲ್ಲಿಯೇ ಬಿಸಾಕುತ್ತೇನೆ ಅಂತ ಹೇಳಿ ಒಂದೇ ಓಟ ಕಿತ್ತ... ಅರ್ಧ ಘಂಟೆಯೊಳಗೆ ಎಲ್ಲವೂ ಮುಗಿದು ನಾನು ಹೊರಡಲನುವಾದೆ.. ಈ ವಿಷಯ ಯಾರಿಗೂ ಹೇಳಬಾರದು ಎಂದೂ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮ ವಾಗಿರಬೇಕೆಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ..ಕುಮಾರ ಮತ್ತು ಆತನ ಪತ್ನಿಯ ಮುಖದಲ್ಲಿ ಮಂದಹಾಸವಿತ್ತು.. ಕೆಲವು ದಿನಗಳ ನಂತರ ಆತ ತನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ,ಅದೂ ಇದೂ ಅಂತ ಕೆಲವೊಂದು ಪೂಜೆ ಮಾಡಿಸಿದ್ದ.. ನಾನೂ ಹೋಗಿ ಪ್ರಸಾದ ಸ್ವೀಕರಿಸಿ ಬಂದಿದ್ದೆ.. ಕುಮಾರನ ಸಂಸಾರ ಉಲ್ಲಾಸದಿಂದ ಇದ್ದಿದ್ದು ನೋಡಿ ಖುಷಿಯಾಯಿತು...
ಹಾಗಿರಲು, ಮೊನ್ನೆ ಕುಮಾರ ಫೋನ್ ಮಾಡಿದ್ದ.. ಕ್ಷೇಮ ಸಮಾಚಾರ ಮುಗಿದು "ನೀನು ಮಾಯವಾಗೋದು ಯಾವಾಗ" ಅಂತ ಆತನಿಗೆ ಕೇಳಿದೆ .. ಯಾಕೆ ಅಂದ.. ಅಲ್ಲ ನೀನು ಅಷ್ಟೊಂದು ಸಪೂರ ಆಗ್ಬಿಟ್ಟಿದ್ದೆ, ಹೀಗೆ ಆದ್ರೆ ಒಂದು ದಿನ ನೀನು ಮಾಯ ಆಗ್ಲೇ ಬೇಕಲ್ಲ ಅಂತ ನಕ್ಕೆ.. "ಇಲ್ವೋ ನಾನೀಗ ೬೫ ಕಿಲೋ ಗೊತ್ತ.." ಅಂತ ಪಕ ಪಕನೆ ನಕ್ಕ.. ಅದೇ ಕೆಲವೊಂದು ಪೋಲಿ ಜೋಕ್ ಮಾಡಿದ.. ಅಡಿಕೆ ಹೇಗಿತ್ತು ಈ ವರ್ಷ ಅಂತ ಕೇಳಿದ್ದಕ್ಕೆ "ಹೇಗಿರುತ್ತೆ?? ಪ್ರತಿ ಸಲದಂತೆ ಕೆಂಪಗೆ, ದುಂಡಗೆ ಹಾಗೆ ಇದೆ " ಅಂತ ಮತ್ತೆ ನಗಲು ಶುರು ಹಚ್ಚಿದ.. ಕುಮಾರ ಹಿಂದಿನಂತೆ ಆಗಿದ್ದು ನನಗೆ ಸಮಾಧಾನ ತಂದಿತ್ತು..ಮಾಟ ಮಂತ್ರ ಎಲ್ಲಾ ತೊಲಗಿ ಹೋಗಿದೆ ಅಂತ ಆತನಿಗೆ ಖಾತ್ರಿಯಾಗಿ ನಿರುಮ್ಮಳನಾಗಿದ್ದ... ಮಗಳನ್ನು ಈ ವರ್ಷ ಶಾಲೆಗೆ ಸೇರಿಸಬೇಕೆಂದು, ಇನ್ನೊಂದು ನಾಮಕರಣದ ಊಟಕ್ಕೆ ನಾನು ಇನ್ನು ಕೆಲವೇ ತಿಂಗಳುಗಳಲ್ಲಿ ಆತನ ಮನೆಗೆ ಹೋಗಬೇಕಾಗುತ್ತೆ ಅಂತ ತಿಳಿದು ಸಂತೋಷವಾಯಿತು.. ಹಾಗೆ ಮಾತು ಮುಗಿಸಿದ ನಾನು,
ಆವತ್ತು ಹಟ್ಟಿಯಲ್ಲಿ ಸಿಕ್ಕಿದ್ದ ತಾಮ್ರದ ತಗಡನ್ನು ನಾನೇ ಶೆಣೈ ಅವರ ಅಂಗಡಿಯಿಂದ ತಂದಿದ್ದೆಂದೂ , ಅದರಲ್ಲಿ ಕುಂಕುಮ ಹಾಕಿ ಮಡಚಿ ಹಟ್ಟಿಯ ಹತ್ತಿರ ಹೋದಾಗ ಅವರಿಬ್ಬರಿಗೂ ತಿಳಿಯದಂತೆ ನಾನೇ ಇಟ್ಟಿದ್ದೆಂದೂ , ಅದನ್ನೇ ಅವರಿಗೆ ಸಿಗುವಂತೆ ಮಾಡಿ ಮಾಟ ಎಲ್ಲಾ ಹೋಯ್ತು ಅನ್ನೋ ನಂಬಿಕೆ ಬರುವಂತೆ ಮಾಡಿದ್ದೆಂದೂ , ಕುಮಾರನಿಗೆ ಹೇಳಲೇ ಇಲ್ಲ!!!!!
--ಮುಗಿಯಿತು.
Wednesday, April 7, 2010
Monday, April 5, 2010
ಭೂತದ ಬೆನ್ನುಹತ್ತಿ !!!
