Friday, April 11, 2008

ಅನಾರ್ಕಲಿ

ಅನಾರ್ಕಲಿ ........
ಹಾಗಂತ ಒಂದು ಮಿಠಾಯಿ ಸಿಗುತ್ತಿತ್ತು ... ಬಹುಶಃ ಈಗ ಇದೆಯೋ ಇಲ್ಲವೊ ಗೊತ್ತಿಲ್ಲ .. ನಾನು ಚಿಕ್ಕವನಿದ್ದಾಗ ಮಾತ್ರ ಅನಾರ್ಕಲಿ ಅಂದ್ರೆ ನಂಗೆ ಪ್ರಾಣ. ದಿನಕ್ಕೊಂದಾದ್ರು ಅನಾರ್ಕಲಿ ತಿನ್ನದಿದ್ರೆ ಉಹುಂ ಅದೇನೋ ಕಳೆದುಕೊಂಡಂತೆ.. ಶಾಲೆಗೆ ಹೋಗುವಾಗ ಸ್ಲೇಟು , ಕಡ್ಡಿ, ಪೆನ್ನು, ಹೀಗೆಲ್ಲ ಖರೀದಿಸಲು ತಾಯಿ ಕೊಡುತ್ತಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ಅನಾರ್ಕಲಿ ಕೊಳ್ಳಲು ಸುಂದರನ ಅಂಗಡಿಯ ಪಾಲಾಗುತ್ತಿತ್ತು.. ೫ ಪೈಸೆಗೆ ಎರಡು ಅನಾರ್ಕಲಿ ಸಿಗುತ್ತಿತ್ತು ... ಕಲ್ಲಿನಂತೆ ಗಟ್ಟಿಯಾದ ಆ ಮಿಠಾಯಿ ಜಗಿದು ತಿನ್ನೋದಂದ್ರೆ ಅದೇನೋ ಮಜಾ.. ಕೆಲವೊಂದು ಸಾರಿ ಈ ಅನಾರ್ಕಲಿಯೇ ನಮ್ಗೆ ಗೋಲಿ ಆಡಲು ಸಹ ಉಪಯೋಗವಾಗಿತ್ತಿತ್ತು...
ನೋಡಲು ಕಪ್ಪನೆ ಕಲ್ಲಿನಂತೆ ಕಾಣುತ್ತಿದ್ದ ಅದನ್ನು ತಿನ್ನೋವಾಗ ತಾಯಿಯ ಬೈಗುಳ ಬೇರೆ... ಆದ್ರೆ ನಾವು ಕೇಳಬೇಕಲ್ಲ.. ದನ ಕಪ್ಪಾದರೇನು ಹಾಲು ಕಪ್ಪೇ ಅನ್ನೋ ಹಾಗೆ ನಮ್ಗೆ ಅದೇ ಅಮೃತ... ಆ ಕಪ್ಪನೆಯ ಮಿಠಾಯಿಗೆ ಅನಾರ್ಕಲಿ ಅಂತ ಅದ್ಯಾವ ಪುಣ್ಯಾತ್ಮ ಹೆಸರಿಟ್ಟನೋ ಗೊತ್ತಿಲ್ಲ .. ಅಂತೂ ರುಚಿ ಮಾತ್ರ ನಿಜವಾದ ಅನಾರ್ಕಲಿ ಥರಾನೇ ...!!!!
ಮೊನ್ನೆ ತಾನೆ ಅದೇನೋ ಹುಡುಕುತ್ತ ನನ್ನ ಹಳೆಯ ಕೆಲವು ಸಾಮಗ್ರಿಗಳ ಚೀಲ ತೆರೆದು ನೋಡಿದ್ರೆ ಅದರಲ್ಲಿ ಕೆಲವು ೫ ,೧೦ ಹಾಗೂ ೨೦ ಪೈಸೆಯ ನಾಣ್ಯಗಳು ಸಿಕ್ಕವು.. ಅದ್ಯಾಕೋ ಹಳೆಯ ಬಾಲ್ಯದ ನೆನಪುಗಳು, ಆಗಿನ ಅನಾರ್ಕಲಿ , ಒಟ್ಟಾಗಿ ತಿನ್ನುತ್ತಿದ್ದ ನನ್ನ ಗೆಳೆಯರ ಗುಂಪು ಎಲ್ಲವೂ ನೆನಪಾದವು... ಮತ್ತೆ ಆ ದಿನಗಳು ಬರಬಾರದೇ ಅಂತ ಅನಿಸಿದ್ದು ಮಾತ್ರ ಸುಳ್ಳಲ್ಲ... ೫, ೧೦ ಹಾಗೂ ೨೦ ಪೈಸೆಯ ನಾಣ್ಯಗಳನ್ನು ಮತ್ತೆ ಅದೇ ಚೀಲದಲ್ಲಿ ಹಾಕಿ ಜೋಪಾನವಾಗಿಟ್ಟೆ.. ಮತ್ತೆ ಹಳೆಯ ದಿನಗಳು ಬಂದರೆ ಅನಾರ್ಕಲಿ ಖರೀದಿಸಲು ಬೇಕಲ್ಲ?

