Thursday, February 11, 2010

ಬದನೇಕಾಯಿ !!

ಬಿ ಟಿ ಬದನೆ.. ಬಹುಶ ಎಲ್ಲರೂ ಇದರ ಬಗ್ಗೆ ಕೇಳಿಯೇ ಇದ್ದೀರಿ.. ತುಂಬಾ ದಿನಗಳಿಂದ ಇದರ ಬಗ್ಗೆ ನ್ಯೂಸ್ ಪೇಪರ್ , ಟ್ಟಿ ವಿ ಗಳಲ್ಲಿ ಕೇಳುತ್ತಲೇ ಇದ್ದೇವೆ.. ಬಿ ಟಿ ಬದನೆ ಬೇಕೇ, ಬೇಡವೇ ಅನ್ನೋ ಜಿಜ್ಞಾಸೆ ತುಂಬಾ ದಿನಗಳಿಂದ ನಮ್ಮ ರಾಜಕಾರಣಿಗಳಿಗೆ, ವಿಜ್ಞಾನಿಗಳಿಗೆ ಇದ್ದೆ ಇದೆ.. ಇದು ಬೇಡವೇ ಬೇಡ ಅಂತ ಹೇಳಿರೋದು ಶುದ್ಧ ಭಾರತೀಯರು ಮಾತ್ರ.. ಅವರಿಗೆ ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಕಾಳಜಿಯಿತ್ತು.. ಅರೆ, ಈ ಬದನೆಗೂ ನಮ್ಮ ದೇಶದ ಭವಿಷ್ಯ ಕ್ಕೂ ಏನ್ರೀ ಸಂಬಂಧ ಅಂತ ಕೇಳ್ತೀರಾ?? ಹಾಗಾದ್ರೆ ಮುಂದೆ ಓದಿ..

