Friday, May 22, 2009

ಆತ ಯಾರೆಂದು ಕೊನೆಗೂ ತಿಳಿಯಲೇ ಇಲ್ಲ..!!!!

IPL ಗಿಂತ... ಆತನ ಬ್ಲಾಗ್ ಹೆಚ್ಚು ಜನಪ್ರಿಯವಾಯಿತು... IPL ನ ವೆಬ್ ಸೈಟ್ ಗೆ ಭೇಟಿ ನೀಡಿದವರಿಗಿಂತ ಆತನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆಯೇ ಹೆಚ್ಚು... ಕೊಲ್ಕತ್ತಾ ನೈಟ್ riders, ಅದರ ಬಾಸ್ ಶಾರುಖ್, ಅಧಿಕಪ್ರಸಂಗಿ ಶ್ರೀಸಾಂತ್ ಎಲ್ಲರ ಜನ್ಮ ಜಾಲಾಡಿಸಿಬಿಟ್ಟ.. ೨೫ ದಿನಗಳಲ್ಲಿ ಆತನ ಬ್ಲಾಗ್ ಗೆ ಕಡಿಮೆಯೆಂದರೂ ೧.೫೦ ಲಕ್ಷ ಜನರು ಭೇಟಿ ನೀಡಿದರು... ಆತ ಯಾರು ಅನ್ನೋದು ಮೊನ್ನೆ ೧೮ ಕ್ಕೆ ಗೊತ್ತಾಗಬೇಕಿತ್ತು ಆದರೆ Fakeiplplayer ಎಂದು ತನ್ನನ್ನು ತಾನು ಕರೆಸಿಕೊಂಡ ಆತ ಕೊನೆಗೂ ಯಾರೆಂದು ತಿಳಿಯಲೇ ಇಲ್ಲ...
ಹೌದು... ನೀವು ಭೇಟಿ ಕೊಟ್ತಿದ್ದೀರೋ ಇಲ್ಲವೊ ಗೊತ್ತಿಲ್ಲ... ಆತನ ಬ್ಲಾಗ್ ಎಲ್ಲವನ್ನೂ ಹೇಳುತ್ತದೆ... ಟೀಂ ಮೀಟಿಂಗ್ ನಲ್ಲಿ ಏನಾಯಿತು, ಶಾಪಿಂಗ್ ಗೆ ಹೋದಾಗ, ಆಟ ಆಡೋವಾಗ, ಕಾಮೆಂಟರಿ ಮಾಡೋವಾಗ... ಎಲ್ಲೆಲ್ಲ ಏನೇನ್ ನಡಿಯತ್ತೆ, ಕೊಲ್ಕತ್ತಾ ಯಾಕೆ ಸೋತಿತು... ಹುಹ್... ಅದೆಷ್ಟು ನಿಜ , ಅದೆಷ್ಟು ಸುಳ್ಳು ಗೊತ್ತಿಲ್ಲ...ಆದರೆ ಎಲ್ಲವನ್ನು ಆತ ಹೇಳುತ್ತಾನೆ.. ತನ್ನನ್ನು ತಾನು FakeIPLPlayer ಎಂದು ಕರೆಸಿಕೊಳ್ಳುವ ಆತ ಹೇಳಿಕೊಳ್ಳುವಂತೆ ಆತ ಕೋಲ್ಕತ್ತಾ ಟೀಂ ನ ಆಟಗಾರ... ರಣಜಿ ಆಡಿದ್ದಾನೆ, ಭಾಷೆ ನೋಡಿದರೆ ಬೆಂಗಾಲಿ ಥರ ಅನ್ನಿಸುತ್ತೆ... ಸ್ವಚ್ಛ ಇಂಗ್ಲಿಷು... ಕಲಿತಿದ್ದು ಡೆಲ್ಲಿಯಲ್ಲಿ, ಭಾರತೀಯ ಟೀಂ ನಲ್ಲಿ ಆಡುವ ಅರ್ಹತೆ ಇದ್ದೂ ಆಡಲಾಗದವನು... ಕಳೆದ ವರ್ಷದ IPL ನಲ್ಲಿ ಚಾನ್ಸ್ ಸಿಗಲಿಲ್ಲ... ಈ ವರ್ಷ ಟೀಂ ನಲ್ಲಿ ಇದ್ದೂ ಆತನನ್ನು ಯಾರೂ ಆಡಿಸಲಿಲ್ಲ...
