Saturday, July 15, 2017

ಸುಮ್ನೆ ತಮಾಷೆಗೆ -೮

ಮನುಷ್ಯರಿಗೂ ಹಂದಿಗೂ ಇರುವ ವ್ಯತ್ಯಾಸವೇನು ? ಶರಾಬು ಕುಡಿದಾಗ ಹಂದಿ ಮನುಷ್ಯನಾಗುವುದಿಲ್ಲ !!

ಹೆಂಡತಿಯ ಜನ್ಮದಿನ ನೆನಪಿರುವವನು, ಆದರೆ ಆಕೆಯ ವಯಸ್ಸು ಮರೆತವನೇ ನಿಜವಾದ ಗಂಡ !!

ಗಂಡಸರು ಅದೆಷ್ಟು ಒಳ್ಳೆಯವರೆಂದರೆ , ತುಂಡುಡುಗೆಯಲ್ಲಿ ೯೦% ಮೈ ತೋರಿಸುತ್ತಾ  ಆಕೆ ಬಂದು ನಿಂತರೂ , ಆಕೆಯ ಬಟ್ಟೆ ಧರಿಸಿದ ಭಾಗವನ್ನಷ್ಟೇ ನೋಡುತ್ತಾನೆ!!

ಆತ ಒಬ್ಬ ಕುರುಡನಿಗಾಗಿ ಬಸ್ಸಿನಲ್ಲಿ ತನ್ನ ಆಸನವನ್ನು ಬಿಟ್ಟು ಕೊಟ್ಟಿದ್ದಕ್ಕೆ ಆತನನ್ನು ಬಸ್ಸಿನ ಡ್ರೈವರ್ ನೌಕರಿಯಿಂದ ತೆಗೆದು ಹಾಕಲಾಯಿತು!

ಗೋರೆ ಉವಾಚ :
ಜೀವನದಲ್ಲಿ ಎರಡು ನಿಯಮಗಳನ್ನು ಪಾಲಿಸಿ ...
೧. ನಿಮಗೆ ಗೊತ್ತಿರುವುದೆಲ್ಲವನ್ನೂ ಇತರರಿಗೆ ಹೇಳಬೇಡಿ ...
೨.


Friday, January 6, 2017

ಗಂಜಿ ಗಿರಾಕಿಗಳು !!

ಮೊನ್ನೆ ಕೆಲಸವಿಲ್ಲದೇ ಇದ್ದಾಗ ಸುಮ್ಮನೆ ಗೀಚಿದ್ದು ...



ಅತ್ಲಾಗೆ ಒಬ್ಬ ಕವಿ, ಇತ್ಲಾಗೆ ಒಬ್ಬ ಸಾಹಿತಿ
ಕುಳಿತು ಹರಟೆಯ ಹೊಡೆಯುತಿರಲು
ಬುದ್ಧಿಜೀವಿಗಳ ಜೀವನವೇ ಪಾವನವು
ಬದುಕಲು ದಾರಿ ನೂರೊಂದು !!


ಬರೆದದ್ದು ಬರೆದಾಯ್ತು , ಒದರಿದ್ದು ಮುಗಿದೋಯ್ತು
ಕೇಳಲು ಜನ ಮಾತ್ರ ಒಂದೊಂದು
ಜೀವನದಿ ಸಾಧಿಸಲು , ಕಷ್ಟಗಳ ಮರಸಾಲು
ಬಿಟ್ಟು ಬೇರೆಯದೇ ದಾರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ದಾರಿಯಲಿ ಸಿಕ್ಕವರ ತಲೆಯನಿಷ್ಠು ಕೊರೆದು
ಅವರೆಲ್ಲ ಉಗಿಯಲು , ಬಾಯಿಯಲ್ಲಿ ತಾಂಬೂಲವನು ತಿಂದು
ಬರೆಯಲು ಏನಿಲ್ಲ , ಹೇಳಲೂ ಮತಿಯಿಲ್ಲ
ಬಿಟ್ಟು ಎಲ್ಲವನು ಅದೇ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಸಾಧಿಸಿದರೆ  ಸಬಲ ನುಂಗಬಹುದು ಅನ್ನುವುದನು ನೆನೆಸಿ
ಅರ್ಥ ತಿಳಿಯದೆ ಚಾಚಿದರು ಹಸ್ತವನು ಪುಡಿಗಾಸಿಗಾಗಿ
ಬಿರುದು ಬಾವಲಿಗಳು ದಾರಿಯಲಿ ಸಿಗುತಿರಲು
ಮತ್ತಿಬ್ಬರು ಸೇರಿದರು ಇದೆ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಇತಿಹಾಸವನು ತಿರುಚಿ , ಮೈಯನ್ನೆಲ್ಲವ ಪರಚಿ
ಅರುಹಿದರು ನಮ್ಮ ಮಾತು ಸ್ವಲ್ಪ ಕೇಳಿರೆಂದು
ಬರುವಾಗ ಬೆತ್ತಲೆ , ಹೋಗುವಾಗ ಬೆತ್ತಲೆ , ನಡುವೆ ಎಲ್ಲವೂ ಕತ್ತಲೆ
ಹುಡುಕಬಹುದಿತ್ತು ಬೆಳಕು ಅಲ್ಲೊಂದು , ಆದರೂ ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!



Sunday, September 18, 2016

ಬಾಂಡ್ಲಿ !!

"ಅಪ್ಪಾ , ಅಮ್ಮನಿಗೆ ಅಷ್ಟೊಂದ್ ಕೂದ್ಲು ಇದೆ , ನಂಗೂ ಇಷ್ಟೊಂದ್ ಕೂದ್ಲಿದೆ , ನಿಂಗೆ ಮಾತ್ರ ಕಮ್ಮಿ ಯಾಕೇ ?"
ಮಗಳು ಕೇಳಿದಾಗ ಮೆಲ್ಲನೆ ಕಣ್ಣು ಬಿಟ್ಟೆ .. "ನಂಗೆ ಮಾತ್ರ ಅಲ್ಲ , ನಿನ್ನ ತಮ್ಮಂಗೂ ಕೂದ್ಲು ಕಮ್ಮಿ ನೋಡು " ೫ ತಿಂಗಳ ಮಗನನ್ನು ತೋರಿಸಿದೆ ..


"ಹೌದಾ .. ಹುಡುಗ್ರಿಗೆ ಕೂದ್ಲು ಕಮ್ಮಿನಾ " ಕೇಳಿದ ಮಗಳು  ಟಿವಿ ನೋಡುವುದರಲ್ಲಿ ಮಗ್ನಳಾದಳು ..
ಆದರೂ ಮಧ್ಯೆ ಮಧ್ಯೆ ಬರುತ್ತಿದ್ದ ಜಾಹೀರಾತುಗಳಲ್ಲಿ ನಿಸರ್ಗಾಲಯ , ಇಂದುಲೇಖಾ ಮುಂತಾದ ಕೇಶತೈಲಗಳ ಜಾಹಿರಾತು ಬರುತ್ತಿದ್ದಂತೆ ತಿರುಗಿ ನನ್ನ ತಲೆ ನೋಡುತ್ತಿದ್ದಳು ..


--------------------------------------------------------------------------------------------------------------------


"ಅಪ್ಪಾ , ತಮ್ಮನಿಗೆ ನನ್ ಥರಾನೇ ಕೂದ್ಲು ಬರ್ತಿದೆ ನೋಡು " ಮಗಳು ಖುಷಿಯಾಗಿದ್ದಳು .. ೧೦ ತಿಂಗಳ ತಮ್ಮನಿಗೂ ಕೂದಲು ಒತ್ತಾಗಿ ಬೆಳೆಯುತ್ತಿದೆ .. ಮತ್ತೆ ನನ್ನ ತಲೆ ನೋಡಿದವಳೇ "ನಿಂಗ್ಯಾಕೆ ಕೂದ್ಲು ಬೆಳೀತಿಲ್ಲ ? ಹುಡುಗ್ರಿಗೆ ಕಮ್ಮಿ ಕೂದ್ಲು ಅಂದ್ಯಲ್ಲ , ಮತ್ತೆ ತಮ್ಮನಿಗೆ ಅಷ್ಟೊಂದು ಕೂದ್ಲು ಬರ್ತಿದೆ " ..
"ನಿನ್ನ ಅಮ್ಮ ತಲೆ ತಿಂದೂ ತಿಂದೂ ಹೀಗಾಗಿದೆ ಪುಟ್ಟಿ " ಅಂದೆ
"ಏನೂ ??" ಒಳಗಿಂದ ಬಂದ ಧ್ವನಿ ದೊಡ್ಡದಾಗಿಯೇ ಇತ್ತು ..
ನಾನು ಸುಮ್ಮನಾದೆ .. ಬಾಂಡ್ಲಿಯಾಗಿದ್ದ  ತಲೆ ಒಮ್ಮೆ ನೇವರಿಸಿಕೊಂಡೆ ..
ಅಡುಗೆ ಮನೆಯಲ್ಲಿರೋ ಬಾಂಡ್ಲಿಯಲ್ಲಿ ಎಣ್ಣೆ ನಿಲ್ಲುತ್ತೆ ಆದರೆ ನಮ್ಮ ಬಾಂಡ್ಲಿ ????
"ನೀನೂ ನಿಸರ್ಗಾಲಯ , ಇಂದುಲೇಖಾ ಹಚ್ಚು " ಮಗಳು ಸಲಹೆ ಕೊಟ್ಟಳು ..
"ಅದೆಲ್ಲ ಸುಮ್ನೆ ಸುಳ್ಳು , ಅದ್ರಿಂದ ಕೂದ್ಲು ಬರಲ್ಲ"..
"ಸುಳ್ಳಾ ?? ಸುಳ್ಳು ಹೇಳಿದ್ರೆ ಪನಿಶ್ಮೆಂಟ್ ಇದೆ ಅಂತ ನೀನೆ ತಾನೇ ಹೇಳಿದ್ದು ... ಅವ್ರಿಗೆ ಯಾರು ಪನಿಷಮೆಂಟ್ ಕೊಡ್ತಾರೆ ? ಏನ್ ಪನಿಶ್ಮೆಂಟ್ ಕೊಡ್ತಾರೆ ?"...
ನಾನು ಮತ್ತೆ ನನ್ನ ತಲೆ ಮೇಲೆ ಕೈ ಆಡಿಸಿದೆ !!!

