Monday, May 23, 2016

ಗಾಂಧೀಜಿಯವರನ್ನು ಕೊಂದಿದ್ದು ಯಾರು ? - ೨

ಮುಂದುವರಿದದ್ದು ....


ಭಾಗ ೧ ಇಲ್ಲಿದೆ :


ಗಾಂಧೀಜಿ ಯವರನ್ನು ಕೊಂದಿದ್ದು ಯಾರು ?
ಆವತ್ತು ಗಾಂಧೀಜಿ ಯವರನ್ನು ಗುಂಡು ಹೊಡೆದ ತಕ್ಷಣ ಕಾಂಗ್ರೆಸ್ ಅನ್ನುವ ಮಹಾ ಪಕ್ಷದ ಜನರು ಮಾಡಿದ ಕೆಲಸವೆಂದರೆ ಇದರಲ್ಲಿ ಹಿಂದೂ ಮಹಾಸಭಾದ ಕೈವಾಡವಿದೆ ಎಂದು ಪ್ರಚಾರಮಾಡಿದ್ದು !. ಹಿಂದೂ ಮಹಾಸಭಾದ ಸದಸ್ಯರ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿ ಇವರೇ ಕೊಲೆಗಾರರು ಎಂದು ಬಿಂಬಿಸಿದ್ದು ..

ಆದರೆ ಈ ಫೋಟೋ ತೆಗೆದಿದ್ದು ಯಾರು ಗೊತ್ತೇ ? ಇವರೆಲ್ಲರನ್ನೂ ಬಾಂಬೆ ಗೆ ಕರೆದೊಯ್ದ ಪೊಲೀಸರು !! ಯಾಕೆ ??? ಕಾರಣ ನಿಗೂಢವಾಗಿ ಕಂಡರೂ ಸತ್ಯದ ಅರಿವು ಈಗಷ್ಟೇ ನಿಮಗೂ ಆಗಿರಬಹುದು ! ಪೋಲಿಸ್ ಸೆರೆಯಲ್ಲಿದ್ದ ಸಾವರ್ಕರ್ ಈ ಕೆಳಗಿನ ಕಾಗದ ತುಂಬಿದ್ದರು !!! ನಂಬುತ್ತೀರಾ ?ಮೇಲಿನ ಫೋಟೋ ತೋರಿಸಿದಾಗ ಎಲ್ಲರನ್ನೂ ಬಲ್ಲ ಸಾವರ್ಕರ್,  ಮದನ್ಲಾಲ್ ಪಾಶವ ಯಾರೆಂದು ಗೊತ್ತಿಲ್ಲ ಅಂದರು .. ಅಂದ ಹಾಗೆ ಈತ ಬಾಂಬೆ ಗೆ  ಬಂದಿದ್ದು ೧೯೪೭ ನೆ ಇಸವಿಯಲ್ಲಿ !! ಅದೂ ಪಾಕಿಸ್ತಾನದಿಂದ !!! ಬಾಂಬೆ ಗೆ ಬಂದವನೇ ಸೇರಿದ್ದು ಪಟಾಕಿ ತಯಾರಿಸುವ ಕಂಪನಿ ಒಂದರಲ್ಲಿ ಕೆಲಸಕ್ಕೆ  ೨೦ನೆ ಜನವರಿ ೧೯೪೮ ರಂದು ಗಾಂಧೀಜಿ ಯವರನ್ನು ಹತ್ಯೆಗಯ್ಯುವ ಪ್ರಯತ್ನವನ್ನೂ ಈತ ಮಾಡಿದ್ದ !! ಕಳಿಸಿದ್ದು ಯಾರು? ಆತನ ಉಪಾಯವೇನಿತ್ತು ? ಸ್ವಲ್ಪ ಯೋಚಿಸಿದರೆ ಉತ್ತರ ಸಿಗುತ್ತದೆ !!! ಗೊತ್ತಿರುವ ಮೂಲಗಳು ಹೇಳುವಂತೆ ಆತ ಬಂದಿದ್ದೆ ಹಿಂದೂ ಮಹಾಸಭಾ ಸೇರಲಿಕ್ಕೆ !!  ಆದರೆ ಸಾವರ್ಕರ್ ಆತನನ್ನು ಭೇಟಿಯಾಗುವ ಅಥವಾ ಹಿಂದೂ ಮಹಾ ಸಭಾ ಸೇರಿಸುವ  ಇರಾದೆ ತೋರಿಸದೆ ಇದ್ದಾಗ ಆತ ತನ್ನ ಖೆಡ್ಡಾ ಬದಲಿಸಿ ಬಿಟ್ಟಿದ್ದ !!


