Monday, August 20, 2012

ಸುಮ್ನೆ ತಮಾಷೆಗೆ - 6 !!

ಎದ್ದೇಳಿ !

ಇಷ್ಟೆಲ್ಲಾ ಹಗರಣ ಆದ ಮೇಲೂ
ಈಗ ಮತ್ತೊಂದು ಕಲ್ಲಿದ್ದಲು..
ಹೀಗೆ ಕುಳಿತಿದ್ದರೆ ಜನರೇ
ಹಿಡಿಯುವುದು ನಿಮಗೆ ಗೆದ್ದಲು!!

-------------------------------------------------------------------------------------------------------
ಕೋಟಿ !!

ಭ್ರಷ್ಟಾಚಾರದ ವಿರುದ್ದ ಶೂಟ್
ಮಾಡಿದವರಿಗೆ ಬಿತ್ತು ಲಾಟ್ಹೀ ..
ಕ್ರೀಡೆಯೇ ಅಲ್ಲದ ಶೂಟಿಂಗ್
ಮಾಡಿದವರಿಗೆ  ಸಿಕ್ಕಿತು ಕೋಟಿ !!!
--------------------------------------------------------------------------------------------------------





ಗೋರೆ ಉವಾಚ !!
ಜೀವನದಲ್ಲಿ  ಉದ್ಧಾರವಾಗಬೇಕಾದರೆ  ಆಚಾರ ಉಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ ಅಂತ ಅಪ್ಪ ಹೇಳಿದ್ದಕ್ಕೆ ,  ಆತ ಅತ್ಯಾಚಾರ ಮತ್ತು ಭ್ರಷ್ಟಾಚಾರ ಮಾಡಿದ!!

Saturday, July 14, 2012

ಅತ್ಯಂತ ಭಯಾನಕ ಚಿಕ್ಕ ಕಥೆ !!!

ಆತ ತನ್ನ ಗೋರಿಯ ಮೇಲೆ ಎರಡು ಸತ್ತ  ದಿನಾಂಕಗಳನ್ನು ನೋಡಿ ಬೆಚ್ಚಿ ಬಿದ್ದ !!!

Saturday, July 7, 2012

ಹುಡಿ ಕೂದಲು!

ಕೂದಲು ಉದುರಿ ತಲೆ  ಬೋಳಾಗಿ ತಲೆ ಬಿಸಿ  ಆಗಿದೆಯೆ .. ಹೊಸ ಕೂದಲು  ತರಿಸಲು ಎಷ್ಟು ಖರ್ಚಾದೀತು ಅನ್ನೋ ಮಂಡೆಬಿಸಿಯೇ ? ಇಲ್ಲಿದೆ  ನೋಡಿ ಪರಿಹಾರ .. ಇದರ  hair illusion fiber ..
ಪೂರ್ತಿ  ತಲೆ ಬೋಳು  ಆದವರಿಗೆ ಇದು ಪರಿಹಾರ ಅಲ್ಲ .. ಕೂದಲು ತೆಳ್ಳಗಾದವರಿಗೆ ಇದು ಉತ್ತಮ  ಎಂದು ಕಂಪನಿ ಹೇಳಿಕೊಂಡಿದೆ . ಇಲ್ಲಿದೆ ಅದರ ಬಗ್ಗೆ ಮಾಹಿತಿ ..


ಇದು ನಿಮಗೆ ಹುಡಿಯ ರೂಪದಲ್ಲಿ ದೊರಕುತ್ತದೆ  ..   ಕೂದಲು ಎಲ್ಲಿ ತೆಳ್ಳಗೆ ಆಗಿದೆಯೋ ಅಲ್ಲಿಗೆ   ಇದನ್ನ ಹಾಕಿ ಕೊಂಡರೆ  ಮುಗೀತು .. ನಿಮ್ಮ ಕೃತಕ ಕೂದಲು ತಯಾರು !!!