ಕುಮಾರ ..!! ಕಾಲೇಜ್ ನಲ್ಲಿರುವಾಗ ನಮ್ಮ ಜೊತೆ ಗೆಳೆಯರ ಪೈಕಿ ಈತನೂ ಒಬ್ಬ... ನಮ್ಮ ಗುಂಪಿನಲ್ಲಿ ಅತ್ಯಂತ ಪೋಲಿ ಹುಡುಗ ಅಂದ್ರೆ ಈತನೇ.. ಯಾರಿಗಾದರೂ ಕಾಮೆಂಟ್ ಹೊಡೆಯೋದು, ತಮಾಷೆ ಮಾಡೋದು, ಲೈನ್ ಹೊಡೆಯೋದು ಎಲ್ಲದರಲ್ಲೂ ಮುಂದು.. ನಮ್ಮ ಕಾಲೇಜ್ ಗೆ ಬರುತ್ತಿದ್ದ ಮಿನಿ ಸ್ಕರ್ಟ್ ಹುಡುಗಿಯರಿಗೆ ಚೂಡಿದಾರ್ ಹಾಕಿಕೊಂಡು ಬರುವಂತೆ ಮಾಡಿದ್ದು ಈತನೇ... ಹೇಗೆ ಅಂತೀರಾ? ಯಾರಾದರೂ ಹುಡುಗೀರು ಮಿನಿ ಸ್ಕರ್ಟ್ ಹಾಕಿಕೊಂಡು ಬಂದರೆ ಮುಗೀತು ಈತ "ಉಫ್ಫ್" "ಉಫ್ಫ್" ಅಂತ ಗಾಳಿ ಬಿಡಲು ಪ್ರಾರಂಭಿಸುತ್ತಿದ್ದ.. ಏನಯ್ಯಾ ಇದು ಅಂತ ಒಮ್ಮೆ ಕೇಳಿದ್ದಕ್ಕೆ "ಏನಿಲ್ಲಾ, ಅಷ್ಟೊಂದು ಚಿಕ್ಕ ಸ್ಕರ್ಟ್ ಹಾಕಿಕೊಂಡಿದ್ದಾಳಲ್ಲ, ಎಲ್ಲಿಯಾದರೂ ಗಾಳಿಗೆ ಮೇಲೆ ಹಾರುತ್ತೋ ನೋಡೋಣ" ಅಂತ ಹೇಳಿ ಪೋಲಿ ನಗು ಬೀರಿದ್ದ.. ಇದನ್ನು ತಿಳಿದ ಹುಡುಗೀರು ಮಿನಿ ಸ್ಕರ್ಟ್ ತೊಡೊದನ್ನೇ ನಿಲ್ಲಿಸಿದರು...!!! ಇದೊಂದು sample ಅಷ್ಟೇ ಆತನ ಪೋಲಿ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ.. ತುಂಬಾ ಚಟುವಟಿಕೆಯ ಮನುಷ್ಯ .. ನೋಡಲೂ ಸುಮಾರಾಗಿದ್ದ.. ಕಾಲೇಜ್ ಮುಗಿಸಿ ಅಪ್ಪ ಮಾಡಿಟ್ಟಿದ್ದ ೧೦-೧೨ ಎಕರೆ ಯಷ್ಟಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಹಾಯಾಗಿದ್ದ.. ಮದುವೆಯೂ ಆಗಿ ೨೦೦೫ ರ ಹೊತ್ತಿಗೆ ಒಂದು ಮಗು ಕೂಡ ಆಗಿತ್ತು... ಆದರೆ....
ಅದು ೨೦೦೯ ಜನವರಿನೋ ಫೆಬ್ರುವರಿನೋ ಸರಿಯಾಗಿ ನೆನಪಿಲ್ಲ , ಒಂದು ಸಾರಿ ಊರಿಗೆ ಹೋಗಿದ್ದ ನಾನು ಕುಮಾರನನ್ನು ಭೇಟಿಯಾದೆ.. ಆತನನ್ನು ನೋಡಿದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.. ಈತನೇ ಕುಮಾರನಾ? ನಂಬಲಿಕ್ಕೆ ಆಗಲಿಲ್ಲ.. ಆತನ ದೇಹ ಅಸ್ತಿಪಂಜರದಂತೆ ಆಗಿ ಹೋಗಿತ್ತು... ಆತನೇ ತುಂಬಾ ಪ್ರೀತಿಯಿಂದ ಬೆಳೆಸಿದ್ದ ತೋಟ ನೀರಿಲ್ಲದೆ ಕೆಂಪಗಾಗಿತ್ತು..."ಏನಯ್ಯ ಇದು" ಅಂದೆ... ಯಾರಿಗಾದರೂ ತಮಾಷೆ ಮಾಡುತ್ತಾ ಅಷ್ಟೊಂದು ಉಲ್ಲಾಸದಿಂದಿದ್ದ ಹಿಂದಿನ ಕುಮಾರ ಮಾತೆ ಆಡಲಿಲ್ಲ.. ನನಗೆ ಗಾಬರಿಯಾಯಿತು.. ಎಷ್ಟಾದರೂ ನನ್ನ ಸ್ನೇಹಿತನಲ್ಲವೇ.. "ಏನಾದರೂ ಖಾಯಿಲೇನಾ" ಮತ್ತೆ ಕೇಳಿದೆ.. ಇಲ್ಲಪ್ಪ ಅಂದ.. ಮತ್ತಿನ್ನೇನು ಹೀಗಾಗಿದ್ದಿಯಾ? ಅಂತ ಕೇಳಿದ್ದಕ್ಕೆ ಮನೆಗೆ ಬಾ ಮಾತಾಡೋಣ ಅಂತ ಕರೆದುಕೊಂಡು ಹೋದ... ನಾವು ಮನೆಗೆ ಹೋಗುತ್ತಿದ್ದಂತೆ ಅಲ್ಲೇ ಅಂಗಳದಲ್ಲಿದ್ದ ಆತನ ೩.೫ ವರ್ಷದ ಮಗಳು ಮನೆಯೊಳಕ್ಕೆ ಓಡಿಹೋದಳು.. ಆತನ ಮನೆಯನ್ನೊಮ್ಮೆ ವೀಕ್ಷಿಸಿದೆ... ಹಿಂದಿನ ಸೊಬಗಿಲ್ಲ.. ಆತನ ಮನೆ ಮುಂದೆ ಇದ್ದ ಎರಡು ಭಯಂಕರ ನಾಯಿಗಳ ಶಬ್ದವಿಲ್ಲ... ಆತನ ಹೆಂಡತಿಯೂ ಸೊರಗಿ ಹೋಗಿದ್ದಳು.. ನನಗೇನೂ ಅರ್ಥವಾಗದೆ ಆತನ ಮನೆಯ ಬದಿಯಲ್ಲಿದ್ದ ದನಗಳ ಹಟ್ಟಿಯ ಕಡೆ ವೀಕ್ಷಿಸಿದೆ.. ೧೦-೧೨ ರಷ್ಟಿದ್ದ ದನ ಎಮ್ಮೆ ಯಾವುದೂ ಇರಲಿಲ್ಲ..ಉಹುಂ ಒಂದೇ ಒಂದು ದನವಾಗಲಿ ಎಮ್ಮೆಯಾಗಲಿ ಇಲ್ಲ.. ಏನಿದೆಲ್ಲಾ.. ನನಗೆ ಅರ್ಥವಾಗದೆ ಮೆಲ್ಲನೆ ಕುರ್ಚಿಯಲ್ಲಿ ಕೂತೆ.. ಮನಸ್ಸಿನಲ್ಲಿ ಏನೇನೊ ಕಲ್ಪನೆಗಳು... ಏನಾದರೂ ಖಾಯಿಲೆ ಬಂದಿರಬಹುದೇ..? ಅಥವಾ ಈತನ ಅಪ್ಪನಂತೆ ಈತನೂ ಕುಡಿತದ ದಾಸನಾಗಿ ಬಿಟ್ಟನೇ? ಅಪ್ಪನ ಕುಡಿತ ಬಿಡಿಸಲು ಶತಾಯ ಗತಾಯ ಯತ್ನಿಸಿದ್ದ ಕುಮಾರನೇ ಹೀಗೆ ಮಾಡಿಯಾನೆ?.. ನಾನು ಸುಮ್ಮನೆ ಗರಬಡಿದಂತೆ ಕುಳಿತೆ ಇದ್ದೆ.. ಆತ ಕಾಫಿ ತಂದುಕೊಟ್ಟ.. ನನಗೆ ತಡೆಯಲಾಗಲಿಲ್ಲ... "ಏನೋ ಇದು , ಇದೇನು ಎಲ್ಲಾ ಹೀಗಾಗಿ ಹೋಗಿದೆ? ಏನಾದ್ರು ತೊಂದ್ರೆನಾ.. ಕೃಷಿಯಲ್ಲಿ ಏನಾದರೂ ಲೋಸ್ಸ್ ಆಯ್ತಾ.." ಆತ ಒಂದು ಕ್ಷಣ ಆತನ ಹೆಂಡತಿಯ ಮುಖ ನೋಡಿದ.. ಆಕೆಯ ಕಣ್ಣುಗಳು ಆಗಲೇ ಒದ್ದೆಯಾಗಿದ್ದವು..."ಇಲ್ಲ ಗೋರೆ.. ಈಗೆ ೮ ತಿಂಗಳ ಹಿಂದಿನಿಂದ ಇದು ಪ್ರಾರಂಭವಾಯಿತು" ಅಂದ..