ಕೆಲವರು ಆತ ಆಕಾಶ್ ಚೋಪ್ರಾ ಅಂದರು, ಇನ್ನು ಕೆಲವರು ಸಂಜಯ್ ಬಂಗಾರ್ ಕಡೆ ಬೊಟ್ಟು ಮಾಡಿದರು... ಉಹುಂ... ಅವರಾರೂ ಅಲ್ಲ... ಆತ ಟೀಂ ನ ಮ್ಯಾಚ್ ಮುಗಿದ ಕೂಡಲೇ ಬ್ಲಾಗ್ ಬರೆಯುತ್ತಾನೆ, ಹೋಟೆಲ್ ರೂಮಲ್ಲಿ ಎಲ್ರೂ ಮಲಗಿದರೆ ಬ್ಲಾಗ್ ಗೀಚ್ತಾನೇ, ಹೊಸ ಲ್ಯಾಪ್ಟಾಪ್ ಖರೀದಿಸಿದ್ದೀನಿ ಅಂತಾನೆ, ಕೋಚ್ ನ ಲ್ಯಾಪ್ಟಾಪ್ ನಿಂದ ಅಂತ ಒಂದೆರಡು ವಾಕ್ಯ ಗೀಚುತ್ತಾನೆ.... ಆದರೆ ಇದುವರೆಗೂ ಆತ ಯಾರೆಂದು ತಿಳಿದಿಲ್ಲ...
ಆತನ ಬರಹದಲ್ಲಿ ಎಲ್ಲರಿಗೂ ಒಂದೊಂದು ಅಡ್ಡ ಹೆಸರಿದೆ... ಫಾರೆನ್ ಬಬುಸ್, ಪ್ರಿನ್ಸ್ ಆಫ್ ಪಟಿಯಾಲ, ಅಪ್ಪಂ , ದೀವಾರ್, ಬೆವದಾ , ಬಾಟ್ಲಿ ವಾಲಾ...ಹೀಗೆ... ಕ್ರಿಕೆಟ್, ಅದರೊಳಗಿನ ಡಂಭಾಚಾರ, ಮಂದಿರಾ ಬೇಡಿ, ಅಲ್ಲಿನ ರಾಜಕೀಯ, ಸೆಕ್ಸ್, ಪಾರ್ಟಿಗಳು... ಹುಹ್ ಏನೇನಿಲ್ಲ... ನಾನು ಜಾಸ್ತಿ ಹೇಳುವುದು ಒಳ್ಳೆಯದಲ್ಲ... ನೀವೇ ಸ್ವತಹ ಒಮ್ಮೆ ಓದಿ... ಆತ ಅದೆಷ್ಟು ನಿಜ, ಅದೆಷ್ಟು ಸುಳ್ಳು ಯಾರಿಗೂ ಗೊತ್ತಿಲ್ಲ... ಆತ ನಿಜವಾಗಿ ಕೊಲಕತ್ತಾ ಆಟಗಾರನೇ ಅಥವ ನಮ್ಮ ನಿಮ್ಮಂಥ ಸಾಮನ್ಯ ನೆ ತಿಳಿದಿಲ್ಲ... ಯಾರೇ ಇರಲಿ ತುಂಬ ಬುದ್ಧಿವಂತ... ಕೆಲವೊಂದು ಬಾರಿ ನನಗೆ IPL ಮ್ಯಾಚ್ ಬೋರ್ ಆದಾಗ ಟೈಮ್ ಪಾಸು ಮಾಡಿಸಿದ್ದಾನೆ... ಆತನ ಬ್ಲಾಗ್ ಓದಿ ಕೆಟ್ಟ ಮ್ಯಾಚ್ ಮರೆತು ಮತ್ತೆ ನಕ್ಕಿದ್ದೇನೆ...
