ಆಗ ನಾನು ತುಂಬಾ ಚಿಕ್ಕವನು.. ಬಹುಶ ೨-೩ ನೆ ಕ್ಲಾಸ್ ನಲ್ಲಿದ್ದಿರಬೇಕು... ಮನೆಯಲ್ಲಿ ಅಮ್ಮ ಕೆಲಸ ಮಾಡುತ್ತಾ ಹೇಳುತ್ತಿದ್ದ ಹಾಡುಗಳು ನನ್ನನ್ನು ಆಕರ್ಷಿಸಿದ್ದವು... ಇವತ್ತು ಏನೂ ಕೆಲಸ ಇಲ್ಲದೆ ಕುಳಿತಿದ್ದಾಗ ಹಿಂದಿನದೆಲ್ಲವೂ ನೆನಪಾಯಿತು... ಆ ಹಾಡುಗಳು ಎಲ್ಲವೂ ಮರೆತೆ ಹೋಗಿವೆ.. ಆದರೂ ನನ್ನ ನೆನಪಿನ ಬುತ್ತಿಯನ್ನು ಕದಡಿ , ಜಾಲಾಡಿ ಈ ಒಂದು ಹಾಡು ನಿಮ್ಮ ಮುಂದಿಡುತ್ತಿದ್ದೇನೆ... ಇದರ ಮೂಲ ಲೇಖಕ/ಲೇಖಕಿ ಯಾರೆಂದು ಗೊತ್ತಿಲ್ಲ... ಬಹುಶ ಜಾನಪದವಿರಬೇಕು... ಇದನ್ನು ರಾಗವಾಗಿ ಹಾಡುತ್ತಿದ್ದ ಅಮ್ಮನ ಧ್ವನಿ ಈಗಲೂ ಕಿವಿಯಲ್ಲಿ ಗುಯಿಗುಡುತ್ತಿದೆ...
ಅತ್ತೆ ಮನೆಯ ಸಮ್ಮಾನ
ವ್ಹಾರೆ ಪರಮಾನ್ನ..
ಪರಮಾನ್ನ ತಿನಲಿಕೆಂದೇ ನಾನು ಮದುವೆಯಾದೆನು..
ಸಂಜೆ ಹೊತ್ತಿನಲ್ಲಿ ಅತ್ತೆ ಮನೆಗೆ ನಡೆದೆನು...
ಮಾಡಿದಾರೆ ಪಾಯಸ
ತಿಂದು ನನಗೆ ಉಬ್ಬಸ
ರಾತ್ರಿಯಿಡೀ ನಿದ್ದೆ ಇಲ್ಲ
ಎಣಿಸಿ ಎಣಿಸಿ ಪಾಯಸ ..
ಮೆಲ್ಲನೆದ್ದೆನು
ಅಡುಗೆ ಕೋಣೆಗೆ ನಡೆದೆನು
ಮೂಲೆಯಲ್ಲಿದ್ದ ಪಾಯಸದ ಮಡಕೆಗೆ ಮಂಡೆ ಹಾಕ್ದೆನು..
ಸಿಗಲಿಲ್ಲ ಪಾಯಸ
ಸಿಗದೇ ನಾನು ಬಿಡಲಿಲ್ಲ
ಸಿಗುವ ಗೌಜಿ ಮಂಡೆ ಒಡೆದು
ಓಡು ಕುತ್ತಿಗೆಗಾಯ್ತಲ್ಲ..
ಅತ್ತೆ ಎದ್ದರು
ಹಿಡಿವ ಸೂಡಿ ಹಿಡಿದರು
ಸೊಕಿದ ಬೆಕ್ಕು ಬರುವುದೆಂದು ಕಾದು ಕುಳಿತರು
ಕಾದು ಕುಳಿತ ನನ್ನ ಅತ್ತೆ ಎರಡು ಬಿಟ್ಟರು..
ಸಮ್ಮಾನ ಬರೋಬ್ಬರಿ
ಪೆಟ್ಟಿನ ಲೆಕ್ಕ ಕೆಳ್ವಿರಾ?
ಏಕ್, ದೋ ತೀನ್ ಚಾರ್ ಪಾಂಚ್ ತಿಂದಿರಾ..