ಇರಲಿ. ನಡೆದ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ! ಅದ್ಯಾಕೋ ನೆಹರು ಅನ್ನುವ ವ್ಯಕ್ತಿಯ ಬಗ್ಗೆ ನನ್ನ ಅನುಮಾನಗಳು ಬಲವಾಗುವುದೇ ಈ ಎಲ್ಲ ಘಟನೆ ಮೆಲುಕು ಹಾಕುವಾಗ !! ಹಿಂದುಮಹಾಸಭಾ / ಆರ್ ಎಸ್ ಎಸ್  ಹಸರನ್ನು ಕೆಡಿಸುವ ಮೂಲ ವ್ಯಕ್ತಿಯೇ ಈತ ಅನ್ನುವ ಮಾತಂತೂ ಬೆಚ್ಚಿ ಬೀಳಿಸುತ್ತದೆ !!!
೫ನೆ ಜನವರಿ ೧೯೪೮ ರಂದು ಈ ಮದನ್ ಲಾಲ್ ಪಶ್ವ ಅನ್ನುವವನು ರಾವ್ ಸಾಹೇಬ್ ಪಟವರ್ಧನ್ ಅನ್ನು ವವರು ಭಾಷಣ ಮಾಡುತ್ತಿದ್ದಾಗ ಅವರ ಮೈಕಾ ಎಳೆದುಕೊಳ್ಳಲು ನೋಡುತ್ತಾನೆ .. ಇದು ನಡೆದದ್ದು ಅಹ್ಮದಾನಗರ್ ನಲ್ಲಿ !! ೯ನೆ ಜನುವರಿ ೧೯೪೮ ರಂದು ಪೊಲೀಸರು ಆತನ ವಿರುದ್ಧ ಮತ್ತು ವಿಷ್ಣು ಕರ್ಕರೆ  ಬಂಧನಕ್ಕೆ ಆಜ್ಞಾಪಿಸುತ್ತಾರೆ !! ಆದರೆ ೧೨ ನೆ ತಾರೀಕು ಈ ಮದನಲಾಲ್ ನನ್ನು ಬಂಧಿಸಲು ವಾರೆಂಟ್ ಜಾರಿಯಾಗುತ್ತಿದ್ದಂತೆ ಕೆಲವು ನಿಗೂಢ (???) ವ್ಯಕ್ತಿಗಳು ದೆಲ್ಹಿಗೆ ದೌಡಾಯಿಸುತ್ತಾರೆ ! ೨೦ನೆ ಜನವರಿ , ಇದೆ ಮದನ್ಲಾಲ್ ಒಂದು ಖೊಟ್ಟಿ ಗ್ರನೆಡ್ ಸ್ಪೋಟಕ್ಕೆ ಯತ್ನಿಸುತ್ತಾನೆ ? ಅದೂ ಗಾಂಧೀಜಿ ಯವರಿದ್ದ ಸ್ತಳದಲ್ಲಿ !! ಅದು ಖೊಟ್ಟಿ ಅಂತ ಅರಿವಿದ್ದೂ ಅವನು ಹಾಗ್ಯಾಕೆ ಮಾಡಿದ? ಆತನನ್ನು ಬಂಧಿಸುವಾಗ ಆತನಲ್ಲಿ ನಿಜವಾದ ಗ್ರನೆಡ್ ಕೂಡ ಸಿಗುತ್ತದೆ ಆದರೂ ಆತ  ಅದನ್ನು ಸ್ಪೋಟಿಸುವ ಸಾಹಸ ಮಾಡಲಿಲ್ಲ ಯಾಕೆ ? ಅಂದರೆ ಆತನಿಗೆ ಕೊಲೆ ಮಾಡುವ ಇರಾದೆ ಇರಲಿಲ್ಲ ! ಆತನಿಗೆ ಆ ಗ್ರನೆಡ್ ಕೊಟ್ಟವರು ಯಾರು ? ಅದರ ಬಗ್ಗೆ ಎಳ್ಳಷ್ಟೂ  ವಿಚಾರಣೆ ಆಗುವುದಿಲ್ಲ ! ಹೀಗೆ ಸಿಕ್ಕಿಬಿದ್ದ ಮದನ್ಲಾಲ್ ಹಿಂದೂ ಮಹಾಸಭಾ ಮತ್ತು ಕರ್ಕರೆ ಅನ್ನುವವನ ಹೆಸರು ಹೇಳುತ್ತಾನೆ !! ಆದರೆ ಒಬ್ಬ ಪ್ರತ್ಯಕ್ಷ ದರ್ಶಿ ಹೇಳುವಂತೆ ಆತ  ಇದೆ ಮದನ್ಲಾಲ್ ನನ್ನು ಒಂದು ಟ್ಯಾಕ್ಸಿ ಯಲ್ಲಿ ಬರುವುದನ್ನ ನೋಡಿರುತ್ತಾನೆ .. ಆ ಟ್ಯಾಕ್ಸಿ  ಬಗ್ಗೆ ವಿಚಾರಣೆ ನಡೆದಾಗ ಅದು ಜಿ ಏನ್ ಆಯ್  ಟಿ  ಬಸ್ಸು ಎಂದು ತಿಳಿದು ಬರುತ್ತದೆ !! ಇಷ್ಟನ್ನು ದಾಖಲಿಸಿದ ಪೊಲೀಸರು ಎಲ್ಲ ಪುರಾವೆಗಳೊಂದಿಗೆ ಬಾಂಬೆ ಗೆ ಬರುತ್ತಾರೆ .. ಆದರೆ ಅದ್ಯಾವ ದಾಖಲೆಗಳು ಎಂದು ಯಾರಿಗೂ ತಿಳಿದಿಲ್ಲ .. ಬಾಂಬೆ ಗೆ ಯಾಕೆ ಬಂದರು ಅನ್ನುವುದೂ ಸ್ಪಷ್ಟವಿಲ್ಲ !! ಅಂದರೆ ಗಾಂಧೀಜಿ ಯವರನ್ನು ಕೊಲ್ಲುವ ಪ್ಲಾನ್ ಮಾಡಿದ್ದೆ ಈ ಮದನಲಾಲ್ !! ಆತನನ್ನು ಬಂಧಿಸಿಯೂ ಆಗಿದೆ !! ಸಾಕ್ಶಗಳೂ ಸಿಕ್ಕಿವೆ !!