---------------------------------------------------------------------------------------------------------------------


---------------------------------------------------------------------------------------------------------------------


"ಹಾಕ್ಷಿ " ಮಗಳು ಜೋರಾಗಿ ಸೀನುತ್ತಿದ್ದಳು ... ಮಳೆಯಲ್ಲಿ ಇಬ್ಬರೂ ಗಡದ್ದಾಗಿ ಆಟ ಆಡಿದ್ದರ ಫಲ ..ಶೀತವಾಗಿತ್ತು .. ಅಷ್ಟೊಂದು ಬೆಳೆದ ಕೂದಲು ಎಷ್ಟೇ ಒರೆಸಿಕೊಂಡರೂ , ಪೂರ್ತಿ ಒಣಗಿಸುವುದು ಕಷ್ಟ ಕಷ್ಟ .. ಆದರೆ ನನಗೆ ? ನೀರು ತಲೆಯ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ .. ಶೀತದಿಂದ ಪಾರಾಗಿದ್ದೆ :)


"ಅಪ್ಪಾ , ಅವ್ರೆಲ್ಲ ಯಾಕೆ ಬೆಂಕಿ ಹಾಕ್ತಿದ್ದಾರೆ "   ಟಿವಿ ಮುಂದೆ ಕೂತಿದ್ದ ಮಗಳು ಕೇಳಿದಳು
"ಅದೇನೋ ಕಾವೇರಿ ಗಲಾಟೆ " ಅಂತ ನಂಗೆ ಗೊತ್ತಿದ್ದಷ್ಟು ಹೇಳಿದೆ
"ನೀರಿಗೂ ಜಗಳಾನಾ " ??  ನಾನು ಟಿವಿ ಆರಿಸಿದೆ ..
ಮರುದಿನ ಟಿವಿ ಹಾಕುವಾಗ , ಬೆಂಕಿ ಹಚ್ಚಿದ್ದ ವಾಹನಗಳಿಗೆ ನೀರು ಸುರಿದು ಬೆಂಕಿ ನಂದಿಸುತ್ತಿದ್ದರು ...
"ವೆರಿ ಗುಡ್ , ನಿನ್ನೆ ಬೆಂಕಿ ಹಾಕಿದ್ರಲ್ಲ ಅವ್ರೆಲ್ಲ ಬ್ಯಾಡ್ , ನೀರು ಹಾಕಿ ನಂದಿಸ್ತಾರಲ್ಲ ಇವರು ಗುಡ್ " ಮಗಳು ಕಾಮೆಂಟರಿ ಕೊಡುತ್ತಲೇ ಇದ್ದಳು ..
"ಅಪ್ಪಾ , ಬೆಂಕಿ ನಂದಿಸ್ತಾ ಇದ್ದಾರಲ್ಲ ಇದೂ ಕಾವೇರಿ ನೀರಾ "


"ಇಲ್ಲ ಪುಟ್ಟಿ , ಅಷ್ಟೊಂದು ಕಾವೇರಿ ನೀರು ಇದ್ದಿದ್ರೆ ಜಗಳಾನೇ ಆಗ್ತಿರ್ಲಿಲ್ಲ ... ಬಹುಶ ಇದು ಸಪುತೀ (SPT ) ನೀರು ಇರಬಹುದು "
"ಸಪುತೀ ಅಂದ್ರೆ "
"ಸಕಲ ಪುಕುಳಿ ತೀರ್ಥ "
"ಅಂದ್ರೆ "???
ನಾನು ಮತ್ತೆ ತಲೆ ನೇವರಿಸಿಕೊಂಡೆ
---------------------------------------------------------------------------------------------------------------------


ಗೋರೆ ಉವಾಚ :
ಹಾಳಾಗಿ ಮೂಲೆಯಲ್ಲಿ ಬಿದ್ದಿರುವ ಗಡಿಯಾರ ಸಹ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ !!



Saturday, September 17, 2016

ಸುಮ್ನೆ ತಮಾಷೆಗೆ -೭ !!



೧ .


ಭೀಕರ ಸುನಾಮಿಯ ನಂತರ ಶಾಂತವಾಗಿದ್ದ ಸಮುದ್ರ ತೀರ ದಲ್ಲಿ ನಿಂತಿದ್ದ ಆಕೆಯ ಕಾಲುಗಳಿಗೆ ಬಿದ್ದು ಬಿದ್ದು ಸಮುದ್ರ ಕ್ಷಮೆ ಕೇಳುತ್ತಲೇ  ಇತ್ತು !!
----------------------------------------------------------------------------------------------------------------------


೨..  




ಸುಮಾರು ೧೦ ವರ್ಷಗಳ ನಂತರ ಅವರ ಭೇಟಿಯಾಗಿತ್ತು !! ಆತನಿಗೆ ನಿಶ್ಚಿತಾರ್ಥ ವಾಗಿತ್ತು , ಆಕೆಗೆ ಮದುವೆಯಾಗಿತ್ತು !!!


----------------------------------------------------------------------------------------------------------------------







ಆತ : "ನಿನ್ನನ್ನು ನಾನು ಪ್ರೀತಿಸುತ್ತೇನೆ ಯಾಕೆಂದರೆ ನೀನು ನನಗೆ ಬೇಕು "   ಆಕೆ ಒಲ್ಲೆ ಎಂದಳು ..
ಆತ : "ನೀನು ನನಗೆ ಬೇಕು ಯಾಕೆಂದರೆ ನಿನ್ನನ್ನು ನಾನು ಪ್ರೀತಿಸುತ್ತೇನೆ " ಆಕೆ ಮದುವೆ ಆದಳು !!


-----------------------------------------------------------------------------------------------------------------------




೪..
ಜೇಬಿನಲ್ಲಿ ನಾಣ್ಯಗಳಿದ್ದವರು ಮಳೆಯಲ್ಲಿ ನೆನೆದು , ಆಟವಾಡಿ ಖುಷಿಪಟ್ಟರು ..
ಜೇಬಿನಲ್ಲಿ ನೋಟುಗಳಿದ್ದವರು ಸೂರಿಗಾಗಿ ಹುಡುಕಾಡಿದರು !!


------------------------------------------------------------------------------------------------------------------------




೫..
ಮನುಷ್ಯ ಮತ್ತು ದೇವರು ಒಂದು ಬಾರಿ ಭೇಟಿಯಾದರು .. ಇಬ್ಬರೂ ಒಬ್ಬರನ್ನೊಬ್ಬರು ತೋರಿಸಿ ಹೇಳಿದರು "ನನ್ನ ಸೃಷ್ಟಿಕರ್ತ "!!!!


-----------------------------------------------------------------------------------------------------------------------




ಗೋರೆ  ಉವಾಚ :
ಮನುಷ್ಯ ಸತ್ತ ಮೇಲೆ ದೇವರು ಕೇಳುವ ಮೊದಲ ಪ್ರಶ್ನೆ "ಸ್ವರ್ಗ ಹೇಗಿತ್ತು ?" !!