ಅತ್ತೆ ಮನೆಗೆ ಹೋಗಲು
ಈಗ ಬಹಳ ನಾಚಿಕೆ
ಅಲ್ಲಿ
ನಾದಿನಿಯರ ಮೊಗವ ಕಂಡರೆ ನಗುವು ಬರುವುದು..
ಯಾರಿಗಾದರೂ ಈ ಹಾಡು ಗೊತ್ತಿದ್ದರೆ ಮತ್ತು ಇದರಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಸರಿಪಡಿಸಿ ಮತ್ತು ನನಗೆ ತಿಳಿಸಿ.. ಹಾಗೆಯೇ ಎಲ್ಲಿಯಾದರೂ ಅರ್ಥವಾಗದೇ ಇದ್ದರೆ ತಿಳಿಸಿ :-)
ಇಂತಹ ಅದೆಷ್ಟೋ ಹಾಡುಗಳಿವೆ... ನಿಮಗಿಷ್ಟವಾದರೆ, ನೆನಪಾದಾಗಲೆಲ್ಲ ಹಾಕುವೆ..
Monday, December 14, 2009
Tuesday, December 8, 2009
ಪಿಂಡದಾನ !!
" ಥೂ ಎಲ್ಲಾ ನಾಟಕ... ನಮ್ಮನ್ನ ಪರೀಕ್ಷೆನಲ್ಲಿ ಫೈಲ್ ಮಾಡ್ಬೇಕು ಅಂತ ಇವ್ರು ಹಿಂಗಾಡ್ತಾರೆ... ಅವರ ಮೋಡಿಗೆ ಮರುಳಾಗಿ ನಾವು ಅವ್ರಿಗೆ ಲೈನ್ ಹೊಡ್ದು ಅವ್ರ ಬಗ್ಗೆ ಆಲೋಚನೆ ಮಾಡ್ತಾ ಇರ್ತೀವಿ... ಅವರೋ ಆರಾಮಾಗಿ ಓದ್ಕೊಂಡು ನಮಗೆ ಟೋಪಿ ಹಾಕ್ತಾರೆ.." ಸದಾನಂದ ಧಿಮಿಗುಡುತ್ತಲೇ ಇದ್ದ.. "ಛೆ ಹೀಗೆಲ್ಲ ಮಾಡಲ್ಲ ಯಾರೂ.. ಅದು ನಿನ್ನ ಆಲೋಚನೆ ಅಷ್ಟೇ.." ನಾನು ಆತನನ್ನು ಸಮಾಧಾನ ಗೊಳಿಸಲು ಯತ್ನಿಸಿದೆ.. "ಹೇ ನಿನ್ಗದೆಲ್ಲ ಗೊತ್ತಾಗಲ್ಲ ಗೋರೆ.." ಸದಾನಂದ ತಿರುಗಿ ಬಿದ್ದ..."ಹೌದು ಈ ಹುಡ್ಗೀರೆ ಹೀಗೆ ಎಲ್ಲಾ ಮೋಸ" ಹಾಗಂತ ಮದ್ಧ್ಯೆ ಎಲ್ಲಿಂದಲೋ ಮನೀಶ್ ನುಗ್ಗಿ ಬಂದ.. ಆತನೇನೋ ನಮ್ಮ ಸ್ನೇಹಿತರ ಗುಂಪಿನವನಲ್ಲ.. ಆತನಿಗೂ ಸದಾನಂದನೀಗೂ ಅಷ್ಟಕ್ಕಷ್ಟೇ.. ಆದರೆ ಆವತ್ತು ಅವರಿಬ್ಬರ ಆಲೋಚನೆಗಳು ಒಂದೇ ಆಗಿದ್ದವು.. ಒಬ್ಬರಿಗೊಬ್ಬರು ಬೆಂಬಲಿಸುತ್ತಿದರು... ಇಷ್ಟಕ್ಕೂ ಆವತ್ತು ಸದಾನಂದ ಸಿಟ್ಟು ಮಾಡಿಕೊಂಡಿದ್ದುದು ಟೀನಾ ಮೇಲೆ..