ನನ್ನ ಪ್ರಕಾರ ಆತ ಯಾರೋ ಮೂರನೇ ವ್ಯಕ್ತಿ... ಕೋಲ್ಕತ್ತಾ ಟೀಂ ನ ಒಳಗಿನಿಂದ ಆತ ಯಾರ ಜೊತೆಗೋ ಸಂಪರ್ಕ ಇಟ್ಟುಕೊಂಡಿದ್ದಾನೆ... ಎಲ್ಲ ಮಾಹಿತಿ ಪಡೆದು ಬ್ಲಾಗ್ ಗೀಚುತ್ತಾನೆ... ಯಾಕಂದ್ರೆ ಅಲ್ಲಿರುವ ಇಂಟರ್ನೆಟ್, wi-fi ಎಲ್ಲದಕ್ಕೂ ಮೋಸ ಮಾಡುವ ಹಾಗಿಲ್ಲ... ಆದ್ದರಿಂದ ಅಲ್ಲಿಂದಲೇ ಬರೆಯುವ ಪ್ರಮೇಯ ತುಂಬಾ ಕಮ್ಮಿ... ಇನ್ನು ಒಂದು ತಿಂಗಳ ಕಾಲ ಎಲ್ಲರ ಕಣ್ಣು ತಪ್ಪಿಸಿ ಅಲ್ಲಿಂದ ಬರೆಯುವ ಸಾಧ್ಯತೆ ಕೂಡ ತುಂಬಾ ಕಮ್ಮಿ... ಆತನ ಬ್ಲಾಗ್ ಓದಲು ಇಲ್ಲಿ ಭೇಟಿ ಕೊಡಿ... http://fakeiplplayer.blogspot.com/

Tuesday, May 5, 2009

ಇನ್ನು ನಮಗೆ ಕೆಲಸ ಇಲ್ಲಾ!!!!

"Say no to Bangalore, Yes to Buffalo"..
ಹಾಗಂತ ಅಮೇರಿಕಾದ ಅಧ್ಯಕ್ಷ ಒಬಾಮ ಹೇಳಿಬಿಟ್ಟಿದ್ದಾನೆ...!!! ಅಮೇರಿಕಾ ದಂಥಾ ಅಮೇರಿಕಾ ದುಡ್ಡಿಗಾಗಿ ಪರದಾಡುತ್ತಿದ್ದರೆ ಆತನಿಂದ ಈ ಹೇಳಿಕೆ ಬಂದುಬಿಟ್ಟಿದೆ...ಅಲ್ಲಾ, ಈ ಒಬಾಮ ಅಧ್ಯಕ್ಷನಾಗಿ ಎಷ್ಟು ದಿನಗಳಾದವು?? ೧೦೦?? ೧೧೦? ೧೨೫??? ಕೇವಲ ೧೦೦ ದಿನದಲ್ಲಿ ಅಮೇರಿಕಾದ ಪರಿಸ್ತಿತಿ ಸುಧಾರಿಸಬೇಕಿದ್ದರೆ ಏನು ಮಾಡಬೇಕು ಅದನ್ನ ಮಾಡಿದ್ದಾನೆ... ಈ ಸಾಫ್ಟ್ವೇರ್, ಬಿ ಪಿ ಓ ಅನ್ನೋ ಕೆಲಸ ನಾವಿಲ್ಲಿ ಮಾಡ್ತಿವಲ್ಲ??? ಅಲ್ಲ, ನಾವ್ಯಾವತ್ತಾದ್ರೂ ಯೋಚಿಸಿದ್ದೀವ ಅಮೇರಿಕಾದವರು ನಮಗೆ ಯಾಕೆ ಕೆಲಸ ಕೊಡ್ತಿದ್ದಾರೆ ಅಂತ?? ಅವ್ರ ಲಾಭಕ್ಕಾಗಿ ತಾನೆ? ಅಲ್ಲ ಆನೋಕ್ಕಾಗಲ್ಲ.. ಹಾಗಂತ ನಮಗೇನೂ ಇದ್ರಿಂದ ಉಪಯೋಗ ಆಗ್ಲಿಲ್ವಾ?? ಖಂಡಿತ ಆಗಿದೆ...ಬಹುಶ ಭಾರತದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಸಿದ್ದು , ದುಡ್ಡು ಹರಿದಾಡಿದ್ದು ಇವುಗಳಿ೦ದಾನೆ.. ಇಲ್ಲಾಂದ್ರೆ ಈ ಹಡಬೆ ಸರಕಾರಗಳು ನಮಗೆಲ್ಲಿ ಕೆಲಸ ಕೊಡ್ತಾ ಇದ್ವು?? ಎಲ್ಲಾ ಓಕೆ.. ಆದ್ರೆ ಈ ಅಮೇರಿಕಾ ಹೇಳಿದ್ದೆ ಯಾಕೆ??