೧೭ನೆ ಜನವರಿ ೧೯೪೮ ರಂದು ಗೋಡ್ಸೆ ಮತ್ತು ಆಪ್ಟೆ ದೆಹಲಿಗೆ ಬರುತ್ತಾರೆ .. ಅದೂ ವಿಮಾನದಲ್ಲಿ !! ಮರೀನಾ ಹೋಟೆಲ್ ನಲ್ಲಿ ಉಳಿಯುತ್ತಾರೆ!! ಇಂತಹ ಆಪಾದನೆಗಳು ಬಂದಾಗ ಕಾಡುವ ಪ್ರಶ್ನೆ , ಇಷ್ಟೊಂದು ದುಬಾರಿ ವಿಮಾನ ಮತ್ತು ಹೋಟೆಲ್ ಗೆ ದುಡ್ಡು ಕೊಟ್ಟಿದ್ದು ಯಾರು ??? ಆದರೆ ಈ ಮದನ್ಲಾಲ್ ಮಾಡಿದ ಕೊಲೆ ಪ್ರಯತ್ನ ವಿಫಲವಾದಾಗ , ಆತನನ್ನು ಬನ್ಧಿಸಲಾಗುತ್ತದೆ.  ಅದೇ ದಿನ ಅಂದರೆ ೨೦ ನೆ ಜನವರಿ ೧೯೪೮ ರಂದು ಗೋಡ್ಸೆ ಮತ್ತು ಆಪ್ಟೆ ಬೊಂಬೆ ಗೆ ರೈಲಿನ ಮುಖಾಂತರ ವಾಪಸ್ಸಾಗುತ್ತಾರೆ !!! ಹೀಗಂತ ದಾಖಲೆಗಳು ಹೇಳುತ್ತವೆ !!! ಅಂದರೆ ಗೋಡ್ಸೆ ಮತ್ತು ಆಪ್ಟೆ ಇತರರೊಂದಿಗೆ ಡೆಲ್ಲಿ ಗೆ ಬಂದಿದ್ದು , ಗಾಂಧೀಜಿಯವರ ಕೊಲೆ ಯತ್ನ ನಡೆದದ್ದು , ಮದನ್ಲಾಲ್ ಹಿಂದೂ ಮಹಾಸಭಾದ ಹೆಸರು ಹೇಳಿದ್ದು ಎಲ್ಲವೂ ವ್ಯವಸ್ತಿತ .. ಆದರೆ ಆವತ್ತು ಕೊಲೆ ಆಗದೆ ಇದ್ದಾಗ ಕೆಲವರಂತೂ ಕಳವಳ ಕ್ಕೆ ಒಳಗಾಗುತ್ತಾರೆ !! ಹಿಂದೂ ಮಹಾಸಭಾ ಗಾಂಧೀಜಿಯವರ ಕೊಲೆಗೆ ಯತ್ನಿಸಿತು ಅಂತ ಪ್ರಚಾರವಾಗುತ್ತದೆ ... ಕಳವಳ ಕ್ಕೆ ಒಳಗಾದವರು ಯಾರು ?