Sunday, August 7, 2016

ದೆವ್ವದ ಕಾರು !! -೨

ಅಂದರೆ , ಕಾರು ನಿಂತಿದ್ದು ಹೊಸ್ಮಾರಿನಲ್ಲೇ !! ನಾನು ಹೊಸ್ಮಾರು ತಲುಪುವ ವರೆಗೂ ದೆವ್ವ ನನ್ನನ್ನು ಇಳಿಯಲು ಬಿಡಲಿಲ್ಲ .. ಮಳೆಗೆ ಒದ್ದೆಯಾದ ದೇಹ ಬೆವರಿನಲ್ಲೂ ಒದ್ದೆಯಾಗತೊಡಗಿತ್ತು ! ಸೇಸ ಕುಡಿಯಲು ನೀರು ಕೊಟ್ಟ .. ಆ ಒದ್ದೆ ಬಟ್ಟೆಯಲ್ಲಿಯೇ ನೀರು ಕುಡಿದು ಸುಧಾರಿಸಿಕೊಂಡೆ .. ಸೇಸ ಕೊಟ್ಟ ಬಟ್ಟೆಯಲ್ಲಿ ಮೈ ಒರೆಸಿಕೊಂಡೆ !!
"ಏನಾಯಿತು ಭಟ್ರೇ ? ಅಮೆರಿಕಾದಿಂದ ಯಾವಾಗ ಬಂದ್ರಿ " ಸೇಸನ ಪ್ರಶ್ನೆಗೆ ಮೆಲ್ಲನೆ ತಲೆ ಎತ್ತಿ ನೋಡಿದೆ .. ಸುತ್ತಲೂ ಅಂಧಕಾರ .. ಉರಿಯುತ್ತಿದ್ದ ಬಲ್ಬಿನ ಬೆಳಕಿನಲ್ಲಿ ೪ ಮುಖಗಳು ಕಂಡವು ..ಒಬ್ಬ ಸೇಸ , ಇನ್ನೊಬ್ಬ ಬಹುಶ ಈಶ್ವರ ಭಟ್ಟರ ಮಗ ಇರಬೇಕು .. ಇನ್ನಿಬ್ಬರು ಯಾರೆಂದು ತಿಳಿಯಲಿಲ್ಲ  ಅಲ್ಲೇ ಬಿದ್ದಿದ್ದ ಇಸ್ಪೀಟು ಎಲೆಗಳು, ಒದ್ದೆಯಾಗಿದ್ದ ನೆಲ , ಮೈಯಿಂದ ಅಲ್ಲಲ್ಲಿ ತರಚಿ ಒಸರುತ್ತಿದ್ದ ರಕ್ತ ..
"ಈಗಷ್ಟೇ ಬರ್ತಾ ಇದ್ದೀನಿ ಸೇಸ " ಹೇಳಿದವನಿಗೆ ನೆನಪಾಗಿತ್ತು .. ನನ್ನ ಚೀಲಗಳು !! ಅವು ಕಾರಿನಲ್ಲಿಯೇ ಉಳಿದಿವೆ .. ಮತ್ತಷ್ಟು ಗಾಬರಿಯಾಯಿತು !!!


ನನ್ನ ಗಾಬರಿ ಗಮನಿಸಿದ ಸೇಸ "ಹೆದರಬೇಡಿ ಭಟ್ರೆ .. ಬಹುಶ ರಾತ್ರಿ ಮಳೆ ಗುಡುಗಿಗೆ ಹೆದರಿ ಕೊಂಡಿದ್ದೀರಿ .. ಚಾ ಕೊಡಲೇ" ಕೇಳಿದ .. ಬೇಡ ಅಂದೆ ..
"ಅದು ಆ ದೆವ್ವದ ಕಾರು , ನನ್ನ ಚೀಲಗಳು ಅದರಲ್ಲಿಯೇ ಉಳಿದಿವೆ "... ನನ್ನ ಮಾತು ಕೇಳಿ ಎಲ್ಲರೂ ಬೆಚ್ಚಿ ಬಿದ್ದರು ..
"ದೆವ್ವದ ಕಾರೇ " ಅವರಲ್ಲೊಬ್ಬನ ಕೈಯಲ್ಲಿದ್ದ ಟಾರ್ಚು ಲೈಟು ಕೆಳಗೆ ಬಿದ್ದು  ಒಡೆದು ಹೋಗಿತ್ತು !!
೨-೩ ನಿಮಿಷ ಯಾರಲ್ಲೂ ಮಾತಿಲ್ಲ .. ಅಷ್ಟರಲ್ಲೇ ಯಾರೋ ಬಂದು ಕೈಗೆ ಚಾ ಕೊಟ್ಟರು .. ಏನು ಹೇಳಬೇಕೆಂದೇ ಅರ್ಥ ವಾಗಲಿಲ್ಲ .. ಅಷ್ಟರಲ್ಲೇ ಸೇಸ ಯಾರಿಗೋ ಫೋನ್ ಮಾಡತೊಡಗಿದ್ದ .. "ಭಟ್ರೆ , ನಿಮ್ಮ ತಮ್ಮ ಬಂದಿದ್ದಾರೆ ".. ಒಹ್ .. ಆತ ಫೋನ್ ಮಾಡುತ್ತಿದ್ದಿದು ನಮ್ಮ ಅಣ್ಣನಿಗೆ !! ಏನೇನೊ ಆಲೋಚನೆಗಳು ತಲೆಯಲ್ಲಿ ಓಡಾಡತೊಡಗಿದವು .. ಅಷ್ಟರಲ್ಲಿ ೧ ಗಂಟೆ ಎಂದು ಘಡಿಯಾರ ಜೋರಾಗಿ ಬಡಿದುಕೊಂಡಿತ್ತು .. ಮೆಲ್ಲನೆ ಮೊಬೈಲ್ ನೋಡಿದೆ .. ಘಂಟೆ ೧.೩೦ ಆಗಿತ್ತು ... ಸ್ವಲ್ಪ ಹೊತ್ತಿನಲ್ಲೇ ಹೊರಗಡೆ ಜೀಪು ಬಂದು ನಿಂತ ಶಬ್ದ !! ಅಣ್ಣನನ್ನು ನೋಡಿ ಅಳು ಬರುವುದೊಂದೇ ಬಾಕಿ .. ೧೦ ವರ್ಷಕ್ಕೆ ಹಿಂದೆ ಹೇಗಿದ್ದನೋ ಹಾಗೆ.. ಸ್ವಲ್ಪ ಕೂದಲು ಬಿಳಿಯಾಗಿದೆ , ಕನ್ನಡಕ ಬಂದಿದೆ .. ಅದು ಬಿಟ್ಟು ಇನ್ಯಾವ ವ್ಯತ್ಯಾಸವೂ ಇಲ್ಲ .. ನನ್ನನ್ನ ನೋಡಿ ಖಿಷಿಯಿಂದ ನಿಂತಲ್ಲೇ ನಿಂತು ಬಿಟ್ಟ ..
"ಯಾಕೋ ತುಂಬಾ ಹೆದರಿಕೊಂಡಿದ್ದಾರೆ .. ಏನೋ ದೆವ್ವ ನೊಡಿದ್ರಂತೆ " ಸೇಸ ಅಣ್ಣನಿಗೆ ಅದೇನೋ ಹೇಳುತ್ತಿದ್ದ .. ನನಗೆ ಸುಧಾರಿಸಲು ಗಂಟೆಯೇ ತಗುಲಿತ್ತು .. ನಿಧಾನಕ್ಕೆ ನಡೆದುದೆಲ್ಲವನ್ನೂ ಹೇಳಿದೆ .. ನನ್ನ ಮಾತು ಪೂರ್ತಿಯಾಗುವ ವರೆಗೂ ಕೇಳಿಸಿಕೊಂಡರು !!
"ಕುಯ್ ಕುಯ್ " ನನ್ನ ಮೊಬೈಲ್ನಲ್ಲಿ ಸಂದೇಶ ಬಂದ ಶಬ್ದ .. ನಡುಗುವ ಕೈಗಳಿಂದಲೇ ಮೆಲ್ಲನೆ ತೆರೆದು ನೋಡಿದೆ .. ೪೮೦ ರೂಪಾಯಿ ನಿಮ್ಮ ಮೊಬೈಲ್ ಬ್ಯಾಲೆನ್ಸ್ ನಿಂದ ಕಡಿತವಾಗಿದೆ ಅನ್ನುವ ಸಂದೇಶ !!