ಈ ಬಿ ಟಿ  ಗೆ ಆಂಗ್ಲ ಭಾಷೆಯಲ್ಲಿ Bacillus thuringiensis ಅಂತ ಹೇಳ್ತಾರೆ.. ಇದೊಂದು ಥರ ಬ್ಯಾಕ್ಟಿರಿಯಾ ಇದ್ದ ಹಾಗೆ.. ಇದನ್ನು ಬದನೆಯ ಬಿಜಕ್ಕೆ injection ಥರಾ ಚುಚ್ಚಿ ಹೊಸ ತಳಿ ರೂಪಿಸಿದ್ರಲ್ಲಾ ಅದಕ್ಕೆ ಬಿ ಟಿ ಬದನೆ ಅಂದ್ರು.. ಇಂತಹ ತಳಿಗಳಿಗೆ Genetically  Modified ಆಹಾರ ಅನ್ನುತ್ತಾರೆ.. ಇದರ ಲಾಭ ಏನಪ್ಪಾ ಅಂದ್ರೆ ಇದು ನಮ್ಮ ಮಾಮೂಲಿ ತಳಿಗಿಂತ ಹೆಚ್ಚಿನ ಉತ್ಪತ್ತಿ ನೀಡುತ್ತೆ, ಕೊಳೆನಾಷಕ ಔಶಧಿಯ ಅಗತ್ಯವಿಲ್ಲ (ಇದಕ್ಕೆ ಬಳಸಿರೋ ಬ್ಯಾಕ್ಟಿರಿಯಾ ಮತ್ತು ಕೆಮಿಕಾಲ್ ಗಳು ಕೊಳೆ ಬರೋಕೆ ಬಿಡಲ್ಲ ಅಂದಮೇಲೆ ಕೊಳೆನಾಷಕ ಯಾಕ್ರೀ?), ಗಾತ್ರದಲ್ಲಿ ಇಂತಹ ತರಕಾರಿಗಳು ದೊಡ್ದದಾಗಿರುತ್ತವೆ... ಹೆಚ್ಚಿನ ತರಕಾರಿ, ಹೆಚ್ಚಿನ ದುಡ್ಡು, ಯಾವ ರೈತನಿಗೆ ಬೇಡ ಸ್ವಾಮೀ??
ಹಾಗಾದ್ರೆ ನಮಗೂ ಇದು ಇರ್ಲಾ? ಅಮೇರಿಕಾ ದಲ್ಲಿ ಹೆಚ್ಚಿನ ತರಕಾರಿಗಳೆಲ್ಲಾ ಹೀಗೆ Genetically Modified (ಬದನೆ ಬಿಟ್ಟು).. ಹಾಗಾದ್ರೆ ಇದರಿಂದ ಏನು ನಷ್ಟ? ನಮಗ್ಯಾಕೆ ಬೇಡಾ ಅಂತೀರಾ .. ಪಟ್ಟಿ ದೊಡ್ಡದಿದೆ..
೧. ಇಂತಹ ತರಕಾರಿಗಳಿಗೆ ರುಚಿ ಅನ್ನೋದು ಖಂಡಿತಾ ಇಲ್ಲ.
೨. ಇವು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಅನ್ನೋದು ಇನ್ನೂ ಸಾಬಿತಾಗಿಲ್ಲ.
೩. ಇಡೀ ವಿಶ್ವದಲ್ಲಿ ಇದನ್ನು ಮಾಡೋ ತಾಕತ್ತಿರೋದು ಒಂದೇ ಒಂದು ಕಂಪನಿ ಗೆ ಅದು "ಮೊನ್ಸಂಟೋ".
೪. ಇದಕ್ಕೆ ಸಹಕರಿಸೋದು ಈ ಮೊನ್ಸಂಟೋ ಕಂಪನಿ ಯ ಅಂಗ ಸಂಸ್ತೆಗಳು.
೫. ಈ ಕಂಪನಿ ಅಮೆರಿಕಾದ್ದು..
೬. ಮೊನ್ಸಂಟೋ ಹೊರತಂದ ಇಂತಹ ಉತ್ಪನ್ನಗಳಿಗೆ "ಚೆನ್ನಾಗಿದೆ", "ಏನೂ ತೊಂದರೆ ಇಲ್ಲ ಅಂತ ಪ್ರಮಾಣ ಪತ್ರ ನೀಡೋದು ಶುದ್ಧ ಇಲ್ಲಿಯ ಕಳ್ಳರೇ (ಪ್ರಮಾಣ ಪತ್ರ ನೀಡಿದ ಕಂಪನಿ ಯ ಹೆಸರು ಬೇರೆ ಇರುತ್ತೆ.. ಕಂಪನಿ ಮಾತ್ರ ಮೊನ್ಸಂಟೋ ದ್ದೆ ಆಗಿರುತ್ತೆ)
