Monday, February 16, 2009

ಪ್ರೇಮಿಗಳ ದಿನ ಮತ್ತು ಶಿವರಾತ್ರಿ...

ಫೆಬ್ರವರಿ ೧೪... ಪ್ರೇಮಿಗಳ ದಿನ...
ಫೆಬ್ರವರಿ ೨೪... ಶಿವರಾತ್ರಿ...
ಅದ್ಯಾಕೋ ಈ ಎರಡೂ ದಿನಗಳು ನಂಗೆ ತುಂಬಾ ಕನ್ಫ್ಯೂಸ್.. ಅದ್ಯಾಕೋ ಗೊತ್ತಿಲ್ಲ ಈ ಎರಡೂ ದಿನಗಳು ಬಂತು ಅಂದ್ರೆ ನಂಗೆ ಕಳ್ಳರ ನೆನಪಾಗುತ್ತೆ...
ಫೆಬ್ರವರಿ ೨೪ ಶಿವರಾತ್ರಿ ಸೋಗಿನಲ್ಲಿ ಕದಿಯುವವರು..ಫೆಬ್ರವರಿ ೧೪ ಹೃದಯ ಕದಿಯುವವರು.. ಸಾಮ್ಯತೆಯನ್ತು ಇದೆ...
ಅದ್ಯಾಕೆ ಪ್ರೇಮಿಗಳ ದಿನ ಅಂತ ಆಚರಿಸ್ಥಾರೋ ನನಗಂತೂ ಗೊತ್ತಿಲ್ಲ್ಲ... ನಾನು ಹೃದಯ ಕಡಿಯೋಕೆ ಪ್ರಯತ್ನ ಪಟ್ಟದ್ದಂತೂ ಫೆಬ್ರವರಿ ೧೪ ಅಲ್ಲ... ಬಹುಶ ಜೂನ್ ೬ , ಮತ್ತೆ ಜುಲೈ ೨೫ ಮತ್ತೆ ಜನವರಿ೨೮.. ಹೀಗೆ ಶತ ಪ್ರಯತ್ನಗಳ ಭಗೀರಥ...:-)
ಮೊನ್ನೆಯ ಪ್ರೇಮಿಗಳ ದಿನವಂತೂ ಇಡೀ ದೇಶದಲ್ಲೇ ದಾಂಧಲೆ ಯೇಬ್ಬಿಸಿದ್ದಂತೂ ಸುಳ್ಳಲ್ಲ..
ಪ್ರೇಮಿಗಳ ದಿನ ಆಚರಿಸೋಕೆ ತುದಿಗಾಲಲ್ಲಿ ನಿಂತ ಯುವಕ ಯುವತಿಯರು... ಪ್ರೇಮಿಗಳ ದಿನ ಆಚರಿಸುವವರ ಕಾಲು ಮುರಿಯಲು ಸಜ್ಜಾಗಿ ನಿಂತ ಆಂಜನೆಯರು... ಹೀಗೆ ಪ್ರೇಮಿಗಳ ದಿನಕ್ಕಂತೂ ಪುಕ್ಕಟೆ ಜಾಹಿರಾತು...
ವರ್ಷಕ್ಕೆ ಒಂದು ಸಾರಿ ಸತ್ತವರಿಗೂ ತಿಥಿ ಅಂತ ಆಚರಿಸೋ ನಮ್ಮ ಸಂಸ್ಕ್ರಿತಿಲಿ vaರ್ಶಕ್ಕೊಮ್ಮೆ ಪ್ರೇಮಿಗಳ ದಿನ ಅಂತ ಆಚರಿಸೋದ್ರಲ್ಲಿ ತಪ್ಪೇನಿದೆ? ಹಾಗಂತ ಕೇಳಿದ್ದ ನನ್ನ ಸ್ನೇಹಿತ.. ಹೌದು... ವರ್ಷಕ್ಕೊಂದ್ಸಾರಿ ಪ್ರೇಮಿಗಳ ದಿನ ಆಚರಿಸೋದು ಸರೀನೆ.. ಈ ಕೆಲಸದ ಒತ್ತಡದಲ್ಲಿ ನಮ್ಮನು ಪ್ರೀತಿಸುವವರನ್ನು, ನಾವು ಪ್ರೀತಿಸುವವರನ್ನು ನೆನಪಿಸಿ ಕೊಳ್ಳೋದು ಒಂಥರಾ ಸರಿ ಅನ್ಸುತ್ತೆ... ಹೊಸ ಪ್ರೀತಿ ಹುಡುಕೋಕೆ, ಕಳೆದು ಹೋದ ಪ್ರೀತಿಗೆ ಪಿಂಡ ಇಟ್ಟು, ತರ್ಪಣ ಕೊಟ್ಟು ಹೊಸ ಪ್ರೀತಿನ ಹುಡುಕೋಕೆ ಅದೊಂದು ದಿನ ಇರ್ಲಿ... ಏನಂತಿರ?
ಆದ್ರೆ ನಮ್ಮ ಸಂಸ್ಕ್ರಿತಿಲಿ ಇದೆಲ್ಲ ಇಲ್ಲ ಅಂತ ಬೊಬ್ಬೆ ಹೊಡೆಯೋರು ಒಂದು ಕಡೆ... ನಮಗೆ ದಿನಾಲೂ ಪ್ರೇಮಿಗಳ ದಿನಾನೇ .... ನಮ್ಮ ಭಾರತೀಯ ಸಂಸ್ಕ್ರುತಿಲಿ ೩೬೫ ದಿನಾನೂ ಪ್ರೇಮಿಗಳ ದಿನ... ಹೀಗಂತ ವಾದಿಸೋರನ್ನ ಕಂಡಿದ್ದೆ... ಅವ್ರನ್ನ ನಾನೂ ಕೆಲವು ಪ್ರಶ್ನೆ ಕೇಳ್ಬೇಕು...