ಅದು ನಮ್ಮ ಕಾಲೇಜ್ ದಿನಗಳು.. ಈ ಸದಾನಂದ ನಮ್ಮ ಎಂಟು ಜನರ ಸ್ನೇಹಿತರ ಗುಂಪಿನಲ್ಲಿ ಒಬ್ಬ.. ಆತ ನಮ್ಮದೇ ಕ್ಲಾಸ್ ನ ಟೀನಾ ಅನ್ನೋ ಸುಂದರ ಹುಡುಗಿಗೆ ಲೈನ್ ಹೊಡಿತಾ ಇದ್ದಿದ್ದು ತಿಳಿದಿದ್ದ ವಿಷಯವೇ.. ಆದರೆ ಆಕೆಯನ್ನು ಮಾತಾಡಿಸುವಷ್ಟು ಧೈರ್ಯವಂತನಲ್ಲ.. ಆತನಿಗೆ ಸ್ಪರ್ಧೆಗೆ ಇಳಿದವನು ನಮ್ಮ ಕ್ಲಾಸ್ನ ಇನ್ನೊಂದು ಗುಂಪಿನ ಲೀಡರ್ ಮನೀಶ್... ಆತನೂ ಟೀನಾ ಹಿಂದೆ ಸುತ್ತೊದನ್ನ ನೋಡಿ ಸದಾನಂದ ಆತನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ... ದಿನ ಕಳೆದಂತೆ ಟೀನಾ , ಸದಾನಂದನನ್ನು ನೋಡಿ ನಗೋದಕ್ಕೂ ," ಹಲೋ , ಹಾಯ್" ಅಂತ ಹೇಳೋದನ್ನೂ ನೋಡಿ ನಾವೂ ಅಚ್ಚರಿಗೊಂಡಿದ್ದೆವು..
ಆವತ್ತು ಸದಾನಂದನ ಹುಟ್ಟು ಹಬ್ಬ.. ಅಂತೂ ಇಂತೂ ಧೈರ್ಯಮಾಡಿ ಆತ ಪಾರ್ಟಿಗೆ ಟೀನಳನ್ನು ಕರೆದದ್ದೂ ಆಯ್ತು..
ಅಲ್ಲೇ ಪಕ್ಕದಲ್ಲೇ ಇದ್ದ ಅಮೃತ್ ಕ್ರೀಂ ಪಾರ್ಲರ್ ಅನ್ನೋ ಇದ್ದ ಒಂದೇ ಒಂದು ಅಡ್ಡಕ್ಕೆ ನಾವು ೫ ಗಂಟೆಗೆ ನುಗ್ಗಿದೆವು.. ಟೀನಾ ೫.೩೦ ಬರುತ್ತೇನೆ ಅಂದಿದ್ದಳಂತೆ.. ನಾವು ಸದಾನಂದನ ಕಾಲೆಳೆಯುತ್ತಾ ತಮಾಷೆ ಮಾಡುತ್ತಾ ಸಾಗಿದ್ದರೆ, ಸದಾನಂದ ಟೀನಾ ಬರ್ತಾಳೆ ಅಂತ ಕಾಯ್ತಾನೆ ಇದ್ದ... ೫.೩೦, ಆಯ್ತು..೫.೪೫.. ೬.೦೦ ಉಹುಂ ಆಕೆಯ ಸುದ್ದಿಯೇ ಇಲ್ಲ.. ಆಕೆಗಾಗಿ ಕಾದು ಕಾದು ಬೇಸತ್ತಿದ್ದ ಸದದಾನಂದನನ್ನು ನಾನೇ ಮೆಲ್ಲ ಸಮಾಧಾನ ಪಡಿಸಿ ೮ ಗಂಟೆಯಷ್ಟು ಹೊತ್ತಿಗೆ ಎಬ್ಬಿಸಿಕೊಂಡು ಹೋದೆ...