ಅಂತೆಯೇ ದಾಖಲೆಗಳು ಗೋಡ್ಸೆ ಮತ್ತು ಆಪ್ಟೆ ಮತ್ತೆ ೨೭ನೆ ಜನವರಿ ೧೯೪೮ ರಂದು ಮತ್ತೆ ಡೆಲ್ಲಿ ಗೆ ವಿಮಾನದ ಮೂಲಕ ಬಂದರು ಅನ್ನುತ್ತದೆ !! ಬಹುಶ ಅವರು ಭಾರಿ ಶ್ರೀಮಂತರಿರಬೇಕು ಅಲ್ವೇ ? ಪೋಲಿಸರೂ ಸಹ ಭಾರಿ ನಿದ್ದೆ ಮಾಡಿರಬೇಕು ಆವತ್ತು !! ಇಲ್ಲದಿದ್ದರೆ ಅವರನ್ನು ತಡೆಯುವುದು ಅದೆಷ್ಟು ಕಷ್ಟ ?? ದೆಹಲಿಯಿಂದ ರೈಲಿನ ಮುಖಾಂತರ ಕಾನ್ಪುರ ಕ್ಕೆ ಬಂಡ ಅವರು ಡಾಕ್ಟರ್ ಪರ್ಚುರೆ ಅವರ ಮನೆಯಲ್ಲಿ ಉಳಿದರು ಅಂತ ಪೋಲಿಸ್ ದಾಖಲೆಗಳು ಹೇಳುತ್ತವೆ !! ೨೮ನೇ ತಾರೀಕಿಗೆ ಗೋಎಲ್ ಅನ್ನುವವರಿಂದ ಪಿಸ್ತೂಲು ಖರೀದಿಸಿ ೨೯ ರಂದು ಮತ್ತೆ ದೆಹಲಿಗೆ ಬರುತ್ತಾರೆ ..!! ೩೦ರಂದು ಗಾಂಧೀಜಿಯವರನ್ನು ಗುಂಡಿಕ್ಕಿ ಸಾಯಿಸುತ್ತಾರೆ !!!!  ಓಹೋ !!!!
ಹಾರಿಸಿದ ಮೂರೂ ಗುಂಡುಗಳು ಎದೆಗೆ !! ಆದರೂ ಗಾಂಧೀಜಿ ಕೂಡಲೇ ಸಾಯುವುದಿಲ್ಲ !