ಮಕ್ಕಳ ದಿನ ಅಂತ ಆಚರಿಸ್ತೇವೆ ಯಾಕೆ? ಆ ಒಂದು ದಿನ ಮಾತ್ರ ನಮ್ಮ ಮಕ್ಕಳ ಬಗ್ಗೆ ಯೋಚಿಸಿದರೆ ಸಾಕೆ? ಗಾಂಧೀ ಜಯಂತಿ ಯಾಕೆ...? ಅಂಥ ಮಹಾನ್ ರಾಷ್ಟ್ರ ಪಿತನನ್ನು ಒಂದು ದಿನ ನೆನಪಿಸ್ಕೊಂದ್ರೆ ಸಾಕೆ? ಸ್ವಾತಂತ್ರ ದಿನ... ಆ ಒಂದು ದಿನ ಮಾತ್ರ ನಾವು ಸ್ವಾತಂತ್ರರೆ? ಬಹುಶ ಉತ್ತರ ಸಿಗಲಿಕ್ಕಿಲ್ಲ... ನಾನು ಒಂದು ವೇಳೆ ಇಂಥ ಪ್ರಶ್ನೆ ಪಬ್ಲಿಕ್ ನಲ್ಲಿ ಕೇಳಿದ್ರೆ ನಂಗೂ ೧೦ ವರ್ಷ ಹಾಕ್ಕೋಳು
ವಷ್ಟು ಚಡ್ಡಿ ಬನಿಯನ್ಗಳು ಸಿಕ್ಕಿಯಾವು ...
ಪ್ರೇಮಿಗಳ ದಿನ ಅಂತ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಲ್ಲೋರಿಗೆನೂ ಕಮ್ಮಿಯಿಲ್ಲ... ಅದಕ್ಕೆ ಈ ದಿನ ಆಚರಿಸೋದಕ್ಕೆ ವಿರೋಧ ವ್ಯಕ್ತ ವಾಗಿರಬೇಕು... ಅದಕ್ಕೆ ಈ ಚಡ್ಡಿ ಪುರಾಣ ಮಾಡೋದಕ್ಕಿಂತ ಅದೊಂದು ದಿನ ಬಾರ್ ಗಳಿಗೆ, ಪಬ್ ಗಳಿಗೆ, ಡಿಸ್ಕೋ ಥೆಕ್ ಗಳಿಗೆ ಬೀಗ ಜಡಿದದ್ದೇ ಆದ್ರೆ ಅಂಥವರೆಲ್ಲರನ್ನೂ ಮೆಚ್ಚಬಹುದಿತ್ತು.. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಕುತಂತ್ರಿ ರಾಜಕಾರಣಿ ಗಳ ಆಟಕ್ಕೆ ಬಲಿಪಶು ವಾದದ್ದಂತೂ ಅಬ್ಬ ಸಾಮಾನ್ಯ ಪ್ರೇಮಿ... ಪಾಪ , ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತ ಪಡಿಸಿದವನ ಮನೆಯಂತೂ ಚಡ್ಡಿಗಲಿಂದಲೇ ತುಂಬಿ ಹೋದ ಬಗ್ಗೆ ಓದಿ ಖೆದವೆನ್ನಿಸಿತು...(ಚಡ್ಡಿ ಕಳಸಿದೋರು ಅದನ್ನ ವಾಪಾಸ್ ಪಡಿಯೋಕೆ ಶಿವರಾತ್ರಿ ಯನ್ನ ಆರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅಂತ ದೇವರಾಣೆಗೂ ನಂಗೊತ್ತಿಲ್ಲ!!!)
ನಾನಂತೂ ಇನ್ನು ಮುಂದೆ ಅಕ್ಟೋಬರ್ ೨೩ ಪ್ರೇಮಿಗಳ ದಿನ , ಫೆಬ್ರವರಿ ೧೪ ಚಡ್ಡಿ ದಿನ ಅಂತ ಆಚರಿಸೋಕೆ ನಿರ್ಧಾರ ಮಾಡಿದ್ದೇನೆ..
ಇಬ್ಬರ ಚಡ್ಡಿ ಜಗಳ , ಬಟ್ಟೆ ಅಂಗಡಿಯವನಿಗೆ ಲಾಭ, ಪ್ರೇಮಿಗೆ ಪ್ರಾಣ ಸಂಕಟ....
ಫೆಬ್ರವರಿ ೧೪ಕ್ಕೆ ಆರಂಭ ಗೊಂಡ ಪ್ರೀತಿ ,ಫೆಬ್ರವರಿ ೨೪ ಕ್ಕೆ ಯಾರೂ ಕದ್ದುಕೊಂಡು ಹೋಗದಿರಲಿ ...
ಪ್ರೀತಿ ಅಮರವಾಗಿರಲಿ...