ಅರೆ ಅರೆ.. ಪಟ್ಟಿ ಮುಂದೆ ಬೆಳೆಸ್ತಿನಿ , ಈಗ ಬದನೆಗೆ ಬರೋಣ.. ಈ ಬಿ ಟಿ ಬದನೆ ಇನ್ನೂ ಯಾವ ದೇಶದಲ್ಲೂ ಇಲ್ಲ.. ನಮ್ಮ ಭಾರತದಲ್ಲೇ ಮೊದಲು ಇದನ್ನು ಮನುಷ್ಯರಿಗೆ ತಿನ್ನಿಸೋಕೆ ಪ್ರಯತ್ನ ನಡೀತಾ ಇದೆ.. ಮೊನ್ಸಂಟೋ ಕಂಪನಿ ಯ ಇನ್ನೊಂದು ಅಂಗ ಸಂಸ್ತೆಯಾದ ಮಹಿಕೋ (Mahyco ) ಈ ಬಿ ಟಿ ಬದನೆ ಹೊರತಂದಿದೆ.. ಆದರೆ ಇದಕ್ಕೆ ಯಾವುದೇ ದೇಶ ಅನುಮತಿ ನೀಡದ ಕಾರಣ ಇದನ್ನು ಈಗ ಭಾರತೀಯರ ಮೇಲೆ ಪ್ರಯೋಗಿಸಲು ಯತ್ನಿಸಲಾಗುತ್ತಿದೆ.. ಎಷ್ಟಾದರೂ ನಾವು ಅಮೇರಿಕಾದ ಪಾಲಿಗೆ ಪ್ರಯೋಗ ಶಾಲೆಯಲ್ಲಿ ಇಲಿ ಇದ್ದಂತೆ ಅಲ್ಲವೇ..ಈ ಬದನೆ ನಮ್ಮ ಮೇಲೆ ಪ್ರಯೋಗ ಆಗಬೇಕು, ತೊಂದರೆ ಇದ್ದರೆ ಅದನ್ನು ಸರಿಪಡಿಸಬೇಕು.. ಯಾವ ಖಾಯಿಲೆ ಹೇಗೆ ಬರುತ್ತೆ ಅನ್ನೋ ಸಂಶೋಧನೆ ನಮ್ಮ ಮೇಲೆ ನಡೀಬೇಕು.. ಎಲ್ಲಾ ಓ ಕೆ ಆದ ಮೇಲೆ ಇದನ್ನು ಅಮೇರಿಕಾ ಬಳಸಬೇಕು...ಹೇಗಿದೆ ಚಾಣಕ್ಯ ನೀತಿ??
ಈಗಾಗಲೇ ಈ  ಬದನೆಯನ್ನು ಕೆಲವೊಂದು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ..
೧. ಬಿ ಟಿ ಬದನೆ ತಿಂದ ಇಲಿಗಳು diarrhoea ಗೆ ತುತ್ತಾಗಿವೆ.. ಒಮ್ಮೆಲೇ ಹೆಚ್ಚು ನೀರು ಕುಡಿಯಲು ಪ್ರಾರಂಭಿಸಿವೆ.. ಪಿತ್ತಕೋಶದ ಭಾರ ಕಮ್ಮಿಯಾಗಿದೆ..
೨. ಇದನ್ನು ತಿಂದ ಕೋಳಿಗಳು ಕಾಳು ತಿನ್ನೋದು ಕಮ್ಮಿ ಮಾಡಿದವು..
೩. ಇದನ್ನು ತಿಂದ ದನಗಳು ತಮ್ಮ ಮೈ ಭಾರ ಹಿಗ್ಗಿಸಿ ಕೊಂಡವು.. ಹೆಚ್ಚಿನ ಹಾಲು ನೀಡತೊಡಗಿದವು. ಇವೆಲ್ಲ ಇದರ ಸೈಡ್ ಎಫೆಕ್ಟ್ ಆಗಿತ್ತು..
೪. ಈ ಬದನೆಯಲ್ಲಿ ನಮ್ಮ ಮಾಮೂಲಿ ಬದನೆಗಿಂತ ಶೇಕಡಾ ೧೫ ರಷ್ಟು ವಿಟಮಿನ್ ಗಳು ಕಮ್ಮಿ ಇವೆ.. ಒಂಥರಾ toxic ಆಸಿಡ್ ಈ ಬದನೆಗಳಲ್ಲಿ ಕಂಡು ಬಂದಿದೆ..
೫. ಇದನ್ನು ಬೇರೆ ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ರಕ್ತದ ಕಾಯಿಲೆ ಗಳು ಕಂಡು ಬಂದಿವೆ.. ಅದೇ ರೀತಿ ನಮಗೆ ಗಾಯವಾದಾಗ ರಕ್ತ ಹೆಪ್ಪು ಕಟ್ಟುತ್ತದೆ ಅಲ್ಲವೇ? ಈ ಹೆಪ್ಪುಕಟ್ಟುವಿಕೆ ಅನ್ನೋ ಕ್ರಿಯೆ ಮಾಮೂಲಿಗಿಂತ ಹೆಚ್ಚಿನ ಸಮಯ ತೆಗುದು ಕೊಂಡದ್ದು ಸಂಶೋಧನೆಯಿಂದ ಸಾಬೀತಾಗಿದೆ..
೬. ಇದರಲ್ಲಿರುವ ವಿಟಾಮಿನ್ ಗಳಿಂದಾಗಿ ನಮ್ಮ ದೇಹದ ಮೇಲೆ ಮಾತ್ರೆಗಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ದೇಹದ ಮೇಲೆ ತೋರಲು ವಿಫಲವಾಗಿವೆ (eg  : antibiotic resistance ).. ಇದು ನಮ್ಮ ಆರೋಗ್ಯದ ಮೇಲೆ ಎಂತಹ ಘೋರ ಪರಿಣಾಮ ಬೀರಬಹುದು ಗೊತ್ತೇ??