Thursday, April 10, 2008

ರಾಮಾನುಜಂ ನಂಬರ್

ನಿಮಗೆ ರಾಮಾನುಜಂ ನಂಬರ್ ಅಂದ್ರೆ ಏನು ಗೊತ್ತೆ?
Its a number (N) which is possible to get by taking the sum of cubes of two numbers in two different way.
For example : ( Read A3 as A cube)
A3 + B3 =N ( A to the power 3 + B to the power 3=N)
C3 + D3 = N ( C to the power 3 + D to the power 3=N)
Here we can get number N by adding cubes (to the power 3) of two numbers and in two different way...
The first Ramanujam number is 1729.
So
12 (3) + 1 (3) =1729 ( 12 to the power 3+ 1 to the power 3=1729)
Also we can get same by
10 (3) + 9 (3) =1729 ( 10 to the power 3+ 9 to the power 3=1729)

This is found by Ramanujam so called as Ramanujam number.
Can you find next Ramanujam nymber. If so please let me know the number...

Wednesday, April 9, 2008

ಕೆಲವು ಅನಿಸಿಕೆಗಳು

ಮದುವೆ ಆದ ಮತ್ತು ಆಗದ ಗಂಡಸರು
ಮದುವೆ ಆಗದ ಗಂಡಸು ಮದುವೆ ಆದವನಿಗಿಂತ ಬೇಗ ಸಾಯುತ್ತಾನೆ !!
ಆದರೆ ಮದುವೆ ಆದ ಗಂಡಸು ಮದುವೆ ಆಗದವನಿಗಿಂತ ಬೇಗ ಸಾಯಲು ಇಷ್ಟ ಪಡುತ್ತಾನೆ !!!!!

ಚರ್ಚೆ
ಗಂಡ ಮತ್ತು ಹೆಂಡತಿ ನಡುವಿನ ಚರ್ಚೆಯ ಕೊನೆಯ ಮಾತು ಹೆಂಡತಿಯದ್ದೆ ಆಗಿರುತ್ತದೆ ...
ಆ ನಂತರ ಗಂಡ ಏನೇ ಮಾತನಾಡಿದರೂ ಅದು ಇನ್ನೊಂದು ಚರ್ಚೆಯ ಆರಂಭವಾಗಿರುತ್ತದೆ !!!
ಖುಷಿಯಾಗಿರಬೇಕೆ ?
ಹೆಂಗಸರೇ , ನಿಮಗೆ ನಿಮ್ಮ ಗಂಡನ ಜೊತೆ ಖುಷಿಯಾಗಿರಬೇಕೆ ? ಹಾಗಾದರೆ ಅವರನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಮತ್ತು ಸೊಲ್ಪ ಪ್ರೀತಿಸಿ ....
ಗಂಡಸರೇ , ನಿಮಗೆ ನಿಮ್ಮ ಹೆಂಡತಿ ಜೊತೆ ಖುಷಿಯಾಗಿರಬೇಕೆ ? ಹಾಗಾದರೆ ಅವರನ್ನು ತುಂಬಾ ತುಂಬಾ ಪ್ರೀತಿಸಿ ಆದರೆ ಯಾವತ್ತೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಡಿ !!!

ಹೀಗೊಂದು ರಾಂಪನ ಕಥೆ :-)