ಮರು ಕ್ಷಣ "ಹಹಹಹಹಹಹಹ " ಇದ್ದ ಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಿದ್ದರು !! "ಅದು ದೆವ್ವದ ಕಾರಲ್ಲ ಭಟ್ರೇ ಅದು ನಮ್ಮ ಗಂಗಾಧರನ ಟ್ಯಾಕ್ಸಿ"  ಸೇಸನ ಮಾತು ಕೇಳಿ ಅರ್ಥವೇ ಆಗಲಿಲ್ಲ !!
"ಅದೇ ಭಟ್ರೇ , ಗೂಗಲ್ ಡ್ರೈವರ್ ಲೆಸ್ ಕಾರ್ ಅಂತ ಕೇಳಿಲ್ವೇ ? ನಿಮ್ಮ ಅಮೆರಿಕಾದಲ್ಲಿ ಇಲ್ವೇ? ನಮ್ಮ ಗಂಗಾಧರ ಇಂತಹ ೧೫ ಟ್ಯಾಕ್ಸಿ ಹಾಕಿದ್ದಾನೆ ಮಾರ್ರೆ .. ನಮ್ಮ ದೇಶ ತುಂಬಾ ಮುಂದೆ ಹೋಗಿದೆ.. ಯಾವುದಕ್ಕೂ ನಾಳೆ ಒಂದ್ಸಾರಿ ತಿರುಗಾಡಿ ನಿಮಗೆ ಗೊತ್ತಾಗುತ್ತೆ .. ಆಮೇಲೆ ನಿಮಗೆ ಅಮೇರಿಕಾ ಬೇಡ ನಮ್ಮ ದೇಶವೇ ಆದೀತು ಅಂತ ಅನ್ನಿಸಬಹುದು ನೋಡಿ  " ಹೇಳುತ್ತಿದ್ದ ಸೇಸ ಕೂಡ ದೆವ್ವದಂತೆ ಕಂಡಿದ್ದ .. ಮೆಲ್ಲನೆ ಎದ್ದು ಜೀಪಿನಲ್ಲಿ ಕೂತೆ .. "ಗಂಗಾಧರರೇ ನಿಮ್ಮ ಒಂದು ಟ್ಯಾಕ್ಸಿಯಲ್ಲಿ ನನ್ನ ೨ ಚೀಲಗಳು ಉಳಿದಿವೆ ನಾಳೆ ತಲುಪಿಸುತ್ತೀರಾ " ಅಣ್ಣ ಫೋನಿನಲ್ಲಿ ಕೇಳುತ್ತಿದ್ದ .. ಆತನನ್ನು ಮಧ್ಯದಲ್ಲಿಯೇ ತಡೆದು "ಈ ಜೀಪ್ ಕೂಡ ಡ್ರೈವರ್ ಲೆಸ್ಸಾ " ಕೇಳಿದೆ .. ಈ ಬಾರಿ ಜೀಪು ಅಣ್ಣ ಚಲಾಯಿಸುತ್ತಿದ್ದ .. ನಾನು ಕಣ್ಣು ಮುಚ್ಚಿಕೊಂಡೆ !!






ಗೋರೆ ಉವಾಚ :  ನಿಮ್ಮಷ್ಟೇ ಒಳ್ಳೆಯ ಹಾಗೂ ನಿಮ್ಮಷ್ಟೇ ಕೆಟ್ಟ ಸ್ನೇಹಿತರು ನಿಮಗೆ ಇದ್ದಾರೆ ಎಂದಾದರೆ ನೀವು ಅದೃಷ್ಟವಂತರೇ ಸರಿ !!

Saturday, August 6, 2016

ದೆವ್ವದ ಕಾರು !!

ರಾತ್ರಿ ೧೧ ಗಂಟೆ. ಬಸ್ ಸ್ಟ್ಯಾಂಡಿನಲ್ಲಿ ಬಂದು ಇಳಿದೆ. ನನ್ನೂರಿಗೆ ಹೋಗಲು ಈ ಹೊತ್ತಿನಲ್ಲಿ ಇನ್ನು ಗಾಡಿ ಸಿಗುವುದು ಕಷ್ಟ. ಭಾರಿ ಮಳೆ ಬೇರೆ. ಹಾಗಂತ ಅಂದು ಕೊಂಡಿದ್ದ ನನಗೆ ಬಸ್ ನಿರ್ವಾಹಕ ಹೇಳಿದ ಮಾತು ಕೇಳಿ ಅಚ್ಚರಿಯಾಗಿತ್ತು. ಇಲ್ಲಿ ಈಗ ಟ್ಯಾಕ್ಸಿ ಗಳು ೨೪ ಗಂಟೆಯೂ ಓಡಾಡುತ್ತವಂತೆ. ಏನೂ ತೊಂದರೆಯಿಲ್ಲ ಅಂದಿದ್ದ. "ಎಂತದು ಮಾರಾಯ್ರೆ , ನೀವು ಇಲ್ಲಿಗೆ ಬರುವುದು ಮೊದಲನೇ ಸಲವೋ ? ನೋಡಿ ಈ ನಂಬರಿಗೆ ಒಂದು ಸಂದೇಶ ಕಳಿಸಿ , ನೀವಿದ್ದಲ್ಲಿಗೆ ಟ್ಯಾಕ್ಸಿ ಬರುತ್ತದೆ ಮಾರಾಯ್ರೆ " ಅಂತ ಹೇಳಿ ಒಂದು ನಂಬರೂ ಕೊಟ್ಟ .. ಸಂದೇಶ ಕಳಿಸಿಯೂ ಬಿಟ್ಟೆ .. ಬರುತ್ತಿದ್ದ ನಗು ಹಾಗೂ ಹೀಗೂ ತಡೆದುಕೊಂಡಿದ್ದೆ .. ಅವನಿಗೆ ಟಿಕೆಟ್ ದುಡ್ಡು ಸಿಕ್ಕಿದರೆ ಸಾಕು ಬಹುಶ ಸುಮ್ಮನೆ ಬುರುಡೆ ಬಿಡುತ್ತಿದ್ದಾನೆ ಅಂದುಕೊಂಡು ನಕ್ಕು ಸುಮ್ಮನಾಗಿದ್ದೆ . 
ಭಾರಿ ಕತ್ತಲು .. ಸ್ನಾನಗ್ರಹದಲ್ಲಿ ಶವರ್ ನೀರು ಬೀಳುತ್ತಿದ್ದಂತೆ ಹುಯ್ಯುತ್ತಿದ್ದ ಮಳೆ .. ಸ್ವಲ್ಪ ಮುಂದಕ್ಕೆ ಬಂದವನೇ ಯಾವುದಾದರೂ ವಾಹನ ಬರಬಹುದೇ ಅಂತ ಕಾಯತೊಡಗಿದೆ. ಉಹುಂ ಒಂದು ನರಪಿಳ್ಳೆಯೂ ಕಾಣಿಸುತ್ತಿಲ್ಲ .. ನಡೆದು ಕೊಂಡು ಹೋಗೋಣ ಅಂದರೆ ಇಲ್ಲಿಂದ ನನ್ನ ಮನೆ ಇರುವುದು ೩೦-೩೫ ಕಿಲೋಮೀಟರು ದೂರದಲ್ಲಿ. ಹತ್ತಿರ ಗೊತ್ತಿರುವವರ ಮನೆಯೂ ಇಲ್ಲ .. ಸರಿಯಾಗಿ ಆಲೋಚನೆ ಮಾಡದೆ , ಊರಿಗೆ ಹೋಗಬೇಕು ಅನ್ನುವ ಒಂದೇ ಒಂದು ಆಸೆಯಿಂದ ಹೊರಟು ಬಿಟ್ಟಿದ್ದೆ ..
ಅದೆಷ್ಟು ವರ್ಷವಾದವು ಊರು ಬಿಟ್ಟು ? ಬರೋಬ್ಬರಿ ೧೦ ವರ್ಷ .. ಕೆಲಸ ಅಂತ ಒಂದು ಸಿಕ್ಕಿದ ತಕ್ಷಣ ಅಮೆರಿಕಾ ಕೈ ಬೀಸಿ ಕರೆದಿತ್ತು .. ಮೊದಲಿಗೆ ಚೆನ್ನಾಗಿತ್ತು .. ಡಾಲರ್ ನಲ್ಲಿ ಸಿಗುವ ಸಂಬಳ , ಬಣ್ಣದ ಜೀವನ , ಎಣಿಸಿಕೊಳ್ಳಲಾರದಷ್ಟು ಸ್ವಾತಂತ್ರ, ಮನುಷ್ಯ ನಿಗೆ ಏನಾಗಬಾರದಿತ್ತೋ ಅದಾಗಿ ಬಿಟ್ಟಿತ್ತು .. ದಿನ ಕಳೆದಂತೆ ಅಮೆರಿಕಾವೇ ಇಷ್ಟವಾಗತೊಡಗಿತ್ತು. ದಿನಕ್ಕೊಂದು ಬಾರಿ ಮನೆಗೆ  ಮಾಡುತ್ತಿದ್ದ ದೂರವಾಣಿ ಕರೆ ಬರು ಬರುತ್ತಾ ವಾರಕ್ಕೊಮ್ಮೆ , ಆ ನಂತ್ರ ತಿಂಗಳಿಗೊಮ್ಮೆ ಆಗಿ ಕಳೆದ ೮ ವರ್ಷಗಳು ಕರೆ ಮಾಡದೆಯೇ ಕಳೆದು ಹೋದವು .. ಆದರೆ ಅದೇನೋ ಜ್ಞಾನೋದಯ ಅಂತಾರಲ್ಲ , ಅಂತಹ ಒಂದು ಅನುಭೂತಿ . ದುಡ್ಡು ಮುಖ್ಯವಲ್ಲ ಅನ್ನುವ ಮಾತು ನಿಜ ಅನಿಸಿತ್ತು . ಆದರೆ ಇಂತಹ ಅನುಭೂತಿ ಬರಬೇಕಾದರೆ ನಮ್ಮಲ್ಲಿ ಬೇಕಾದಷ್ಟು ದುಡ್ಡು ಇರಲೇ ಬೇಕು ಅನ್ನುವ ಜ್ಞಾನಿಯ ಮಾತು ನೆನಪಾಗಿ ನಗು ಬಂತು .. ಊರಿಗೆ ಹೋಗಬೇಕು .. ಅಲ್ಲಿರುವ ಅಣ್ಣ , ತಂಗಿ ಹೇಗಿದ್ದಾರೋ ಗೊತ್ತಿಲ್ಲ . ಬರೋಬ್ಬರಿ ೮ ವರ್ಷಗಳಾದವು ಅವರನ್ನು ಮರೆತು . ಬಹುಶ ಅವರು ಮರೆತಿರಲಿಕ್ಕಿಲ್ಲ .. ಮಾಡುತ್ತಿದ್ದ ಕೆಲಸಕ್ಕೊಂದು ರಾಜೀನಾಮೆ ಒಗೆದು ದೇಶಕ್ಕೆ ವಾಪಸಾಗುವ ನಿರ್ಧಾರ ಕೈಗೊಂಡಿದ್ದೆ .. ಆತುರಕ್ಕೆ ಸರಿಯಾಗಿ ಆಲೋಚನೆ ಮಾಡದೆ ಹೀಗೆ ಧಾವಂತಕ್ಕೆ ಬಂದಿದ್ದ ನಾನು ಮಲೆನಾಡಿನ ಭರ್ಜರಿ ಮೆಳೆಗಾಲದ ಈ ಮಧ್ಯರಾತ್ರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ !!