ಆದರೂ ನಮಗೆ ಈ ಬದನೆ ಬೇಕೇ? ನಮ್ಮ ದೇಶದಲ್ಲೇ ಸಿಗುವ ೨೫-೩೦ ಜಾತಿಯ ಬದನೆ ನಮಗೆ ಸಾಕಾಗದೆ?( ಇವೆಲ್ಲಾ ನೈಸರ್ಗಿಕ) .. ಈ ಬದನೆ ಮೇಲೆ ನಮ್ಮ ರಾಜಕಾರಣಿಗಳಿಗೆ ಯಾಕಿಷ್ಟು ಆಸೆ.. ?? ಉತ್ತರ ತುಂಬಾ ಸುಲಭ.. ಇಡೀ ಪ್ರಪಂಚದಲ್ಲಿ  , ತಮ್ಮ ಕೆಲಸವಾಗಲು , ದುಡ್ಡು ಮಾಡಲು "ಮೊನ್ಸಂಟೋ" ಕಂಪನಿ ಕೊಡುವಷ್ಟು ಲಂಚ ಯಾರೂ ಕೊಡಲ್ಲ.. ಇವರು ವರ್ಷಕ್ಕೆ ಅತೀ ಹೆಚ್ಚು ದುಡ್ಡು ಖರ್ಚು ಮಾಡುವುದೇ ಲಂಚ ನೀಡಲು ಅಂದ್ರೆ ನಂಬ್ತೀರಾ? (ಹಾಗಂತ ತುಂಬಾ ಜನ ಹೇಳೋದನ್ನ ಅಂತರಜಾಲದಲ್ಲಿ ಓದಿದೆ).. ಇಲ್ಲೂ ಅಷ್ಟೇ ನಮ್ಮ ರಾಜಕಾರಣಿಗಳಿಗೆ ಲಂಚ ಕೊಟ್ಟು ಇದೀಗ ಈ ಕಂಪನಿ ನಮ್ಮ ದೇಶವನ್ನು ಪ್ರಯೋಗ ಶಾಲೆಯನ್ನಾಗಿಸಲು ಹೊರಟಿದೆ.. ಈಗಾಗಲೇ ಬಿ ಟಿ ಹತ್ತಿ ತಂದು ತನ್ನ ವಂಶ ಬೆಳೆಸುತ್ತಿದೆ..
ಹೀಗೆ ಮುಂದುವರಿದರೆ ಏನಾದೀತು??
ನಾವು ಈ ಬಿ ಟಿ ಹತ್ತಿಯನ್ನೇ ನೋಡೋಣ.. ಈಗಾಗಲೇ ನಮ್ಮ ರೈತರು ಈ ಬಿ ಟಿ ಹತ್ತಿಗೆ ಮೊರೆ ಹೋಗಿದ್ದಾರೆ.. ಇದು ಬೀಜ ರಹಿತ ಹತ್ತಿ.. ಹೆಚ್ಚು ಇಳುವರಿ, ಹೆಚ್ಚು ಲಾಭ.. ಆದರೆ ಮೊನ್ಸಂಟೋ ರೈತರಿಗೆ ಈ ಬೀಜ ಕೊಡುವ ಮುನ್ನ ಒಂದು ಒಪ್ಪಂದ ಮಾಡಿಕೊಳ್ಳುತ್ತದೆ.. ಅದು , ಒಮ್ಮೆ ಈ ಬಿ ಟಿ ಬಳಸಿದರೆ ಮುಂದೆ ಕಮ್ಮಿ ಅಂದ್ರೂ ೧೦-೧೫ ವರ್ಷ ಅದನ್ನೇ ಬಳಸಬೇಕು.. ಬೇರೆ ಬೆಳೆ ಬೆಳೆಯುವಂತಿಲ್ಲ, ಮೊನ್ಸಂಟೋ ಕಂಪನಿ ನೀಡುವ ರಾಸಾಯನಿಕಗಳನ್ನೇ ಬಳಸಬೇಕು.. ಹೀಗೆ..
ಒಂದು ವೇಳೆ ಹೀಗೆ ಸಾಗಿದರೆ ಮುಂದೆನಾದಿತು?. ನಾವು ಬಿ ಟಿ ಹತ್ತಿಗೆ ಮೊರೆ ಹೋಗಿ ನಮ್ಮ ದೇಶಿಯ ಹತ್ತಿ ಸರ್ವ ನಾಶವಾಯಿತು ಅನ್ನೋವಾಗ ಯೆದ್ದೆಳುತ್ತಾರೆ ಈ ಕಳ್ಳರು..ಮೊದಲೇ ಇವರದ್ದು ಬೀಜ ರಹಿತ ಹತ್ತಿ.. ಬೆಳೆದ ಹತ್ತಿಯಿಂದ ಮುಂದಿನ ವರ್ಷದ ಬೆಳೆ ಬೆಳೆಯೋಕೆ ಸಾಧ್ಯನೇ ಇಲ್ಲ (ಬೀಜಾನೆ ಇಲ್ವಲ್ಲ ಸ್ವಾಮೀ..) .. ಆಗ ನಾವು ಮತ್ತೆ ಮೊನ್ಸಂಟೋ ಹತ್ತಿರ ಹೋಗಿ ಭಿಕ್ಷೆ ಬೇಡಬೇಕು.. ಬೀಜ ಕೊಡಿ ಅಂತ.. ಇಷ್ಟರವರೆಗೆ ೧ ರೂಪಾಯಿಗೆ ಸಿಗುತ್ತಿದ್ದ ಬೀಜಕ್ಕೆ ಈಗ ೧೦ ರೂಪಾಯಿ ಅನ್ನುತ್ತಾರೆ.. ನಾವು ತಗೋಳ್ಳಲೇ   ಬೇಕು.. ೧೦ ರೂಪಾಯಿ ಇದ್ದ ಹತ್ತಿಗೆ ೧೦೦ ರೂಪಾಯಿಯಾಗುತ್ತದೆ.. ಇದು ಹೀಗೆ ಮುಂದುವರಿದು ನಮ್ಮ ಕೃಷಿ ಎಲ್ಲಾ ಮೊನ್ಸಂಟೋ ಕೈಯಲ್ಲಿ..!!! ಇದು ಕೃಷಿಯಲ್ಲಿನ ಎಲ್ಲಾ ವಸ್ತುಗಳಿಗೆ ಅನ್ವಯಿಸೋಕೆ ಎಷ್ಟು ಕಾಲ ಬೇಕಾದೀತು.. ನಿಧಾನಕ್ಕೆ ಅದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ ..
ಅದೇನೋ ಸದ್ಯಕ್ಕೆ ಮಂತ್ರಿ ಮಹಾವರ್ಯ ಇದಕ್ಕೆ ಲಗಾಮು ಹಾಕಿದ್ದಾನೆ.. ಇದೆಲ್ಲ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಬಟ್ಟೆ ಕಟ್ಟುವ ಕೆಲಸ.. ಇನ್ನು ಕೆಲವೇ ದಿನಗಳಲ್ಲಿ ಇಂಥಾ ಬೇರೆ ಬೇರೆ ತರಕಾರಿಗಳು, ಬದನೆ ಎಲ್ಲವೂ ಲಗ್ಗೆ ಹಾಕಲಿವೆ!!!
 "ಝಣ ಝಣ ಝಣ ಝಣ ಕಾಂಚಣ ದಲ್ಲಿ
 ಅಮೇರಿಕಾದ ಲಾಂಛನದಲ್ಲಿ ,
 ಎಲ್ಲಾ ಮಾಯ ನಾಳೆ ನಾವು ಮಾಯ
 ಎಲ್ಲಾ ಮಾಯ ನಾಳೆ ನೀವು ಮಾಯ" 