ಈ ಮೇಲಿನ ಫೋಟೋ ದಲ್ಲಿ ಎದೆಯ ಮೇಲೆ ಒಂದಾದರೂ ಗುಂಡಿನ ಗಾಯ ನಿಮಗೆ ಕಾಣಿಸುತ್ತಿದೆಯೇ ? ಇಲ್ಲ , ಆದರೆ ಅವರ ಕೊನೆಯ ಎಲ್ಲಾ ಫೋಟೋಗಳಲ್ಲೂ ಅವರ ಕುತ್ತಿಗೆಯನ್ನು ಒಂದು ಬಟ್ಟೆಯ ಮೂಲಕ ಮುಚ್ಚಲಾಗಿದೆ  ಯಾಕೆ ? ಹಾಗಾದರೆ ಗಾಂಧೀಜಿ ಯವರು ಎದೆಗೆ ಗುಂಡು ಬಿದ್ದು ಸತ್ತರೆ ಅಥವಾ ಇನ್ನೇನಾದರೂ ????? ಇದಕ್ಕೆ ಈಗ ಉತ್ತರ ಬೇಕಾಗಿದೆ !! ಗುಂಡು ತಾಕಿದ ತಕ್ಷಣ ಅವರನ್ನು ಬಿರ್ಲಾ ಹೌಸ್ ನ ಕೊಠಡಿಗೆ ಯಾಕೆ ಕರೆದೊಯ್ಯಲಾಯಿತು ? ಅವರೊಂದಿಗೆ ಕೊಠಡಿಯಲ್ಲಿ ಇದ್ದವರು ಯಾರು ? ಕೊನೆಯ ಕ್ಷಣಗಳಲ್ಲಿ ಗಾಂಧೀಜಿ ಅವರೊಂದಿಗೆ ಇದ್ದ ಸರ್ದಾರ್ ಪಟೇಲರನ್ನು ಅರ್ಧದಲ್ಲಿ ತಡೆದವರು ಯಾರು ? ಆಸ್ಪತ್ರೆಗೆ ಅವರನ್ನು ಕೂಡಲೇ ಯಾಕೆ ಕರೆದೊಯ್ಯಲಿಲ್ಲ ?? ಪೋಸ್ಟ್ ಮೊರ್ಟಮ್ ಯಾಕೆ ಮಾಡಲಿಲ್ಲ ?? ಅವರ ಹತ್ಯೆಯ ವಿಷಯ ನೆಹರೂ ಅನ್ನುವವನಿಗೆ ತಿಳಿಸಿದ್ದು ಯಾರು ?? ಹೇಗೆ ತಿಳಿಸಿದರು ?  


ಪ್ರಶ್ನೆಗಳು ಇನ್ನಷ್ಟು ಇವೆ .. ಉತ್ತರ ಕಂಡುಕೊಳ್ಳಬೇಕಿದೆ !! ಸದ್ಯಕ್ಕೆ ಇಷ್ಟು ಸಾಕು !!!
 ಕೃಪೆ : https://twitter.com/loosebool


All credit to :ಗೋರೆ ಉವಾಚ :   ಹತ್ಯೆ ಪ್ರಕರಣದಲ್ಲಿ ಸುಮ್ಮನೆ  ಗಲ್ಲು ಶಿಕ್ಷೆಗೆ ಗುರಿಯಾದ ಗೋಡ್ಸೆ ಯಂಥವರು  , ಆ ಹತ್ಯೆ ನಿಜವಾಗಲೂ ನಾನೇ ಮಾಡಬೇಕಿತ್ತು ಅಂತ ಖಂಡಿತಾ ಒಂದು ಸಾರಿಯಾದರೂ ಅಂದುಕೊಂಡಿರುತ್ತಾನೆ !!!