Monday, February 16, 2009

ಪ್ರೇಮಿಗಳ ದಿನ ಮತ್ತು ಶಿವರಾತ್ರಿ...

ಫೆಬ್ರವರಿ ೧೪... ಪ್ರೇಮಿಗಳ ದಿನ...
ಫೆಬ್ರವರಿ ೨೪... ಶಿವರಾತ್ರಿ...
ಅದ್ಯಾಕೋ ಈ ಎರಡೂ ದಿನಗಳು ನಂಗೆ ತುಂಬಾ ಕನ್ಫ್ಯೂಸ್.. ಅದ್ಯಾಕೋ ಗೊತ್ತಿಲ್ಲ ಈ ಎರಡೂ ದಿನಗಳು ಬಂತು ಅಂದ್ರೆ ನಂಗೆ ಕಳ್ಳರ ನೆನಪಾಗುತ್ತೆ...
ಫೆಬ್ರವರಿ ೨೪ ಶಿವರಾತ್ರಿ ಸೋಗಿನಲ್ಲಿ ಕದಿಯುವವರು..ಫೆಬ್ರವರಿ ೧೪ ಹೃದಯ ಕದಿಯುವವರು.. ಸಾಮ್ಯತೆಯನ್ತು ಇದೆ...
ಅದ್ಯಾಕೆ ಪ್ರೇಮಿಗಳ ದಿನ ಅಂತ ಆಚರಿಸ್ಥಾರೋ ನನಗಂತೂ ಗೊತ್ತಿಲ್ಲ್ಲ... ನಾನು ಹೃದಯ ಕಡಿಯೋಕೆ ಪ್ರಯತ್ನ ಪಟ್ಟದ್ದಂತೂ ಫೆಬ್ರವರಿ ೧೪ ಅಲ್ಲ... ಬಹುಶ ಜೂನ್ ೬ , ಮತ್ತೆ ಜುಲೈ ೨೫ ಮತ್ತೆ ಜನವರಿ೨೮.. ಹೀಗೆ ಶತ ಪ್ರಯತ್ನಗಳ ಭಗೀರಥ...:-)
ಮೊನ್ನೆಯ ಪ್ರೇಮಿಗಳ ದಿನವಂತೂ ಇಡೀ ದೇಶದಲ್ಲೇ ದಾಂಧಲೆ ಯೇಬ್ಬಿಸಿದ್ದಂತೂ ಸುಳ್ಳಲ್ಲ..
ಪ್ರೇಮಿಗಳ ದಿನ ಆಚರಿಸೋಕೆ ತುದಿಗಾಲಲ್ಲಿ ನಿಂತ ಯುವಕ ಯುವತಿಯರು... ಪ್ರೇಮಿಗಳ ದಿನ ಆಚರಿಸುವವರ ಕಾಲು ಮುರಿಯಲು ಸಜ್ಜಾಗಿ ನಿಂತ ಆಂಜನೆಯರು... ಹೀಗೆ ಪ್ರೇಮಿಗಳ ದಿನಕ್ಕಂತೂ ಪುಕ್ಕಟೆ ಜಾಹಿರಾತು...