ಆದ್ದರಿಂದ.. ಏಳಿ ಭಾರತೀಯರೇ ಎದ್ದೇಳಿ..!!!!

20 comments:

PARAANJAPE K.N. said...

ಮಾಹಿತಿ ಚೆನ್ನಾಗಿದೆ ಗೋರೆ, ಏಳು ಎದ್ದೇಳು ಭಾರತೀಯ, ಎ೦ದರೆ ಎದ್ದವನು ಆಕಳಿಸಿ ಮತ್ತೆ ಮಲಗಿ ಬಿಡುತ್ತಾನೆ, ಈಗ ಬೀಟಿ ಬದನೆ ಬೇಡ ಅ೦ತ ಜೈರಾಮ್ ರಮೇಶ್ ಹೇಳಿಬಿಟ್ಟಿದ್ದಾರೆ, ಮತ್ತೆ ಕೆಲದಿನಗಳಲ್ಲಿ ಅದು ನಮ್ಮ ದೇಶದೊಳಕ್ಕೆ ಬ೦ದೇ ಬರುತ್ತೆ, ನೋಡುತ್ತಿರಿ.

Unknown said...

ಪರಾಂಜಪೆಯವರೇ,
ಹೌದು ನೀವ್ ಹೇಳಿದ್ದು ನಿಜ..
"ಏಳಿ ಎದ್ದೇಳಿ
ದೇಶಕ್ಕಾಗಿ ಹೋರಾಡಿ
ಅಂದರೆ
ಅವರು ಹೋ-
ರಾಡಿ ಎಬ್ಬಿಸಿದರು!!"

ಹೀಗಂತ ಎಲ್ಲೋ ಕೇಳಿದ ನೆನಪು..!! :-)

Subrahmanya said...

ವಿಚಾರ ಚೆನ್ನಾಗಿದೆ ಗೋರೆಯವರೆ. ಇನ್ನಷ್ಟು ಸಂಶೋಧನೆಗಳಾದ್ರೆ ಬಿ.ಟಿ. ಬಣ್ಣ ಬಯಲಾಗುತ್ತೆ....

Manasaare said...

ರವಿಕಾಂತ್ ಗೋರೆ ಅವರೇ ಇಂತ ಕ್ರಾಂತಿಕಾರಿ ಲೇಖನ ಬರಿದು, ಎಲ್ಲರನ್ನು ಅಂದ್ರೆ atleast ಅಂತರ್ಜಲ ಜಾಲಡಿಸುವವರನ್ನು ಎಬ್ಬಿಸಲು ಟ್ರೈ ಮಾಡಿದಕ್ಕೆ ಥ್ಯಾಂಕ್ಸ್ ರೀ . ತುಂಬಾ ತುಂಬಾನೇ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಿರಾ.
ಹೌದು ಅಮೆರಿಕನ್ ರೀ ಗೆ ಗೊತ್ತು ನಮ್ಮ ಇಂಡಿಯಾದಲ್ಲಿ ಜೀವಕ್ಕೆ ಬೆಲೆನೆ ಇಲ್ಲ ಅಂತ . ಅದಕ್ಕೆರೀ ನಮ್ಮನ ಈ ಸಂಶೋಧನೆಕ್ಕಾಗಿ ಆರಿಸ್ಕೊಂಡಿರೋದು. ಇಲ್ಲಿ ಎಲ್ಲ ದುಡ್ಡು ಮಾತಾಡುತ್ತೆ , ಯಾರು ಸತ್ರು ಒಂದ್ ನಾಲ್ಕಸು ಬೀಸಾಕಿದರೆ ಎಲ್ಲರೂ ಬಾಯಿ ಮುಚ್ಕೊತಾರೆ . ಜೀವಗಳ ಮೇಲೆ ಪ್ರಯೋಗ ಮಾಡೋದು ಇಲ್ಲಿ ಅಸ್ಟು ಸುಲಭ ಎಲ್ಲೂ ಇಲ್ಲ ನೋಡಿ. ಯಾಕೆಂದ್ರೆ ಇಲ್ಲಿ ಯಾರು ಯಾರಿಗೂ sue ಮಾಡೋಲ್ಲ , ಯಾರು ಯಾರ್ sue ಗು ಹೆದರೋಲ್ಲ .
ನಾವು ನಮ್ಮ ಕೈಲಿ ಎಷ್ಟು ಆಗುತ್ತೆ ಅಸ್ಟು ಇದನ್ನ ವಿರೋದಿಸೋಣ . ನಮ್ಮ ಹಳ್ಳಿ ರೈತರು ತುಂಬಾ ಮುಗ್ದರೀ , ಅವರಿಗೆ ಸ್ವಲ್ಪ ಅಮೀಷ್ ತೋರ್ಸಿ ಇಂಥ ಕಂಪನಿಗಳು ಬುಟ್ಟಿಗೆ ಹಾಕೊಕಿಂತ ಮುಂಚೆ ಅವರನ್ನ educate ಮಾಡಬೇಕು .