ಒಂದು ಕಡೆ ದಟ್ಟನೇ ಕತ್ತಲು , ಮಧ್ಯೆ ಮಧ್ಯೆ ಬರುತ್ತಿದ್ದ ಮಿಂಚು , ಕಿವಿಗಪ್ಪಳಿಸುವ ಸಿಡಿಲಿನ ಸದ್ದು , ಸುಯ್ಯ್ ಅಂತ ಬೀಸುತ್ತಿದ್ದ ಗಾಳಿ , ಮಳೆಗೆ ಒದ್ದೆಯಾಗುತ್ತಿದ್ದ ಮೈ , ಎರಡೂ ಕೈಯಲ್ಲಿ ಹಿಡಿದಿದ್ದ ದೊಡ್ಡ ದೊಡ್ಡ ಚೀಲಗಳು ... ಕಪ್ಪೆಯ ಶಬ್ದ, ಅದೇನೋ ಜೋರಾಗಿ ಅರಚಿದಂತೆ ಭಾಸವಾಗುತ್ತಿತ್ತು .. ಅದ್ಯಾಕೋ ಹೆದರಿಕೆ ಅನ್ನಿಸಲಿಲ್ಲ .. ೧೨-೧೫ ವರ್ಷದ ಹಿಂದಿನ ನೆನಪುಗಳು ಕಾಡತೊಡಗಿದವು .. ನಾನು ಹೋಗುತ್ತಿದ್ದ ಶಾಲೆ, ಕಾಲೇಜು .. ಗೆಳೆಯರು .. ಹೌದು ಎಲ್ಲರನ್ನೂ ಭೇಟಿಯಾಗಬೇಕು .. ಸದಾನಂದ , ಕುಮಾರ , ಸೇಸ , ಜಯ , ಪ್ರಭಾಕರ  ಎಲ್ಲರ ಮುಖಗಳೂ ಸ್ಪಷ್ಟವಾಗಿ ನೆನಪಿವೆ.  ಅಲ್ಲೇ ಆಲೋಚಿಸುತ್ತಾ ನಿಂತವನಿಗೆ ದೂರದಲ್ಲಿ ಯಾವುದೋ ವಾಹನ ಬರುತ್ತಿರುವ ಬೆಳಕು ಕಂಡಿತ್ತು .. ಮೈ ಚಳಿಗೆ ನಡುಗತೊಡಗಿತ್ತು .. ಎತ್ತಿನ ಗಾಡಿ ಬಂದರೂ ಸರಿಯೇ , ಮೀನಿನ ಟೆಂಪೋ ಬಂದರೂ ಸರಿಯೇ .. ಹತ್ತಲೇಬೇಕು ಅನ್ನುವಷ್ಟು ಸುಸ್ತಾಗಿತ್ತು .. ಕಣ್ಣು ಚಿಕ್ಕದು ಮಾಡಿ ಅದೇನು ಅಂತ ನೋಡಲು ಪ್ರಯತ್ನಿಸಿದೆ .. ಉಹುಂ , ಮಳೆಯ ಆರ್ಭಟಕ್ಕೆ ಮಂದವಾದ ಬೆಳಕು ಬಿಟ್ಟರೆ ಏನೆಂದು ಗೊತ್ತಾಗಲಿಲ್ಲ .. ಮೆಲ್ಲನೆ ಬಂದ  ಬೆಳಕು ನನ್ನ ಹತ್ತಿರ ಬಂದು ನಿಂತಿತ್ತು .. ನೋಡಿದರೆ ಕಾರು !! ಯಾರದ್ದು , ಯಾರಿದ್ದಾರೆ ಒಳಗಡೆ ಕೇಳುವಷ್ಟು ತಾಳ್ಮೆಯಿರಲಿಲ್ಲ .. ನನ್ನ ಎರಡೂ ಚೀಲಗಳನ್ನು ಒಳಗೆ ಒಗೆದವನೇ ಒಳಗೆ ಹತ್ತಿ ಕೂತು ಬಿಟ್ಟೆ ..
ಒಂದು ಕ್ಷಣ ಕಣ್ಣು ಮುಚ್ಚಿಕೊಂಡೆ .. "ಎಲ್ಲಿಗೆ ಹೋಗಬೇಕು ?" ಕರ್ಕಶ ಧ್ವನಿ ಕಿವಿಗಪ್ಪಳಿಸಿತು .. "ಹೊಸ್ಮಾರು " ಉತ್ತರ ಕೊಟ್ಟೆ ..
"ಎಲ್ಲಿಗೆ ಹೋಗಬೇಕು ?" ಮತ್ತೆ ಅದೇ ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದೆ ! ಮೆಲ್ಲನೆ ಕಣ್ಣು ತೆರೆದೆ ! ನನ್ನ ಎದುರಿನ ಸೀಟಿನ ಹಿಂಭಾಗಕ್ಕೆ ಟಿವಿ ಪರದೆ ಕಾಣಿಸಿತ್ತು .. ಅದರಲ್ಲಿ ಒಂದಾದ ಮೇಲೆ ಒಂದು ಸ್ಥಳಗಳ ಹೆಸರು ಬರುತ್ತಾ ಇತ್ತು !! ಓಹ್ ಬಸ್ ನಿರ್ವಾಹಕ ಹೇಳಿದ್ದು ಸರಿ .. ಇಲ್ಲಿಯೂ ಈಗ ಟ್ಯಾಕ್ಸಿಗಳು ವಾಹ್ .. ಮೆಲ್ಲನೆ ಬಗ್ಗಿ ಮುಂದಕ್ಕೆ ನೋಡಿದರೆ ಕಾರಿನಲ್ಲಿ ಯಾರೂ ಇರಲಿಲ್ಲ.. ಡ್ರೈವರ್ ಯಾವನೋ ಅಹಂಕಾರಿ ಇರಬೇಕು ಮಾತೂ ಆಡುತ್ತಿಲ್ಲ .. ಅಡ್ಡ ಪರದೆ ಬೇರೆ ಹಾಕಿಕೊಂಡಿದ್ದಾನೆ .. "ಎಲ್ಲಿಗೆ ಹೋಗಬೇಕು?" ಮತ್ತೆ ಕರ್ಕಶ ಧ್ವನಿ .. ಹೆದರಿಕೊಂಡೇ ನಡುಗುತ್ತಿದ್ದ ಕೈ ನನಗರಿವಿಲ್ಲದಂತೆ ಮುಂದಿದ್ದ ಟಿವಿ ಪರದೆಯನ್ನು ಜಾಲಾಡಿ ಸ್ಥಳ ಗುರುತಿಸಿತು .. "ಹೊಸ್ಮಾರು" ... ಪರದೆಯ ಮೇಲೆ ನಾನು ಹೋಗಬೇಕಾದ ಜಾಗ ತೋರಿಸುತ್ತಿತ್ತು .. " ಸಂದೇಶ ತೋರಿಸಿ " ಮತ್ತದೇ ಕರ್ಕಶ ಧ್ವನಿ .. ಆಗ ನೆನಪಾಯಿತು .. ಮೊಬೈಲ್ ನಲ್ಲಿ ಕಳಿಸಿದ್ದ ಸಂದೇಶ .. ಏನು ಮಾಡಬೇಕು ಎಂದು ಡ್ರೈವರ್ ನನ್ನ ಕೇಳಿದೆ .. ಉತ್ತರವಿಲ್ಲ .. ಪರದೆಯ ಮೇಲೆ ಸಂದೇಶ ತೋರಿಸಿ ಅನ್ನುವ ಕರ್ಕಶ ಧ್ವನಿ ಬರುತ್ತಲೇ ಇತ್ತು .. ಮೊಬೈಲ್ ಹತ್ತಿರ ಹಿಡಿದ ಕೂಡಲೇ "ಕುಯ್ಯ" ಅನ್ನುವ ಶಬ್ದ .. ಕಾರು ಚಲಿಸತೊಡಗಿತ್ತು !!ಮತ್ತೆ ಮೆಲ್ಲನೆ ಬಗ್ಗಿ ಮುಂದಕ್ಕೆ ನೋಡಿದೆ .. ಡ್ರೈವರ್ ಸೀಟ್ ಕೂಡ ಖಾಲಿಯಾಗಿತ್ತು !! ತಿರುವುಗಳಲ್ಲಿ ತನ್ನಿಂದ ತಾನೇ ತಿರುಗುವ ಸ್ಟೇರಿಂಗ್ !!! ಮಳೆಯಲ್ಲಿ ಒದ್ದೆಯಾಗಿದ್ದ ನಾನು ಈಗ ಬೆವರತೊಡಗಿದ್ದೆ .. ಪ್ಯಾಂಟು ಮತ್ತೆ ಒದ್ದೆಯಾಗಿತ್ತು !! ಕಾರಿನ ವೇಗ ಹೆಚ್ಚಾಗತೊಡಗಿತ್ತು !!