ಇದನ್ನು ಯಾವುದೇ ಅಪಾಯಕಾರಿ ರಾಸಾಯನಿಕ   ಗಳನ್ನು  ಬಳಸಿ ಮಾಡಿಲ್ಲ ಅಂತ ಹೇಳಲಾಗುತ್ತಿದೆ ..ಇದನ್ನು electrostatically  ಚಾರ್ಜ್ ಮಾಡಿರೋದರಿಂದ ಕೂದಲಿಗೆ  ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆ .. ಕೂದಲಿಗೆ ಹಾಕಿ 30 ಸೆಕೆನ್ಡು ಗಳಲ್ಲಿ ಇದು ಗಟ್ಟಿಯಾಗಿ ಬಿಡುತ್ತದೆ .. ಹಾಗಾಗಿ  ಕೈಗೆ ಅಂಟಿ ಕೊಳ್ಳಬಹುದು  ಅನ್ನೋ ಭಯವಿಲ್ಲ . ಹಾಲಿವುಡ್ ಚಲನಚಿತ್ರ ನಟ ನಟಿಯರು ಇದನ್ನು ತುಂಬಾ ವರ್ಷಗಳಿಂದ ಉಪಯೋಗಿಸುತ್ತಿದ್ದರಂತೆ .. ಒಮ್ಮೆ  ಹಾಕಿದರೆ ದಿನ ಪೂರ್ತಿ ಉಳಿದುಕೊಳ್ಳುತ್ತದೆ ..

ಇದನ್ನು  ಬಳಸಿದ ಕೆಲವರು ಚರ್ಮದ ತುರಿಕೆ ಮುಂತಾದ infection  ಗೆ ತುತ್ತಾದ ಉದಾಹರಣೆ ಗಳೂ ಇವೆ .. ಆದ್ದರಿಂದ ಉಪಯೋಗಿಸುವ ಮುನ್ನ ಎಚ್ಚರ  ಅಗತ್ಯ ...

ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿ ಗಳ ಇಂಥಾ ಹುಡಿ  ಸಿಗುತ್ತದೆ ..


ಇವುಗಳ ಬೆಲೆ ಸುಮಾರು 1000 ರೂಪಾಯಿ ಯಿಂದ ಪ್ರಾರಂಭ ವಾಗುತ್ತದೆ ..

ಸೂಚನೆ : ಇದು ಯಾವುದೇ ರೀತಿಯಲ್ಲಿ ಬಳಸಿ  ಅನ್ನುವ ಸೂಚನೆ ಇದಲ್ಲ , ಯಾವುದೇ ವಸ್ತುವಿನ ಜಾಹೀರಾತೂ ಅಲ್ಲ ..
ಚಿತ್ರಗಳು : ಅಂತರ್ಜಾಲ

ಗೋರೆ ಉವಾಚ :

ತಲೆಗೆ ಎಣ್ಣೆ ಇಲ್ಲ  ಅಂದ್ರೂ , ಹೊಟ್ಟೆಗೆ ಎಣ್ಣೆ ಬೇಕು ..
ಹೊಟ್ಟೆಗೆ  ಹಿಟ್ಟಿಲ್ಲ  ಅಂದ್ರೂ , ತಲೆಗೆ ಕೂದಲು ಬೇಕು !!!


ಹೀಗೊಂದು ಕ್ರಿಕೆಟ್ !!!

ಇಂಥಾ ಸ್ಕೋರ್  ಬೋರ್ಡ್ .ನೀವೆಲ್ಲಿಯೂ ನೋಡಿರಲಿಕ್ಕಿಲ್ಲ..





Saturday, March 3, 2012

ಬದಲಾದ ಟೂತ್ ಬೃಶ್ !

ಈಗ ಎಲ್ಲವೂ ವಿದ್ಯುತ್ ಮಯ. ವಿದ್ಯುತ್ ಚಾಲಿತ ಶೇವರ್ , ಬಾಚಣಿಗೆ , ಮುಂತಾದ ಅದೆಷ್ಟೋ ಉಪಕರಣಗಳು ಎಲ್ಲರಿಗೂ ಗೊತ್ತು.. ಇದೀಗ ವಿದ್ಯುತ್ ಚಾಲಿತ ಹಲ್ಲುಜ್ಜುವ ಬೃಶ್ ಗಳ ಸರದಿ.