ದಿನಕರ ಮೊಗೇರ said...

ರವಿಕಾಂತ್ ,
ತುಂಬಾ ಉಪಯುಕ್ತ ಲೇಖನ, ಮೊನ್ನೆ ಟಿವಿಯಲ್ಲಿ ಇದರ ಬಗ್ಗೆ ನೋಡಿದ್ದೇ...... ಭಾರತದ ಎಲ್ಲಾ ರೈತರನ್ನು ಅಮೆರಿಕಾದ ಕಾಲಿಗೆ ಎರಗಿಸಿಯೇ ತೀರುತ್ತಾರೆ ಈ ರಾಜಕಾರಣಿಗಳು....

Uma Bhat said...

ಗೋರೆಯವರೇ.ಮಾಹಿತಿಗಾಗಿ ಧನ್ಯವಾದಗಳು.

Nisha said...

Very informative.

ಮನಸು said...

oLLe information

ಸುಧೇಶ್ ಶೆಟ್ಟಿ said...

ಗೊತ್ತೇ ಇರಲಿಲ್ಲ ಬಿ. ಟಿ. ಬದನೆ ಹಿ೦ದೆ ಇಷ್ಟು ದೊಡ್ಡ ಕಥೆ ಇದೆ ಎ೦ದು. ತುಂಬಾ ಮಾಹಿತಿ ಕಲೆಹಾಕಿ ಚೆನ್ನಾಗಿ ಬರೆದಿದ್ದೀರ ರವಿ....

sunaath said...

ಗಾದೆ ಮಾತು ಕೇಳಿದ್ದೀರಾ, ರವಿ?
"ಜೈರಾಮ ಹೇಳೋದು ಬಿಟಿ ಬದನೆ.
ತಿನ್ನೋದು ಬಿಟ್ಟಿ ಬದನೆ!"

Sathish Kulal said...

ರವಿಕಾಂತ್ ಬಹಳ ಒಳ್ಳೆಯ ಲೇಖನ.ಬಹಳ ಉತ್ತಮ ಮಾಹಿತಿ ಒಳಗೊಂಡಿದೆ.ಉಪಯುಕ್ತ ಬರಹ ನೀಡಿದ್ದಕ್ಕೆ ಧನ್ಯವಾದಗಳು.

Anonymous said...

ನಿಮ್ಮ article ಬಗ್ಗೆ ಕೆಲವು technical corrections:
-Bacillus thuringensis ಎನ್ನುವುದು ಒಂದು Bacteria. ಇದರಿಂದ Endotoxin produce ಮಾಡುವ ಒಂದು geneನ್ನು ತೆಗೆದುಕೊಂಡು, ಅದನ್ನು ಇನ್ನೊಂದು bacteria, Agrobacterium ದಲ್ಲಿ mobilize ಮಾಡಿ, ನಂತರ produceಆದ bacterial genome /plasmid ನ್ನು ಬೇಕಾದ (ಬದನೆ ಅಥವಾ ಇನ್ನಾವುದೋ ತಳಿಗಳಿಗೆ) targetಗೆ ಚುಚ್ಚಿ, ನಂತರ ಅದನ್ನು antibiotic (selection marker) ಇರುವ ಮೀಡಿಯಾ ದಲ್ಲಿ ಬೆಳೆಸಿದಾಗ ಅದು ಬೆಳೆದರೆ ಮಾತ್ರ ಅದು ಬಿ. ಟಿ.ತಳಿ ಆಗಿರುತ್ತದೆ.
This is a long process of nearly 5-10 yrs..
There is a whole lot of debate is going on regarding its safety issues, though not much known about its side effects..ನೀವು ಇದರ ಬಗ್ಗೆ ಹೇಳುವಾಗ ಇಂಟರ್ನೆಟ್ ನಿಂದ ಸಿಕ್ಕಿದ ಮಾಹಿತಿಯನ್ನು hyperlink ಮೂಲಕ ಹಾಕಬೇಕಿತ್ತು.
scientific ಲೇಖನ ಬರೆಯುವಾಗ ವಿಜ್ಞಾನದ ಬಗ್ಗೆ ತುಂಬಾ ಆಳವಾದ ಮಾಹಿತಿ ಇರಬೇಕು.
Finally not only Monsanto, there are lot many companies producing GM crops like dupont, calgene, syngenta.....etc..
also visit the link for basic idea-
http://en.wikipedia.org/wiki/Genetically_modified_food

shivu.k said...