ತಲೆಹರಟೆ

ತಲೆಹರಟೆ ಜೋಕ್ ಗಳನ್ನ ಕೇಳಿದ್ದೀರಾ? ಇಲ್ಲೊಂದಿದೆ ಓದಿ..
ನನ್ನ ತಂಗಿ ಮಗಳು , ಇನ್ನೂ ೭ ವರ್ಷ ದವಳು... ತುಂಬಾ ತಲೆ ಹರಟೆ ... ಒಂದಿನ ನನ್ನ ಕೇಳಿದ್ಲು...
"ಒಬ್ಬ ನಡ್ಕೊಂಡು ಹೋಗ್ತಾ ಇರ್ಬೇಕಾದ್ರೆ , ಅವ್ನ ತಲೆ ನೇರಕ್ಕೆ ಬಂದ ಹಕ್ಕಿ ಹಿಕ್ಕೆ ಹಾಕ್ತು.. ಆದ್ರೆ ಅದು ಹಾಕಿದ ಹಿಕ್ಕೆ ಕೆಳಕ್ಕೆ ಬೀಳಲೇ ಇಲ್ಲ ಯಾಕೆ?"...
ಉತ್ತರಕ್ಕಾಗಿ ಯೋಚಿಸದೆ... ತಡಕಾಡಿದೆ ... ಕೊನೆಗೂ ಸೋತು ನೀನೆ ಹೇಳು ಅಂದೇ..
"ಉತ್ತರ ತುಂಬಾ ಸುಲಭ... ಯಾಕಂದ್ರೆ ಹಕ್ಕಿ ಚಡ್ಡಿ ಹಾಕ್ಕೊಂದ್ದಿತ್ತು.. " ಅನ್ನೋದೇ...
ನನಗಂತೂ ನಕ್ಕು ಸಾಕಾಗಿತ್ತು...
ಆವತ್ತು ಸಂಜೆ ನಾವೆಲ್ರು ವಾಕಿಂಗ್ ಹೋಗ್ತಾ ಇದ್ವಿ... ನನ್ನ ತಲೆನೆರಕ್ಕೆ ಬಂದ ಹಕ್ಕಿ ಹಿಕೆ ಹಾಕೇ ಬಿಡ್ತು... ನನ್ನ ತಲೆಮೇಲೆ ಎಲ್ಲ ಹಕ್ಕಿ ಹಿಕ್ಕೆ... ತಂಗಿಯ ಮಗಳು ಮೆಲ್ಲನೆ ನಗೋಕೆ ಶುರು... ತಕ್ಷಣ ನಂಗೆ ಅವಳೇ ಬೆಳಿಗ್ಗೆ ಹೇಳಿದ್ದ ಜೋಕ್ ನೆನಪಾಗಿ ಜೋರಾಗಿ "ಈ ಹಕ್ಕಿಗೆನು ಚಡ್ಡಿ ಹಾಕೋಕೆ ಆಗಲ್ವೇ" ಎಂದೆ... ಎಲ್ರೂ ನಗ್ತಾ ಇದ್ರೆ, ದೊಡ್ಡ ಜೋಕ್ ಹೇಳಿದೆ ಅಂತ ನಾನೂ ಬೀಗ್ತಾ ಇದ್ರೆ.. ಅಷ್ಟರಲ್ಲೇ ನನ್ನ ತಂಗಿ ಮಗಳು ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲದೆ ಎಲ್ರೂ ಮೂಕರಾಗಿ ನಿಂತು ಬಿಟ್ಟೆವು... ಮುಂದಿನ ಅರ್ಧ ಗಂಟೆಗೂ ಮಿಕ್ಕಿ ನಾವೆಲ್ಲ ನಕ್ಕಿದ್ದೋ ನಕ್ಕಿದ್ದು... ಅವ್ಳು ಕೇಳಿದ ಪ್ರಶ್ನೆ ಏನು ಗೊತ್ತಾ..?
"ಮಾಮ, ನೀನು ಹಿಕ್ಕೆ ಹಾಕುವಾಗ ಚಡ್ಡಿ ಹಾಕ್ತಿಯೇನು?" !!!!!!!!!

ನನ್ನ ಮಾತು ಕೇಳಿ !!!

ಆಲ್ಕೋಹಾಲು ನಿಮ್ಮ ಪ್ರಶ್ನೆ ಗಳಿಗೆ ಉತ್ತರವಲ್ಲ.... ಆದರೆ ಅದು ನಿಮ್ಮ ಪ್ರಶ್ನೆ ಏನು ಎಂದು ಮರೆಸುತ್ತದೆ...
ಅದಕ್ಕೆ ಹೇಳ್ತೀನಿ , ನನ್ನ ಮಾತು ಕೇಳಿ... ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುದಕ್ಕಿಂತ , ಪ್ರಶ್ನೆಯನ್ನೇ ಮರೆತು ಹಾಯಾಗಿರುವ ಬಗ್ಗೆ ಯೋಚಿಸಿ...