ಇದು ಕೂಡ ರೀ ಚಾರ್ಜ್ ಮಾಡಬಹುದಾದ ಬ್ಯಾಟರಿ ಹೊಂದಿದೆ. ಕಂಪನ ತಂತ್ರಜ್ಞಾನವನ್ನು (vibration ) ಬಳಸಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಒಂದು ಬದಿಯಿಂದ ಇನ್ನೊಂದು ಬದಿಗೆ ಗಡಿಯಾರದ ಪೆನ್ದುಲಂ ನಂತೆ ಅಥವಾ ವೃತ್ತಾಕ್ರಿತಿಯಲ್ಲಿ ತಿರುಗಿ ನಿಮ್ಮ ಹಲ್ಲನ್ನು ಶುಚಿಗೊಳಿಸುತ್ತದೆ.




ಮೊತ್ತ ಮೊದಲ ವಿದ್ಯುತ್ ಚಾಲಿತ ಹಲ್ಲುಜ್ಜುವ ಬೃಶ್ ಕಂಡುಹಿಡಿದದ್ದು ೧೯೫೪ ರಲ್ಲಿ . ಸ್ವಿಜೆರ್ ಲ್ಯಾಂಡ್ ನ ಡಾಕ್ಟರ ಫಿಲಿಪ್ಪೆ ಗಿ ವೂಗ್ ಅನ್ನುವವ  broxodent ಅನ್ನುವ ಇಂತಹ ಬೃಶ್ ಕಂಡುಹಿಡಿದಿದ್ದ. ಅಮೆರಿಕಾದಲ್ಲಿ ಮೊದಲಿಗೆ ೧೯೫೯ ರಲ್ಲಿ ಇಂತಹ ಬೃಶ್ ಮಾರಾಟಕ್ಕೆ ಬಂದಿದ್ದು. ೧೯೬೦ ರಲ್ಲಿ GE  ಕಂಪನಿ ಕೂಡ ಇಂತಹ ವಿದ್ಯುತ್ ಚಾಲಿತ ಟೂತ್ ಬೃಶ್ ಹೊರ ತರಲು ಪ್ರಾರಂಭಿಸಿತು.
ಈ ಟೂತ್ ಬೃಶ್ ನಲ್ಲಿ ಎರಡು ವಿಧ. ಒಂದು ಕಂಪನ ತಂತ್ರಜ್ನಾನದ್ದು ಇನ್ನೊಂದು ತಿರುಗು ತಂತ್ರಜ್ನಾನದ್ದು (vibration and rotation ).

                                                ವಿದ್ಯುತ್ ಚಾಲಿತ ಬೃಶ್ ನ ಭಾಗಗಳು


ಇದು ನಮ್ಮ ಮೊಬೈಲ್ ಚಾರ್ಜ್ ಮಾಡಿದಂತೆ ಚಾರ್ಜ್ ಮಾಡಬಹುದು. ಅನೇಕ ವಿಜ್ಞಾನಿಗಳು ಇದರ ಬಗ್ಗೆ ಅಧ್ಯನ ನಡೆಸಿ ಇವೇನೂ ನಾವು ನಿತ್ಯ ಉಪಯೋಗಿಸುವ ಸಂಮಾನ್ಯ ಬ್ರುಶ್ಗಿಂತ ಉತ್ತಮವೇನೂ ಅಲ್ಲ ಅನ್ನುವ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ತಿರುಗು ತಂತ್ರಜ್ಞಾನ ದ ಬ್ರುಶ್ಗಳು ಕಂಪನ ತಂತ್ರಜ್ಞಾನಕ್ಕಿಂತ ಉತ್ತಮ ಅನ್ನುವ ಮಾತು ಕೇಳಿಬಂದಿದೆ. ಕೆಲವು ಇಂತಹ ಬೃಶ್ ಗಳು timer ಮತ್ತು ಚಿಕ್ಕ LCD ಪರದೆ ಕೂಡ ಹೊಂದಿರುತ್ತವೆ.