ಅರ್ಥವಾಗದೆ ಆತನ ಮುಖ ನೋಡಿದೆ.. "ಈಗ್ಗೆ ೮ ತಿಂಗಳ ಹಿಂದೆ ನಮ್ಮ ಹಟ್ಟಿಯಲ್ಲಿ ೨ ದನಗಳು ಸತ್ತು ಹೋದವು.. ಆಮೇಲೆ ಒಂದು ನಾಯಿ.. ಹೀಗೆ ೨-೩ ತಿಂಗಳಲ್ಲಿ ೪-೫ ಜೀವಗಳು ಒಂದೊಂದಾಗಿ ಹೋಗಿಬಿಟ್ವು.. ಏನೆಂದೇ ಅರ್ಥವಾಗಲಿಲ್ಲ.. ಗೋ- ಡಾಕ್ಟರ ಸಹ ಕಾರಣ ತಿಳಿಯದೆ ಹಿಂದುರಿಗಿದ...ಎಲ್ಲಾ ಸಾಯೋದು ಬೇಡ ಅಂತ ಎಲ್ಲಾ ದನ-ಕರು ಮಾರಿಬಿಟ್ಟೆ.. ನಾನೇ ತುಂಬಾ ಜ್ಯೋತಿಷಿ ಗಳ ಬಳಿ ಹೋದೆ.. ಆಮೇಲೆ ತಿಳೀತು ನೋಡು" ಆತ ಮಾತು ನಿಲ್ಲಿಸಿದ..
"ಏನು ಏನಂತ ತಿಳೀತು"
"ಕುಂದಾಪುರದ ಹತ್ತಿರ ಒಬ್ಬ ಜ್ಯೋತಿಷಿ ಇದ್ದಾನೆ , ತುಂಬಾ ತಿಳಿದವನು..ತುಂಬಾ ಫೇಮಸ್ ... ಆತನ ಬಳಿ ಪ್ರಶ್ನೆ ಕೇಳಿದೆ. ಆಗ್ಲೇ ನನಗೆ ಈ ವಿಷಯ ತಿಳಿದದ್ದು.. ಪರಿಹಾರಕ್ಕಾಗಿ ತುಂಬಾ ಖರ್ಚು ಮಾಡಿದೆ ಆದರೆ ಯಾವುದೇ ಉಪಯೋಗ ಆಗ್ಲಿಲ್ಲ.."
ಆತನ ಮುಖವನ್ನೇ ಗಮನಿಸಿದೆ.. ಇಷ್ಟು ಮಾತಿಗೆ ಆತ ಬೆವರತೊಡಗಿದ್ದ .!!
"ಯಾರೋ , ಯಾರೋ ನಮಗೆ ಮಾಟ ಮಾಡಿದ್ದಾರಂತೆ!!!" ಕುಮಾರ ಗಕ್ಕನೆ ತನ್ನ ಮಾತು ನಿಲ್ಲಿಸಿದ..
"ಏನು? ಮಾಟ?? " ನಾನು ಒಂದು ಕ್ಷಣ ಬೆಚ್ಚಿಬಿದ್ದೆ!!!!
--ಮುಂದುವರೆಯುವುದು..

ಬ್ಲಾಗ್ ಕಳ್ಳರು!!!
ಇದು ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿತ್ತು... http ://ravikanth -gore .blogspot .com ಅಂತ ಟೈಪಿಸಿದ ಕೂಡಲೇ ನನ್ನ ಬ್ಲಾಗ್ ಗೆ ಹೋಗೋದು ಬಿಟ್ಟು ಅದು ಇನ್ನೊಂದು ತಾಣ http ://freegadget2015 .blogspot .com ಅನ್ನೋ ತಾಣಕ್ಕೆ ಲಗ್ಗೆ ಇಡುತ್ತಿತ್ತು... ಇದ್ದ್ಯಾಕೆ ಹೀಗೆ ಅಂತ ಕಾರಣ ಹುಡುಕುತ್ತಲೇ ಇದ್ದೆ... ಕೊನೆಗೂ ತಿಳಿಯಿತು, ಇಲ್ಲಿ ಬ್ಲಾಗ್ ಕಳ್ಳರೂ ಇದ್ದಾರೆ..
ಬ್ಲಾಗಿಗೆ ಕೆಲವಾರು ತಿಂಗಳ ಹಿಂದೆ ಚೆಸ್ ಆಟದ gadget ಒಂದನ್ನ ಸೇರಿಸಿದ್ದೆ ಇದಕ್ಕೆ ಕಾರಣ.. ಈ gadget ನಲ್ಲಿ ನಮ್ಮ ಬ್ಲಾಗ್ ಅನ್ನು hijack ಮಾಡೋ ಕೋಡ್ ಬರೆದಿರುತ್ತಾರೆ.. ಅದು ನಮಗೆ ಬೇಕಾದ ತಾಣ ಬಿಟ್ಟು ಬೇರೆಯದೇ ತಾಣಗಳಿಗೆ ಲಗ್ಗೆಯಿಡುತ್ತದೆ... ಆ ಮೂಲಕ ಬ್ಲಾಗ್ ಕಳ್ಳರು ತಮ್ಮ ತಾಣಗಳ ಭೇಟಿಗಳ ಸಂಖ್ಯೆ ಹೆಚ್ಚಿಸಿಕೊಂಡು, ಗೂಗಲ್ ad ಮೂಲಕ ದುಡ್ಡು ಮಾಡುತ್ತಾರೆ.. ನಾನು ಆ ಚೆಸ್ ಆಟದ gadget ತೆಗೆದಿದ್ದೆ ಎಲ್ಲವೂ ಸರಿಹೋಯಿತು..
ಇದಿಷ್ಟೂ ನಿಮಗೂ ತಿಳಿದಿರಲಿ ಎಂದು ಇಲ್ಲಿ ಹಾಕಿದೆ.. ನೀವೂ ಇಂತಹ ತೊಂದರೆಗೆ ಸಿಳುಕಿಕೊಂಡಿದ್ದಲ್ಲಿ ಒಮ್ಮೆ ಇಂತಹ ಬೇಡದ gadget ತೆಗೆದು ಹಾಕಿ ನೋಡಿ... ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ..