Friday, October 3, 2008

ಭೂತದ ಬೆನ್ನುಹತ್ತಿ....

ಮುಂದೆ ಮೆಲ್ಲನೆ ಸಾಗಿದೆ... ಸುತ್ತಲೂ ಗಾಢ ಕತ್ತಲು.. ನನ್ನ ಕೈಯಲ್ಲಿದ್ದ ಮೊಬೈಲ್ ನ ಮಂದ ಬೆಳಕಿನಲ್ಲಿ ಮುಂದೆ ಸಾಗುತ್ತಿದ್ದರೆ ತಣ್ಣನೆ ಗಾಳಿ, ಎಲೆಗಳ ಪಟ ಪಟ ಸದ್ದು ಒಂಥರಾ ಹೆದರಿಕೆ ಹುಟ್ಟಿಸುತ್ತಿದ್ದವು... ಅಲ್ಲೇ ಇದ್ದ ಭೂಥಸ್ಥಾನಗಳತ್ತ ಒಮ್ಮೆ ಕಣ್ಣು ಹರಿಸಿದೆ... ಅವೇ ಹಳೆಯ ಗೋಡೆ.. ಅದಕ್ಕೆ ಮುರಿದ ಬಾಗಿಲು.. ಎಲ್ಲವನ್ನೂ ಹಳೆಯ ನೆನಪುಗಳ ಖಜಾನೆಯಿಂದ ಬಸಿದು ಊಹಿಸಿಕೊಂಡೆ... ಅಸ್ಟರಲ್ಲಿ ಕಂಡಿತ್ಥದು...
ಮೂಲೆಯ ಭೂಥಸ್ಥಾನವೊಂದರಲ್ಲಿ ಚಿಕ್ಕ ದೀಪವೊಂದು ಉರಿಯುತ್ತಿತ್ತು.. ಜನ ಕಾಲೂ ಇಡದ ಇಲ್ಲಿ ದೀಪ ಹೇಗೆ ಬಂತು?ಯಾರಿರಬಹುದು ಅಂದುಕೊಂಡೆ... ಭೂತ ಪ್ರೇತಗಳನ್ನು ತಮಾಷೆ ಮಾಡುವವನಿಗೆನು ನೋಡೋಕು ಆಗೋದಿಲ್ಲೇನು ಎಂದು ಧೈರ್ಯದಿಂದ ಹತ್ತಿರಕ್ಕೆ ಹೆಜ್ಜೆ ಹಾಕಿದೆ... ಒಳಗಡೆ ಚಿಕ್ಕ ದೀಪವೊಂದು ಉರಿಯುತ್ತಿತ್ತು... ಅದೇನೇನೋ ಶಬ್ದಗಳು ಕೆಳಿಸತೋದಗಿದ್ದವು... ಏನಿದೆ ಎಂದು ನೋಡೋ ಧೈರ್ಯವಾಗಲಿಲ್ಲ..ಅಲ್ಲಿಂದ ಮೆಲ್ಲನೆ ಹೆಜ್ಜೆ ಹಾಕತೊಡಗಿದೆ... ಮತ್ತದೇನೋ ಶಬ್ದಗಳು.. ನಾಯಿಯೊಂದು ಎಲ್ಲೊ ಬೊಗಳ ತೊಡಗಿತ್ತು.. ಆಗ ಕಂಡಿತ್ತದು.. ಬಿಳಿಯ ಬಟ್ಟೆ ತೊಟ್ಟುಕೊಂಡು ಯಾರೋ ಹೋಗುತ್ತಿದ್ದಂತೆ ಭಾಸವಾಯಿತು.. ಹತ್ತಿರಕ್ಕೆ ಹೋಗುವ ಧೈರ್ಯವಾಗಲಿಲ್ಲ.. ಬೇಗ ಬೇಗನೆ ಹೆಜ್ಜೆ ಹಾಕುತ್ತಿದ್ದವನಿಗೆ ಕೈಯಿಂದ ತಿಂಡಿಯ ಪೊಟ್ಟಣ ಜಾರಿ ಬಿದ್ದದ್ದು ಗೊತ್ತೇ ಆಗಲಿಲ್ಲ... ನಾಯಿಯೊಂದು ಎಲ್ಲಿಂದ ಪ್ರತ್ಯಕ್ಷವಾಯಿತೋ ಗೊತ್ತಿಲ್ಲ ಪರ ಪರನೇ ಶಬ್ದ ಮಾಡುತ್ತ ಬಿದ್ದ ತಿಂಡಿಯ ಪೊಟ್ಟಣವನ್ನು ಜಗಿಯತೊದಗಿತ್ತು.... ಬೆವರುತ್ತ ಮನೆಗೆ ತಲುಪಿದವನೇ ಗಟ್ಟಿಯಾಗಿ ಮಲಗಿಬಿಟ್ಟೆ ... ಆದರೆ ಅದ್ಯಾಕೋ ಆವತ್ತು ನಿದ್ದೆ ಬರಲಿಲ್ಲ...
ಮರುದಿನ ನಿಧಾನಕ್ಕೆ ಎದ್ದವನೇ ಆ ಭೂಥಸ್ಥಾನಗಳತ್ತ ಹೆಜ್ಜೆ ಹಾಕಿದೆ... ದೂರದಲ್ಲಿ ಕಟ್ಟಿದ ಬಿಳಿಯ ಬಟ್ಟೆ ಗಾಳಿಗೆ ಅಲ್ಲಾಡುತ್ತಿತ್ತು ತುಂಬ ಜನ ನೆರೆದಿದ್ದರು.. ಏನಿರಬಹುದು ಎಂದು ನೋಡಿದರೆ ಅಲ್ಲಿ ಯಾವುದೋ ಪೂಜೆ ಸಲ್ಲಿಸುತ್ತಿದ್ದರು.. ಪುರಾತನ ಭೂತಸ್ಥನಗಳನ್ನು ಮರು ನಿರ್ಮಿಸುತ್ತಿದ್ದೇವೆ ಎಂದು ಜನ ಹೇಳಿದ್ರು... ಒಳಗೆ ಉರಿಯುತ್ತಿದ್ದ ದೀಪ ನನ್ನನ್ನು ನೋಡಿ ನಗುವಂತೆ ಭಾಸವಾಯಿತು... ಮೆಲ್ಲನೆ ಮುಂದೆ ಸಾಗಿದವನಿಗೆ ಕೆಲಸದ ಆಳು ಬಂದು ಹೇಳಿದ, "ನಿಮ್ಮ ಮನೆಯ ನಾಯಿ ಯಾಕೋ ಹುಶರಿಲ್ದೆ ಒದ್ದಡ್ತ್ಹಿದೆ" ಅಂತ.. ನನ್ನ ಪ್ರೀತಿಯ "ಡಿಂಗ" ಅನ್ನೋ ನಾಯಿ ಹಿಂದಿನ ದಿನ ನಾನು ಹೆದರಿಕೆಯಿಂದ ಕಳೆದು ಕೊಂಡಿದ್ದ ತಿಂಡಿಯ ಪ ಪೊಟ್ಟಣದಿಂದ ಎಲ್ಲ ತಿಂಡಿ ತಿಂದು ಹೊಟ್ಟೆ ನೋವಿನಿಂದ ನರಳುತ್ತಿತ್ತು... ರಾತ್ರಿಯೂ ನನ್ನನ್ನು ಹಿಂಬಾಲಿಸಿದ ನಾಯಿ ಅದೇ ಎಂದು ತಿಳಿದು ಬೇಸರವಾಯಿತು... ಯಾಕೋ ಭೂತದ bennu ಹತ್ತಬೇಕು ಅಂತ ಆವತ್ತೇ ನಿರ್ಧರಿಸಿಬಿಟ್ಟೆ...