ನಮ್ಮ ಭಾರತದಲ್ಲೂ ಇಂತಹ ಬ್ರುಶ್ಗಳು ಸಿಗುತ್ತವೆ. ಬೆಲೆ ಸುಮಾರು ರೂಪಾಯಿ ೧೦೦೦ ದಿಂದ ಪ್ರಾರಂಭ. ಬೇಕಾದರೆ ಒಮ್ಮೆ ಟ್ರೈ ಮಾಡಬಹುದು.!!
 ವಿದ್ಯುತ್ ಚಾಲಿತ ಕೆಲವು ಟೂತ್ ಬೃಶ್ ಗಳು.






ಚಿತ್ರಗಳು: ಅಂತರ್ಜಾಲ


ಗೋರೆ ಉವಾಚ: ನಿಮ್ಮ ಏಟಿಎಂ ಕಾರ್ಡಿನ ಗುಪ್ತ ಸಂಖೆಯನ್ನು (ಪಿನ್ ನಂಬರ್) ಟೂತ್ ಬೃಶ್ ನಂತೆ ನೋಡಿಕೊಳ್ಳಿ . ಬೇರೆ ಯಾರಿಗೂ ಉಪಯೋಗಿಸಲು ಕೊಡಬೇಡಿ, ಮತ್ತೆ ಕಮ್ಮಿಯೆಂದರೂ ೩-೪ ತಿಂಗಳಿಗೊಮ್ಮೆ ಬದಲಾಯಿಸಿ!!

ದೊಡ್ಡ ಭೂತದ ಚಿಕ್ಕ ಕಥೆ!!

ರಾತ್ರಿ ೧೧ ಘಂಟೆ..

"ಅಪ್ಪಾ , ಈ ಭೂತ ಪ್ರೇತ ಎಲ್ಲ ಸುಳ್ಳಂತೆ ಅಲ್ವ..?"  ೬ ವರ್ಷದ ಮಗ ಆಗಷ್ಟೇ ಮಲಗುತಿದ್ದ ಅಪ್ಪನನ್ನು ಕೇಳಿದ..
"ನಿನಗೆ ಯಾರು ಹೇಳಿದ್ದು"?

"ಈಗಷ್ಟೇ  ನಮ್ಮ ಮನೆ ಅಡುಗೆಯವನು ಹೇಳಿದ  ಅಪ್ಪಾ"
ಮಗನ ಮಾತು ಕೇಳಿ ಅಪ್ಪ ಬೆವರತೊಡಗಿದ್ದ   ..
ಏನಾಯಿತು ಎಂದು ಗಾಬರಿಯಿಂದ ಕೇಳುತ್ತಿದ್ದ ಮಗನಿಗೆ , ನಮ್ಮ ಮನೆಯಲ್ಲಿ ಅಡುಗೆಯವನೆ ಇಲ್ವಲ್ಲೋ ಅಂತ ಹೇಳುವಷ್ಟು ತಾಕತ್ತೂ ಅಪ್ಪನಿಗೆ ಇರಲಿಲ್ಲ..!!!


Sunday, January 8, 2012

ಬಜಾಜ್ ಕಾರು!!

ಬಹುಶ ಇದನ್ನು ಭಾರತೀಯರಷ್ಟೇ ಮಾಡಬಲ್ಲರು.. ಟಾಟ ಒಂದೆರಡು ವರ್ಷ ಹಿಂದೆ ಮಾಡಿದ್ದನ್ನು ಈಗ ಬಜಾಜ್ ಮಾಡುತ್ತಿದೆ..