"ಕಾರು ನಿಲ್ಲಿಸು " ಅರಚಿಕೊಂಡೆ .. ವೇಗ ಹೆಚ್ಚಿಸಿಕೊಂಡಿದ್ದ ಕಾರು ಮಳೆಯನ್ನೂ ಸೀಳಿ ಮುಂದಕ್ಕೆ ನುಗ್ಗುತ್ತಿತ್ತು !! ಕಾರಿನಲ್ಲಿ ಯಾರೂ ಇಲ್ಲ!! ಡ್ರೈವರ್ ಸಹ ಇಲ್ಲ ! ದೆವ್ವದ ಕಾರೆ? ಹೆದರಿಕೆಯಾಗತೊಡಗಿತು .. ಮಧ್ಯೆ ಮಧ್ಯೆ ಮಿಂಚು ಗುಡುಗು !! ತನ್ನಿಂತಾನೇ ತಿರುಗುತ್ತಿದ್ದ ಸ್ಟೇರಿಂಗ್ !! ಕಾರಿನಿಂದ ಹೊರಗೆ ಹಾರೋಣ ಅಂದುಕೊಂಡೆ !! ಉಹುಂ , ಬಾಗಿಲು ಭದ್ರವಾಗಿ ಮುಚ್ಚಲ್ಪಟ್ಟಿವೆ .. ತೆಗೆಯಲು ಆಗುತ್ತಿಲ್ಲ ..  "ಕಾರು ನಿಲ್ಲಿಸಲೇ !!" ಜೋರಾಗಿ ಕೂಗಿಕೊಂಡೆ .. ಯಾವುದೇ ಉಪಯೋಗವಿಲ್ಲ !! ಕಾರು ಶರವೇಗದಿಂದ ಮುನ್ನುಗ್ಗುತ್ತಿತ್ತು !! ಪ್ರಜ್ಞೆ ತಪ್ಪುತ್ತಿರುವಂತೆ ಭಾಸವಾಯಿತು .. ಅದೇನೇನೋ ಕರ್ಕಶ ಶಬ್ದಗಳು ಗುಡುಗಿನ ಸದ್ದಿನೊಂದಿಗೆ ವಿಲೀನವಾಗುತ್ತಿದ್ದವು !! ದೆವ್ವ ಮಧ್ಯೆ ಮಧ್ಯೆ ಏನೇನೊ ಮಾತಾಡುತ್ತಲೇ ಇತ್ತು !!
ಅದೊಂದು ಕಡೆ ಕಾರು ನಿಂತಿತು !! ಬಾಗಿಲು ತನ್ನಿಂತಾನೇ ತೆರೆದುಕೊಂಡಿತು !! ಬದುಕಿದರೆ ಸಾಕು ಅಂತ ಕಾರಿನಿಂದ ಇಳಿದವನೇ ಒಂದೇ ಸಮನೆ ಓದತೊಡಗಿದೆ !! ಮಳೆಯ ರಾತ್ರಿ , ದಾರಿ ಕಾಣಿಸುತ್ತಿಲ್ಲ .. ಒಂದೆರಡು ಕಡೆ ಬಿದ್ದು ಕೈ ಕಾಲು ಎಲ್ಲ ತರಚಿ ರಕ್ತ ಬರುತ್ತಿತ್ತು .. ಸ್ವಲ್ಪ ದೂರ ಓಡಿದವನೇ ಹೆದರಿಕೊಂಡೇ ಹಿಂದೆ ತಿರುಗಿ ನೋಡಿದೆ !! ದೂರದಲ್ಲಿ ಕಾರು ಮೆಲ್ಲನೆ ಮುಂದಕ್ಕೆ ಹೋಗುವುದು ಕಾಣಿಸುತ್ತಿತ್ತು !! ಇನ್ನು ಇಲ್ಲಿ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ .. ಮತ್ತೆ ಮಿಂಚಿನ ಬೆಳಕಿನಲ್ಲೇ ಓಡತೊಡಗಿದೆ .. ಅದೂ ಮಿಂಚಿನ ವೇಗದಲ್ಲಿ !!
ಸ್ವಲ್ಪ ದೂರ ಓದಿದಾಗ ಸ್ವಲ್ಪ ಬೆಳಕು ಕಂಡಿತ್ತು .. ಅದನ್ನು ಗುರಿಯಾಗಿಟ್ಟೆ ಓಡಿದೆ !! ಅದೊಂದು ಮನೆ !! ೩-೪ ಜನ ಚಾವಡಿಯಲ್ಲಿ ಕೂತು ಇಸ್ಪೀಟು ಆಡುತ್ತಿದ್ದರು !! ಓಡಿ ಅಲ್ಲೇ ಅಂಗಳದಲ್ಲಿ ಬಿದ್ದಾಗ ಧೊಪ್ ಅನ್ನುವ ಶಬ್ದಕ್ಕೆ ನಾಲ್ಕೂ ಜನ ಎದ್ದು ನನ್ನತ್ತ ಬರತೊಡಗಿದರು !! " ಯಾರು ? ಯಾರದು " ಗೊಗ್ಗರು ಧ್ವನಿ ಭಯ ಹುಟ್ಟಿಸಿತು !! ಹತ್ತಿರ ಬಂದವರೇ ಮುಖಕ್ಕೆ ಟಾರ್ಚು ಬೆಳಕು ಬಿಟ್ಟರು !! "ಓ ಭಟ್ರೇ " ಅವರಲ್ಲೊಬ್ಬ ನನ್ನ ಎಬ್ಬಿಸಿದ !! "ಏನಾಯಿತು ಏನಾಯಿತು " ಎಲ್ಲರೂ ಸುತ್ತುವರಿದರು .. ಕಣ್ಣು ಬಿಟ್ಟು ನೋಡಿದೆ .. ಎದುರಿಗೆ ಇದ್ದದ್ದು ಸೇಸ !!


-- ಮುಂದುವರೆಯುವುದು


ಗೋರೆ ಉವಾಚ :  ನನಗಿಂತ ನಿಧಾನವಾಗಿ ಕಾರು ಚಲಾಯಿಸುವವನು ಮೂರ್ಖ !! ನನಗಿಂತ ವೇಗವಾಗಿ ಕಾರು ಚಲಾಯಿಸುವವನು ಹುಚ್ಚ !!!  

Monday, May 23, 2016

ಗಾಂಧೀಜಿಯವರನ್ನು ಕೊಂದಿದ್ದು ಯಾರು ? - ೨

ಮುಂದುವರಿದದ್ದು ....


ಭಾಗ ೧ ಇಲ್ಲಿದೆ :


ಗಾಂಧೀಜಿ ಯವರನ್ನು ಕೊಂದಿದ್ದು ಯಾರು ?




ಆವತ್ತು ಗಾಂಧೀಜಿ ಯವರನ್ನು ಗುಂಡು ಹೊಡೆದ ತಕ್ಷಣ ಕಾಂಗ್ರೆಸ್ ಅನ್ನುವ ಮಹಾ ಪಕ್ಷದ ಜನರು ಮಾಡಿದ ಕೆಲಸವೆಂದರೆ ಇದರಲ್ಲಿ ಹಿಂದೂ ಮಹಾಸಭಾದ ಕೈವಾಡವಿದೆ ಎಂದು ಪ್ರಚಾರಮಾಡಿದ್ದು !. ಹಿಂದೂ ಮಹಾಸಭಾದ ಸದಸ್ಯರ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿ ಇವರೇ ಕೊಲೆಗಾರರು ಎಂದು ಬಿಂಬಿಸಿದ್ದು ..





ಆದರೆ ಈ ಫೋಟೋ ತೆಗೆದಿದ್ದು ಯಾರು ಗೊತ್ತೇ ? ಇವರೆಲ್ಲರನ್ನೂ ಬಾಂಬೆ ಗೆ ಕರೆದೊಯ್ದ ಪೊಲೀಸರು !! ಯಾಕೆ ??? ಕಾರಣ ನಿಗೂಢವಾಗಿ ಕಂಡರೂ ಸತ್ಯದ ಅರಿವು ಈಗಷ್ಟೇ ನಿಮಗೂ ಆಗಿರಬಹುದು ! ಪೋಲಿಸ್ ಸೆರೆಯಲ್ಲಿದ್ದ ಸಾವರ್ಕರ್ ಈ ಕೆಳಗಿನ ಕಾಗದ ತುಂಬಿದ್ದರು !!! ನಂಬುತ್ತೀರಾ ?