ರವಿಕಾಂತ್ ಸರ್,

ಬದನೆ ಬಗ್ಗೆ ಇಷ್ಟೆಲ್ಲಾ ಇದೆಯೆಂದು ಗೊತ್ತಿರಲಿಲ್ಲ. ಉತ್ತಮ ಮಾಹಿತಿಯುಕ್ತ ಲೇಖನವನ್ನು ನೀಡಿದ್ದಕ್ಕೆ ಥ್ಯಾಂಕ್ಸ್..

umesh desai said...

ಗೋರೆ ಅವರೆ ಬದನೆಕಾಯಿ ಬಗ್ಗೆ , ಬಿಟಿ ಎನ್ನೋ ಭೂತದ ಬಗ್ಗೆ ಸರಿಯಾಗಿ ಹೇಳಿರುವಿರಿ ಲೇಖನ ಮಾಹಿತಿಯಿಂದ ಕೂಡಿದೆ..

Snow White said...

informative post sir :)

Anonymous said...

ರವಿಕಾಂತ್ ಅವರೇ,
ಲೇಖನ ಮಾಹಿತಿಪೂರ್ಣ ಹಾಗೂ, ತರ್ಕಪೂರ್ಣವಾಗಿದ್ದು ಜಾಗೃತಿ ಮೂಡಿಸುತ್ತದೆ..

ವಂದನೆಗಳು.

Unknown said...

ಕಾಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು..

Sriharsha said...

ಬಹಳ ಚೆನ್ನಾಗಿ B T ಬಗ್ಗೆ ಬರೆದಿದ್ದಿರೀ... ಇನ್ನೊದು ಅಂಶ ಬಿಟ್ಟು ಹೋಗಿದೆ... ನಮ್ಮ ದೇಶದಲ್ಲಿ ೨೦೦೦ಕ್ಕೂ ಹೆಚ್ಚು ಬದನೆ ತಳಿಗಳಿದ್ದು... ವಿಬಿನ್ನ ರೀತಿಯಲ್ಲಿ ಸೇವಿಸಲ್ಪಟ್ಟಿದೆ... BT ಇಂದಾಗಿ ಈ ತಳಿಗಳು ಕಣ್ಮರೆಯಾಗುವುದು ಕಚಿತ...
ಕೇಂದ್ರ ಕೃಷಿ ಮಂತ್ರಿಗಳು ಖಾದ್ಯ ಪದಾರ್ಥಗಳ ಹಣದುಬ್ಬರ BT ಒಂದೇ ಉತ್ತರ ಎಂದಿದ್ದಾರೆ... ಅಲ್ಲಿ ಸರ್ಕಾರಿ ಡಿಪೋಯಿಂದ ಖಾಸಗಿ ವ್ಯಾಪಾರಿಗಳಿಗೆ ಧನ್ಯ ವಿನಿಮಯ ಆಗುವುದನ್ನು ತಪ್ಪಿಸಬಹುದಲ್ಲವೇ? 3 ರೂ/ ಕಿಲೋ ಹಾಗೆ 35 kg ಅಕ್ಕಿ ಎಲ್ಲಿಗೆ ಹೋಗುತ್ತಿದೆ ಎಂದು ಒಮ್ಮೆ ವಿಮರ್ಷೆ ಮಾಡಬೇಕಾಗಿದೆ...

ಸೀತಾರಾಮ. ಕೆ. / SITARAM.K said...

ಬಿಟಿ ಬದನೆಯ ಜಾತಕ ಚೆನ್ನಾಗಿ ಬಿಡಿಸಿಟ್ಟಿದ್ದಿರಾ.. ಮಾಹಿತಿಗೆ ಧನ್ಯವಾದಗಳು.

ಸವಿಗನಸು said...

ಉಪಯುಕ್ತ ಮಾಹಿತಿ...