ಬಜಾಜ್ ಅಂದರೆ ಸಾಕು ಹಳಬರಿಗೆ ಚೇತಕ್ ಸ್ಕೂಟರು, ಹೊಸಬರಿಗೆ ಪಲ್ಸರ್ ಬೈಕು ನೆನಪಾಗುತ್ತದೆ.. ವರ್ಷಗಳಿಂದ ತ್ರಿ ಚಕ್ರ ವಾಹನಗಳಿಗೆ ಹೆಸರಾದ ಕಂಪನಿಯದು.. ಆದರೆ ಅವರ ಬತ್ತಳಿಕೆಯಲ್ಲಿ ಒಂದೇ ಒಂದು ಆಸ್ತ್ರ ಕಮ್ಮಿಯಿತ್ತು, ಅದೇ ನಾಲ್ಕು ಚಕ್ರದ ವಾಹನ. ಈಗ ಅದಕ್ಕೂ ಕಾಲ ಕೂಡಿ ಬಂದಿರೋ ಥರ ಕಾಣಿಸುತ್ತಿದೆ. ಅತೀ ದೊಡ್ಡದು ಅಲ್ಲದಿದ್ದರೂ ಅತೀ ಚಿಕ್ಕದಾದ ಕಾರು ಬಿಡುಗಡೆ ಮಾಡುವುದರಲ್ಲಿ ಬಜಾಜ್ ಕಂಪನಿ ಕೊನೆಗೂ  ಯಶಸ್ವೀ  ಯಾಗಿದೆ . ಇದು  ಕಾರು ಅನ್ನೋದಕ್ಕಿಂತ  ಹೆಚ್ಚ್ಹಾಗಿ  ಆಟೋ  ರಿಕ್ಷಾಗೆ  ಪರ್ಯಾಯ , ಟಾಟಾ  ನ್ಯಾನೋ  ಕಾರಿಗೆ  ಪ್ರತಿಸ್ಪರ್ಧಿ  ಮುಂತಾಗಿ  ಹೇಳಬಹುದು .

ಇದು ಶುರುವಾಗಿದ್ದು   2008 ರಲ್ಲಿ  .. ಆಗ ಬಜಾಜ್ ಇಂಥ ಒಂದು ಚಿಕ್ಕ  ಕಾರಿನ  ಕನಸು  ಕಂಡು  ಆಗ  ನಿಸ್ಸಾನ್  ಮತ್ತು  ರೆನಾಲ್ಟ್  ಅನ್ನೋ  ಕಂಪನಿ ಗಳ  ಜೊತೆ  ಒಡಂಬಡಿಕೆ  ಮಾಡಿಕೊಂಡಿತ್ತು .. ಆದರೆ ಆ ಕಂಪನಿ ಗಳಿಂದ ವೈಜ್ಞಾನಿಕವಾಗಿ   ಯಾವುದೇ  ಬೆಂಬಲ  ಸಿಗದಿದ್ದರೂ  ಬಜಾಜ್ ತನ್ನದೇ ಆದ ಕಾರು ಅಭಿವೃದ್ಧಿ ಪಡಿಸಿತು.. ಕಾರು ತಯಾರಾಗಲು ಬರೋಬ್ಬರಿ ನಾಲ್ಕು ವರ್ಷ ತೆಗೆದು ಕೊಂದಿತು.. ಇಂಥ ಕಾರು ಅಭಿವೃದ್ಧಿ ಪಡಿಸಲು ಬಜಾಜ್ ಖರ್ಚು ಮಾಡಿದ್ದು ಬರೋಬ್ಬರಿ ೮೦೦ ಕೋಟಿ ರೂಪಾಯಿ!! ಕೊನೆಗೂ ತಯಾರಾದ ಕಾರೆ ಬಜಾಜ್ RE ೬೦.