ಮರುದಿನ ಕಾಲೇಜಿಗೆ ಬಂದಾಗ ನಮ್ಮ ಅರ್ಧವಾರ್ಷಿಕ ಪರೀಕ್ಷೆಯ ಅಂಕಗಳು ಹೊರ ಬಿದ್ದಿದ್ದವು..ನಾನು ಮತ್ತೆ ಸದಾನಂದ ಯಾವಾಗಲೂ ಟಾಪ್ ೫ ರಲ್ಲಿ ಗ್ಯಾರೆಂಟಿ... ಆ ಪರೀಕ್ಷೆಯಲ್ಲಿ ನಾನು ಮೂರನೇ ಸ್ತಾನದಲ್ಲಿದ್ದರೆ ಸದಾನಂದ ೧೧ನೆ ಸ್ತಾನಕ್ಕೆ ಜಾರಿದ್ದ.. ಟೀನಾ ಎಂಟನೆ ಸ್ತಾನದಲ್ಲಿದ್ದಳು.. ಹಿಂದಿನ ದಿನ ಟೀನಾ ಪಾರ್ಟಿಗೆ ಬರದೆ ಇರೋ ಸಿಟ್ಟು ಮತ್ತು ಪರೀಕ್ಷೆಯಲ್ಲಿ ಹಿಂದಕ್ಕೆ ಬಿದ್ದ ಸಿಟ್ಟು ಎರಡೂ ಆತನನ್ನು ಮುತ್ತಿಕೊಂಡಿದ್ದವು... ಆಗಲೇ ಆತ " ಥೂ ಎಲ್ಲಾ ನಾಟಕ... " ಅನ್ನೋ ಡೈಲಾಗ್ ಹೊಡೆಯಲು ಶುರುಮಾಡಿದ್ದು...
ಎಷ್ಟೇ ಪ್ರಯತ್ನಿಸಿದರೂ ಆತನನ್ನು ಸಮಾಧಾನ ಪಡಿಸಲು ಸಾದ್ಧ್ಯವಾಗಲಿಲ್ಲ.. ಬದಲಿಗೆ ಮನೀಶ್ ಬೇರೆ ಸೇರಿಕೊಂಡಿದ್ದ.. ಟೀನಾಳ ಬಗ್ಗೆ ಕನುಸು ಕಾಣುತ್ತ ಓದದೆ ೪ ಪರೀಕ್ಷೆಯಲ್ಲಿ ಫೈಲ್ ಆದ ತನ್ನ ದುರ್ಗತಿ ವಿವರಿಸಿಕೊಂಡ... ನಾನು ನಗುತ್ತಲೇ ಇದ್ದೆ...
ಸರಿ ಇನ್ನೇನ್ ಮಾಡೋದು... "ಇನ್ಯಾವತ್ತು ನಾನು ಹುಡ್ಗೀರಿಗೆ ಲೈನ್ ಹೊಡೆಯೋದಿಲ್ಲ" ಸದಾನಂದ ಪ್ರಮಾಣ ಮಾಡಿದ.. "ನಾನೂ ಅಷ್ಟೇ " ದನಿಗೂಡಿಸಿದ್ದು ಮನೀಶ್.. "ಅಲ್ಲಯ್ಯ ಮತ್ತೆ ಟೀನಾ?" ಮಧ್ಯದಲ್ಲಿ ಹುಳಿ ಹಿಂಡಿದ್ದು ಮಾಧವ ಅನ್ನೋ ಉಬ್ಬು ಹಲ್ಲಿನ 'ಗರಗಸ'...