ಒಂದು ದಿನ ರಾಂಪ ಮತ್ತು ಅವನ ಇಬ್ಬರು ಗೆಳೆಯರ ನಡುವೆ ಚರ್ಚೆ ನಡೆಯುತ್ತಿತ್ತು... ವಿಷಯ ಯಾರ ತಂದೆ ದೊಡ್ಡವರು??? ಮೊದಲನೇ ಗೆಳೆಯ: ಒಂದು ಸಾರಿ ನನ್ನ ತಂದೆ ಬಂಗಾಳ ಕೊಲ್ಲಿಯಲ್ಲಿ ಮುಳುಗಿದ್ರು..ಎರಡು ದಿನದ ನಂತರ ಅವ್ರು ಅರಬ್ಬಿ ಸಮುದ್ರದಿಂದ ಹೊರಗೆ ಬಂದ್ರು...
ಎರಡನೆ ಗೆಳೆಯ:ಅಷ್ಟೆನಾ, ಒಂದು ಸಾರಿ ನನ್ನ ತಂದೆ ಹಿಂದು ಮಹಾಸಾಗರದಲ್ಲಿ ಮುಳುಗಿದ್ರು..ಎಂಟು ದಿನದ ನಂತರ ಅವ್ರು ಹಿಮಾಲಯದಿಂದ ಹೊರಗೆ ಬಂದ್ರು...
ಅಷ್ಟ್ರಲ್ಲಿ ಏನೂ ಹೆಳಲಿಕ್ಕಿಲ್ಲದ ರಾಂಪ ಯೊಚಿಸತೊದಗಿದ...ಸೋಲೊಪ್ಪಿಕೊಳ್ಳದೆ ನಮ್ಮ ರಾಂಪ ಏನಂದ ಗೊತ್ತೆ?? " ಒಂದು ಸಾರಿ ನನ್ನ ತಂದೆ ಸಹ ನಮ್ಮನೆ ಟಾಂಕಿಯಲ್ಲಿ ಮುಳುಗಿದ್ರು..ತುಂಬಾ ದಿನ ಸುದ್ದಿಯೇ ಇಲ್ಲ...ನಂತರ....ಒಂದು ದಿನ..ನಲ್ಲಿಯಿಂದ ಹೊರಗೆ ಬಂದ್ರು..." ಉಳಿದ ಇಬ್ಬರು ಸ್ನೇಹಿತರು ಸೋಲೊಪ್ಪಿಕೊಂಡರು...!!!

ಹೀಗೊಂದು ಪತ್ತೇದಾರಿ ಕಥೆ !!!

ಪ್ರಪಂಚದಲ್ಲಿ ಉಳಿದಿದ್ದ ಕೊನೆಯ ವ್ಯಕ್ತಿ ತನ್ನ ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ಬಡಿದ ಸಪ್ಪಳವಾಯಿತು !!!!!

YOUR DAD

When you were 8 years old, your dad handed you an ice cream. You thanked him by dripping it all over your lap.
When you were 9 years old, he paid for piano lessons. You thanked him by never even bothering to practice.
When you were 10 years old, he drove you all day, from soccer to gymnastics to one birthday party after another. You thanked him by jumping out of the car and never looking back.
When you were 11 years old, he took you and your friends to the movies. You thanked him by asking to sit in a different row.
When you were 12 years old, he warned you not to watch certain TV shows. You thanked him by waiting until he left the house.
When you were 13, he suggested a haircut that was becoming. You thanked him by telling him he had no taste.
When you were 14, he paid for a month away at summer camp. You thanked him by forgetting to write a single letter.
When you were 15, he came home from work, looking for a hug. You thanked him by having your bedroom door locked.
When you were 16, he taught you how to drive his car. You thanked him by taking it every chance you could.
When you were 17, he was expecting an important call. You thanked him by being on the phone all night.
When you were 18, he cried at your high school graduation. You thanked him by staying out partying until dawn.
When you were 19, he paid for your college tuition, drove you to campus, carried your bags. You thanked him by saying good-bye outside the dorm so you wouldn't be embarrassed in front of your friends.
When you were 25, he helped to pay for your wedding, and he cried and told you how deeply he loved you. You thanked him by moving halfway across the country.
When you were 50, he fell ill and needed you to take care of him. You thanked him by reading about the burden parents become to their children.
And then, one day, he quietly died. And everything you never did came crashing down like thunder on YOUR HEART.
*HATS OFF TO ALL DADS

ಪರಿಹಾರ

ಆಲ್ಕೋಹಾಲು ಅನ್ನೋದು ನಿಮ್ಮ ಸಮಸ್ಯೆಗೆ ಪರಿಹಾರವಲ್ಲ !!!
ಹಾಗೆಯೇ ಹಾಲು , ನೀರು ಸಹ !!!!

ಹೀಗೊಂದು ದೆವ್ವದ ಕಥೆ !!!

ನನ್ನ ಎದುರಿಗೆ ಬಂದ ಒಬ್ಬನಲ್ಲಿ ಕೇಳಿದೆ ," ನಿನಗೆ ದೆವ್ವ , ಭೂತ ಇದರ ಮೇಲೆ ನಂಬಿಕೆ ಇದೆಯೇ"..
ಅದಕ್ಕೆ ಆತ ಇಲ್ಲ ಅಂತ ಹೇಳಿ ಮಾಯವಾದ !!!