Thursday, March 25, 2010
ಸದಾನಂದ ಮತ್ತು ಗುಣಪಾಲ ಮೇಷ್ಟ್ರು!!
ಮೊನ್ನೆ ಸದಾನಂದ ಸಿಕ್ಕಿದ್ದ.. ತುಂಬಾ ದಿನಗಳಾಗಿದ್ದವು ಆತನನ್ನು ಭೇಟಿ ಮಾಡಿ.. ಅಪರೂಪಕ್ಕೆ ಒಮ್ಮೊಮ್ಮೆ ಬೀರ್ ಕುಡಿಯೋ ಅಭ್ಯಾಸವಿದೆ ಆತನಿಗೆ... ಮೊನ್ನೆ ಸಿಕ್ಕಿದವನೇ "ಬೀರು" ಅಂತ ನನ್ನ ಮುಖ ನೋಡಿ ನಕ್ಕ.."ಸರಿ , ನೀನು ಹೋಗಿ ಕುಡಿದು ಬಾ ನಾನಿಲ್ಲೇ ಇರ್ತೀನಿ" ಅಂದೆ.. ಇಲ್ಲ ನೀನು ನನ್ನ ಜೊತೆ ಬರಬೇಕು ಅಂತ ಹಠ ಹಿಡಿದ.. ಸರಿ ಅಂತ ಆತನ ಜೊತೆ ಒಂದು ಗಾರ್ಡನ್ ಹೋಟೆಲ್ ಕಡೆ ಸಾಗಿದೆ.. ನಾವಿಬ್ಬರೂ ಸಿಕ್ಕರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ.. ಮಾಡಿದ ಚೇಷ್ಟೆಗಳು, ಮಾಡಿಕೊಂಡ ಅವಘಡಗಳು, ಈಗ ನೆನೆಸಿಕೊಂಡರೆ ನಗು ಬರುತ್ತೆ.. ಹಾಗೆ ಮೊನ್ನೆ ಆತನ ಜೊತೆ ಕೂತಿದ್ದಾಗ ಕೆಲವೊಂದು ಘಟನೆಗಳು ನೆನಪಾದವು..
ಘಟನೆ ಒಂದು..
ಆಗ ಬಹುಶ ನಾವು ನಾಲ್ಕನೇ ತರಗತಿಯಲ್ಲಿ ಇದ್ದಿರಬೇಕು.. ಬೆಳಗ್ಗೆ ನಾವಿಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ಆವತ್ತೋ ಹಾಗೆ ಶಾಲೆಗೇ ಹೊರಟವನನ್ನು ಕೇಳಿದೆ "ಮಗ್ಗಿ ಕಲ್ತಿಯಾ"? ಯಾವ ಮಗ್ಗಿ ? ಸದಾನಂದ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ.. "ಲೋ ಗೂಬೆ ನಿನ್ನೆ ತಾನೇ ಗುಣಪಾಲ ಮೇಷ್ಟ್ರು ಹೇಳಿದ್ರಲ್ಲ ಎಲ್ರೂ ೬ ನೆ ಮಗ್ಗಿ ಬಾಯಿಪಾಠ ಮಾಡಿಕೊಂಡು ಬರಬೇಕು ಅಂತ.. ಕಲ್ತಿಲ್ವ? ನಿನಗಿವತ್ತು ಇದೆ ನೋಡು" ನಾನು ಇಷ್ಟು ಹೇಳಿದ್ದೆ ಸದಾನಂದ ಒಂದು ಕ್ಷಣ ಬೆಚ್ಚಿ ಬಿದ್ದ.. ಗುಣಪಾಲ ಮೇಷ್ಟ್ರು..!!! ನೆನೆಸಿಕೊಂಡರೆ ಹೆದರಿಕೆ ಯಾಗುತ್ತಿತ್ತು.. ತುಂಬಾ ಜೋರು.. ಅವರ ಬೆತ್ತದ ರುಚಿ ನೋಡದೆ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಬಂದಿರಲಿಕ್ಕಿಲ್ಲ.. ಇವತ್ತು ಸದಾನಂದನಿಗೆ ಹೊಡೆತ ಖಂಡಿತ.. ಸದಾನಂದನ ಮುಖ ಬಿಳುಚಿಕೊಂಡಿತ್ತು.. ಆಟದ ಮಧ್ಯೆ ಮಗ್ಗಿ ಕಲಿಯುವುದೇ ಮರೆತಿದ್ದನಾತ.. "ನೀನು ಹೋಗು ನಾನು ಈಗಲೇ ಬಂದೆ" ಅಂದವನೇ ಆತ ಮನೆಯತ್ತ ಓಟಕಿತ್ತ.. ಅದ್ಯಾಕೆ ಓಡಿದ ಎಂದು ತಿಳಿಯದೆ ನಾನು ಅವಕ್ಕಾಗಿ ಶಾಲೆಯತ್ತ ಹೆಜ್ಜೆ ಹಾಕಿದೆ.. ಇನ್ನೇನು ಗುಣಪಾಲ ಮಾಸ್ತರು ಪಾಠ ಮಾಡಲು ಬಂದರು ಅನ್ನುವಷ್ಟರಲ್ಲಿ ಸದಾನಂದ ಹಾಜರಾಗಿದ್ದ!!