"ಆಕೆಗೆ ನಾನು ಪಿಂಡ ಬಿಡ್ತಾ ಇದ್ದೀನಿ " ಸದಾನಂದ ಅರಚಿಕೊಂಡ.. "ಹೌದು ಅದೇ ಸರಿ.. ಆಕೆಗೆ ಪಿಂಡ ದಾನ ಮಾಡಲೇ ಬೇಕು.. ಆಕೆ ಸತ್ತು ಹೋದಳು ಅಂತ ತಿಳ್ಕೊತಿನಿ" ಮನೀಶ್ ಕೂಡ ಯಾಕೋ ಹೆಜ್ಜೆ ತಪ್ಪುತ್ತಿದ್ದ... ಸದಾನಂದ ನನ್ನನ್ನು ಕರೆದುಕೊಂಡು ಕಾಲೇಜ್ ಹಿಂಭಾಗದಲ್ಲಿದ್ದ ತೋಟದತ್ತ ಸಾಗಿದ...ಉಳಿದವರೂ ನಮ್ಮನ್ನು ಹಿಂಬಾಲಿಸಿದರು... ನಮ್ಮ ಗುಂಪಿನ ಹರಿಪ್ರಸಾದ್ ಶಾಸ್ತ್ರಿ ಆವತ್ತು ಪುರೋಹಿತ.. ಆತ ತಿಥಿ ಕರ್ಮದ ಮಂತ್ರಗಳನ್ನು ಹೇಳೋದನ್ನೂ , ಸದಾನಂದ ಅಲ್ಲಿಯೇ ಇದ್ದ ನಲ್ಲಿಯಿಂದ ನೀರು ಬಿಡೋದನ್ನು ನೋಡಿ ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು... ಊಟಕ್ಕೆಂದು ತಂದಿದ್ದ ಅನ್ನ ಪಿಂಡವಾಗಿತ್ತು .. ಪಿಂಡ ದಾನಕ್ಕೆ ಸದಾನಂದ ಜೊತೆ ಸೇರಿಕೊಂಡಿದ್ದು ಮನೀಶ್.. ಸರಿ ಇಬ್ಬರೂ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪಿಂಡ ದಾನ ಮಾಡಿಬಿಟ್ಟಿದ್ದರು.. !!!
"ಇವತ್ತಿನಿಂದ ಟೀನಳ ಕಡೆ ತಿರುಗಿಯೂ ನೋಡಲಾರೆವು " ಹಾಗಂತ ಇಬ್ಬರೂ ಶಪಥ ಗೈದರು...
ಆವತ್ತಿನಿಂದ ಸದಾನಂದ ಬದಲಾಗಿಬಿಟ್ಟಿದ್ದ.. ಟೀನಳ ಕಡೆ ತಿರುಗಿಯೂ ನೋಡುತ್ತಿರಲಿಲ್ಲ... ಬಹುಶ ಹುಟ್ಟುಹಬ್ಬದ ಪಾರ್ಟಿಗೆ ಬಂದಿಲ್ಲದ್ದಕ್ಕೆ ಹಿಂಗಾಡುತ್ತಿದ್ದಾನೆ ಅಂದು ಕೊಂಡಿದ್ದ ಟೀನಾ ಕಳಿಸಿದ 'ಸಾರೀ' ಗ್ರೀಟಿಂಗ್ಸ್ ಕಾರ್ಡು ಸಹ ಈ ಸದಾನಂದ ಹರಿದು ಬಿಸಾಕಿದ್ದ..
"ಎಲ್ಲಾ ನಾಟಕ ಕಣ್ರೋ.. ಅವ್ರಿಗೆ ನಿಜವಾಗಿ ನಿಮ್ ಮೇಲೆ ಪ್ರೀತಿ ಇರಲ್ಲ.. ಅವ್ರಿಗೆ ನಾವು ಇಷ್ಟೆಲ್ಲಾ ಮಜಾಮಾಡಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಕೂಡ ತೆಗೆಯೋದನ್ನ ನೋಡಿ ಹೊಟ್ಟೆ ಕಿಚ್ಚು.. ಕಂಠ ಪಾಠ ಮಾಡಿ ಮಾಡಿ ಸಾಧ್ಯ ಆಗದೆ ಇದ್ದಾಗ ನಮ್ ಹಿಂದೆ ಬರ್ತಾರೆ.. ಅವ್ರ ಮೋಡಿಗೆ ಒಳಗಾಗಿ ಬಿಟ್ವಿ ಅಂದ್ರೆ ಅಷ್ಟೇ.. ಆಮೇಲೆ ಪರೀಕ್ಷೆ , ಭವಿಷ್ಯ ಎಲ್ಲಾ ಮರ್ತು ಬಿಡಿ.. ..." ಸದಾನಂದ ನಮ್ಮ ಗುಂಪಿಗೆಲ್ಲ ಉಪೇಂದ್ರ ಸ್ಟೈಲ್ ನಲ್ಲಿ ಬುದ್ಧಿವಾದ ಹೇಳಿದ್ದ..