Thursday, June 19, 2008

ಭೂತ!!

ಅಲ್ಲಿ ಭೂತ ಇದೆ ... ಹಾಗಂತ ಎಲ್ಲ ಹೇಳುತ್ತಿದ್ದರು... ಅವರ ಭೂತದ ಅನುಭವದ ಕಥೆ ಕೇಳುವಾಗ ನನಗೂ ಆಗ ಹೆದರಿಕೆ ಆಗುತ್ತಿತ್ತು.. ಚಿಕ್ಕವನಿದ್ದಾಗ ಭೂತ ಅಂದ್ರೆ ಏನೋ ಹೆದರಿಕೆ... ಕಥೆ ಕೇಳೋದಂದ್ರೆ ಏನೂ ಉತ್ಸಾಹ.. ಆದ್ರೆ ಬರ್ತಾ ಬರ್ತಾ ಭೂತ ಪ್ರೇತಗಳ ಬಗ್ಗೆ ನನಗೆ ಹೆದರಿಕೆ ಅನ್ನೋದು ಹೊರಟು ಹೋಗಿತ್ತು... ಆದರೂ ಆ ಭೂತ ಪ್ರೇತಗಳ ಕಥೆ ಇನ್ನೂ ಜ್ಞಾಪಕದಲ್ಲಿವೆ...
ಅದ್ಯಾವನೋ ಜೀಪಿನಲ್ಲಿ ೬೦ ಕಿಲೋಮೀಟರು ವೇಗದಲ್ಲಿ ಹೋಗ್ತಾ ಇರ್ಬೇಕಾದ್ರೆ ಅವನೊಟ್ಟಿಗೆ, ಅದೇ ವೇಗದಲ್ಲಿ ಯಾರೋ ಓಡ್ತಾ ಬಂದರಂತೆ, ಆದರೆ ಆ ಭೂತ ಪೀಡಿತ ಪ್ರದೇಶದಿಂದ ಮುಂದೆ ಸಾಗಿದಾಗ ಆ ಮನುಸ್ಶ ಕಾಣೆ ಆದ್ನಂತೆ ಅನ್ನೋದು ಒಂದು ಕಥೆಯಾದರೆ... ಇನ್ನೊಂದು ಕಥೆ ಹೀಗಿತ್ತು...
ಅದೊಂದು ಪ್ರದೇಶದಲ್ಲಿ ರಾತ್ರಿ ೧೦ ಗಂಟೆಯ ನಂತರ ಯಾವುದೇ ವಾಹನ ಬಂದರೂ ಅದು ನಿಂತು ಬಿಡುತ್ತದೆ.. ಹಾಗಂತ ನನ್ನ ಗೆಳೆಯ ಕೂಡ ತನ್ನ ಅನುಭವ ಹೇಳಿಕೊಂಡಿದ್ದ... ಆದರೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿದ ಕಥೆ ಮಾತ್ರ ಬೇರೆಯದೇ... ನನ್ನ ಮನೆಯ ಹತ್ತಿರ ಒಂದು ಪ್ರದೇಶವಿದೆ. ಅದರ ಹೆಸರು ಭಂಡಾರಿಕೊಲಿ.. ಅದು ಭೂತ ಗಳ ಪ್ರದೇಶ.. ಹತ್ತಾರು ಭೂತಸ್ತಾನಗಳೂ ಅಲ್ಲಿವೆ .. ಅಲ್ಲಿ ನಮ್ಮ ಸಂಬಂಧಿಕರೊಬ್ಬರು ರಾತ್ರಿ ೧೧.೩೦ ಸುಮಾರಿಗೆ ನಮ್ಮ ಮನೆಯಲ್ಲಿ ಯಾವುದೋ ಪೂಜೆ ಮುಗಿಸಿಕೊಂಡು ವಾಪಸು ಹೋಗುತ್ತಿದ್ದರು.. ಅವರ ಕಯ್ಯಲ್ಲಿ ಮನೆಯಿಂದ ಕೊಟ್ಟ ಕೆಲವು ಎಣ್ಣೆ ಪದಾರ್ಥದ ತಿನ್ದಿಗಳಿದ್ದವು.. ಆದರೆ ಆ ಭೂತದ ಪ್ರದೇಶ ತಲುಪುತ್ತಿನ್ದಂತೆ ಅದ್ಯಾರೋ ಆ ಪೊಟ್ಟಣಗಳನ್ನು ಕಸಿದುಕೊಂಡು ತಿಂದು ಮುಗಿಸಿ ಬಿಟ್ಟಿದ್ದರು.. ಮರುದಿನ ಆ ಕಥೆ ಕೇಳಿ ಭೂತ ಎಂದು ನಾನೂ ಹೆದರಿಬಿಟ್ಟಿದ್ದೆ.. ನಾನಾವ್ವಾಗ ೩ನೆ ಕ್ಲಾಸಲ್ಲಿ ಓದುವ ಪಡ್ಡೆ ಹೈಕ...
ಮೊನ್ನೆ ನಾನು ಮನೆಗೆ ಅಂತ ಹೋಗಿದ್ದೆ.. ರಾತ್ರಿ ೧೦ ಗಂಟೆ ಸುಮಾರಿಗೆ bassiLide.. ಬಸ್ಸಿಳಿದು ಯಾವುದೇ ವಾಹನ ಇಲ್ಲ ಎಂದು ಗೊತ್ತಾದಾಗ ಒಂದು ಆಟೋ ಹಿಡಿದು ಆ ಭೂತದ ಪ್ರದೇಶದ ತನಕ ತಲುಪಿದೆ.. ಅಷ್ಟರಲ್ಲಿ ೧೧.೩೦ ಗಂಟೆ ಆಗಿಬಿಟ್ಟಿತ್ತು ..!! ಅಲ್ಲಿಂದ ಮುಂದೆ ನನ್ನ ಮನೆಗೆ ಕಾಲುದಾರಿ.. ನಡೆದುಕೊಂಡು ಹೋಗುವಾಗ ಹಿಂದಿನ ನೆನಪುಗಳು ಕಾಡಿದವು.. ಆ ಭೂತ, ಅದರ ರೋಮಾಂಚಕ ಕಥೆ ನೆನಪಾಗಿ ಬೆಚ್ಚಿಬಿದ್ದೆ.. ಭೂತ ಪ್ರೇತ ಎಲ್ಲ ಸುಮ್ಮನೆ.. ಭೂತಸ್ತಾನ ಅನ್ನೋದು ಅವುಗಳ ಮನೆ.. ಮುಂದೆ ಸಾಗಿದರೆ ಬರುವುದೇ ನಮ್ಮನೆ.. ಇದೆಲ್ಲ ಸುಮ್ಮನೆ ಎಂದು ನಕ್ಕು ಮುಂದೆ ಹೆಜ್ಜೆ ಹಾಕಿದೆ.. ನನ್ನ ಕೈಯಲ್ಲಿ ಎಣ್ಣೆಯ ತಿನ್ದಿಗಳಿದ್ದವು .... ಆದರೆ ಅಷ್ಟರಲ್ಲಿ...!!!!!!
--ಮುಂದುವರೆಯುವುದು ........

Monday, June 9, 2008

ಪ್ರೀತ್ಸೋದು ತಪ್ಪಾ?