"ಎಲ್ರೂ ಮಗ್ಗಿ ಕಲ್ತಿದ್ದೀರ??" ಮಾಸ್ತರು ಕೇಳಿದ್ದಕ್ಕೆ ನಾವೆಲ್ಲಾ "ಹೌದು ಸಾರ್" ಎಂದು ಕೂಗಿಕೊಂಡೆವು.. "ಒಬ್ಬೊಬ್ಬರಾಗಿ ಶುರು ಮಾಡಿ" ಹಾಗೆ ಮೇಷ್ಟ್ರು ಹೇಳುತ್ತಿದ್ದಂತೆ ಮೊದಲನೇ ಬೆಂಚಿನಿಂದ ಒಬ್ಬೊಬ್ಬರಾಗಿ ಮಗ್ಗಿ ಒಪ್ಪಿಸತೊಡಗಿದೆವು.. ನನ್ನ ಸರದಿಯೂ ಬಂತು.. ನಾನು ಮುಗಿಸಿದ್ದೇ ಸದಾನಂದ ನಿಧಾನಕ್ಕೆ ಎದ್ದು ನಿಂತ.. ಆತನ ಕೈ ಕಾಲು ಮೆಲ್ಲನೆ ನಡುಗುತ್ತಿತ್ತು.. "ಆರೊಂದ್ಲಿ ಆರು, ಆರು ಯೆರಡ್ಲಿ ಹನ್ನೆರಡು..ಆರು ಮೂರ್ಲಿ ...." ಸದಾನಂದ ತಡವರಿಸತೊಡಗಿದ..."ಆರು ಮೂರ್ಲಿ ಹದಿನೆಂಟು" ಹಾಗಂತ ಹೇಳಿಕೊಟ್ಟ ಮೇಷ್ಟ್ರು ಆತನ ಬೆನ್ನಿನ ಮೇಲೆ "ಛಟ್" ಅಂತ ಬೆತ್ತ ಬೀಸಿಯೇ ಬಿಟ್ಟರು.. ಸದಾನಂದ ಹಾಗೆಯೇ ಹೇಳಿ ಮತ್ತೆ ತಡವರಿಸತೊಡಗಿದ.. ಪ್ರತಿಯೊಂದು ಮಗ್ಗಿಯ ಪಂಕ್ತಿಗೂ ಒಂದೊಂದು ಏಟು.. ಹುಹ್.. ಒಂದು ಅಥವಾ ಎರಡು ಏಟಿಗೆ ಕಣ್ಣೀರು ಹರಿಸುತ್ತಿದ್ದ ಸದಾನಂದ ಆವತ್ತು ನಾಲ್ಕು ಬಿದ್ದರೂ ತುಟಿಪಿಟಿಕ್ ಎಂದಿರಲಿಲ್ಲ.. ಬದಲಿಗೆ ಆತನ ಮುಖದಲ್ಲಿ ಸಣ್ಣಗೆ ನಗು.. ನನಗ್ಯಾಕೋ ಅನುಮಾನ ಕಾಡತೊಡಗಿತು..ಅದ್ಯಾಕೋ ಸದಾನಂದನಿಗೆ ಹೊಡೆಯುವಾಗ ಬೇರೆಯೇ ರೀತಿಯ ಶಬ್ದ ಬರುತ್ತಿತ್ತು!!!.. ಆತ ಅದೇನೋ ಬೆನ್ನಿಗೆ ಕಟ್ಟಿಕೊಂಡಂತೆ.. ಅದು ಮಾಸ್ತರಿಗೂ ಗೊತ್ತಾಗಿ ಹೋಯಿತು.. "ಅಂಗಿ ಬಿಚ್ಚು" ಗುಣಪಾಲ ಮಾಸ್ತರು ಅಬ್ಬರಿಸಿದರು.. ಸದಾನಂದ ನಡುಗುತ್ತ ಅವರ ಮುಖ ನೋಡತೊಡಗಿದ.. "ನಿಕ್ಕೆ ಪನ್ಯ ಅಂಗಿ ದೆಪ್ಪು" ಈ ಬಾರಿ ಗುಣಪಾಲ ಮೇಷ್ಟ್ರು ಸದನಂದನ ಮಾತೃ ಭಾಷೆ ತುಳುವಿನಲ್ಲಿ ಆಜ್ಞಾಪಿಸಿದರು .. ಬೇರೆ ವಿಧಿಯಿಲ್ಲದೇ ಸದಾನಂದ ನಿಧಾನಕ್ಕೆ ಅಂಗಿ ಬಿಚ್ಚಿದ.. ಅದನ್ನು ನೋಡಿ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆವು..!!!!
ಗುಣಪಾಲ ಮಾಸ್ತರ ಏಟಿಗೆ ಹೆದರಿಕೊಂಡಿದ್ದ ಸದಾನಂದ ತನ್ನ ಬೆನ್ನಿಗೆ ಅಡಕೆ ಮರದ ಹಾಳೆಯೊಂದನ್ನು ಕಟ್ಟಿಕೊಂಡು ಬಂದಿದ್ದ.. ಆತ ಮನೆಗೆ ಓಡಿ ಹೋಗಿದ್ದು ಯಾಕೆ ಅನ್ನೋದು ನನಗೆ ಆಗ ಅರ್ಥವಾಗಿತ್ತು... ನಾವೆಲ್ಲಾ ಜೋರಾಗಿ ನಗುತ್ತಿದ್ದರೆ ಅದನ್ನು ನೋಡಿ ಗುಣಪಾಲ ಮೇಷ್ಟ್ರು ಸಹ ನಗತೊಡಗಿದರು..."ನಾಳೆ ಬರುವಾಗ ಮಗ್ಗಿಯನ್ನು ೫೦ ಸಾರಿ ಬರೆದುಕೊಂಡು ಬಾ" ಅಂತ ಶಿಕ್ಷೆ ವಿಧಿಸಿದ ಮೇಷ್ಟ್ರು ನಗುತ್ತ ಕ್ಲಾಸಿನಿಂದ ಹೊರನಡೆದರು!!!
ಎರಡನೆ ಘಟನೆಯನ್ನು ಮುಂದೆ ಬರೆಯುವೆ!!!

Tuesday, March 23, 2010
ಸುಮ್ನೆ ತಮಾಷೆಗೆ!!!
ನೀತಿ !!!
ಬಿರುಗಾಳಿಗೆ ಬೀಸಲು ಯಾರೂ ಕಲಿಸುವುದಿಲ್ಲ,
ಸುನಾಮಿಗೆ ಹೇಗೆ ಅಪ್ಪಳಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಭೂಮಿಗೆ ಹೇಗೆ ಕಂಪಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಹಾಗೆಯೇ ಹೆಂಡತಿಯನ್ನು ಹೇಗೆ ಆಯ್ಕೆ ಮಾಡಬೇಕೆಂದು ಯಾರೂ ಕಲಿಸುವುದಿಲ್ಲ...
ನೀತಿ: ಪ್ರಕೃತಿ ವಿಕೋಪಗಳು ಯಾರೂ ಕಲಿಸಿ ಬರುವಂಥದ್ದಲ್ಲ, ಅವು ತನ್ನಿಂತಾನೆ ನಡೆಯುತ್ತವೆ!!!
----------------------------------------------------------------------------------------------------------------------------
ವ್ಯತ್ಯಾಸ!!
ಸ್ನೇಹಿತನಿಗೆ ನೀನು ನನ್ನ ಉತ್ತಮ ಸ್ನೇಹಿತ ಅಂತ ಹೇಳಬಹುದು..
ಆದರೆ ಹೆಂಡತಿಗೆ, ನೀನು ನಾನ ಉತ್ತಮ ಹೆಂಡತಿ ಅಂತ ಹೇಳುವ ಧೈರ್ಯ ಯಾರಿಗಿದೆ??
-----------------------------------------------------------------------------------------------------------------------------
ಅತೀ ಚಿಕ್ಕ ಗಲೀಜು ಕಥೆ!
ಅಪ್ಪಟ ರೇಷ್ಮೆ ಬಿಳುಪಿನ ಸುಂದರ ಕುದುರೆಯೊಂದು ಕೆಸರಿನಲ್ಲಿ ಬಿದ್ದು ಹೋಯಿತು!!!

Thursday, February 11, 2010
ಬದನೇಕಾಯಿ !!