ಇದಾಗಿ ೩-೪ ತಿಂಗಳು ಕಳೆದವು...ಒಂದು ದಿನ ನಾವು ಕಾಲೇಜ್ ಮುಗಿಸಿ ನಮ್ಮ ರೂಂ ನತ್ತ ಹೆಜ್ಜೆ ಹಾಕುತ್ತಿದೆವು.. ಮೈ ಹುಷಾರಿಲ್ಲದ ಕಾರಣ ಸದಾನಂದ ಆವತ್ತು ಕಾಲೇಜ್ ಗೆ ಬರದೆ ರೂಮ್ನಲ್ಲೇ ಮಲಗಿಕೊಂಡಿದ್ದ.. ನಾವು ಮುಂದೆ ಸಾಗುತ್ತಿದ್ದಂತೆ ದೂರದಲ್ಲಿ ಅಮೃತ್ ಕ್ರೀಂ ಪಾರ್ಲರ್ ನಲ್ಲಿ ಯಾರೋ ಹುಡುಗ-ಹುಡುಗಿ ಕುಳಿತಿದ್ದು ಮೊದಲಿಗೆ ನೋಡಿದ್ದೇ ನಮ್ಮ 'ಗರಗಸ'.. "ಅದು ಟೀನಾ ಅಲ್ವ " ತನ್ನ ಅನುಮಾನ ವ್ಯಕ್ತ ಪಡಿಸಿದ.. ಸೂಕ್ಷ್ಮವಾಗಿ ಗಮನಿಸಿದೆವು.. ಹೌದು ಅದು ಟೀನಾ.. ಆದರೆ ಆ ಹುಡುಗ ಯಾರು? ಸರಿಯಾಗಿ ಕಾಣಿಸುತ್ತಿರಲಿಲ್ಲ.. ಸರಿ, ನೋಡೇ ಬಿಡೋಣ ಅಂತ ಆಕಡೆ ಹೆಜ್ಜೆ ಹಾಕಿದೆವು.. ಮೆಲ್ಲನೆ ಕಳ್ಳ ರಂತೆ ಕದ್ದು ನೋಡುತ್ತಿದ್ದ ನಾವೆಲ್ಲಾ ಬೆಚ್ಚಿಬಿದ್ದೆವು.. ಆಕೆಯ ಜೊತೆಗಿದ್ದದ್ದು ಮನೀಶ್!!!! ಅವರಿಬ್ಬರೂ ಒಂದೇ ಬೌಲ್ ನಿಂದ ಐಸ್ ಕ್ರೀಂ ತಿನ್ನುತ್ತಿದ್ದರು.. ಅರೆ ಆವತ್ತು ಟೀನಗೆ ಪಿಂಡ ಬಿಟ್ಟಿದ್ದ ಮನೀಶ್!!! ಇನ್ಯಾವತ್ತು ಆಕೆಯನ್ನು ತಿರುಗೀನೂ ನೋಡಲ್ಲ ಅಂತ ಸದಾನಂದನ ಜೊತೆಗೂಡಿ ಪ್ರತಿಜ್ಞೆ ಮಾಡಿದ್ದ ಮನೀಶ್!!!..ನಾವು ಒಂದು ಕ್ಷಣ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು... ಅವರು ನಮ್ಮನ್ನು ನೋಡೋದು ಬೇಡ ಅಂತ ನಾವು ಅವರಿಗೆ ತಿಳಿಯದಂತೆ ಅಲ್ಲಿಂದ ಪರಾರಿಯಾದೆವು...'ಗರಗಸ' ಮಾತ್ರ ರೂಂ ತಲುಪುವ ತನಕವೂ ಬಿದ್ದು ಬಿದ್ದು ನಗುತ್ತಲೇ ಇದ್ದ..
ಈ ವಿಷಯ ತಿಳಿದ ಸದಾನಂದ ಮರು ದಿವಸ, ಮೈ ಸುಡುವ ಜ್ವರದಲ್ಲೂ ಅದೇ ಕಾಲೇಜ್ ತೋಟದಲ್ಲಿ, ಅದೇ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಮನೀಶ್ ಗೆ ಪಿಂಡ ದಾನ ಮಾಡಿದ್ದ!!!!