ಮೇಲಿನ ಫೋಟೋ ತೋರಿಸಿದಾಗ ಎಲ್ಲರನ್ನೂ ಬಲ್ಲ ಸಾವರ್ಕರ್,  ಮದನ್ಲಾಲ್ ಪಾಶವ ಯಾರೆಂದು ಗೊತ್ತಿಲ್ಲ ಅಂದರು .. ಅಂದ ಹಾಗೆ ಈತ ಬಾಂಬೆ ಗೆ  ಬಂದಿದ್ದು ೧೯೪೭ ನೆ ಇಸವಿಯಲ್ಲಿ !! ಅದೂ ಪಾಕಿಸ್ತಾನದಿಂದ !!! ಬಾಂಬೆ ಗೆ ಬಂದವನೇ ಸೇರಿದ್ದು ಪಟಾಕಿ ತಯಾರಿಸುವ ಕಂಪನಿ ಒಂದರಲ್ಲಿ ಕೆಲಸಕ್ಕೆ  ೨೦ನೆ ಜನವರಿ ೧೯೪೮ ರಂದು ಗಾಂಧೀಜಿ ಯವರನ್ನು ಹತ್ಯೆಗಯ್ಯುವ ಪ್ರಯತ್ನವನ್ನೂ ಈತ ಮಾಡಿದ್ದ !! ಕಳಿಸಿದ್ದು ಯಾರು? ಆತನ ಉಪಾಯವೇನಿತ್ತು ? ಸ್ವಲ್ಪ ಯೋಚಿಸಿದರೆ ಉತ್ತರ ಸಿಗುತ್ತದೆ !!! ಗೊತ್ತಿರುವ ಮೂಲಗಳು ಹೇಳುವಂತೆ ಆತ ಬಂದಿದ್ದೆ ಹಿಂದೂ ಮಹಾಸಭಾ ಸೇರಲಿಕ್ಕೆ !!  ಆದರೆ ಸಾವರ್ಕರ್ ಆತನನ್ನು ಭೇಟಿಯಾಗುವ ಅಥವಾ ಹಿಂದೂ ಮಹಾ ಸಭಾ ಸೇರಿಸುವ  ಇರಾದೆ ತೋರಿಸದೆ ಇದ್ದಾಗ ಆತ ತನ್ನ ಖೆಡ್ಡಾ ಬದಲಿಸಿ ಬಿಟ್ಟಿದ್ದ !!


ಇರಲಿ. ನಡೆದ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ! ಅದ್ಯಾಕೋ ನೆಹರು ಅನ್ನುವ ವ್ಯಕ್ತಿಯ ಬಗ್ಗೆ ನನ್ನ ಅನುಮಾನಗಳು ಬಲವಾಗುವುದೇ ಈ ಎಲ್ಲ ಘಟನೆ ಮೆಲುಕು ಹಾಕುವಾಗ !! ಹಿಂದುಮಹಾಸಭಾ / ಆರ್ ಎಸ್ ಎಸ್  ಹಸರನ್ನು ಕೆಡಿಸುವ ಮೂಲ ವ್ಯಕ್ತಿಯೇ ಈತ ಅನ್ನುವ ಮಾತಂತೂ ಬೆಚ್ಚಿ ಬೀಳಿಸುತ್ತದೆ !!!




೫ನೆ ಜನವರಿ ೧೯೪೮ ರಂದು ಈ ಮದನ್ ಲಾಲ್ ಪಶ್ವ ಅನ್ನುವವನು ರಾವ್ ಸಾಹೇಬ್ ಪಟವರ್ಧನ್ ಅನ್ನು ವವರು ಭಾಷಣ ಮಾಡುತ್ತಿದ್ದಾಗ ಅವರ ಮೈಕಾ ಎಳೆದುಕೊಳ್ಳಲು ನೋಡುತ್ತಾನೆ .. ಇದು ನಡೆದದ್ದು ಅಹ್ಮದಾನಗರ್ ನಲ್ಲಿ !! ೯ನೆ ಜನುವರಿ ೧೯೪೮ ರಂದು ಪೊಲೀಸರು ಆತನ ವಿರುದ್ಧ ಮತ್ತು ವಿಷ್ಣು ಕರ್ಕರೆ  ಬಂಧನಕ್ಕೆ ಆಜ್ಞಾಪಿಸುತ್ತಾರೆ !! ಆದರೆ ೧೨ ನೆ ತಾರೀಕು ಈ ಮದನಲಾಲ್ ನನ್ನು ಬಂಧಿಸಲು ವಾರೆಂಟ್ ಜಾರಿಯಾಗುತ್ತಿದ್ದಂತೆ ಕೆಲವು ನಿಗೂಢ (???) ವ್ಯಕ್ತಿಗಳು ದೆಲ್ಹಿಗೆ ದೌಡಾಯಿಸುತ್ತಾರೆ ! ೨೦ನೆ ಜನವರಿ , ಇದೆ ಮದನ್ಲಾಲ್ ಒಂದು ಖೊಟ್ಟಿ ಗ್ರನೆಡ್ ಸ್ಪೋಟಕ್ಕೆ ಯತ್ನಿಸುತ್ತಾನೆ ? ಅದೂ ಗಾಂಧೀಜಿ ಯವರಿದ್ದ ಸ್ತಳದಲ್ಲಿ !! ಅದು ಖೊಟ್ಟಿ ಅಂತ ಅರಿವಿದ್ದೂ ಅವನು ಹಾಗ್ಯಾಕೆ ಮಾಡಿದ? ಆತನನ್ನು ಬಂಧಿಸುವಾಗ ಆತನಲ್ಲಿ ನಿಜವಾದ ಗ್ರನೆಡ್ ಕೂಡ ಸಿಗುತ್ತದೆ ಆದರೂ ಆತ  ಅದನ್ನು ಸ್ಪೋಟಿಸುವ ಸಾಹಸ ಮಾಡಲಿಲ್ಲ ಯಾಕೆ ? ಅಂದರೆ ಆತನಿಗೆ ಕೊಲೆ ಮಾಡುವ ಇರಾದೆ ಇರಲಿಲ್ಲ ! ಆತನಿಗೆ ಆ ಗ್ರನೆಡ್ ಕೊಟ್ಟವರು ಯಾರು ? ಅದರ ಬಗ್ಗೆ ಎಳ್ಳಷ್ಟೂ  ವಿಚಾರಣೆ ಆಗುವುದಿಲ್ಲ ! ಹೀಗೆ ಸಿಕ್ಕಿಬಿದ್ದ ಮದನ್ಲಾಲ್ ಹಿಂದೂ ಮಹಾಸಭಾ ಮತ್ತು ಕರ್ಕರೆ ಅನ್ನುವವನ ಹೆಸರು ಹೇಳುತ್ತಾನೆ !! ಆದರೆ ಒಬ್ಬ ಪ್ರತ್ಯಕ್ಷ ದರ್ಶಿ ಹೇಳುವಂತೆ ಆತ  ಇದೆ ಮದನ್ಲಾಲ್ ನನ್ನು ಒಂದು ಟ್ಯಾಕ್ಸಿ ಯಲ್ಲಿ ಬರುವುದನ್ನ ನೋಡಿರುತ್ತಾನೆ .. ಆ ಟ್ಯಾಕ್ಸಿ  ಬಗ್ಗೆ ವಿಚಾರಣೆ ನಡೆದಾಗ ಅದು ಜಿ ಏನ್ ಆಯ್  ಟಿ  ಬಸ್ಸು ಎಂದು ತಿಳಿದು ಬರುತ್ತದೆ !! ಇಷ್ಟನ್ನು ದಾಖಲಿಸಿದ ಪೊಲೀಸರು ಎಲ್ಲ ಪುರಾವೆಗಳೊಂದಿಗೆ ಬಾಂಬೆ ಗೆ ಬರುತ್ತಾರೆ .. ಆದರೆ ಅದ್ಯಾವ ದಾಖಲೆಗಳು ಎಂದು ಯಾರಿಗೂ ತಿಳಿದಿಲ್ಲ .. ಬಾಂಬೆ ಗೆ ಯಾಕೆ ಬಂದರು ಅನ್ನುವುದೂ ಸ್ಪಷ್ಟವಿಲ್ಲ !! ಅಂದರೆ ಗಾಂಧೀಜಿ ಯವರನ್ನು ಕೊಲ್ಲುವ ಪ್ಲಾನ್ ಮಾಡಿದ್ದೆ ಈ ಮದನಲಾಲ್ !! ಆತನನ್ನು ಬಂಧಿಸಿಯೂ ಆಗಿದೆ !! ಸಾಕ್ಶಗಳೂ ಸಿಕ್ಕಿವೆ !!