ಬಿ ಟಿ ಬದನೆ.. ಬಹುಶ ಎಲ್ಲರೂ ಇದರ ಬಗ್ಗೆ ಕೇಳಿಯೇ ಇದ್ದೀರಿ.. ತುಂಬಾ ದಿನಗಳಿಂದ ಇದರ ಬಗ್ಗೆ ನ್ಯೂಸ್ ಪೇಪರ್ , ಟ್ಟಿ ವಿ ಗಳಲ್ಲಿ ಕೇಳುತ್ತಲೇ ಇದ್ದೇವೆ.. ಬಿ ಟಿ ಬದನೆ ಬೇಕೇ, ಬೇಡವೇ ಅನ್ನೋ ಜಿಜ್ಞಾಸೆ ತುಂಬಾ ದಿನಗಳಿಂದ ನಮ್ಮ ರಾಜಕಾರಣಿಗಳಿಗೆ, ವಿಜ್ಞಾನಿಗಳಿಗೆ ಇದ್ದೆ ಇದೆ.. ಇದು ಬೇಡವೇ ಬೇಡ ಅಂತ ಹೇಳಿರೋದು ಶುದ್ಧ ಭಾರತೀಯರು ಮಾತ್ರ.. ಅವರಿಗೆ ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಕಾಳಜಿಯಿತ್ತು.. ಅರೆ, ಈ ಬದನೆಗೂ ನಮ್ಮ ದೇಶದ ಭವಿಷ್ಯ ಕ್ಕೂ ಏನ್ರೀ ಸಂಬಂಧ ಅಂತ ಕೇಳ್ತೀರಾ?? ಹಾಗಾದ್ರೆ ಮುಂದೆ ಓದಿ..
ಈ ಬಿ ಟಿ ಗೆ ಆಂಗ್ಲ ಭಾಷೆಯಲ್ಲಿ Bacillus thuringiensis ಅಂತ ಹೇಳ್ತಾರೆ.. ಇದೊಂದು ಥರ ಬ್ಯಾಕ್ಟಿರಿಯಾ ಇದ್ದ ಹಾಗೆ.. ಇದನ್ನು ಬದನೆಯ ಬಿಜಕ್ಕೆ injection ಥರಾ ಚುಚ್ಚಿ ಹೊಸ ತಳಿ ರೂಪಿಸಿದ್ರಲ್ಲಾ ಅದಕ್ಕೆ ಬಿ ಟಿ ಬದನೆ ಅಂದ್ರು.. ಇಂತಹ ತಳಿಗಳಿಗೆ Genetically Modified ಆಹಾರ ಅನ್ನುತ್ತಾರೆ.. ಇದರ ಲಾಭ ಏನಪ್ಪಾ ಅಂದ್ರೆ ಇದು ನಮ್ಮ ಮಾಮೂಲಿ ತಳಿಗಿಂತ ಹೆಚ್ಚಿನ ಉತ್ಪತ್ತಿ ನೀಡುತ್ತೆ, ಕೊಳೆನಾಷಕ ಔಶಧಿಯ ಅಗತ್ಯವಿಲ್ಲ (ಇದಕ್ಕೆ ಬಳಸಿರೋ ಬ್ಯಾಕ್ಟಿರಿಯಾ ಮತ್ತು ಕೆಮಿಕಾಲ್ ಗಳು ಕೊಳೆ ಬರೋಕೆ ಬಿಡಲ್ಲ ಅಂದಮೇಲೆ ಕೊಳೆನಾಷಕ ಯಾಕ್ರೀ?), ಗಾತ್ರದಲ್ಲಿ ಇಂತಹ ತರಕಾರಿಗಳು ದೊಡ್ದದಾಗಿರುತ್ತವೆ... ಹೆಚ್ಚಿನ ತರಕಾರಿ, ಹೆಚ್ಚಿನ ದುಡ್ಡು, ಯಾವ ರೈತನಿಗೆ ಬೇಡ ಸ್ವಾಮೀ??
ಹಾಗಾದ್ರೆ ನಮಗೂ ಇದು ಇರ್ಲಾ? ಅಮೇರಿಕಾ ದಲ್ಲಿ ಹೆಚ್ಚಿನ ತರಕಾರಿಗಳೆಲ್ಲಾ ಹೀಗೆ Genetically Modified (ಬದನೆ ಬಿಟ್ಟು).. ಹಾಗಾದ್ರೆ ಇದರಿಂದ ಏನು ನಷ್ಟ? ನಮಗ್ಯಾಕೆ ಬೇಡಾ ಅಂತೀರಾ .. ಪಟ್ಟಿ ದೊಡ್ಡದಿದೆ..
೧. ಇಂತಹ ತರಕಾರಿಗಳಿಗೆ ರುಚಿ ಅನ್ನೋದು ಖಂಡಿತಾ ಇಲ್ಲ.
೨. ಇವು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಅನ್ನೋದು ಇನ್ನೂ ಸಾಬಿತಾಗಿಲ್ಲ.
೩. ಇಡೀ ವಿಶ್ವದಲ್ಲಿ ಇದನ್ನು ಮಾಡೋ ತಾಕತ್ತಿರೋದು ಒಂದೇ ಒಂದು ಕಂಪನಿ ಗೆ ಅದು "ಮೊನ್ಸಂಟೋ".
೪. ಇದಕ್ಕೆ ಸಹಕರಿಸೋದು ಈ ಮೊನ್ಸಂಟೋ ಕಂಪನಿ ಯ ಅಂಗ ಸಂಸ್ತೆಗಳು.
೫. ಈ ಕಂಪನಿ ಅಮೆರಿಕಾದ್ದು..
೬. ಮೊನ್ಸಂಟೋ ಹೊರತಂದ ಇಂತಹ ಉತ್ಪನ್ನಗಳಿಗೆ "ಚೆನ್ನಾಗಿದೆ", "ಏನೂ ತೊಂದರೆ ಇಲ್ಲ ಅಂತ ಪ್ರಮಾಣ ಪತ್ರ ನೀಡೋದು ಶುದ್ಧ ಇಲ್ಲಿಯ ಕಳ್ಳರೇ (ಪ್ರಮಾಣ ಪತ್ರ ನೀಡಿದ ಕಂಪನಿ ಯ ಹೆಸರು ಬೇರೆ ಇರುತ್ತೆ.. ಕಂಪನಿ ಮಾತ್ರ ಮೊನ್ಸಂಟೋ ದ್ದೆ ಆಗಿರುತ್ತೆ)
ಅರೆ ಅರೆ.. ಪಟ್ಟಿ ಮುಂದೆ ಬೆಳೆಸ್ತಿನಿ , ಈಗ ಬದನೆಗೆ ಬರೋಣ.. ಈ ಬಿ ಟಿ ಬದನೆ ಇನ್ನೂ ಯಾವ ದೇಶದಲ್ಲೂ ಇಲ್ಲ.. ನಮ್ಮ ಭಾರತದಲ್ಲೇ ಮೊದಲು ಇದನ್ನು ಮನುಷ್ಯರಿಗೆ ತಿನ್ನಿಸೋಕೆ ಪ್ರಯತ್ನ ನಡೀತಾ ಇದೆ.. ಮೊನ್ಸಂಟೋ ಕಂಪನಿ ಯ ಇನ್ನೊಂದು ಅಂಗ ಸಂಸ್ತೆಯಾದ ಮಹಿಕೋ (Mahyco ) ಈ ಬಿ ಟಿ ಬದನೆ ಹೊರತಂದಿದೆ.. ಆದರೆ ಇದಕ್ಕೆ ಯಾವುದೇ ದೇಶ ಅನುಮತಿ ನೀಡದ ಕಾರಣ ಇದನ್ನು ಈಗ ಭಾರತೀಯರ ಮೇಲೆ ಪ್ರಯೋಗಿಸಲು ಯತ್ನಿಸಲಾಗುತ್ತಿದೆ.. ಎಷ್ಟಾದರೂ ನಾವು ಅಮೇರಿಕಾದ ಪಾಲಿಗೆ ಪ್ರಯೋಗ ಶಾಲೆಯಲ್ಲಿ ಇಲಿ ಇದ್ದಂತೆ ಅಲ್ಲವೇ..ಈ ಬದನೆ ನಮ್ಮ ಮೇಲೆ ಪ್ರಯೋಗ ಆಗಬೇಕು, ತೊಂದರೆ ಇದ್ದರೆ ಅದನ್ನು ಸರಿಪಡಿಸಬೇಕು.. ಯಾವ ಖಾಯಿಲೆ ಹೇಗೆ ಬರುತ್ತೆ ಅನ್ನೋ ಸಂಶೋಧನೆ ನಮ್ಮ ಮೇಲೆ ನಡೀಬೇಕು.. ಎಲ್ಲಾ ಓ ಕೆ ಆದ ಮೇಲೆ ಇದನ್ನು ಅಮೇರಿಕಾ ಬಳಸಬೇಕು...ಹೇಗಿದೆ ಚಾಣಕ್ಯ ನೀತಿ??