Monday, November 30, 2009
ಶಾಪ...
"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...
ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!

Thursday, September 24, 2009
ನಾನು ಸುತ್ತಿಗೆಯಿಂದ ಬಡಿಯುತ್ತಲೇ ಇದ್ದೆ....(ನನ್ನ ಕಥೆ -ಭಾಗ ೨)
ಆಗ ನನಗೆ ನೆನಪಾದದ್ದೇ ಸುತ್ತಿಗೆ ವಿದ್ಯೆ... ಅಂದರೆ ಬೆಳ್ಳಿಯ ಕುಸುರಿ ಕೆಲಸ... ನನ್ನ ಚಡ್ಡಿ ದೋಸ್ತು ಸದಾನಂದನ ಮನೆಯಲ್ಲಿ ಈ ಕೆಲಸ ನಡೆಯುತ್ತಿತ್ತು... ಆತನ ತಂದೆ ಬೆಳ್ಳಿಯ ಕೆಲಸದಲ್ಲಿ ನಿಸ್ಸೀಮರು.. ಬೆಳ್ಳಿಯ ಮೂರ್ತಿಗಳು, ಕಲಶಗಳು, ದೇವಸ್ಥಾನದ ಬಾಗಿಲು, ಪಲ್ಲಕ್ಕಿ ಇಂಥ ಕೆಲಸಗಳಲ್ಲಿ ಆಗ ಅವರು ಭಾರಿ ಹೆಸರುವಾಸಿ... ರಜಾ ದಿನಗಳಲ್ಲಿ ನಾನು ಮತ್ತು ಸದಾನಂದನೂ ಸುತ್ತಿಗೆ ಹಿಡಿದು ಕೂರುತ್ತಿದ್ದೆವು... ಅದೆಷ್ಟೋ ಕೆಲಸ ಮಾಡಿ ನಾವೂ ಅದರಲ್ಲಿ ಅಲ್ಪ ಸ್ವಲ್ಪ ನಿಸ್ಸೀಮರಾಗಿ ಬಿಟ್ಟಿದ್ದೆವು.. ಒಂದು ಸಾರಿ ಆ ಚಿಕ್ಕ ಸುತ್ತಿಗೆ ಏಟು ತಪ್ಪಿ ನನ್ನ ಕೈಗೆ ಬಿದ್ದು ಗಾಯ ಮಾಡಿಕೊಂಡಿದ್ದೆ , ಆವತ್ತಿನಿಂದ ನಾವು ಬೆಳ್ಳಿ ಕೆಲಸ ಅನ್ನೋ ಬದಲು ಸುತ್ತಿಗೆ ಕೆಲಸ ಎಂದು ಕರೆಯುತ್ತಿದ್ದೆವು...ಈಗ ನನಗೆ ನೆನಪಾದದ್ದೇ ಆ ವಿದ್ಯೆ... ಸರಿ ಮುಂದೆ ಆಲೋಚಿಸುವುದೆನಿದೆ... ಒಬ್ಬಂಟಿಯಾಗಿ ಕೆಲಸ ಪ್ರಾರಂಭಿಸಿಯೇ ಬಿಟ್ಟೆ ... ಇನ್ನೂ ವಿದ್ಯೆ ಮರೆತಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ತಿಂಗಳ ಒಳಗಾಗಿ ಎರಡು ಅದ್ಭುತ ಬೆಳ್ಳಿಯ ಮೂರ್ತಿಗಳು ತಯಾರಾಗಿ ಬಿಟ್ಟಿದ್ದವು... ಅವನ್ನು ಮಾರುವದೇನೂ ಕಷ್ಟವಾಗಲಿಲ್ಲ... ನೋಡ ನೋಡುತ್ತಲೇ ಈ ಕೆಲಸ ಅದ್ಯಾವ ಪರಿ ಬೇಡಿಕೆ ತಂದು ಕೊಟ್ಟಿತೆಂದರೆ ೨-೩ ತಿಂಗಳೊಳಗಾಗಿ ೧೦ ಜನ ನನ್ನಲ್ಲಿ ಕೆಲಸ ಮಾಡುವಂತಾಯಿತು.. ಇಷ್ಟೊಂದು ವರ್ಷ ಸರ್ಕಾರಿ ಕೆಲಸ ಮಾಡಿದ್ದು ಯಾಕೆ ಎಂದು ನನ್ನನ್ನು ನಾನು ಕೇಳುವಷ್ಟು ಪ್ರಸಿದ್ಧಿ ಯಾಗಿಬಿಟ್ಟೆ... ದಿನಗಳು ಕಳೆಯುತ್ತಿದ್ದವು... ನನ್ನ ಈ ಕೆಲಸದಲ್ಲಿ ವರ್ಷ ಕಳೆದಿದ್ದೆ ನನಗೆ ಗೊತ್ತಾಗಲಿಲ್ಲ... ಇನ್ನೂ ೬೦ ವರ್ಷ ಬದುಕಬೇಕು ಅಂತ ನನಗೆ ಜೀವನದಲ್ಲಿ ಮೊದಲಬಾರಿ ಅನ್ನಿಸತೊಡಗಿತ್ತು...