ವರ್ಷಕ್ಕೆ ಒಂದು ಸಾರಿ ಸತ್ತವರಿಗೂ ತಿಥಿ ಅಂತ ಆಚರಿಸೋ ನಮ್ಮ ಸಂಸ್ಕ್ರಿತಿಲಿ vaರ್ಶಕ್ಕೊಮ್ಮೆ ಪ್ರೇಮಿಗಳ ದಿನ ಅಂತ ಆಚರಿಸೋದ್ರಲ್ಲಿ ತಪ್ಪೇನಿದೆ? ಹಾಗಂತ ಕೇಳಿದ್ದ ನನ್ನ ಸ್ನೇಹಿತ.. ಹೌದು... ವರ್ಷಕ್ಕೊಂದ್ಸಾರಿ ಪ್ರೇಮಿಗಳ ದಿನ ಆಚರಿಸೋದು ಸರೀನೆ.. ಈ ಕೆಲಸದ ಒತ್ತಡದಲ್ಲಿ ನಮ್ಮನು ಪ್ರೀತಿಸುವವರನ್ನು, ನಾವು ಪ್ರೀತಿಸುವವರನ್ನು ನೆನಪಿಸಿ ಕೊಳ್ಳೋದು ಒಂಥರಾ ಸರಿ ಅನ್ಸುತ್ತೆ... ಹೊಸ ಪ್ರೀತಿ ಹುಡುಕೋಕೆ, ಕಳೆದು ಹೋದ ಪ್ರೀತಿಗೆ ಪಿಂಡ ಇಟ್ಟು, ತರ್ಪಣ ಕೊಟ್ಟು ಹೊಸ ಪ್ರೀತಿನ ಹುಡುಕೋಕೆ ಅದೊಂದು ದಿನ ಇರ್ಲಿ... ಏನಂತಿರ?
ಆದ್ರೆ ನಮ್ಮ ಸಂಸ್ಕ್ರಿತಿಲಿ ಇದೆಲ್ಲ ಇಲ್ಲ ಅಂತ ಬೊಬ್ಬೆ ಹೊಡೆಯೋರು ಒಂದು ಕಡೆ... ನಮಗೆ ದಿನಾಲೂ ಪ್ರೇಮಿಗಳ ದಿನಾನೇ .... ನಮ್ಮ ಭಾರತೀಯ ಸಂಸ್ಕ್ರುತಿಲಿ ೩೬೫ ದಿನಾನೂ ಪ್ರೇಮಿಗಳ ದಿನ... ಹೀಗಂತ ವಾದಿಸೋರನ್ನ ಕಂಡಿದ್ದೆ... ಅವ್ರನ್ನ ನಾನೂ ಕೆಲವು ಪ್ರಶ್ನೆ ಕೇಳ್ಬೇಕು...
ಮಕ್ಕಳ ದಿನ ಅಂತ ಆಚರಿಸ್ತೇವೆ ಯಾಕೆ? ಆ ಒಂದು ದಿನ ಮಾತ್ರ ನಮ್ಮ ಮಕ್ಕಳ ಬಗ್ಗೆ ಯೋಚಿಸಿದರೆ ಸಾಕೆ? ಗಾಂಧೀ ಜಯಂತಿ ಯಾಕೆ...? ಅಂಥ ಮಹಾನ್ ರಾಷ್ಟ್ರ ಪಿತನನ್ನು ಒಂದು ದಿನ ನೆನಪಿಸ್ಕೊಂದ್ರೆ ಸಾಕೆ? ಸ್ವಾತಂತ್ರ ದಿನ... ಆ ಒಂದು ದಿನ ಮಾತ್ರ ನಾವು ಸ್ವಾತಂತ್ರರೆ? ಬಹುಶ ಉತ್ತರ ಸಿಗಲಿಕ್ಕಿಲ್ಲ... ನಾನು ಒಂದು ವೇಳೆ ಇಂಥ ಪ್ರಶ್ನೆ ಪಬ್ಲಿಕ್ ನಲ್ಲಿ ಕೇಳಿದ್ರೆ ನಂಗೂ ೧೦ ವರ್ಷ ಹಾಕ್ಕೋಳು
ವಷ್ಟು ಚಡ್ಡಿ ಬನಿಯನ್ಗಳು ಸಿಕ್ಕಿಯಾವು ...