ಈಗಾಗಲೇ ಈ ಬದನೆಯನ್ನು ಕೆಲವೊಂದು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ..
೧. ಬಿ ಟಿ ಬದನೆ ತಿಂದ ಇಲಿಗಳು diarrhoea ಗೆ ತುತ್ತಾಗಿವೆ.. ಒಮ್ಮೆಲೇ ಹೆಚ್ಚು ನೀರು ಕುಡಿಯಲು ಪ್ರಾರಂಭಿಸಿವೆ.. ಪಿತ್ತಕೋಶದ ಭಾರ ಕಮ್ಮಿಯಾಗಿದೆ..
೨. ಇದನ್ನು ತಿಂದ ಕೋಳಿಗಳು ಕಾಳು ತಿನ್ನೋದು ಕಮ್ಮಿ ಮಾಡಿದವು..
೩. ಇದನ್ನು ತಿಂದ ದನಗಳು ತಮ್ಮ ಮೈ ಭಾರ ಹಿಗ್ಗಿಸಿ ಕೊಂಡವು.. ಹೆಚ್ಚಿನ ಹಾಲು ನೀಡತೊಡಗಿದವು. ಇವೆಲ್ಲ ಇದರ ಸೈಡ್ ಎಫೆಕ್ಟ್ ಆಗಿತ್ತು..
೪. ಈ ಬದನೆಯಲ್ಲಿ ನಮ್ಮ ಮಾಮೂಲಿ ಬದನೆಗಿಂತ ಶೇಕಡಾ ೧೫ ರಷ್ಟು ವಿಟಮಿನ್ ಗಳು ಕಮ್ಮಿ ಇವೆ.. ಒಂಥರಾ toxic ಆಸಿಡ್ ಈ ಬದನೆಗಳಲ್ಲಿ ಕಂಡು ಬಂದಿದೆ..
೫. ಇದನ್ನು ಬೇರೆ ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ರಕ್ತದ ಕಾಯಿಲೆ ಗಳು ಕಂಡು ಬಂದಿವೆ.. ಅದೇ ರೀತಿ ನಮಗೆ ಗಾಯವಾದಾಗ ರಕ್ತ ಹೆಪ್ಪು ಕಟ್ಟುತ್ತದೆ ಅಲ್ಲವೇ? ಈ ಹೆಪ್ಪುಕಟ್ಟುವಿಕೆ ಅನ್ನೋ ಕ್ರಿಯೆ ಮಾಮೂಲಿಗಿಂತ ಹೆಚ್ಚಿನ ಸಮಯ ತೆಗುದು ಕೊಂಡದ್ದು ಸಂಶೋಧನೆಯಿಂದ ಸಾಬೀತಾಗಿದೆ..
೬. ಇದರಲ್ಲಿರುವ ವಿಟಾಮಿನ್ ಗಳಿಂದಾಗಿ ನಮ್ಮ ದೇಹದ ಮೇಲೆ ಮಾತ್ರೆಗಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ದೇಹದ ಮೇಲೆ ತೋರಲು ವಿಫಲವಾಗಿವೆ (eg : antibiotic resistance ).. ಇದು ನಮ್ಮ ಆರೋಗ್ಯದ ಮೇಲೆ ಎಂತಹ ಘೋರ ಪರಿಣಾಮ ಬೀರಬಹುದು ಗೊತ್ತೇ??
ಆದರೂ ನಮಗೆ ಈ ಬದನೆ ಬೇಕೇ? ನಮ್ಮ ದೇಶದಲ್ಲೇ ಸಿಗುವ ೨೫-೩೦ ಜಾತಿಯ ಬದನೆ ನಮಗೆ ಸಾಕಾಗದೆ?( ಇವೆಲ್ಲಾ ನೈಸರ್ಗಿಕ) .. ಈ ಬದನೆ ಮೇಲೆ ನಮ್ಮ ರಾಜಕಾರಣಿಗಳಿಗೆ ಯಾಕಿಷ್ಟು ಆಸೆ.. ?? ಉತ್ತರ ತುಂಬಾ ಸುಲಭ.. ಇಡೀ ಪ್ರಪಂಚದಲ್ಲಿ , ತಮ್ಮ ಕೆಲಸವಾಗಲು , ದುಡ್ಡು ಮಾಡಲು "ಮೊನ್ಸಂಟೋ" ಕಂಪನಿ ಕೊಡುವಷ್ಟು ಲಂಚ ಯಾರೂ ಕೊಡಲ್ಲ.. ಇವರು ವರ್ಷಕ್ಕೆ ಅತೀ ಹೆಚ್ಚು ದುಡ್ಡು ಖರ್ಚು ಮಾಡುವುದೇ ಲಂಚ ನೀಡಲು ಅಂದ್ರೆ ನಂಬ್ತೀರಾ? (ಹಾಗಂತ ತುಂಬಾ ಜನ ಹೇಳೋದನ್ನ ಅಂತರಜಾಲದಲ್ಲಿ ಓದಿದೆ).. ಇಲ್ಲೂ ಅಷ್ಟೇ ನಮ್ಮ ರಾಜಕಾರಣಿಗಳಿಗೆ ಲಂಚ ಕೊಟ್ಟು ಇದೀಗ ಈ ಕಂಪನಿ ನಮ್ಮ ದೇಶವನ್ನು ಪ್ರಯೋಗ ಶಾಲೆಯನ್ನಾಗಿಸಲು ಹೊರಟಿದೆ.. ಈಗಾಗಲೇ ಬಿ ಟಿ ಹತ್ತಿ ತಂದು ತನ್ನ ವಂಶ ಬೆಳೆಸುತ್ತಿದೆ..