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...
(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)
(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)

Tuesday, September 22, 2009
ನನ್ನ ಕಥೆ..
ಆಗ ನನಗೆ ೫೬ ವರ್ಷ.. ಇನ್ಯಾಕೆ ಬೇಕು ಈ ಸರ್ಕಾರಿ ಕೆಲಸ... ಹಾಗಂತ ಒಂದು ದಿನ ನಿರ್ಧಾರ ಮಾಡಿದವನೇ, ಮಾಡುತ್ತಿದ್ದ ಸರ್ಕಾರಿ ಕೆಲಸದ ಮುಖಕ್ಕೊಂದು ರಾಜೀನಾಮೆ ಬಿಸಾಕಿ ಮನೆಗೆ ಬಂದು ಆರಾಮಾಗಿ ಕೂತುಬಿಟ್ಟೆ... ಮೊನ್ನೆಯಷ್ಟೇ ಮದುವೆಯಾಗಿ ಅಮೆರಿಕಾದಲ್ಲಿ ಕೈತುಂಬಾ ಸಂಬಳ ಪಡೆಯುವ ಮಗ-ಸೊಸೆ.. ಈಗಾಗಲೇ ಜರ್ಮನಿ ಯಲ್ಲಿ ಠಿಕಾಣಿ ಹೂಡಿರೋ ಮಗಳು ಮತ್ತು ಅಳಿಯ.. ಒಬ್ಬ ಅಪ್ಪ ತನ್ನ ಮಕ್ಕಳಿಗೆ ಒದಿಸಿ, ಕಲಿಸಿ, ಪ್ರೀತಿಸಿ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾದ್ಧ್ಯ... ಹಾಗಂತ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ...
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...
ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...
-- ಮುಂದುವರೆಯುವುದು..

Friday, July 24, 2009
ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ
ಎರಡು ವರ್ಷಕ್ಕೆ ಹಿಂದೆ ಶುಕ್ರವಾರ ಬಂತೆಂದರೆ ಮತ್ತೆ ಕೇಳಬೇಕೆ... ನಾವೊಂದು ಎಂಟುಜನರ ಗುಂಪು ಗುರು ಗಾರ್ಡನ್ ಅನ್ನೋ ಅಡ್ಡದಲ್ಲಿ ೭-೭.೩೦ ಯಹಾಗೆ ಪ್ರತ್ಯಕ್ಷ ರಾಗಿ ಬಿಡುತ್ತಿದ್ದೆವು... ನಾವು ಬರುತ್ತೇವೆ ಎಂದು ತಿಳಿದಿದ್ದ ಗಾರ್ಡೆನ್ ಮಂದಿಯೂ ನಮಗೆ ಟೇಬಲ್ ಕಾಯ್ದಿರಿಸುತ್ತಿದ್ದರು... ತಂಪಾದ ಬಿಯರು...... ಹುಹ್ ಆ ದಿನಗಳು !!!!!!!
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...

Tuesday, June 16, 2009
Subscribe to:
Posts (Atom)