ಪ್ರೇಮಿಗಳ ದಿನ ಅಂತ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಲ್ಲೋರಿಗೆನೂ ಕಮ್ಮಿಯಿಲ್ಲ... ಅದಕ್ಕೆ ಈ ದಿನ ಆಚರಿಸೋದಕ್ಕೆ ವಿರೋಧ ವ್ಯಕ್ತ ವಾಗಿರಬೇಕು... ಅದಕ್ಕೆ ಈ ಚಡ್ಡಿ ಪುರಾಣ ಮಾಡೋದಕ್ಕಿಂತ ಅದೊಂದು ದಿನ ಬಾರ್ ಗಳಿಗೆ, ಪಬ್ ಗಳಿಗೆ, ಡಿಸ್ಕೋ ಥೆಕ್ ಗಳಿಗೆ ಬೀಗ ಜಡಿದದ್ದೇ ಆದ್ರೆ ಅಂಥವರೆಲ್ಲರನ್ನೂ ಮೆಚ್ಚಬಹುದಿತ್ತು.. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಕುತಂತ್ರಿ ರಾಜಕಾರಣಿ ಗಳ ಆಟಕ್ಕೆ ಬಲಿಪಶು ವಾದದ್ದಂತೂ ಅಬ್ಬ ಸಾಮಾನ್ಯ ಪ್ರೇಮಿ... ಪಾಪ , ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತ ಪಡಿಸಿದವನ ಮನೆಯಂತೂ ಚಡ್ಡಿಗಲಿಂದಲೇ ತುಂಬಿ ಹೋದ ಬಗ್ಗೆ ಓದಿ ಖೆದವೆನ್ನಿಸಿತು...(ಚಡ್ಡಿ ಕಳಸಿದೋರು ಅದನ್ನ ವಾಪಾಸ್ ಪಡಿಯೋಕೆ ಶಿವರಾತ್ರಿ ಯನ್ನ ಆರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅಂತ ದೇವರಾಣೆಗೂ ನಂಗೊತ್ತಿಲ್ಲ!!!)
ನಾನಂತೂ ಇನ್ನು ಮುಂದೆ ಅಕ್ಟೋಬರ್ ೨೩ ಪ್ರೇಮಿಗಳ ದಿನ , ಫೆಬ್ರವರಿ ೧೪ ಚಡ್ಡಿ ದಿನ ಅಂತ ಆಚರಿಸೋಕೆ ನಿರ್ಧಾರ ಮಾಡಿದ್ದೇನೆ..
ಇಬ್ಬರ ಚಡ್ಡಿ ಜಗಳ , ಬಟ್ಟೆ ಅಂಗಡಿಯವನಿಗೆ ಲಾಭ, ಪ್ರೇಮಿಗೆ ಪ್ರಾಣ ಸಂಕಟ....
ಫೆಬ್ರವರಿ ೧೪ಕ್ಕೆ ಆರಂಭ ಗೊಂಡ ಪ್ರೀತಿ ,ಫೆಬ್ರವರಿ ೨೪ ಕ್ಕೆ ಯಾರೂ ಕದ್ದುಕೊಂಡು ಹೋಗದಿರಲಿ ...
ಪ್ರೀತಿ ಅಮರವಾಗಿರಲಿ...

ತಲೆಹರಟೆ

ತಲೆಹರಟೆ ಜೋಕ್ ಗಳನ್ನ ಕೇಳಿದ್ದೀರಾ? ಇಲ್ಲೊಂದಿದೆ ಓದಿ..
ನನ್ನ ತಂಗಿ ಮಗಳು , ಇನ್ನೂ ೭ ವರ್ಷ ದವಳು... ತುಂಬಾ ತಲೆ ಹರಟೆ ... ಒಂದಿನ ನನ್ನ ಕೇಳಿದ್ಲು...
"ಒಬ್ಬ ನಡ್ಕೊಂಡು ಹೋಗ್ತಾ ಇರ್ಬೇಕಾದ್ರೆ , ಅವ್ನ ತಲೆ ನೇರಕ್ಕೆ ಬಂದ ಹಕ್ಕಿ ಹಿಕ್ಕೆ ಹಾಕ್ತು.. ಆದ್ರೆ ಅದು ಹಾಕಿದ ಹಿಕ್ಕೆ ಕೆಳಕ್ಕೆ ಬೀಳಲೇ ಇಲ್ಲ ಯಾಕೆ?"...