ಈ ಕಾರು ಸುಮಾರು ೨೦೦ ಚಕ್ ಎಂಜಿನ್ ಹೊಂದಿದ್ದು ಪೆಟ್ರೋಲ್ ಇಂಧನ ಬಳಸುತ್ತದೆ.. ಸುಮಾರು ೬೦೦ ಕಿಲೋ ಭಾರವಿರುವ ಇದರಲ್ಲಿ ೪ ಗೆಯರ್ ಗಳಿದ್ದು ಹೆಚ್ಚು ಅಂದರೆ ೭೦ ಕಿಲೋಮೀಟರು ವೇಗದಲ್ಲಿ ಓದಬಲ್ಲದು. ಪ್ರತಿ ಲೀಟರ್ ಇಂದನಕ್ಕೆ ಬರೋಬ್ಬರಿ ೩೫ ರಿಂದ ೪೦ ಕಿಲೋಮೀಟರು ಒಡಬಹುದಾದ ಇದರಲ್ಲಿ ೪ ಜನ ಕೂರಬಹುದಾಗಿದೆ. ಬೆಲೆ ಸುಮಾರು ೧.೨೫ ಲಕ್ಷಗಳಿಂದ ಪ್ರಾರಂಭವಾಗುತ್ತದೆ..
ಬಹುಶ  ಇದನ್ನು ನಗರ ಪ್ರದೇಶದ  ಜನ ನ್ಯಾನೋ ಬಳಸಿದಂತೆ  ಬಳಸಬಹುದೇನೋ .. ಆಟೋ ರಿಕ್ಷಾದ ಬದಲಿಗೂ ನಗರ ಪ್ರದೇಶದಲ್ಲಿ ಓದಬಹುದಷ್ಟೇ.. ಹಳ್ಳಿಗಳಲ್ಲಿ ೬-೭ ಜನರನ್ನು ತುಂಬಿಸಿ ದುಡ್ಡು ಮಾಡುವ ಬಡ ಆಟೋ ಡ್ರೈವರ್ ಇದನ್ನು ಇಷ್ಟಪದಲಾರ!! ಅಷ್ಟೇ ಅಲ್ಲದೆ ೨೦೦ ಚಕ್ ಎಂಜಿನ್ ಒಂದು ಪಲ್ಸರ್ ಬೈಕಿಗೆ ಸಮ.. ಇನ್ನು ಅದರಲ್ಲಿ ೪ ಜನ ತುಂಬಿಸಿ ದೇವರೇ ಗತಿ.. ನನ್ನ0ಥವರು ಓಕೆ , ಆದರೆ ಅದ್ನಾನ್ ಸಾಮಿ ಯಂಥವರು ಕೂತರೆ???




ಈ ಕಾರು ಮಾರುವ ಹಕ್ಕು ನಿಸ್ಸಾನ್ ಮತ್ತು ರೆನಾಲ್ಟ್ ಕಂಪೆನಿಯದ್ದು.. ಮೂರು ಕಂಪನಿಗಳ ಹೆಸರು ಈ ಕಾರಿನ ಮೇಲಿರುತ್ತದೆ.. ಆದರೆ ಒಂದು ವೇಳೆ ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿ ಗಳು ಇದರಲ್ಲಿ ಭಾಗಿಯಾಗಲು ಬಯಸದಿದ್ದರೆ ತಾನೇ ಇದನ್ನು ಮಾರಾಟ ಮಾಡುವುದಾಗಿ ಬಜಾಜ್ ಹೇಳಿಕೊಂಡಿದೆ.. ಮೊದಲು ಈ ಕಾರು ಶ್ರೀಲಂಕಾದಲ್ಲಿ ಮಾರುಕಟ್ಟೆಗೆ ಬರಲಿದೆ.. ಬಹುಶ ಈ ವರ್ಷ ಕೊನೆ ಅಥವಾ ಮುಂದಿನ ವರ್ಷದ ಮೊದಲಲ್ಲಿ ಇದು ಭಾರತದಲ್ಲೂ ದೊರಕಬಹುದು..




ಗೋರೆ ಉವಾಚ : ಬಜಾಜ್ RE ೬೦ ಕಾರು ಚಾಲೂ ಆಗದಿದ್ದರೆ ಏನು ಮಾಡೋದು? ಬಹಳ ಸುಲಭ. ಒಮ್ಮೆ   ಹಳೆ   ಬಜಾಜ್  ಚೇತಕ್ ಸ್ಕೂಟರನ್ನು  ನೆನಪಿಸಿಕೊಳ್ಳಿ .. RE ೬೦ ಕಾರನ್ನು  ಅಡ್ಡಕ್ಕೆ  ಬಾಗಿಸಿ  ಚೆನ್ನಾಗಿ  ನಾಲ್ಕು ಒದೆಯಿರಿ   .. ಕಾರು ಸ್ಟಾರ್ಟ್  ಆಗದಿದ್ದರೆ ಆಮೇಲೆ  ಕೇಳಿ !!!!