ನಮ್ಮಲ್ಲಿ ದುಡ್ಡಿಲ್ಲ, ನಮ್ಮಲ್ಲಿ ಕೆಲಸ ಇಲ್ಲ ಅನ್ನೋ ಈ ಅಮೇರಿಕಾ ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ದುಡ್ಡು ಎಲ್ಲಿಂದ ಕೊಡುತ್ತೆ?? ಇರಾಕ್ ಮೇಲೆ ದಾಳಿ ಮಾಡಿ ಇಡೀ ವಿಶ್ವದ ಪೆಟ್ರೋಲಿಯಂ ಮೇಲೆ ಹೇಗೆ ಹಿಡಿತ ಸಾಧಿಸುತ್ತೆ?? ಬಹುಶ ಈ ಪ್ರಶ್ನೆಗಳಿಗೆ ಉತ್ತರ ಜೋರ್ಜ್ ಬುಷ್ ಅಥವಾ ಒಬಾಮ ಕೊಡಬಲ್ಲರೆನೋ... ನನ್ನದೊಂದು ಪ್ರಶ್ನೆ ಇಲ್ಲಿದೆ... ನಾವು ಭಾರತಕ್ಕೆ ಉದ್ಯೋಗ ಕೊಡೋದಿಲ್ಲ, ೧ ಡಾಲರ್ ಬೇಕಿದ್ರೆ ೫೦ ರುಪಾಯಿ ಕೊಡಿ ಅಂತ ಅವ್ರು ಕೇಳಬೇಕಾದರೆ ನಾವೇನ್ ಮಾಡಬಹುದು???
ಈ ಬಗ್ಗೆ ನಾನು ತುಂಬಾ ಆಲೋಚಿಸಿದೆ... ಉತ್ತರ ಹುಡುಕಿದೆ... ಉಹುಂ ಯಾಕೋ ಸಮಾಧಾನವಾಗಲಿಲ್ಲ...
"ಇವತ್ತಿಂದ ನಾಳೆಗೆ ಫಲಿತಾಂಶ ಬೇಕೆಂದರೆ ಹೇಗೆ ಸ್ವಾಮೀ.. ರಷ್ಯಾ ದಂಥ ದೇಶವನ್ನ ಹುಡಿ ಮಾಡಲು ಈ ಅಮೇರಿಕಾ ಬರೋಬ್ಬರಿ ೬೦ ವರ್ಷ ಕಾಯಲಿಲ್ಲವೇ?? ಬ್ರಿಟೀಷರು ಭಾರತದ ಮೇಲೆ ಹಿಡಿತ ಸಾಧಿಸಲು ಅದೆಷ್ಟು ವರ್ಷ ಕಾಯಲಿಲ್ಲ? ಅದೇ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಬೇಕು ಅಂತ ಅದೆಷ್ಟೋ ಮಂದಿ ಊಟ ,ನಿದ್ದೆ ಎಲ್ಲ ಬಿಟ್ಟು ಅದೆಷ್ಟು ದಿನ ಹೊರಾಡಲಿಲ್ಲ?? ಹಾಗೆ..ಉತ್ತಮ ಫಲಿತಾಂಶಕ್ಕಾಗಿ ಹೋರಾಡಬೇಕು, ಕಾಯಬೇಕು, ಪ್ಲಾನ್ ಮಾಡ್ಬೇಕು" ಹಾಗಂತ ಮನಸ್ಸು ಎಚ್ಚರಿಸುತ್ತಲೇ ಇತ್ತು...