ಪ್ರೀತ್ಸೋದು ತಪ್ಪಾ? ಹಾಗಂತ ಕೇಳಿದ್ದ ಆತ..
ಏನು ಹೇಳೋದು ಅಂತ ಗೊತ್ತಾಗದೆ ಪೇಚಾಡಿದ್ದೆ... ನನ್ನ ಆಪ್ತ ಮಿತ್ರ ಬೇರೆ ... ಪ್ರೀತ್ಸೋದು ತಪ್ಪು ಅಂತ ಹೇಳಿದ್ರೆ ಆತನಿಗೆ ಬೇಜಾರು.. ತಪ್ಪಲ್ಲ ಅಂದ್ರೆ ನನ್ನ ಆತ್ಮ ಸಾಕ್ಷಿಗೆ ವಿರುದ್ಧ... ಏನು ಹೇಳೋದು ಅಂತ ಗೊತ್ತಾಗದೆ ತುಂಬ ಸಂಕಟಪಟ್ಟೆ.. ಅದೆಲ್ಲ ಈಗ ಯಾಕಯ್ಯ...? ಚುಮುಚುಮು ಚಳಿಗೆ ತಣ್ಣನೆಯ ಬಿಯರ್ ಕುಡಿದರೆ ಅದೇನು ಮಜಾ ಗೊತ್ತಾ ಎಂದು ಮಾತು ತಪ್ಪಿಸಿ ಇಬ್ಬರೂ ಬಿಯರ್ ಕುಡಿಯತೊದಗಿದ್ರೆ, ಮತ್ತೆ ಅ ಪರಮಾತ್ಮ ಪ್ರೀತಿಯ ವಿಷಯಕ್ಕೆ ಮಾತು ಹೊರಳಿಸಿದ್ದ !!! ... ಅಂತೂ ಇಂತೂ ಬಿಯರ್ ಖಾಲಿಯಾದದ್ದೇ ಬಂತು.. ಸ್ನೇಹಿತನ ಪ್ರೀತಿಯ ಕಥೆ ಕೇಳಿ ಅದ್ಯಾಕೋ ದುಕ್ಖದ ಬದಲು ನಗು ಒತ್ತರಿಸಿ ಬಂತು..ಪ್ರೀತ್ಸೋದು ತಪ್ಪಾ ಇಲ್ಲ ಸರೀನಾ ಅಂತ ಆವತ್ತು ನಮಗೆ ಗೊತ್ತಾಗಿಲಿಲ್ಲ...
ಮೊನ್ನೆ ಅದ್ಯಾಕೋ ಎಲ್ಲವನ್ನು ತೂಕಕ್ಕೆ ಹಾಕತೊಡಗಿದ್ದೆ.. ಜೀವನ ಅಂದ್ರೇನು? ಪ್ರೀತ್ಸೋದು ತಪ್ಪಾ? ಮಾಡುವೆ ಆಗಿ ಪ್ರೀತಿಸ್ಲ ಇಲ್ಲ ಪ್ರೀತಿಸಿ ಮದ್ವೆ ಆಗ್ಲ.... ಹೀಗೆ ನೂರೆಂಟು ಪ್ರಶ್ನೆಗಳು...ಕೊನೆಗೂ ಪ್ರೀತ್ಸೋದು ತಪ್ಪು ಅನ್ನೋ ನಿರ್ಧಾರಕ್ಕೆ ಬಂದು, ಅದನ್ನೇ ಸ್ನೇಹಿತನೀಗೂ ಹೇಳೋಣ ಅಂದುಕೊಳ್ಳುವಷ್ಟರಲ್ಲಿ ಆತನೇ ಕರೆ ಮಾಡಿದ್ದ... ಏನಯ್ಯಾ ಅಂದೆ.. ಪ್ರೀತ್ಸೋದು ತಪ್ಪಲ್ಲ ಅಂದ... ಯಾಕೆ ಅಂದೆ... ನಿನ್ನೆ ತನಕ ನಾನೂ ಹಾಗೆ ಅಂದುಕೊಂಡಿದ್ದೆ, ಆದ್ರೆ ಇವತ್ತು ನೋಡಿದ್ರೆ ಪ್ರೀತ್ಸೋದು ತಪ್ಪಲ್ಲ ಅನ್ನಿಸ್ತಾ ಇದೆ, ನನ್ನ ಮನೆಯಂಗಳದಲ್ಲಿ ಇಶ್ವರ್ಯ ರೈ ಬಂದು ನಿಂತುಕೊಂಡು ಬಿಟ್ಟಿದ್ದಾಳೆ ಅಂದ...!!!!! ನಗು ಬಂತು... ಮನೆಯಿಂದ ದೃಷ್ಟಿ ಹಾಯಿಸಿದವನಿಗೆ ದೂರದಲ್ಲಿ ಮೊನಾಲಿಸಾ ನಗು ಕಂಡಿತ್ತು.. ಅತ್ತ ಹೆಜ್ಜೆ ಹಾಕೋಣ ಅಂದುಕೊಂಡೆ!!!! .. ಮತ್ತದೇ ಪ್ರಶ್ನೆ ನನ್ನೆದುರಿಗೆ ಭೂತವಾಗಿ ನಿಂತುಬಿತ್ತಿತ್ತು... ಪ್ರೀತ್ಸೋದು ತಪ್ಪಾ? !!!.....