ಹೀಗೆ ಮುಂದುವರಿದರೆ ಏನಾದೀತು??
ನಾವು ಈ ಬಿ ಟಿ ಹತ್ತಿಯನ್ನೇ ನೋಡೋಣ.. ಈಗಾಗಲೇ ನಮ್ಮ ರೈತರು ಈ ಬಿ ಟಿ ಹತ್ತಿಗೆ ಮೊರೆ ಹೋಗಿದ್ದಾರೆ.. ಇದು ಬೀಜ ರಹಿತ ಹತ್ತಿ.. ಹೆಚ್ಚು ಇಳುವರಿ, ಹೆಚ್ಚು ಲಾಭ.. ಆದರೆ ಮೊನ್ಸಂಟೋ ರೈತರಿಗೆ ಈ ಬೀಜ ಕೊಡುವ ಮುನ್ನ ಒಂದು ಒಪ್ಪಂದ ಮಾಡಿಕೊಳ್ಳುತ್ತದೆ.. ಅದು , ಒಮ್ಮೆ ಈ ಬಿ ಟಿ ಬಳಸಿದರೆ ಮುಂದೆ ಕಮ್ಮಿ ಅಂದ್ರೂ ೧೦-೧೫ ವರ್ಷ ಅದನ್ನೇ ಬಳಸಬೇಕು.. ಬೇರೆ ಬೆಳೆ ಬೆಳೆಯುವಂತಿಲ್ಲ, ಮೊನ್ಸಂಟೋ ಕಂಪನಿ ನೀಡುವ ರಾಸಾಯನಿಕಗಳನ್ನೇ ಬಳಸಬೇಕು.. ಹೀಗೆ..
ಒಂದು ವೇಳೆ ಹೀಗೆ ಸಾಗಿದರೆ ಮುಂದೆನಾದಿತು?. ನಾವು ಬಿ ಟಿ ಹತ್ತಿಗೆ ಮೊರೆ ಹೋಗಿ ನಮ್ಮ ದೇಶಿಯ ಹತ್ತಿ ಸರ್ವ ನಾಶವಾಯಿತು ಅನ್ನೋವಾಗ ಯೆದ್ದೆಳುತ್ತಾರೆ ಈ ಕಳ್ಳರು..ಮೊದಲೇ ಇವರದ್ದು ಬೀಜ ರಹಿತ ಹತ್ತಿ.. ಬೆಳೆದ ಹತ್ತಿಯಿಂದ ಮುಂದಿನ ವರ್ಷದ ಬೆಳೆ ಬೆಳೆಯೋಕೆ ಸಾಧ್ಯನೇ ಇಲ್ಲ (ಬೀಜಾನೆ ಇಲ್ವಲ್ಲ ಸ್ವಾಮೀ..) .. ಆಗ ನಾವು ಮತ್ತೆ ಮೊನ್ಸಂಟೋ ಹತ್ತಿರ ಹೋಗಿ ಭಿಕ್ಷೆ ಬೇಡಬೇಕು.. ಬೀಜ ಕೊಡಿ ಅಂತ.. ಇಷ್ಟರವರೆಗೆ ೧ ರೂಪಾಯಿಗೆ ಸಿಗುತ್ತಿದ್ದ ಬೀಜಕ್ಕೆ ಈಗ ೧೦ ರೂಪಾಯಿ ಅನ್ನುತ್ತಾರೆ.. ನಾವು ತಗೋಳ್ಳಲೇ ಬೇಕು.. ೧೦ ರೂಪಾಯಿ ಇದ್ದ ಹತ್ತಿಗೆ ೧೦೦ ರೂಪಾಯಿಯಾಗುತ್ತದೆ.. ಇದು ಹೀಗೆ ಮುಂದುವರಿದು ನಮ್ಮ ಕೃಷಿ ಎಲ್ಲಾ ಮೊನ್ಸಂಟೋ ಕೈಯಲ್ಲಿ..!!! ಇದು ಕೃಷಿಯಲ್ಲಿನ ಎಲ್ಲಾ ವಸ್ತುಗಳಿಗೆ ಅನ್ವಯಿಸೋಕೆ ಎಷ್ಟು ಕಾಲ ಬೇಕಾದೀತು.. ನಿಧಾನಕ್ಕೆ ಅದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ ..
ಅದೇನೋ ಸದ್ಯಕ್ಕೆ ಮಂತ್ರಿ ಮಹಾವರ್ಯ ಇದಕ್ಕೆ ಲಗಾಮು ಹಾಕಿದ್ದಾನೆ.. ಇದೆಲ್ಲ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಬಟ್ಟೆ ಕಟ್ಟುವ ಕೆಲಸ.. ಇನ್ನು ಕೆಲವೇ ದಿನಗಳಲ್ಲಿ ಇಂಥಾ ಬೇರೆ ಬೇರೆ ತರಕಾರಿಗಳು, ಬದನೆ ಎಲ್ಲವೂ ಲಗ್ಗೆ ಹಾಕಲಿವೆ!!!
"ಝಣ ಝಣ ಝಣ ಝಣ ಕಾಂಚಣ ದಲ್ಲಿ
ಅಮೇರಿಕಾದ ಲಾಂಛನದಲ್ಲಿ ,
ಎಲ್ಲಾ ಮಾಯ ನಾಳೆ ನಾವು ಮಾಯ
ಎಲ್ಲಾ ಮಾಯ ನಾಳೆ ನೀವು ಮಾಯ"
ಆದ್ದರಿಂದ.. ಏಳಿ ಭಾರತೀಯರೇ ಎದ್ದೇಳಿ..!!!!

Wednesday, February 3, 2010
ಸುಮ್ನೆ ತಮಾಷೆಗೆ..!!
ಮುತ್ತು..
ಮಾತು ಬೆಳ್ಳಿ
ಮೌನ ಬಂಗಾರವೆಂದರು.
ಬಂಗಾರದ ಆಸೆಗೆ ಮೌನವಾಗಿದ್ದೆ
ಅಮೂಲ್ಯ ಮುತ್ತೊಂದನ್ನ ಕಳೆದುಕೊಂಡಿದ್ದೆ !!
------------------------------------------------------------------------------------------------------------------------
ಅವಸ್ಥೆ
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ ಅಂದರು
ನಿಜವೋ ಸುಳ್ಳೋ ನೋಡಲು ಮುಂದಾದೆ..!
ಕುಂಬಾರನ ತಲೆಗೆ
ದೊಣ್ಣೆಯಿಂದ ಹೊಡೆದು
ಮರುದಿನ ಜೈಲುವಾಸಿಯಾದೆ!!!!
--------------------------------------------------------------------------------------------------------------------
ಮಾಯ
ಬೆಂಗಳೂರನ್ನು
ಮಾಯಾನಗರಿ ಅಂದರು.
'ಮಾಯಾ'ಳನ್ನು ಹುಡುಕುತ್ತ
ನಗರಿಗೆ ಕಾಲಿಟ್ಟೆ..
ಇಂದು ನಾನೇ ಮಾಯವಾದೆ!!

Subscribe to:
Posts (Atom)