ಉತ್ತರಕ್ಕಾಗಿ ಯೋಚಿಸದೆ... ತಡಕಾಡಿದೆ ... ಕೊನೆಗೂ ಸೋತು ನೀನೆ ಹೇಳು ಅಂದೇ..
"ಉತ್ತರ ತುಂಬಾ ಸುಲಭ... ಯಾಕಂದ್ರೆ ಹಕ್ಕಿ ಚಡ್ಡಿ ಹಾಕ್ಕೊಂದ್ದಿತ್ತು.. " ಅನ್ನೋದೇ...
ನನಗಂತೂ ನಕ್ಕು ಸಾಕಾಗಿತ್ತು...
ಆವತ್ತು ಸಂಜೆ ನಾವೆಲ್ರು ವಾಕಿಂಗ್ ಹೋಗ್ತಾ ಇದ್ವಿ... ನನ್ನ ತಲೆನೆರಕ್ಕೆ ಬಂದ ಹಕ್ಕಿ ಹಿಕೆ ಹಾಕೇ ಬಿಡ್ತು... ನನ್ನ ತಲೆಮೇಲೆ ಎಲ್ಲ ಹಕ್ಕಿ ಹಿಕ್ಕೆ... ತಂಗಿಯ ಮಗಳು ಮೆಲ್ಲನೆ ನಗೋಕೆ ಶುರು... ತಕ್ಷಣ ನಂಗೆ ಅವಳೇ ಬೆಳಿಗ್ಗೆ ಹೇಳಿದ್ದ ಜೋಕ್ ನೆನಪಾಗಿ ಜೋರಾಗಿ "ಈ ಹಕ್ಕಿಗೆನು ಚಡ್ಡಿ ಹಾಕೋಕೆ ಆಗಲ್ವೇ" ಎಂದೆ... ಎಲ್ರೂ ನಗ್ತಾ ಇದ್ರೆ, ದೊಡ್ಡ ಜೋಕ್ ಹೇಳಿದೆ ಅಂತ ನಾನೂ ಬೀಗ್ತಾ ಇದ್ರೆ.. ಅಷ್ಟರಲ್ಲೇ ನನ್ನ ತಂಗಿ ಮಗಳು ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲದೆ ಎಲ್ರೂ ಮೂಕರಾಗಿ ನಿಂತು ಬಿಟ್ಟೆವು... ಮುಂದಿನ ಅರ್ಧ ಗಂಟೆಗೂ ಮಿಕ್ಕಿ ನಾವೆಲ್ಲ ನಕ್ಕಿದ್ದೋ ನಕ್ಕಿದ್ದು... ಅವ್ಳು ಕೇಳಿದ ಪ್ರಶ್ನೆ ಏನು ಗೊತ್ತಾ..?
"ಮಾಮ, ನೀನು ಹಿಕ್ಕೆ ಹಾಕುವಾಗ ಚಡ್ಡಿ ಹಾಕ್ತಿಯೇನು?" !!!!!!!!!

ನನ್ನ ಮಾತು ಕೇಳಿ !!!

ಆಲ್ಕೋಹಾಲು ನಿಮ್ಮ ಪ್ರಶ್ನೆ ಗಳಿಗೆ ಉತ್ತರವಲ್ಲ.... ಆದರೆ ಅದು ನಿಮ್ಮ ಪ್ರಶ್ನೆ ಏನು ಎಂದು ಮರೆಸುತ್ತದೆ...
ಅದಕ್ಕೆ ಹೇಳ್ತೀನಿ , ನನ್ನ ಮಾತು ಕೇಳಿ... ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುದಕ್ಕಿಂತ , ಪ್ರಶ್ನೆಯನ್ನೇ ಮರೆತು ಹಾಯಾಗಿರುವ ಬಗ್ಗೆ ಯೋಚಿಸಿ...