Wednesday, June 4, 2008

ಮಾತು ಮತ್ತು ಮೌನ

ಅತ್ಯಂತ ಕಡಿಮೆಯಾಗಿರಬೇಕು ಮಾತು , ಕಾಗದಕೆ ಬೀಳಬಾರದು ಯಾವ ತೂತು.. ಹೀಗಂತ ಎಲ್ಲೊ ಓದಿದ ನೆನಪು.
ನಿನ್ನೆಯ ತನಕ ನಾನೂ ಹಾಗೇ ಅಂದುಕೊಂಡಿದ್ದೆ .. ಚಿಕ್ಕಂದಿನಿಂದಲೇ ಮಾತಿಗಿಂತ ಹೆಚ್ಚಾಗಿ ಮೌನಕ್ಕೆ ಮೊರೆಹೋದವನು ನಾನು.. ಎರಡು ದಿವಿನಾದ ಕಣ್ಣು ಕೊಟ್ಟ ಭಗವಂತ ಅದರೊತ್ತಿಗೆ ಒಂದು ಬಾಯಿ ಕೊಟ್ಟು ಇಡೀ ಮೌನದ ಶೀಲ ಕೆಡಿಸಿಬಿಟ್ಟ ಅನ್ನಿಸ್ತಾ ಇತ್ತು. ಅತೀ ಖುಷಿಯಾದಾಗ ಇಲ್ಲ ದುಕ್ಖ ವಾದಾಗ ಮೌನವೆ ಹಿತ ಅನ್ನಿಸಿದ್ದು ಮಾತ್ರ ಸತ್ಯ.. ಹಾಡು, ಸಂಗೀತ ಕೇಳುತ್ತಾ ಸಮಯ ಕಳೆಯೋದು ರೂಢಿ ಯಾದವನಿಗೆ ಮಾತು ಬರೀ ಶಬ್ದ, ಮಾತು ಕರ್ಕಶ, ಮಾತು ವ್ಯಭಿಚಾರ, ಮಾತಿನಲ್ಲಿ ಬಣ್ಣವಿಲ್ಲ , ಮಾತು ವಕ್ರವೂ ಅಲ್ಲ ನೇರವೂ ಅಲ್ಲ.. ಹಾಗಂತ ಅಂದುಕೊಂಡಿದ್ದೆ ..
ಮಾತು ಬಲ್ಲವನಿಗೆ ಜಗಳವಿಲ್ಲ ಅಂತಾರೆ ... ಮಾತೇ ಆಡದೆ ಅದೆಷ್ಟೋ ಜನರೊಟ್ಟಿಗೆ ಜಗಳ ತಪಪಿಸಿಕೊನ್ದವನಿಗೆ ಇದೆಲ್ಲ ಬುರುಡೆ ಅನ್ನಿಸುತ್ತೆ ... ಹಾಗಂತ ಮಾತು ಆಡದೆ ಸಾಧಿಸಿದ್ದೇನು , ಮೌನದಿಂದಾಗಿ ಗಳಿಸಿದ್ದೇನು ಅಂತ ಒಂದು ಸಾರಿ ಆಲೋಚನೆ ಮಾಡಿದ್ರೆ ನನಗೆ ಸಿಕ್ಕಿದ ಉತ್ತರ ಮಾತ್ರ ಸೊನ್ನೆ.. ಆದರೂ ಜೀವನದ ಜೊತೆ ನನ್ನದೇನೂ ತಕರಾರಿಲ್ಲ ಅದು ನಡೆಸಿಕೊಂಡಂತೆ ನಡೆದುಕೊಂಡು ಬಂದಿದ್ದೇನೆ... ಜೀವನ ಅನ್ನೋದು ಪುಷ್ಪಕ ವಿಮಾನ ಆಗ್ಬೇಕು... ಮಾತು ಅನ್ನೋದು ಅದ್ರ ಪೈಲಟ್ ಆದ್ರೆ ಮೌನ ಅದ್ರ ಗಗನಸಖಿ ... ನಿನ್ನ ಪ್ರೀತಿಸ್ತೀನಿ ಕಣೇಅನ್ನೋಕು ದಿನಗಟ್ಟಲೆ ಕಾದು, ಮೌನದ ಪೊಟರೆ ಯೊಳಗೆ ಹಕ್ಕಿ ಮಾತಿನ ಮೊರೆ ಹೋದಾಗ ನಾನು ತುಂಬ ತಡ ಮಾಡಿದ್ದೆ ಅನ್ನಿಸುತ್ತೆ.. ಅರೆ ಮೌನವೇ ಇದಕ್ಕೆ ಕಾರಣವೇ? ವಟ ವಟ ಅಂತ ಮಾತಾಡೋರೆ ಬೆಟರ್ ಅಲ್ವೇನು? ಹಾಗಂತ ನನ್ನೇ ಕೇಳಿಕೊಂಡೆ ... ಉತ್ತರ ಸಿಗಲಿಲ್ಲ ... ಯಾರನ್ನಾದ್ರೂ ಕೇಳೋಣ ಅಂದ್ರೆ....
ಮಾತು ಬೆಳ್ಳಿ , ಮೌನ ಬಂಗಾರ ಅಂತ ಯಾರೋ ಮಹಾತ್ಮ ಹೇಳಿದ ಮಾತು ನೆನಪಾಯಿತು...