ಅಲ್ಲಯ್ಯ ಈ ಅಮೇರಿಕಾ ದವರು ನಮಗೆ ಕೆಲಸ ಕೊಡಲ್ಲ , ಸರಿ ,ನಂ ಕೆಲಸ , ನನ್ನ ದೇಶದ ಕೆಲಸ ನಾನ್ ಮಾಡ್ತೀನಿ...
ಅಮೇರಿಕಾ ಕ್ಕೆ ೧೦೦೦ ಕೋಟಿ ರುಪಾಯಿಯ ಸಾಫ್ಟ್ವೇರ್ ಬೇಕಂತೆ... ಸರಿ , ಜಗತ್ತಿನ ೭ನೆ ದೊಡ್ಡ ದೇಶ, ೧೦೦ ಕೋಟಿಗಿಂತಲೂ ಹೆಚ್ಚು ಜನರಿರುವ ನಮ್ಮ ದೇಶಕ್ಕೆ ಅದೆಷ್ಟು ಸಾವಿರ ಕೋಟಿ ಗಳ ಸಾಫ್ಟ್ವೇರ್ ಬೇಡ???
naಮ್ಮ ಜನಕ್ಕೆ ನಿಮ್ಮಲ್ಲಿಂದ ಕೆಲಸ ಸಿಗಲ್ಲ... ಹೋಗ್ರಯ್ಯ ನಿಮ್ ಪೆಪ್ಸಿ ಕೋಕ್ ನಂಗೂ ಬೇಡ...
ನೀವು ಕೊಡೊ ಕುರ್ಕುರೆ ಗಿಂತ ನಮ್ಮಜ್ಜಿ ಮಾಡೋ ಚಿಪ್ಸ್ ಅದೆಷ್ಟೋ ಚೆನ್ನಾಗಿರ್ತವೆ..
ನಿಮ್ಮ ಕೋಲ್ ಗೇಟ್ ಗೆ ಬೆಂಕಿ ಹಾಕಿ, ನಮ್ಮಲ್ಲಿರೋ ಇದ್ದಿಲ ಹುಡಿ ಸಾಕು... ಪಿಜ್ಜಾ ಹಟ್, ಪೀಚೆ ಹಟ್....
ಹಾಗಂತ ನಾವೂ ಹೇಳಿದ್ರೆ ಹೆಂಗೆ??? ಬಹುಶ ಇವತ್ತಿಂದ ನಾಳೆ ಫಲಿತಾಂಶ ಸಿಗೋದಿಲ್ಲ ... ಆದ್ರೆ ಆ ಮೂಲಕ ನಾವೂ ನಮ್ಮ ದೇಶಕ್ಕೆ ಅಲ್ಪ ಸಹಾಯ ಮಾಡಬಹುದು... ಮುಂದೊಂದು ದಿನ ಒಬ್ಬ ರೂಢಿಸಿದ ಈ ಅಬ್ಭ್ಯಾಸ ೧೦೦ ಜನ ರೂಢಿಸಿಕೊಂಡಾರು ...
ಹನಿ ಹನಿ ಕೂಡಿದರೆ ಹಳ್ಳ ತಾನೆ... ಯಾಕೋ ಆಜಾದಿ ಬಚಾವ್ ಆಂದೋಲನದ ರಾಜೀವ್ ದೀಕ್ಷಿತ್ ತುಂಬಾ ನೆನಪಾಗುತ್ತಿದ್ದಾನೆ ...