೧೭ನೆ ಜನವರಿ ೧೯೪೮ ರಂದು ಗೋಡ್ಸೆ ಮತ್ತು ಆಪ್ಟೆ ದೆಹಲಿಗೆ ಬರುತ್ತಾರೆ .. ಅದೂ ವಿಮಾನದಲ್ಲಿ !! ಮರೀನಾ ಹೋಟೆಲ್ ನಲ್ಲಿ ಉಳಿಯುತ್ತಾರೆ!! ಇಂತಹ ಆಪಾದನೆಗಳು ಬಂದಾಗ ಕಾಡುವ ಪ್ರಶ್ನೆ , ಇಷ್ಟೊಂದು ದುಬಾರಿ ವಿಮಾನ ಮತ್ತು ಹೋಟೆಲ್ ಗೆ ದುಡ್ಡು ಕೊಟ್ಟಿದ್ದು ಯಾರು ??? ಆದರೆ ಈ ಮದನ್ಲಾಲ್ ಮಾಡಿದ ಕೊಲೆ ಪ್ರಯತ್ನ ವಿಫಲವಾದಾಗ , ಆತನನ್ನು ಬನ್ಧಿಸಲಾಗುತ್ತದೆ.  ಅದೇ ದಿನ ಅಂದರೆ ೨೦ ನೆ ಜನವರಿ ೧೯೪೮ ರಂದು ಗೋಡ್ಸೆ ಮತ್ತು ಆಪ್ಟೆ ಬೊಂಬೆ ಗೆ ರೈಲಿನ ಮುಖಾಂತರ ವಾಪಸ್ಸಾಗುತ್ತಾರೆ !!! ಹೀಗಂತ ದಾಖಲೆಗಳು ಹೇಳುತ್ತವೆ !!! ಅಂದರೆ ಗೋಡ್ಸೆ ಮತ್ತು ಆಪ್ಟೆ ಇತರರೊಂದಿಗೆ ಡೆಲ್ಲಿ ಗೆ ಬಂದಿದ್ದು , ಗಾಂಧೀಜಿಯವರ ಕೊಲೆ ಯತ್ನ ನಡೆದದ್ದು , ಮದನ್ಲಾಲ್ ಹಿಂದೂ ಮಹಾಸಭಾದ ಹೆಸರು ಹೇಳಿದ್ದು ಎಲ್ಲವೂ ವ್ಯವಸ್ತಿತ .. ಆದರೆ ಆವತ್ತು ಕೊಲೆ ಆಗದೆ ಇದ್ದಾಗ ಕೆಲವರಂತೂ ಕಳವಳ ಕ್ಕೆ ಒಳಗಾಗುತ್ತಾರೆ !! ಹಿಂದೂ ಮಹಾಸಭಾ ಗಾಂಧೀಜಿಯವರ ಕೊಲೆಗೆ ಯತ್ನಿಸಿತು ಅಂತ ಪ್ರಚಾರವಾಗುತ್ತದೆ ... ಕಳವಳ ಕ್ಕೆ ಒಳಗಾದವರು ಯಾರು ?


ಅಂತೆಯೇ ದಾಖಲೆಗಳು ಗೋಡ್ಸೆ ಮತ್ತು ಆಪ್ಟೆ ಮತ್ತೆ ೨೭ನೆ ಜನವರಿ ೧೯೪೮ ರಂದು ಮತ್ತೆ ಡೆಲ್ಲಿ ಗೆ ವಿಮಾನದ ಮೂಲಕ ಬಂದರು ಅನ್ನುತ್ತದೆ !! ಬಹುಶ ಅವರು ಭಾರಿ ಶ್ರೀಮಂತರಿರಬೇಕು ಅಲ್ವೇ ? ಪೋಲಿಸರೂ ಸಹ ಭಾರಿ ನಿದ್ದೆ ಮಾಡಿರಬೇಕು ಆವತ್ತು !! ಇಲ್ಲದಿದ್ದರೆ ಅವರನ್ನು ತಡೆಯುವುದು ಅದೆಷ್ಟು ಕಷ್ಟ ?? ದೆಹಲಿಯಿಂದ ರೈಲಿನ ಮುಖಾಂತರ ಕಾನ್ಪುರ ಕ್ಕೆ ಬಂಡ ಅವರು ಡಾಕ್ಟರ್ ಪರ್ಚುರೆ ಅವರ ಮನೆಯಲ್ಲಿ ಉಳಿದರು ಅಂತ ಪೋಲಿಸ್ ದಾಖಲೆಗಳು ಹೇಳುತ್ತವೆ !! ೨೮ನೇ ತಾರೀಕಿಗೆ ಗೋಎಲ್ ಅನ್ನುವವರಿಂದ ಪಿಸ್ತೂಲು ಖರೀದಿಸಿ ೨೯ ರಂದು ಮತ್ತೆ ದೆಹಲಿಗೆ ಬರುತ್ತಾರೆ ..!! ೩೦ರಂದು ಗಾಂಧೀಜಿಯವರನ್ನು ಗುಂಡಿಕ್ಕಿ ಸಾಯಿಸುತ್ತಾರೆ !!!!  ಓಹೋ !!!!




ಹಾರಿಸಿದ ಮೂರೂ ಗುಂಡುಗಳು ಎದೆಗೆ !! ಆದರೂ ಗಾಂಧೀಜಿ ಕೂಡಲೇ ಸಾಯುವುದಿಲ್ಲ !





ಈ ಮೇಲಿನ ಫೋಟೋ ದಲ್ಲಿ ಎದೆಯ ಮೇಲೆ ಒಂದಾದರೂ ಗುಂಡಿನ ಗಾಯ ನಿಮಗೆ ಕಾಣಿಸುತ್ತಿದೆಯೇ ? ಇಲ್ಲ , ಆದರೆ ಅವರ ಕೊನೆಯ ಎಲ್ಲಾ ಫೋಟೋಗಳಲ್ಲೂ ಅವರ ಕುತ್ತಿಗೆಯನ್ನು ಒಂದು ಬಟ್ಟೆಯ ಮೂಲಕ ಮುಚ್ಚಲಾಗಿದೆ  ಯಾಕೆ ? ಹಾಗಾದರೆ ಗಾಂಧೀಜಿ ಯವರು ಎದೆಗೆ ಗುಂಡು ಬಿದ್ದು ಸತ್ತರೆ ಅಥವಾ ಇನ್ನೇನಾದರೂ ????? ಇದಕ್ಕೆ ಈಗ ಉತ್ತರ ಬೇಕಾಗಿದೆ !! ಗುಂಡು ತಾಕಿದ ತಕ್ಷಣ ಅವರನ್ನು ಬಿರ್ಲಾ ಹೌಸ್ ನ ಕೊಠಡಿಗೆ ಯಾಕೆ ಕರೆದೊಯ್ಯಲಾಯಿತು ? ಅವರೊಂದಿಗೆ ಕೊಠಡಿಯಲ್ಲಿ ಇದ್ದವರು ಯಾರು ? ಕೊನೆಯ ಕ್ಷಣಗಳಲ್ಲಿ ಗಾಂಧೀಜಿ ಅವರೊಂದಿಗೆ ಇದ್ದ ಸರ್ದಾರ್ ಪಟೇಲರನ್ನು ಅರ್ಧದಲ್ಲಿ ತಡೆದವರು ಯಾರು ? ಆಸ್ಪತ್ರೆಗೆ ಅವರನ್ನು ಕೂಡಲೇ ಯಾಕೆ ಕರೆದೊಯ್ಯಲಿಲ್ಲ ?? ಪೋಸ್ಟ್ ಮೊರ್ಟಮ್ ಯಾಕೆ ಮಾಡಲಿಲ್ಲ ?? ಅವರ ಹತ್ಯೆಯ ವಿಷಯ ನೆಹರೂ ಅನ್ನುವವನಿಗೆ ತಿಳಿಸಿದ್ದು ಯಾರು ?? ಹೇಗೆ ತಿಳಿಸಿದರು ?  


ಪ್ರಶ್ನೆಗಳು ಇನ್ನಷ್ಟು ಇವೆ .. ಉತ್ತರ ಕಂಡುಕೊಳ್ಳಬೇಕಿದೆ !! ಸದ್ಯಕ್ಕೆ ಇಷ್ಟು ಸಾಕು !!!




 ಕೃಪೆ : https://twitter.com/loosebool


All credit to :







ಗೋರೆ ಉವಾಚ :   ಹತ್ಯೆ ಪ್ರಕರಣದಲ್ಲಿ ಸುಮ್ಮನೆ  ಗಲ್ಲು ಶಿಕ್ಷೆಗೆ ಗುರಿಯಾದ ಗೋಡ್ಸೆ ಯಂಥವರು  , ಆ ಹತ್ಯೆ ನಿಜವಾಗಲೂ ನಾನೇ ಮಾಡಬೇಕಿತ್ತು ಅಂತ ಖಂಡಿತಾ ಒಂದು ಸಾರಿಯಾದರೂ ಅಂದುಕೊಂಡಿರುತ್ತಾನೆ !!!